ಮಡಿಕೇರಿಯಲ್ಲಿ 3 ಕೋಟಿ ರೂ.ಮೌಲ್ಯದ ಹೈಡ್ರೋ ಗಾಂಜಾ ಜಪ್ತಿ, 7 ಪೆಡ್ಲರ್​ಗಳ ಬಂಧನ

ಇತ್ತೀಚೆಗೆ ಥೈಲ್ಯಾಂಡ್​ನಿಂದ ಹೈಡ್ರೋ ಗಾಂಜಾ ತರಿಸಿಕೊಳ್ಳುತ್ತಿದ್ದ ಆರೋಪಿಯನ್ನು ಬೆಂಗಳೂರು ಬ್ಯಾಡರಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದರು. ಇದೀಗ ಕೊಡಗು ಜಿಲ್ಲಾ‌ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಥೈಲ್ಯಾಂಡ್​ನಿಂದ ಕೊಡಗಿಗೆ ತಂದಿದ್ದ 3 ಕೋಟಿ ರೂ. ಮೌಲ್ಯದ ಹೈಡ್ರೋ ಗಾಂಜಾವನ್ನು ವಶಕ್ಕೆ ಪಡೆಯಲಾಗಿದೆ. ಈ ಕುರಿತು ಒಂದು ಸ್ಟೋರಿ ಇಲ್ಲಿದೆ.

ಮಡಿಕೇರಿಯಲ್ಲಿ 3 ಕೋಟಿ ರೂ.ಮೌಲ್ಯದ ಹೈಡ್ರೋ ಗಾಂಜಾ ಜಪ್ತಿ, 7 ಪೆಡ್ಲರ್​ಗಳ ಬಂಧನ
ಹೈಡ್ರೋ ಗಾಂಜಾ ವಶಪಡಿಸಿಕೊಂಡ ಕೊಡಗು ಜಿಲ್ಲಾ‌ ಪೊಲೀಸರು, ಬಂಧಿತ ಆರೋಪಿಗಳು
Follow us
Gopal AS
| Updated By: ಕಿರಣ್ ಹನುಮಂತ್​ ಮಾದಾರ್

Updated on: Oct 02, 2024 | 7:37 PM

ಕೊಡಗು, ಅ.02: ಕೊಡಗು ಜಿಲ್ಲಾ‌ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಥೈಲ್ಯಾಂಡ್​ನಿಂದ ಕೊಡಗಿಗೆ ತಂದಿದ್ದ 3 ಕೋಟಿ ರೂ. ಮೌಲ್ಯದ ಹೈಡ್ರೋ ಗಾಂಜಾವನ್ನು ವಶಕ್ಕೆ ಪಡೆಯಲಾಗಿದೆ. ಕೇರಳ ಹಾಗೂ ಕೊಡಗು ಮೂಲದ‌ ಮೆಹರೂಫ್, ರವೂಫ್, ನಾಸಿರುದ್ದೀನ್,, ವಾಜೀದ್, ಯಾಹಿಯಾ, ಅಕಾನಾಸ್ ಹಾಗೂ ರಿಯಾಜ್ ಸೇರಿ ಏಳು ಮಂದಿ ಪೆಡ್ಲರ್​ಗಳನ್ನು ಬಂಧಿಸಲಾಗಿದೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ‌ದ ಮೂಲಕ ತರಲಾಗಿದ್ದ ಹೈಡ್ರೋ ಗಾಂಜಾ ಇದಾಗಿದ್ದು, ಮಡಿಕೇರಿ ನಗರದ ವಿರಾಜಪೇಟೆ ರಸ್ತೆಯ ಬಳಿ ಆರೋಪಿಗಳನ್ನು ಹೆಡಮುರಿ ಕಟ್ಟಲಾಗಿದೆ. ಈ ಕುರಿತು ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ‌ ದಾಖಲಿಸಲಾಗಿದೆ.

ಕಳೆದ ಸೆ.10 ರಂದು ಬೆಂಗಳೂರು ಬ್ಯಾಡರಹಳ್ಳಿ ಠಾಣೆ ಪೊಲೀಸರು ಇನ್​​ಸ್ಟಾಗ್ರಾಂ ಮೂಲಕ ಆರ್ಡರ್ ಮಾಡಿ ಥೈಲ್ಯಾಂಡ್​ನಿಂದ ಹೈಡ್ರೋ ಗಾಂಜಾ ತರಿಸಿಕೊಳ್ಳುತ್ತಿದ್ದ ಆರೋಪಿ ತೌನೇಶ್ ಎಂಬಾತನನ್ನು ಬಂಧಿಸಿದ್ದರು. ಅಂಧ್ರಹಳ್ಳಿಯ ಕಾಲೇಜೊಂದರ ಬಳಿ ಮಾರಾಟ ಮಾಡುತ್ತಿದ್ದಾಗ ಆರೋಪಿಯನ್ನು ಸೆರೆ ಹಿಡಿದು, ಆತನಿಂದ 1.22 ಕೋಟಿ ರೂ. ಮೌಲ್ಯದ ಹೈಡ್ರೋ ಗಾಂಜಾವನ್ನು ವಶಕ್ಕೆ ಪಡೆಯಲಾಗಿತ್ತು.

ಇದನ್ನೂ ಓದಿ:ಹುಬ್ಬಳ್ಳಿಯಲ್ಲಿ ಯುಪಿ, ಬಿಹಾರಿ ಯುವಕರ ಪುಂಡಾಟ; ಗಾಂಜಾ ಮತ್ತಿನಲ್ಲಿ ಇಬ್ಬರಿಗೆ ಚಾಕು ಇರಿತ

ಸಿಂಥೆಟಿಕ್ ಪೇಪರ್​​ನಲ್ಲಿ ಸುತ್ತಿ ಬಿಸ್ಕೆಟ್ ಬಾಕ್ಸ್​ನಲ್ಲಿ ಗಾಂಜಾ ತರಲಾಗುತ್ತಿತ್ತು

ಇನ್ನು ಈ ಗಾಂಜಾವನ್ನು ವಿಮಾನ ನಿಲ್ದಾಣದಲ್ಲಿ ಯಾಮಾರಿಸಿ ತರಿಸಿಕೊಳ್ಳಲಾಗುತ್ತಿತ್ತು. ಸಿಂಥೆಟಿಕ್ ಪೇಪರ್​​ನಲ್ಲಿ ಸುತ್ತಿ ಬಿಸ್ಕೆಟ್ ಬಾಕ್ಸ್​ನಲ್ಲಿ ಗಾಂಜಾ ತರಲಾಗುತ್ತಿತ್ತು. ಈ ಗಾಂಜಾವನ್ನು ಸಿಂಥೆಟಿಕ್ ಪೇಪರ್​​ನಲ್ಲಿ ಸುತ್ತುವುದರಿಂದ ವಾಸನೆ ಕೂಡ ಬರುತ್ತಿರಲಿಲ್ಲ. ಜೊತೆಗೆ, ಸ್ಕ್ಯಾನ್ ಮಾಡಿದಾಗಲೂ ಗಾಂಜಾ ಇದೆ ಎಂಬುದು ಗೊತ್ತಾಗುತ್ತಿರಲಿಲ್ಲ. ಬಟ್ಟೆ ವ್ಯಾಪಾರಿಯಾಗಿರುವ ತೌನೇಶ್ 2020 ರಿಂದಲೇ ಗಾಂಜಾ ಮಾರಾಟ ಮಾಡುತ್ತಿದ್ದ ಎನ್ನುವುದು ತನಿಖೆಯಿಂದ ತಿಳಿದುಬಂದಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