AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಸರಾ ಕಾರ್ಯಕ್ರಮದಲ್ಲಿ ಸಿಎಂ ಪರ ಬ್ಯಾಟಿಂಗ್: ಜಿಟಿಡಿ ವಿರುದ್ಧ ನಾರಾಯಣಸ್ವಾಮಿ ಕೆಂಡಾಮಂಡಲ

ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕೆಂದು ವಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್​​ ಬಿಗಿಪಟ್ಟು ಹಿಡಿದಿವೆ. ಆದರೆ, ಇತ್ತ ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿಟಿ ದೇವೇಗೌಡ ಮೈಸೂರು ದಸರಾ ಕಾರ್ಯಕ್ರಮದ ವೇದಿಕೆ ಮೇಲೆಯೇ ಸಿಎಂ ಪರ ಬ್ಯಾಂಟಿಗ್ ಮಾಡಿದ್ದು, ವಿಪಕ್ಷಗಳಿಗೆ ಮುಜುಗರ ತಂದಿಟ್ಟಿದೆ. ಇನ್ನು ಈ ಬಗ್ಗೆ ಪರಿಷತ್ ವಿಪಕ್ಷ ನಾಯಕ ನಾರಾಯಣಸ್ವಾಮಿ ಕೆಂಡಾಮಂಡಲರಾಗಿದ್ದಾರೆ. 

ದಸರಾ ಕಾರ್ಯಕ್ರಮದಲ್ಲಿ ಸಿಎಂ ಪರ ಬ್ಯಾಟಿಂಗ್: ಜಿಟಿಡಿ ವಿರುದ್ಧ ನಾರಾಯಣಸ್ವಾಮಿ ಕೆಂಡಾಮಂಡಲ
ದಸರಾ ಕಾರ್ಯಕ್ರಮದಲ್ಲಿ ಸಿಎಂ ಪರ ಬ್ಯಾಟಿಂಗ್: ಜಿಟಿಡಿ ವಿರುದ್ಧ ನಾರಾಯಣಸ್ವಾಮಿ ಕೆಂಡಾಮಂಡಲ
ಅಮೀನ್​ ಸಾಬ್​
| Updated By: ಗಂಗಾಧರ​ ಬ. ಸಾಬೋಜಿ|

Updated on: Oct 03, 2024 | 3:55 PM

Share

ಯಾದಗಿರಿ, ಅಕ್ಟೋಬರ್​ 03: ಸಿಎಂ ಸಿದ್ದರಾಮಯ್ಯ (Siddaramaiah) ಮತ್ತು ಶಾಸಕರು ದಸರಾ ಉದ್ಘಾಟನಾ ವೇದಿಕೆಯನ್ನು ರಾಜಕೀಯಕ್ಕೆ ಬಳಸಿಕೊಂಡಿದ್ದಾರೆ. ಇದು ನಾಚಿಕೆಗೇಡಿನ ಸಂಗತಿ ಎಂದು ಸರ್ಕಾರದ ವಿರುದ್ಧ ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ವಾಗ್ದಾಳಿ ಮಾಡಿದ್ದಾರೆ. ಸಿಎಂ ರಾಜೀನಾಮೆ ಅಗತ್ಯವಿಲ್ಲ ಎಂದು ಶಾಸಕ ಜಿಟಿ ದೇವೇಗೌಡ ಹೇಳಿಕೆ ವಿಚಾರವಾಗಿ ನಗರದಲ್ಲಿ ಪ್ರತಿಕ್ರಿಯಿಸಿದ್ದು, ಕಾರ್ಯಕ್ರಮದಲ್ಲಿ ರಾಜಕೀಯ ವಿಚಾರಗಳು ಪ್ರಸ್ತಾಪ ಆಗಬಾರದಿತ್ತು ಎಂದಿದ್ದಾರೆ.

