ಬೆಂಗಳೂರು: ಸುಶಿಕ್ಷಿತ, ಸಮೃದ್ಧ ಕುಟುಂಬ ಅದು. ಆ ಮನೆಯಲ್ಲಿ ಸಾಮೂಹಿಕ ಆತ್ಮಹತ್ಯೆಗಳ ಬಿರುಗಾಳಿ ಬೀಸಿದ್ದು, ಅಲ್ಲೇನೂ ಉಳಿದಿಲ್ಲ. ಇಷ್ಟು ದಿನ ಅಲ್ಲಿ ಮನೆ ಮಾಡಿದ್ದ ಸ್ವಪ್ರತಿಷ್ಠೆ, ಅಹಂ ಎಲ್ಲಾ ನಶಿಸಿದೆ. ಉಳಿದಿರುವುದು ವಂಶದ ಕೊನೆಯ ಕುಡಿ. ಇಬ್ಬರು ಅಳಿಯಂದಿರು. ಮಧ್ಯೆ ವಿಷಾದದ ಚಾದರ ಹೊದ್ದಿರುವ ಮನೆಯ ಯಜಮಾನ. ಇದು ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ (ಅಂದ್ರಹಳ್ಳಿ ಮೇನ್ ರೋಡ್ ಚೇತನ್ ಸರ್ಕಲ್ ಬಳಿಯಿರುವ ಮನೆ) ಒಂದೇ ಕುಟುಂಬದ ಐದು ಮಂದಿ ಅಸುನೀಗಿರುವ ದಾರುಣ ಕತೆಯ ವ್ಯಥೆಯ ನೋಟ.
ಪ್ರಕರಣದಲ್ಲಿ ಕ್ಷಣ ಕ್ಷಣಕ್ಕೂ ಒಡೆದ ಕುಟುಂಬದ ಒಂದೊಂದೇ ದಾರುಣ ಕತೆಗಳು ಹೊರಬೀಳುತ್ತಿವೆ. ತಾಜಾ ಮಾಹಿತಿ ಪ್ರಕಾರ
ಬೆಂಗಳೂರಲ್ಲಿ ಆ ಐದು ಮಂದಿ ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೂ ಮೊದಲು, ಮನೆಯ ಕಿರಿಯ ಮಗಳು ಜಸ್ಟ್ 20 ದಿನದ ಹಿಂದೆ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಳು! ಸಿಂಧೂ ರಾಣಿ ಈ ಹಿಂದೆ ಆತ್ಮಹತ್ಯೆಗೆ ಯತ್ನ ಮಾಡಿದ್ದಳು. ಅದನ್ನ ನೋಡಿ ಬೆಚ್ಚಿಬಿದ್ದಿದ್ದ ಸಿಂಧೂ ರಾಣಿಯ ಹೆತ್ತಮ್ಮ ಏನು ಹೇಳಿದ್ದಳು ಗೊತ್ತಾ!? ‘ಸಾಯೋದಾದ್ರೆ ಎಲ್ಲಾ ಒಟ್ಟಿಗೆ ಸಾಯೋಣ’ ಎಂದಿದ್ದಳಂತೆ ಮಹಾತಾಯಿ ಭಾರತಿ.
ಅಂದಿನಿಂದಲೇ ಆತ್ಮಹತ್ಯೆ ಮಾಡಿಕೊಳ್ಳೊ ಮನಸ್ಸು ಮಾಡಿತ್ತಾ ಕುಟುಂಬ? ಅಂದುಕೊಂಡಂತೆ ನೇಣು ಬಿಗಿದುಕೊಂಡು ಇಡೀ ಕುಟುಂಬ ಸರ್ವನಾಶವಾದರಾ? ಎಂಬ ಪ್ರಶ್ನೆ ಈಗ ಕಾಡತೊಡಗಿದೆ.
ಒಡೆದ ಮನೆಯ ಯಜಮಾನ ಶಂಕರ್ ಪೊಲೀಸರಿಗೆ ನೀಡಿರುವ ಹೇಳಿಕೆಯಲ್ಲಿ ಏನೆಲ್ಲಾ ಉಲ್ಲೇಖವಾಗಿದೆ? ಇಲ್ಲಿದೆ ಓದಿ:
20 ದಿನಗಳ ಹಿಂದೆ ಅಳಿಯ ಹಾಗೂ ಬೀಗರರನ್ನು ಹೆದರಿಸಲು ಗಂಡನ ಮನೆಯಲ್ಲಿ ಕೈ ಕೂಯ್ದಕೊಂಡಿದ್ದಳು. ರಕ್ತ ಸುರಿದು ಮೂರ್ಛೆ ಹೋಗುವ ಮಟ್ಟಕ್ಕೆ ಹೋಗಿದ್ದಳು. ನಂತರ ಅಳಿಯನಿಗೆ ನಾನೇ ಆಸ್ಪತ್ರೆಗೆ ಸೇರಿಸಲು ಹೇಳಿದ್ದೆ. ಆ ಸಮಯದಲ್ಲಿ ಮನೆಯಲ್ಲಿ ಹೆಂಡತಿ ಭಾರತಿ ಮಕ್ಕಳೊಂದಿಗೆ ಸೇರಿ ನನ್ನ ಮೇಲೆ ಹಲ್ಲೆಗೆ ಮುಂದಾದದ್ರು. ಅವಾಗ ನಾನು ದುಃಖಿತನಾಗಿದ್ದೆ.
