ರಾಜ್ಯದ ಜನತೆಗೆ ಬಸ್​​ ದರ ಏರಿಕೆ ಶಾಕ್​: ಬೆಂಗಳೂರಿನಿಂದ ಪ್ರಮುಖ ನಗರಗಳಿಗೆ ಟಿಕೆಟ್​​ ದರದಲ್ಲಿ ಎಷ್ಟು ಹೆಚ್ಚಳ? ಇಲ್ಲಿದೆ ಮಾಹಿತಿ

ಹಾಲು ಮತ್ತು ಮೊಸರಿನ ಬೆಲೆ ಏರಿಕೆ ಆಘಾತದ ನಡುವೆಯೇ ರಾಜ್ಯದ ಜನತೆಗೆ ಸರ್ಕಾರ ಮತ್ತೊಂದು ಶಾಕ್​​ ಕೊಟ್ಟಿದ್ದು, ಕೆಎಸ್‌ಆರ್‌ಟಿಸಿ ಹಾಗೂ ಬಿಎಂಟಿಸಿ ಬಸ್ ಪ್ರಯಾಣ ದರ ಗಣನೀಯವಾಗಿ ಹೆಚ್ಚಳ ಮಾಡಲಾಗಿದೆ. ಕೆಎಸ್‌ಆರ್‌ಟಿಸಿಯಲ್ಲಿ ಸರಾಸರಿ ಶೇ. 23 ಮತ್ತು ಬಿಎಂಟಿಸಿಯಲ್ಲಿ ಶೇ. 33ರಿಂದ 35ರಷ್ಟು ಟಿಕೆಟ್​​ ದರ ಹೆಚ್ಚಳವಾಗಿದೆ. ಬೆಂಗಳೂರಿನಿಂದ ಪ್ರಮುಖ ನಗರಗಳಿಗೆ ಪರಿಷ್ಕೃತ ಟಿಕೆಟ್ ದರಗಳ ಪಟ್ಟಿ ಇಲ್ಲಿದೆ.

ರಾಜ್ಯದ ಜನತೆಗೆ ಬಸ್​​ ದರ ಏರಿಕೆ ಶಾಕ್​: ಬೆಂಗಳೂರಿನಿಂದ ಪ್ರಮುಖ ನಗರಗಳಿಗೆ ಟಿಕೆಟ್​​ ದರದಲ್ಲಿ ಎಷ್ಟು ಹೆಚ್ಚಳ? ಇಲ್ಲಿದೆ ಮಾಹಿತಿ
ಸಾಂದರ್ಭಿಕ ಚಿತ್ರ
Image Credit source: PTI
Edited By:

Updated on: Nov 04, 2026 | 2:56 PM

ಬೆಂಗಳೂರು, ನವೆಂಬರ್​​ 04: ಕರ್ನಾಟಕ ಸರ್ಕಾರವು ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳಾದ ಬಿಎಂಟಿಸಿ, ಕೆಎಸ್‌ಆರ್‌ಟಿಸಿ, ಎನ್‌ಡಬ್ಲ್ಯುಕೆಆರ್‌ಟಿಸಿ ಮತ್ತು ಕೆಕೆಆರ್‌ಟಿಸಿಗಳ ಬಸ್ ಪ್ರಯಾಣ ದರವನ್ನು ಹೆಚ್ಚಿಸಿದೆ. ಈ ದರ ಏರಿಕೆಯು ಕೆಎಸ್‌ಆರ್‌ಟಿಸಿಯಲ್ಲಿ ಸರಾಸರಿ ಶೇ. 23ರಷ್ಟಿದ್ದರೆ, ಬಿಎಂಟಿಸಿಯಲ್ಲಿ ಶೇ. 33ರಿಂದ 35ರಷ್ಟಿದೆ. ಪರಿಷ್ಕೃತ ಪ್ರಯಾಣ ದರಗಳು ನವೆಂಬರ್ 4ರ ಮಧ್ಯರಾತ್ರಿಯಿಂದ ಜಾರಿಗೆ ಬರಲಿವೆ. ಡೀಸೆಲ್ ಬೆಲೆ ಏರಿಕೆ ಹಾಗೂ ಸಾರಿಗೆ ಸಂಸ್ಥೆಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಈ ದರ ಏರಿಕೆ ಅನಿವಾರ್ಯವಾಗಿದೆ ಎಂದು ಸರ್ಕಾರ ತಿಳಿಸಿದೆ. ಆದಾಗ್ಯೂ, ಮಹಿಳೆಯರಿಗೆ ‘ಶಕ್ತಿ’ ಯೋಜನೆಯಡಿ ಉಚಿತ ಪ್ರಯಾಣ ಮುಂದುವರಿಯಲಿದೆ.

