ಮುಡಾ ಕೇಸ್: ಸಿಎಂಗೆ ಭಯ ಹುಟ್ಟಿಸಿದ pmlaನ ಆ ಸೆಕ್ಷನ್ ಯಾವುದು ಗೊತ್ತಾ?
ಮುಡಾ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ವಿರುದ್ಧ ಇಡಿಯಲ್ಲಿ ಇಸಿಐಆರ್ ದಾಖಲಾಗಿದ್ದು, ಇದರ ಬೆನ್ನಲ್ಲೇ ಸಿಎಂ ಪತ್ನಿ 14 ಸೈಟ್ಗಳನ್ನು ವಾಪಸ್ ಮುಡಾಗೆ ಕೊಟ್ಟಿದ್ದಾರೆ. ಹಾಗಾದ್ರೆ, ಸಿಎಂ ಇಡಿ ದಾಖಲಿಸಿರುವ ಆ ಒಂದು ಸೆಕ್ಷನ್ಗೆ ಹೆದರಿ ಸೈಟ್ಗಳನ್ನು ವಾಪಸ್ಸು ಕೊಟ್ರಾ ? ಸಿಎಂಗೆ ಭಯ ಹುಟ್ಟಿಸಿದ pmlaನ ಆ ಸೆಕ್ಷನ್ ಯಾವುದು? ಎನ್ನುವ ವಿವರ ಇಲ್ಲಿದೆ.
ಬೆಂಗಳೂರು, (ಅಕ್ಟೋಬರ್ 02): ಇಡಿ ಅಧಿಕಾರಿಗಳು ದಾಖಲು ಮಾಡಿರುವ ಇಸಿಐಅರ್,ನಲ್ಲಿ ಇರುವ ಒಂದು ಸೆಕ್ಷನ್ ನಿಜಕ್ಕು ಸಿಎಂ ಸಿದ್ದದರಾಮಯ್ಯಗೆ ಭಯ ಹುಟ್ಟಿಸಿದೆ . ಈ ಸೆಕ್ಷನ್ನಿಂದ ತಪ್ಪಿಸಿಕೊಳ್ಳಲು ಅಥವಾ ಮುಂದೆ ಆಗಬಹುದಾದ ಮುಜುಗರವನ್ನು ತಡೆಯಲು ಸಿಎಂ ಕುಟುಂಬ ಹಲವು ಲೆಕ್ಕಾಚಾರ ಹಾಕಿ ಎನ್ನಲಾಗಿದೆ. ಸಿಎಂ ವಿರುದ್ದ ದಾಖಲಾಗಿರುವ ಇಸಿಐಆರ್ ನಲ್ಲಿದ pmla act 15 of 2003 ಕಾಯ್ದೆ ಇದೆ. ಇದೇ ಆ್ಯಕ್ಟ್ ನ ಕಾರಣಕ್ಕೆ ಸಿಎಂ ,ತನ್ನ ಪತ್ನಿ ಮೂಲಕ ಕೂಡಲೇ ಸೈಟ್ ಗಳನ್ನ ವಾಪಸ್ಸು ನೀಡಿಸಿದ್ದಾರೆ. ಹಾಗಾದ್ರೆ ಈ ಕಾಯ್ದೆಗೆ ಇರುವ ಪವರ್ ಏನು ಎನ್ನುವುದು ಈ ಕೆಳಗಿನಂತಿದೆ ನೋಡಿ.
