ಜಿಟಿಡಿ ಹೇಳಿಕೆ ಜೆಡಿಎಸ್ ಪಕ್ಷದ ಆಂತರಿಕ ವಿಚಾರ; ಬಿ.ವೈ ವಿಜಯೇಂದ್ರ

| Updated By: ಕಿರಣ್ ಹನುಮಂತ್​ ಮಾದಾರ್

Updated on: Oct 06, 2024 | 8:35 PM

ಸಿಎಂ ಸಿದ್ದರಾಮಯ್ಯನವರ ರಾಜೀನಾಮೆ ಅಗತ್ಯವಿಲ್ಲವೆಂಬ ಜಿಟಿ ದೇವೇಗೌಡ(G. T. Devegowda)ಹೇಳಿಕೆ ರಾಜಕೀಯ ವಲಯದಲ್ಲಿ ಅಚ್ಚರಿ ಮೂಡಿಸಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ‘ಜಿಟಿಡಿ ಹೇಳಿಕೆ ಜೆಡಿಎಸ್ ಪಕ್ಷದ ಆಂತರೀಕ ವಿಚಾರವಾಗಿದೆ. ಅದನ್ನು ಸರಿ ಮಾಡಿಕೊಳ್ಳುವ ಶಕ್ತಿ ಕುಮಾರಸ್ವಾಮಿಗಿದೆ ಎಂದರು.

ಜಿಟಿಡಿ ಹೇಳಿಕೆ ಜೆಡಿಎಸ್ ಪಕ್ಷದ ಆಂತರಿಕ ವಿಚಾರ; ಬಿ.ವೈ ವಿಜಯೇಂದ್ರ
ಬಿ.ವೈ ವಿಜಯೇಂದ್ರ
Follow us on

ಮೈಸೂರು, ಅ.06: ಸಿಎಂ ರಾಜೀನಾಮೆ ಅಗತ್ಯವಿಲ್ಲವೆಂಬ ಜಿಟಿ ದೇವೇಗೌಡ(G. T. Devegowda)ಹೇಳಿಕೆ ವಿಚಾರವಾಗಿ ಮೈಸೂರಿನಲ್ಲಿ ಮಾತನಾಡಿದ ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ವೈ.ವಿಜಯೇಂದ್ರ(B. Y. Vijayendra), ‘ಜಿಟಿಡಿ ಹೇಳಿಕೆ ಜೆಡಿಎಸ್ ಪಕ್ಷದ ಆಂತರೀಕ ವಿಚಾರವಾಗಿದೆ. ಅದನ್ನು ಸರಿ ಮಾಡಿಕೊಳ್ಳುವ ಶಕ್ತಿ ಕುಮಾರಸ್ವಾಮಿಗಿದೆ. ಹೀಗಾಗಿ ನಾನು‌ ಅದರ ಬಗ್ಗೆ ಟೀಕೆ ಮಾಡಲ್ಲ. ಆದರೆ, ಅಕ್ರಮದ ವಿರುದ್ಧ ಹೋರಾಟ ವಿಪಕ್ಷಗಳ ಜವಾಬ್ದಾರಿಯಾಗಿದೆ. ಜಿಟಿಡಿ ಕೇಳಿ ಮೈಸೂರು ಚಲೋ ಪಾದಯಾತ್ರೆ ಮಾಡಿರಲಿಲ್ಲ ಎಂದು ವಾಗ್ದಾಳಿ ನಡೆಸಿದರು.

ಇದೇ ವೇಳೆ ಭ್ರಷ್ಟ ಸಿಎಂ, ಸರ್ಕಾರದ ವಿರುದ್ಧ ಹೋರಾಟವನ್ನ ಮಾಡಿದ್ದೇವೆ. ಮುಡಾ ಪ್ರಕರಣ‌ ಕೇವಲ 14 ಸೈಟ್ ವಿಚಾರದ್ದಲ್ಲ. ಮುಡಾ ಸೈಟ್​ ಕೇಸ್​ನಲ್ಲಿ ಸಾವಿರಾರು ಕೋಟಿ ಲೂಟಿ ಆಗಿದೆ. ಈ ಅಕ್ರಮದ ಬಗ್ಗೆ ಅಧಿವೇಶನದಲ್ಲಿ ಚರ್ಚೆಯಾಯಿತು. ಆಗ ಹಗರಣವೇ ಆಗಿಲ್ಲ‌, ಚರ್ಚೆ ಅವಶ್ಯಕತೆಯಿಲ್ಲ ಎಂದರು. ಮಂತ್ರಿಮಂಡಲ ಕೂಡ ಯಾವುದೇ ತಪ್ಪು ಮಾಡಿಲ್ಲ ಎಂದು ಹೇಳಿದರು. ಆದರೆ, ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ತನಿಖೆಗೆ ಮುಂದಾದರು. ಈಗ ಅವರ ಪರಿಸ್ಥಿತಿ ಎಲ್ಲಿಗೆ ಬಂತು ಎಂದರು.