ಸಿಎಂ ಸಿದ್ದರಾಮಯ್ಯ ಏನೂ ತಪ್ಪು ಮಾಡಿಲ್ಲ ಅಂತಾ ಹೇಳುತ್ತಾರೆ. ಏನು ತಪ್ಪು ಮಾಡಿಲ್ಲ ಅಂತೀರಾ, ರಾಜಕೀಯ ಮಾತಾಡಲು ವೇದಿಕೆನಾ ಎಂದು ಪ್ರಶ್ನಿಸಿದ್ದಾರೆ. ರಾಜಕಾರಣಿಗಳ ತೆವಲು ತೀರಿಸಿಕೊಳ್ಳುವಂತಹ ವೇದಿಕೆ ಆಗಬಾರದು ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ: ಮುಡಾಗೆ 14 ಸೈಟ್ ವಾಪಸ್‌ ಪ್ರಕ್ರಿಯೆ ಪೂರ್ಣ: ಯಾರ ಹೆಸರಿಗೆ ವರ್ಗಾವಣೆಯಾಯ್ತು ವಿವಾದಿತ 14 ಸೈಟ್?

ನಾನು ಯಾರದೇ ಒಬ್ಬರ ಹೆಸರನ್ನು ಇಲ್ಲಿ ಪ್ರಸ್ತಾಪಿಸಲು ಹೋಗಲ್ಲ. ನಾಡಹಬ್ಬ ದಸರಾ ವೇದಿಕೆ ರಾಜಕೀಯಕ್ಕೆ ಬಳಕೆ ಆಗಿರೋದು ತಪ್ಪು. ಶಾಸಕ ಜಿಟಿ ದೇವೇಗೌಡ ಆಗಿರಬಹುದು ಅಥವಾ ಇನ್ನೊಬ್ಬರು ಆಗಿರಬಹುದು ಅದು ತಪ್ಪು. ಮುಂದಿನ ವರ್ಷ ಯಾವುದೇ ಸರ್ಕಾರ ಆಡಳಿತದಲ್ಲಿ ಇರಲಿ, ರಾಜಕಾರಣಿಗಳಿಗೆ ಅದು ವೇದಿಕೆ ಆಗಬಾರದು ಎಂದು ಹೇಳಿದ್ದಾರೆ.

ಜೆಡಿಎಸ್ ಶಾಸಕ ಎ ಮಂಜು ಹೇಳಿದ್ದಿಷ್ಟು 

ಹಾಸನದಲ್ಲಿ ಜೆಡಿಎಸ್ ಶಾಸಕ ಎ ಮಂಜು ಪ್ರತಿಕ್ರಿಯಿಸಿದ್ದು, ಜಿಟಿ ದೇವೇಗೌಡ ಅವರು ಏನು ಮಾತಾಡಿದಾರೆ, ಉದ್ದೇಶ ಏನು ನಮಗೆ ಗೊತ್ತಿಲ್ಲ. ಮಾಧ್ಯಮಗಳಿಂದಲೇ‌ ವಿಚಾರ ಗೊತ್ತಾಗಿದೆ. ಮುಡಾದಲ್ಲಿ ಇವರು 14 ಸೈಟ್ ವಾಪಸ್ ಕೊಟ್ಟಿದಾರೆ ಎಂದಿದ್ದಾರೆ.

ಇದನ್ನೂ ಓದಿ: ಜಿಟಿ ದೇವೇಗೌಡ ಸಿಎಂ ಸಿದ್ದರಾಮಯ್ಯ ಪರ ಮಾತನಾಡಿದ್ದೇಕೆ? ಕಾರಣ ಬಿಚ್ಚಿಟ್ಟ ಕುಮಾರಸ್ವಾಮಿ!

ಮುಡಾದಲ್ಲಿ ಐದು ಸಾವಿರ ಕೋಟಿ ರೂ ಅಧಿಕ ಅವ್ಯವಹಾರ ಆಗಿದೆ ಎನ್ನೋದು ಮಾಧ್ಯಮಗಳಿಂದಲೇ ಚರ್ಚೆ ಆಗಿದೆ. ಸಿದ್ದರಾಮಯ್ಯ ಅವರ ಪತ್ನಿ ಹೆಸರಿನ ಸೈಟ್ ವಾಪಸ್ ಕೊಟ್ಟಿದಾರೆ. ವಾಪಸ್ ಕೊಟ್ಟ ಬಳಿಕ ಅವರೇ ತಪ್ಪು ಒಪ್ಪಿಕೊಂಡಂತೆ ಆಗಿದೆ ಎಂದು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.