AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುಡಾಗೆ 14 ಸೈಟ್ ವಾಪಸ್‌ ಪ್ರಕ್ರಿಯೆ ಪೂರ್ಣ: ಯಾರ ಹೆಸರಿಗೆ ವರ್ಗಾವಣೆಯಾಯ್ತು ವಿವಾದಿತ 14 ಸೈಟ್?

ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರಿಂದ 14 ನಿವೇಶನ ಮುಡಾಗೆ ಹಿಂದಿರುಗಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಡಾಗೆ 14 ನಿವೇಶನ ಹಿಂದಿರುಗಿಸುವ ಪ್ರಕ್ರಿಯೆ ಇಂದು ಪೂರ್ಣವಾಗಿದೆ. ಪಾರ್ವತಿಯವರಿಂದ ಪ್ರತಿ ಸೈಟ್​ಗೆ 1,000 ರೂ. ಅಂದರೆ 14 ನಿವೇಶನಕ್ಕೆ ಒಟ್ಟು 14 ಸಾವಿರ ರೂ. ಪಡೆದು ನಿವೇಶನವನ್ನು ವಾಪಸ್ ಪಡೆಯಲಾಗಿದೆ.

ಮುಡಾಗೆ 14 ಸೈಟ್ ವಾಪಸ್‌ ಪ್ರಕ್ರಿಯೆ ಪೂರ್ಣ: ಯಾರ ಹೆಸರಿಗೆ ವರ್ಗಾವಣೆಯಾಯ್ತು ವಿವಾದಿತ 14 ಸೈಟ್?
ಮುಡಾಗೆ 14 ಸೈಟ್ ವಾಪಸ್‌ ಪ್ರಕ್ರಿಯೆ ಪೂರ್ಣ: ಯಾರ ಹೆಸರಿಗೆ ವರ್ಗಾವಣೆಯಾಯ್ತು ವಿವಾದಿತ 14 ಸೈಟ್?
ರಾಮ್​, ಮೈಸೂರು
| Updated By: ಗಂಗಾಧರ​ ಬ. ಸಾಬೋಜಿ|

Updated on: Oct 03, 2024 | 3:22 PM

Share

ಮೈಸೂರು, ಅಕ್ಟೋಬರ್​ 03: ಖುದ್ದು ಸಿಎಂ ಸಿದ್ದರಾಮಯ್ಯರ (Siddaramaiah) ಪತ್ನಿಯೇ ಮುಡಾ ಕಚೇರಿಗೆ ಬಂದು ಸೈಟ್ ವಾಪಸ್​ ಕೊಡೋದಾಗಿ ಮೊನ್ನೆ ಹೇಳಿದ್ದರು. ಇದಾಗುತ್ತಿದ್ದಂತೆಯೇ ತಕ್ಷಣವೇ ಸಿಎಂ ಪತ್ನಿಯ ಹೆಸರಿನಲ್ಲಿದ್ದ ಸೈಟ್​ಗಳು ಮುಡಾ ಪಾಲಾಗಿವೆ. ಇಂದು ಮುಡಾಗೆ 14 ನಿವೇಶನ ಹಿಂದಿರುಗಿಸುವ ಪ್ರಕ್ರಿಯೆ ಪೂರ್ಣವಾಗಿದೆ. ಮೈಸೂರಿನ ಟಿ.ಕೆ.ಲೇಔಟ್​ನ ಸಿದ್ದರಾಮಯ್ಯ ನಿವಾಸದಲ್ಲಿ ಅಧಿಕಾರಿಗಳು ಖಾಸಗಿ ನೋಂದಣಿ ಮಾಡಿಕೊಂಡಿದ್ದಾರೆ.

ಮುಡಾಗೆ ನಿವೇಶನ ವಾಪಸ್ ಆದ ದಾಖಲೆ ಟಿವಿ9ಗೆ ಲಭ್ಯವಾಗಿದೆ. ಪಾರ್ವತಿಯವರಿಂದ ಪ್ರತಿ ಸೈಟ್​ಗೆ 1,000 ರೂ. ಅಂದರೆ 14 ನಿವೇಶನಕ್ಕೆ ಒಟ್ಟು 14 ಸಾವಿರ ರೂ. ಪಡೆದು ನಿವೇಶನವನ್ನು ವಾಪಸ್ ಪಡೆಯಲಾಗಿದೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಹೆಸರಿಗೆ ಸೈಟ್ ವರ್ಗಾವಣೆ ಮಾಡಲಾಗಿದೆ.