ಇದನ್ನೂ ಓದಿ:ದಸರಾ ಕಾರ್ಯಕ್ರಮದಲ್ಲಿ ಸಿಎಂ ಪರ ಬ್ಯಾಟಿಂಗ್: ಜಿಟಿಡಿ ವಿರುದ್ಧ ನಾರಾಯಣಸ್ವಾಮಿ ಕೆಂಡಾಮಂಡಲ

ಅಷ್ಟೇ ಅಲ್ಲ, ಸಿಎಂ ಸಿದ್ದರಾಮಯ್ಯನವರು ನಾನು ತಪ್ಪೇ ಮಾಡಿಲ್ಲ. ಸೈಟ್ ವಾಪಸ್ ಕೊಟ್ಟರೆ 64 ಕೋಟಿ ಹಣ ಕೊಡಿ ಅಂದರು. ಆದ್ರೆ, ಇಂದು ಸಲೀಸಾಗಿ 14 ಸೈಟ್​ ವಾಪಸ್​ ಕೊಟ್ಟಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಈಗ 14 ಸೈಟ್ ಅವರ ಬುಡಕ್ಕೆ ಬಂದಿದೆ ಎಂದು ಜ್ಞಾನೋದಯವಾಗಿದೆ.
ಅದಕ್ಕಾಗಿ 14 ನಿವೇಶನಗಳನ್ನ ಮುಡಾಗೆ ಹಿಂದಿರುಗಿಸಿದ್ದಾರೆ ಎಂದು ಸಿದ್ದರಾಮಯ್ಯ ಅವರ ವಿರುದ್ದ ಕಿಡಿಕಾರಿದರು.

ಮುಖ್ಯಮಂತ್ರಿಗಳು ರಾಜೀನಾಮೆ ನೀಡುವ ಹೊಸ್ತಿಲಲ್ಲಿದ್ದಾರೆ

ಇದೇ ವೇಳೆ ಮುಖ್ಯಮಂತ್ರಿಗಳು ರಾಜೀನಾಮೆ ನೀಡುವ ಹೊಸ್ತಿಲಲ್ಲಿದ್ದಾರೆ. ಯಾವ ಕ್ಷಣದಲ್ಲಿ ಬೇಕಾದರೂ ಅವರು ರಾಜೀನಾಮೆ ನೀಡಬಹುದು.
ಕಾಂಗ್ರೆಸ್ ಪಕ್ಷದಲ್ಲೂ ಈ ರೀತಿ ಚರ್ಚೆ ನಡೆದಿದೆ. ಮುಡಾ ವಿಚಾರವನ್ನು ಡೈವರ್ಟ್ ಮಾಡಲು ಸಿದ್ದರಾಮಯ್ಯ ಜಾತಿ ಗಣತಿ ಬಗ್ಗೆ ಚರ್ಚೆ ನಡೆಸಿದ್ದಾರೆ.
ಇದರಲ್ಲಿ ಸಿದ್ದರಾಮಯ್ಯ ಅವರ ಪ್ರಾಮಾಣಿಕತೆ ಕಾಣಿಸುತ್ತಿಲ್ಲ ಎಂದರು. ಇನ್ನು ಸ್ವತಃ ಸಿದ್ದರಾಮಯ್ಯ ಅಪರಾಧಿ ಸ್ಥಾನದಲ್ಲಿರುವುದು ರಾಜ್ಯದ ದುರಂತ. ಸಿದ್ದರಾಮಯ್ಯ ಭಂಡತನ ಬದಿಗಿಟ್ಟು ರಾಜೀನಾಮೆ ನೀಡಿದರೆ ಮರ್ಯಾದೆ ಉಳಿಯಲಿದೆ. ಇಲ್ಲ ಗೌರವ ಕಡಿಮೆಯಾಗಲಿದೆ. ಹೈಕಮಾಂಡ್ ಎಷ್ಡು ದಿನ ನಿಲ್ಲುತ್ತದೆ ನೋಡೋಣ ಎಂದು ಹೇಳಿದರು.

ಸಿ.ಪಿ.ಯೋಗೇಶ್ವರ್ ಚನ್ನಪಟ್ಟಣ ಕ್ಷೇತ್ರದಲ್ಲಿ​ ತನ್ನದೇ ಆದ ಶಕ್ತಿ ಹೊಂದಿದ್ದಾರೆ

ಚನ್ನಪಟ್ಟಣ ಕ್ಷೇತ್ರದ ಉಪಚುನಾವಣೆ ಮೈತ್ರಿ ಟಿಕೆಟ್ ವಿಚಾರವಾಗಿ ಮಾತನಾಡಿದ ಅವರು, ‘ದೆಹಲಿಯಲ್ಲಿ ರಾಧಾಮೋಹನ ದಾಸ್ ಅಗರ್ವಾಲ್ ಹಾಗೂ HDK ಭೇಟಿಯಾಗಿದ್ದರು. ಅಲ್ಲಿ ಏನೇನು ಚರ್ಚೆಯಾಗಿದೆ ಎಂದು ನನಗೆ ಮಾಹಿತಿಯಿಲ್ಲ. ಟಿಕೆಟ್ ವಿಚಾರವಾಗಿ ಹೈಕಮಾಂಡ್ ಜೊತೆ ಮಾತನಾಡುತ್ತೇನೆ. ಕ್ಷೇತ್ರದಲ್ಲಿ ಸಿ.ಪಿ.ಯೋಗೇಶ್ವರ್​ಗೆ ತನ್ನದೇ ಆದ ಶಕ್ತಿ ಹೊಂದಿದ್ದಾರೆ. ಉಪ ಚುನಾವಣೆ ಟಿಕೆಟ್ ಕೇಳುವುದು ನ್ಯಾಯ ಸಮ್ಮತವಾಗಿದೆ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:27 pm, Sun, 6 October 24