ಈ ಕಾಯ್ದೆಯ ಪ್ರಕಾರ ಇ.ಡಿ ಅಧಿಕಾರಿಯು ( ತನಿಖಾ ಅಧಿಕಾರಿ ) ಪ್ರಾಪರ್ಟಿಯನ್ನ ( ಸೈಟುಗಳನ್ನು ) ಮುಟ್ಟಗೋಲು ( ಕೇಸ್ ನಲ್ಲಿ ಅಟ್ಯಾಚ್ )ಹಾಕಿಕೊಳ್ಳಬಹುದು. ಈ ರೀತಿ ಕೇಸ್ ನಲ್ಲಿ ಅಟ್ಯಾಚ್ ಮಾಡಿಕೊಳ್ಳಲು ಯಾವುದೇ ನ್ಯಾಯಾಲಯದ ಅದೇಶ ಅಥವಾ ಅನುಮತಿ ಪಡೆಯಬೇಕು ಎಂಬ ನಿಯಮ ಇಲ್ಲ. ಕೇವಲ ಸಂಬಂಧಪಟ್ಟ ಆಸ್ತಿಗಾಗಿ ಮನಿಲಾಂಡ್ರಿಂಗ್ ನಡೆದಿದೆ ಎಂದು ತನಿಖಾಧಿಕಾರಿಗೆ ಅನಿಸಿದರೆ ( ಅಥವಾ ಸೂಕ್ತ ಸಾಲ್ಷಿಗಳು ) 180 ದಿನಗಳವರೆಗೂ ಆಸ್ತಿಯನ್ನ ಮುಟ್ಟಗೋಲು ಹಾಕಿಕೊಳ್ಳಬಹುದು. ಹೀಗಾಗಿ ಒಂದು ವೇಳೆ ಸಿಎಂ ಪತ್ನಿ ಈ ಸೈಟ್ ವಾಪಸ್ಸು ಮೂಡಾಗೆ ನೀಡಿಲ್ಲ ಎಂದಾದರೆ ಇ.ಡಿ ಯಾವುದೇ ಕ್ಷಣದಲ್ಲಿ ಮುಟ್ಟಗೋಲು ಹಾಕಿಕೊಳ್ಳಬಹುದಿತ್ತು. ಹೀಗೆ ಸೈಟ್ ಗಳನ್ನ ಇ.ಡಿ ಮುಟ್ಟಗೋಲು ಹಾಕಿಕೊಂಡಿದ್ರೆ ಸಿಎಂಗೆ ದೊಡ್ಡ ಹಿನ್ನಡೆಯಾಗುತಿತ್ತು. ಈಗ ಇದೆಲ್ಲವನ್ನು ತಡೆಯಲು ಈ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ.
ತಮ್ಮ ಹೆಅರಿನಲ್ಲಿ ಇರುವ ಸೈಟ್ ಗಳನ್ನು ಇಡಿ ಅಟ್ಯಾಚ್ ಮಾಡಿಕೊಳ್ಳಲು ಅವಕಾಶ ನೀಡಬಾರದು ಎನ್ನಲಿಕ್ಕೆ ಈಗ ಸೈಟ್ ವಾಪಸ್ ಮುಡಾಗ ಮಾಡಿಸಲಾಗಿದೆ. ಈಗಲೂ ಸಹ ಮೂಡ ಹೆಸರಿನಲ್ಲಿ ಇರುವ ಸೈಟ್ ಗಳನ್ನು ಇಡಿ ತನ್ನ ಕೇಸ್ ನಲ್ಲಿ ಅಟ್ಯಾಚ್ ಮಾಡಿಕೊಳ್ಳಲಿದೆ. ಆದ್ರೆ ಸಿಎಂ ಪತ್ನಿ ಹೆಸರಿನಲ್ಲಿ ಇರುವಾಗ ಅಟ್ಯಾಚ್ ಮಾಡಿಕೊಳ್ಳುವುದಕ್ಕೂ ಮೂಡಾ ಹೆಸರಿನಲ್ಲಿ ಇರುವ ಸೈಟ್ ಗಳನ್ನು ಅಟ್ಯಾಚ್ ಮಾಡಿಕೊಳ್ಳುವುದಕ್ಕೂ ಬಹುದೊಡ್ಡ ವ್ಯತ್ಯಾಸ ಇದೆ.
ಒಟ್ಟಿನಲ್ಲಿ ಇಡಿ ಕುಣಿಕೆಯಿಂದ ತಪ್ಪಿಸಿಕೊಳ್ಳಲು ಸಿಎಂ ಸೈಟ್ಗಳನ್ನು ವಾಪಸ್ ಮುಡಾಗೆ ನೀಡಿದ್ದಾರೆ ಎನ್ನಲಾಗಿದ್ದು, ಮುಂದೆ ಇದರಿಂದ ಸಿಎಂ ಯಾವ ರೀತಿ ರಿಲೀಪ್ ಸಿಗಲಿದೆ? ಅಥವಾ ತನಿಖೆ ಸಂಕಷ್ಟ ಎದುರಾಗಲಿದ್ಯಾ ಎನ್ನುವುದನ್ನ ಕಾದುನೋಡಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:27 pm, Wed, 2 October 24