ಪರಿಷ್ಕರಣೆ ಬಳಿಕ ಪ್ರಮುಖ ನಗರಗಳ ಬಸ್​​ ಟಿಕೆಟ್​​ ದರ

ಸಾಮಾನ್ಯ ಬಸ್ ದರ
ಎಲ್ಲಿಂದ-ಎಲ್ಲಿಗೆ? ಹಾಲಿ ದರ ಪರಿಷ್ಕೃತ ದರ
ಬೆಂಗಳೂರು – ಶಿವಮೊಗ್ಗ 340 419
ಬೆಂಗಳೂರು -ಮಂಗಳೂರು 423 521
ಬೆಂಗಳೂರು – ಹುಬ್ಬಳ್ಳಿ 490 613
ಬೆಂಗಳೂರು- ಬೆಳಗಾವಿ 603 742
ಬೆಂಗಳೂರು-ಕಲಬುರಗಿ 754 928
ಬೆಂಗಳೂರು-ದಾವಣಗೆರೆ 317 390
ಬೆಂಗಳೂರು- ಕೋಲಾರ 81 100
ಬೆಂಗಳೂರು- ತುಮಕೂರು 81 100
ಬೆಂಗಳೂರು- ಮಂಡ್ಯ 110 136
ಬೆಂಗಳೂರು- ಮೈಸೂರು 160 197
ಬೆಂಗಳೂರು- ಹಾಸನ 219 270
ಬೆಂಗಳೂರು- ಚಿಕ್ಕಮಗಳೂರು 295 363

ಇದನ್ನೂ ಓದಿ: ಸಾರಿಗೆ ಬಸ್ ಟಿಕೆಟ್ ದರ ಹೆಚ್ಚಳಕ್ಕೆ ಇದುವೇ ಕಾರಣ! ಸಚಿವ ಬೈರತಿ ಸುರೇಶ್ ಹೇಳಿದ್ದೇನು ನೋಡಿ

Loading...

ವಿಪಕ್ಷ ನಾಯಕ ಆರ್.ಅಶೋಕ್ ಆಕ್ರೋಶ

ರಾಜ್ಯ ಸರ್ಕಾರದಿಂದ ಸರ್ಕಾರಿ ಬಸ್‌ಗಳ ಟಿಕೆಟ್ ದರ ಹೆಚ್ಚಳ ವಿಚಾರವಾಗಿ ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾರಿಗೆ ಇಲಾಖೆಯ ನೌಕರರ ಪಿಎಫ್ ಹಣವನ್ನು ಕೂಡ ಇನ್ನೂ ಕಟ್ಟಿಲ್ಲ. ಬಸ್ ಚಾಲನೆ ವೇಳೆ ಚಾಲಕನ ಕೈಗೆ ಸ್ಟೇರಿಂಗ್​​​ ಕಿತ್ತುಬರುತ್ತಿದೆ. ಸರ್ಕಾರಿ ಬಸ್​ಗಳನ್ನು ಕೆಟ್ಟು ನಿಂತರೆ ತಳ್ಳುವ ಪರಿಸ್ಥಿತಿ ಇದೆ. ಜನರು ಬಸ್​ ಚಾರ್ಜ್​ ಕೊಡುವ ಜೊತೆಗೆ ಬಸ್ಸನ್ನೂ ಕೂಡ ತಳ್ಳಬೇಕು. ಉತ್ತರ ಕರ್ನಾಟಕ ಭಾಗದಲ್ಲಿ ಮೊಬೈಲ್ ಬೆಳಕಿನಲ್ಲಿ ಬಸ್ ಓಡಿಸಿದ ಸರ್ಕಾರ ಇದು ಎಂದವರು ಕಿಡಿ ಕಾರಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 2:54 pm, Wed, 4 November 26

ಕಿರಣ್​ ಸೂರ್ಯ

ಕಿರಣ್ ಸೂರ್ಯ (Kiran Surya) ಅವರು ಟಿವಿ9 ಕನ್ನಡ (TV9 Kannada) ವಾಹಿನಿಯಲ್ಲಿ ಹಿರಿಯ ವರದಿಗಾರರಾಗಿ (Senior Reporter) ಕಾರ್ಯನಿರ್ವಹಿಸುತ್ತಿದ್ದಾರೆ

Read More
Loading...
Unable to load recommendations.
Follow Us