ಅದಾದ ಮೇಲೆ ಹೆರಿಗೆಗೆ ಅಂತಾ ಮಗಳು ನಮ್ಮ ಮನೆಗೆ ಬರುತ್ತಾಳೆ. ಆ ಮೇಲೆ ಮಗಳನ್ನು ಮನೆಗೆ ಕರೆಯಲು ಅಳಿಯ ಬರುತ್ತಾನೆ. ತಾಯಿ ಆಳಿಯನೊಂದಿಗೆ ತಂಟೆ ತಕಾರಾರು ಮಾಡುತ್ತಿದ್ದಳು. ಎರಡನೇ ಮಗಳು ಸಿಂಧೂ ವಿವಾಹ ಆದಾಗ ಅವಳಿಗೆ ಇಲ್ಲ ಸಲ್ಲದನ್ನು ತಲೆಗೆ ತುಂಬಿದ್ದಳು. ಸಿಂಧೂವನ್ನು ಗಂಡನ ಮನೆಗೆ ಹೋದ ನಂತರ ಬೇರೆ ಮನೆ ಮಾಡು ಎಂದು ಭಾರತಿ ಹೇಳಿದ್ದಳು.
ಬೇರೆ ಮನೆ ಮಾಡಿ ಕರೆದುಕೊಂಡು ಹೋಗುವಂತೆ ಅಳಿಯನಿಗೆ ಸಿಂಧೂ ಮೂಲಕ ಒತ್ತಡ ಹೇರುತ್ತಿದ್ದಳು. ಈ ರೀತಿ ಭಾರತಿ ಹೇಳುವುದನ್ನ ನೋಡಿ ನನಗೆ ಬಹಳ ದುಃಖ ಆಗುತ್ತಿತ್ತು. ನಂತರ ಬೇರೆ ಮನೆ ಮಾಡಿಲ್ಲ ಅಂದರೆ ಮನೆಗೆ ಹೋಗಲ್ಲ ಅಂತ ಹೇಳುವಂತೆ ಸಿಂಧೂಗೆ ಭಾರತಿ ಹೇಳಿ ಕೊಡುತ್ತಿದ್ದಳು. ಈ ರೀತಿ ಮದುವೆ ಆಗಿ ಒಂದೂವರೆ ವರ್ಷ ಆಗಿದ್ದರು. ನನ್ನಮಗಳು ಮನೆಯಲ್ಲೆ ಇದ್ದಳು. ಇದನ್ನ ನೋಡಿ ನನಗೆ ದುಃಖ ಆಗುತ್ತಿತ್ತು ಎಂದು ಶಂಕರ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಅಳಿಯನಿಗೆ ಬೈದು ಬುದ್ಧಿವಾದ ಹೇಳುವುದನ್ನ ಬಿಟ್ಟು…! ಅಂದುಬಿಟ್ಟಳಂತೆ ದರ್ಪಪತ್ನಿ
ಸಿಂಧೂ ಹೆರಿಗೆಯ ಸಂದರ್ಭದಲ್ಲಿ ಇಲ್ಲಸಲ್ಲದ್ದನ್ನು ಮಾತಾಡುವುದು. ಸಿಂಧೂ ಕಡೆಯಿಂದ ಗಂಡನಿಗೆ ಬೇಜಾರು ಮಾಡುವಂತೆ ತಾಯಿ ಭಾರತಿ ಹೇಳಿಕೊಡುತ್ತಿದ್ದಳು. ಪತ್ನಿ ಭಾರತಿಗೆ ನಾನು ಬುದ್ಧಿವಾದ ಹೇಳುತ್ತಿದ್ದೆ. 2 ಹೆಣ್ಣುಮಕ್ಕಳು ಮತ್ತು ಮಗನಿಗೆ, ಹೆಂಡತಿಗೆ ಹೇಳುತ್ತಿದ್ದ ಬುದ್ಧಿವಾದ ಅವರಿಗೆ ಇಷ್ಟ ಆಗುತ್ತಿರಲಿಲ್ಲ. ಅಳಿಯನಿಗೆ ಬೈದು ಬುದ್ಧಿವಾದ ಹೇಳುವುದನ್ನ ಬಿಟ್ಟು ಅವರ ಜೊತೆ ಅನುಸರಿಸಿಕೊಂಡು ಹೋಗುವಂತೆ ನಮಗೆಯೇ ಬುದ್ಧಿ ಹೇಳುತ್ತಿಯಾ? ಅಳಿಯಂದಿರಿಗೆ ಭಯ ಹುಟ್ಟಿಸುವುದನ್ನ ಬಿಟ್ಟು ಅನುಸರಿಸಿಕೊಂಡು ಹೋಗು ಎಂದು ಹೇಳುತ್ತೀಯಾ ಎಂದು ಅವಾಗಾವಾಗ ಗಲಾಟೆ ಆಗುತ್ತಿತ್ತಂತೆ.
ಇದನ್ನೂ ಓದಿ:
ಬ್ಯಾಡರಹಳ್ಳಿಯಲ್ಲಿ ಒಂದೇ ಕುಟುಂಬದ 5 ಮಂದಿ ಸಾವು ಪ್ರಕರಣ; ವೃತ್ತಾಂತ ಘನಘೋರ, ಅಸಲಿ ಸತ್ಯಗಳು ಭೀಕರ
ಇದನ್ನೂ ಓದಿ:
ಒಂದೇ ಮನೆಯ 5 ಮಂದಿ ಸಾವು ಪ್ರಕರಣ: ಇಬ್ಬರು ಅಳಿಯಂದಿರು ಹೇಳೋದೇನು?
(byadarahalli bengaluru five of a broken family commit suicide after daughter tried to commit suicide 20 days back)
Bengaluru Family Suicide Case: ತುಂಬಿ ತುಳುಕುತ್ತಿದ್ದ ಮನೆಯಲ್ಲಿ ನಿಜಕ್ಕೂ ನಡೆದಿದ್ದೇನು..?
Published On - 11:18 am, Sat, 18 September 21