ನಿವೃತ್ತಿ ಅಂಚಿನಲ್ಲಿರುವ ಆಫೀಸರ್‌ಗೆ ಅಧಿಕಾರದ ದಾಹ? ಮಾಜಿ ಪ್ರಧಾನಿ ದೇವೇಗೌಡರಿಂದ ಸಿಎಂ ಬೊಮ್ಮಾಯಿಗೆ ಪತ್ರ ಬರೆಸಿ, 2 ವರ್ಷ ಎಕ್ಸ್ಟೆನ್ಶನ್ ಕೇಳಿದ ಜೈಪ್ರಕಾಶ್!
ಕಾವೇರಿನಿಗಮದಲ್ಲೇ 4 ವರ್ಷ ಕೆಲಸ ಮಾಡಿರುವ ಜೈಪ್ರಕಾಶ್ ಇದೇ ಮೇ 31ಕ್ಕೆ ನಿವೃತ್ತಿಯಾಗಬೇಕಿದ್ದಾರೆ. ಆದರೂ ಇನ್ನೆರಡು ವರ್ಷ ಇಲ್ಲೇ ಉಳಿದುಕೊಳ್ಳಲು ಸರ್ಕಸ್ ಮಾಡುತ್ತಿದ್ದಾರೆ. ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಮೂಲಕ ಕೆ.ಜೈಪ್ರಕಾಶ್ ಸಿಎಂ ಬಸವರಾಜ ಬೊಮ್ಮಾಯಿಗೆ ಮನವಿ ಪತ್ರ ಬರೆಸಿದ್ದಾರೆ.
ಬೆಂಗಳೂರು: ‘ಕಾವೇರಿ ನೀರಾವರಿ ನಿಗಮ’ದ(Cauvery Neeravari Nigam Limited) ಎಂಡಿ ಕೆ.ಜೈಪ್ರಕಾಶ್ ಅವರಿಗೆ ಅಧಿಕಾರದ ದಾಹ ಎಷ್ಟಿದೆ ಎಂಬ ಬಗ್ಗೆ ಟಿವಿ9 ವಾಹಿನಿ ಇಂದು ಬಯಲು ಮಾಡುತ್ತಿದೆ. ನಿಗದಿಯಂತೆ ಇದೇ ತಿಂಗಳು ನಿವೃತ್ತಿಯಾಗಬೇಕಿದ್ದ ಜೈಪ್ರಕಾಶ್, ಇನ್ನೆರಡು ವರ್ಷ ಅಧಿಕಾರದಲ್ಲಿ ಮುಂದುವರೆಯಲು ಸರ್ಕಸ್ ಮಾಡುತ್ತಿದ್ದಾರೆ. ಸೇವಾ ಅವಧಿ ವಿಸ್ತರಣೆ ಮಾಡಿಕೊಳ್ಳಲು ಜೈಪ್ರಕಾಶ್ ಮಾಡುತ್ತಿರುವ ಪ್ರಯತ್ನಗಳು ಒಂದೆರೆಡಲ್ಲ. ಅವಧಿ ವಿಸ್ತರಣೆಗೆ ಪ್ರಭಾವಿಗಳ ಮೂಲಕ ಕೆ.ಜೈಪ್ರಕಾಶ್ ಒತ್ತಡ ಹಾಕಿಸುತ್ತಿದ್ದಾರಂತೆ. ಕರ್ನಾಟಕ ನಾಗರಿಕ ಸೇವಾ ನಿಯಮ 95(2)ರ ನಿಯಮದಡಿ ವಿನಾಯ್ತಿ ನೀಡಿ ಸೇವಾವಧಿ ವಿಸ್ತರಣೆಗೆ ಮನವಿ ಸಲ್ಲಿಸಿದ್ದಾರೆ ಎಂಬ ಬಗ್ಗೆ ಮಾಹಿತಿ ಸಿಕ್ಕಿದೆ.