14 ಸೈಟ್​ಗಳ ಸಂಬಂಧ ಸಿಎಂ ವಿರುದ್ಧ ಸಾಕ್ಷಿ ನಾಶ ಆರೋಪ: ಇಡಿಗೆ ಪ್ರದೀಪ್​ ಕುಮಾರ್ ದೂರು

ಪಾರ್ವತಿ ಅವರಿಂದ 14 ನಿವೇಶನ ಮುಡಾಗೆ ವಾಪಸ್ಸ್​ ಬೆನ್ನಲ್ಲೇ ಈ ಮಧ್ಯೆ 14 ಸೈಟ್​ಗಳ ಸಂಬಂಧ ಸಿಎಂ ಸಿದ್ದರಾಮಯ್ಯ ವಿರುದ್ಧ ಸಾಕ್ಷ್ಯನಾಶದ ಆರೋಪ ಕೇಳಿಬಂದಿದೆ. ಈ​ ಬಗ್ಗೆ ತನಿಖೆ ನಡೆಸಿ ಸಂಬಂಧಪಟ್ಟವರನ್ನು ಬಂಧಿಸುವಂತೆ ಇಡಿಗೆ ಮುಡಾ ದೂರುದಾರರಲ್ಲೊಬ್ಬರಾದ ಪ್ರದೀಪ್​ ಕುಮಾರ್​ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಮುಡಾ ಕೇಸ್: ಸಿಎಂಗೆ ಭಯ ಹುಟ್ಟಿಸಿದ pmlaನ ಆ ಸೆಕ್ಷನ್ ಯಾವುದು ಗೊತ್ತಾ?

ಈ ಬಗ್ಗೆ ಬೆಂಗಳೂರಿನಲ್ಲಿ ಇಡಿ ಅಧಿಕಾರಿಗಳಿಗೆ ದೂರು ನೀಡಿರುವ ಪ್ರದೀಪ್​ ಕುಮಾರ್​​ ಯತೀಂದ್ರ ಸಿದ್ದರಾಮಯ್ಯ ಕೂಡ ಇದರಲ್ಲಿ ಪಾಲುದಾರರಾಗಿದ್ದಾರೆ. ಅಲ್ಲದೇ ಸೈಟ್​ ವಾಪಸ್​ ಪಡೆಯುವ ಮೂಲಕ ಸಾಕ್ಷ್ಯನಾಶ ಆಗಿದೆ. ಮುಡಾ ಅಧಿಕಾರಿಗಳನ್ನು ಬಳಸಿಕೊಂಡು ಸಾಕ್ಷ್ಯನಾಶ ಮಾಡಲಾಗುತ್ತಿದೆ. ಹೀಗಾಗಿ ಸಾಕ್ಷ್ಯನಾಶ ಪ್ರಕರಣ ದಾಖಲು ಮಾಡಬೇಕೆಂದು ಇಡಿಗೆ ಮನವಿ ಮಾಡಿದ್ದಾರೆ.

ಮುಡಾ ಆಯುಕ್ತರು ಪಾರ್ವತಿ ಮನೆಗೆ ಹೋಗಿ ಸೈಟ್ ವಾಪಸ್ ಪ್ರತಿಗೆ ಸಹಿ ಮಾಡಿಸಿಕೊಂಡು ಬಂದಿದ್ದಾರೆ. ಅಧಿಕಾರಿಗಳು ಆರೋಪಿಗಳ ಜೊತೆಗೆ ಸಾಕ್ಷಿ ನಾಶಕ್ಕೆ ಕೈಜೋಡಿಸಿದ್ದಾರೆ. ಹೀಗಾಗಿ ಮುಡಾ ಅಧಿಕಾರಿಗಳ ವಿರುದ್ಧವೂ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಮುಡಾ ಹಗರಣ: ಸೈಟ್ ವಾಪಸ್ ಕೊಟ್ಟರೆ ಸಿದ್ದರಾಮಯ್ಯ ಸಂಕಷ್ಟ ಕಡಿಮೆಯಾಗುತ್ತಾ? ಕಾನೂನು ತಜ್ಞರು ಹೇಳಿದ್ದಿಷ್ಟು

ಸಿಎಂ ಸಿದ್ದರಾಮಯ್ಯ ಕುಟುಂಬದಿಂದ ತಕ್ಷಣ 14 ಸೈಟ್​ಗಳನ್ನ ವಶಕ್ಕೆ ಪಡೆಯಬೇಕು. ದಾಖಲೆ ಬದಲಾವಣೆ ಮಾಡುತ್ತಿರುವ ಮುಡಾ ಆಯುಕ್ತರ ವಿರುದ್ಧ ಕ್ರಮವಾಗಬೇಕು. ಮುಡಾ ಆಯುಕ್ತರು, ಅಧಿಕಾರಿಗಳ ಮೇಲೆ ಸಿಎಂ ಪ್ರಭಾವ ಬೀರುತ್ತಿದ್ದಾರೆ. ಹಾಗಾಗಿ ಸಿಎಂ ಸೇರಿದಂತೆ ಮತ್ತಿತರರ ವಿರುದ್ಧ ಕೇಸ್ ದಾಖಲಿಸುವಂತೆ ಕ್ರಮಕ್ಕೆ‌ ಆಗ್ರಹಿಸಿದ್ದು, ದಾಖಲೆ ವಶಕ್ಕೆ ಪಡೆಯಲು ಲೋಕಾಯುಕ್ತ ಎಸ್​ಪಿಗೆ ಸೂಚಿಸುವಂತೆ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಬಿಹಾರ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ವಿರುದ್ಧ ರಾಹುಲ್ ಜಾಥಾ
ಬಿಹಾರ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ವಿರುದ್ಧ ರಾಹುಲ್ ಜಾಥಾ
ಕೊಪ್ಪಳದಲ್ಲಿ ಯೂರಿಯಾಗಾಗಿ ಒಂದು ಕಿಮೀ ವರೆಗೂ ಸರತಿ ಸಾಲಿನಲ್ಲಿ ನಿಂತ ರೈತರು‌
ಕೊಪ್ಪಳದಲ್ಲಿ ಯೂರಿಯಾಗಾಗಿ ಒಂದು ಕಿಮೀ ವರೆಗೂ ಸರತಿ ಸಾಲಿನಲ್ಲಿ ನಿಂತ ರೈತರು‌
ಚುನಾವಣಾ ಆಯೋಗದಿಂದ ನೋಟಿಸ್, ಬಿಹಾರ ಡಿಸಿಎಂ ವಿಜಯ್ ಹೇಳಿದ್ದೇನು?
ಚುನಾವಣಾ ಆಯೋಗದಿಂದ ನೋಟಿಸ್, ಬಿಹಾರ ಡಿಸಿಎಂ ವಿಜಯ್ ಹೇಳಿದ್ದೇನು?
VIDEO: ಬರೋಬ್ಬರಿ 109 ಮೀಟರ್ ಸಿಕ್ಸ್​ ಸಿಡಿಸಿದ ಟಿಮ್ ಡೇವಿಡ್
VIDEO: ಬರೋಬ್ಬರಿ 109 ಮೀಟರ್ ಸಿಕ್ಸ್​ ಸಿಡಿಸಿದ ಟಿಮ್ ಡೇವಿಡ್
Assembly Session Live: ವಿಧಾನಸಭೆ ಅಧಿವೇಶನ ನೇರಪ್ರಸಾರ
Assembly Session Live: ವಿಧಾನಸಭೆ ಅಧಿವೇಶನ ನೇರಪ್ರಸಾರ
ಭೀಮ ಹೆಸರಿಗೆ ತಕ್ಕಂತೆ ಗಜಪಡೆಯಲ್ಲಿ ಎಲ್ಲರಿಗಿಂತ ಹೆಚ್ಚು ತೂಕದ ಆನೆ
ಭೀಮ ಹೆಸರಿಗೆ ತಕ್ಕಂತೆ ಗಜಪಡೆಯಲ್ಲಿ ಎಲ್ಲರಿಗಿಂತ ಹೆಚ್ಚು ತೂಕದ ಆನೆ
‘ನನ್ನ ಅಮೂಲ್ಯ 8 ವರ್ಷ ವ್ಯರ್ಥವಾಗಿದೆ’; ಧ್ರುವ ಬಗ್ಗೆ ರಾಘವೇಂದ್ರ ಹೊಸ ಆರೋಪ
‘ನನ್ನ ಅಮೂಲ್ಯ 8 ವರ್ಷ ವ್ಯರ್ಥವಾಗಿದೆ’; ಧ್ರುವ ಬಗ್ಗೆ ರಾಘವೇಂದ್ರ ಹೊಸ ಆರೋಪ
ಮೈಮೇಲೆಲ್ಲಾ ಕಚ್ಚಿದ ಗಾಯ, ಡೇ ಕೇರ್ನಲ್ಲಿರುವ ಮಗುವಿನ ಸ್ಥಿತಿ ಏನಾಗಿದೆ ನೋಡಿ
ಮೈಮೇಲೆಲ್ಲಾ ಕಚ್ಚಿದ ಗಾಯ, ಡೇ ಕೇರ್ನಲ್ಲಿರುವ ಮಗುವಿನ ಸ್ಥಿತಿ ಏನಾಗಿದೆ ನೋಡಿ
ಅಪಘಾತದಲ್ಲಿ ಮೃತಪಟ್ಟ ಪತ್ನಿಯನ್ನು ಬೈಕ್​ನಲ್ಲಿ ಕಟ್ಟಿ ಹೊತ್ತೊಯ್ದ ಪತಿ
ಅಪಘಾತದಲ್ಲಿ ಮೃತಪಟ್ಟ ಪತ್ನಿಯನ್ನು ಬೈಕ್​ನಲ್ಲಿ ಕಟ್ಟಿ ಹೊತ್ತೊಯ್ದ ಪತಿ
ಕೊನೆಯ ಓವರ್​ನಲ್ಲಿ 7 ರನ್​ಗಳ​ ಗುರಿ ನಿಯಂತ್ರಿಸಿ ಪಂದ್ಯ ಗೆಲ್ಲಿಸಿದ ಆಶಿಶ್
ಕೊನೆಯ ಓವರ್​ನಲ್ಲಿ 7 ರನ್​ಗಳ​ ಗುರಿ ನಿಯಂತ್ರಿಸಿ ಪಂದ್ಯ ಗೆಲ್ಲಿಸಿದ ಆಶಿಶ್