ಕಾವೇರಿನಿಗಮದಲ್ಲೇ 4 ವರ್ಷ ಕೆಲಸ ಮಾಡಿರುವ ಜೈಪ್ರಕಾಶ್ ಇದೇ ಮೇ 31ಕ್ಕೆ ನಿವೃತ್ತಿಯಾಗಬೇಕಿದ್ದಾರೆ. ಆದರೂ ಇನ್ನೆರಡು ವರ್ಷ ಇಲ್ಲೇ ಉಳಿದುಕೊಳ್ಳಲು ಸರ್ಕಸ್ ಮಾಡುತ್ತಿದ್ದಾರೆ. ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಮೂಲಕ ಕೆ.ಜೈಪ್ರಕಾಶ್ ಸಿಎಂ ಬಸವರಾಜ ಬೊಮ್ಮಾಯಿಗೆ ಮನವಿ ಪತ್ರ ಬರೆಸಿದ್ದಾರೆ. ಇನ್ನೂ ಎರಡುವರ್ಷ ಸೇವೆಯಲ್ಲಿ ಮುಂದುವರೆಯಲು ಒಪ್ಪಿಗೆ ನೀಡುವಂತೆ ಮನವಿ ಮಾಡಿದ್ದಾರೆ. ವಿಶೇಷ ಪ್ರಕರಣದ ವಿನಾಯಿತಿ ಪಡೆದುಕೊಳ್ಳಲು ಕೆ.ಜೈಪ್ರಕಾಶ್ ತಂತ್ರ ಮಾಡುತ್ತಿದ್ದು ನೀರಾವರಿ ಇಲಾಖೆಯಲ್ಲಿ ಸುದೀರ್ಘ ಸೇವೆ ಪರಿಗಣಿಸುವಂತೆ ಮಾಜಿಪ್ರಧಾನಿ ಹೆಚ್.ಡಿ.ದೇವೇಗೌಡರಿಂದ ಪತ್ರ ಬರೆಸಿದ್ದಾರೆ ಎಂಬ ಮಾಹಿತಿ ಟಿವಿ9ಗೆ ಲಭ್ಯವಾಗಿದೆ. ಇದನ್ನೂ ಓದಿ: ಪಡಿತರವನ್ನು ಮನೆ ಬಾಗಿಲಿಗೆ ತಲುಪಿಸುವ ದೆಹಲಿ ಸರ್ಕಾರದ ಯೋಜನೆಗೆ ತಡೆ ನೀಡಿದ ಹೈಕೋರ್ಟ್
ಈಗಾಗ್ಲೇ ಎರಡು ಬಾರಿ ಜೈಪ್ರಕಾಶ್ ಕಾವೇರಿ ನೀರಾವರಿ ನಿಗಮದಲ್ಲಿ ಎಂಡಿಯಾಗಿ ಕೆಲಸ ನಿರ್ವಹಿಸಿದ್ದಾರೆ. ಇದೀಗ ಎರಡನೇ ಅವಧಿಯಲ್ಲಿ ಎರಡು ವರ್ಷಗಳಿಗೂ ಹೆಚ್ಚು ಕಾಲ ಅಧಿಕಾರ ನಡೆಸಿದ್ದಾರೆ. ನಿವೃತ್ತಿಯ ಬಳಿಕವೂ ಮತ್ತೆ ಎರಡು ವರ್ಷ ಅದೇ ಹುದ್ದೆಯಲ್ಲಿ ಮುಂದುವರೆಸುವಂತೆ ಕೇಳಿಕೊಂಡಿರೋದು ಹಲವು ಅನುಮಾನಕ್ಕೆ ಕಾರಣವಾಗಿದೆ. ಇನ್ನು ಪತ್ರದಲ್ಲಿ ಉಲ್ಲೇಖ ಮಾಡಿರೋ ಹಾಗೆ ಕರ್ನಾಟಕ ನಾಗರೀಕ ಸೇವಾ ನಿಯಮಗಳ ಪ್ಯಾರಾ ನಂಬರ್ 95 (2) ರ ಅಡಿಯಲ್ಲಿ ವಿನಾಯ್ತಿ ನೀಡುವಂತೆಯೂ ಮಾಜಿ ಪ್ರಧಾನಿಗಳು ಮನವಿ ಮಾಡಿಕೊಂಡಿದ್ದಾರೆ. ಕಾಯ್ದೆಯಲ್ಲಿ ನಿವೃತ್ತಿ ಬಳಿಕ ಅವಶ್ಯಕತೆ ಇದ್ದಲ್ಲಿ, ಅತೀ ವಿಶೇಷ ಪ್ರಕರಣಗಳಲ್ಲಿ ಮಾತ್ರ ಸೇವಾವಧಿ ಮುಂದುವರೆಸೋದಕ್ಕೆ ಅವಕಾಶ ಇದೆ. ಆದ್ರೆ ಇದನ್ನೇ ನೆಪ ಮಾಡಿಕೊಂಡು ಸೇವಾವಧಿ ಹೆಚ್ಚಿಸಿಕೊಳ್ಳೋದಕ್ಕೆ ಜೈಪ್ರಕಾಶ್ ಮುಂದಾಗಿದ್ದಾರೆ. ಇದು ಇತರೆ ಹಿರಿಯ ಅಧಿಕಾರಿಗಳ ಗಮನಕ್ಕೆ ಬಂದಿದ್ದು ಜೈಪ್ರಕಾಶ್ ನಡೆಯನ್ನ ಖಂಡಿಸ್ತಾ ಇದ್ದಾರೆ. ಈ ಬಗ್ಗೆ ಜೈಪ್ರಕಾಶ್ ಅವ್ರನ್ನ ಕೇಳಿದ್ರೆ ನನಗೆ ಇದ್ರ ಅವಶ್ಯಕತೆ ಇಲ್ಲ, ಆ ಬಗ್ಗೆ ಏನನ್ನೂ ಮಾತಾಡಲ್ಲ ಅಂತಿದ್ದಾರೆ.
ಇತ್ತ ಮುಖ್ಯಮಂತ್ರಿಗಳಿಗೆ ಮಾಜಿ ಪ್ರಧಾನಿಗಳು ಪತ್ರ ಬರೆದಿರೋದ್ರಿಂದ ಮುಖ್ಯಮಂತ್ರಿಗಳು ಏನು ಕ್ರಮ ಕೈಗೊಳ್ತಾರೆ ಅನ್ನೋ ಕುತೂಹಲ ಇದೆ. ಆದ್ರೆ ನಿಯಮದ ಪ್ರಕಾರ ನಿವೃತ್ತಿಯಾಬೇಕಿದ್ದವ್ರನ್ನ ಮತ್ತೆ ಅದೇ ಹುದ್ದೆಯಲ್ಲಿ ಮುಂದುವರೆಸಿದ್ರೆ ಹಿರಿಯ ಅಧಿಕಾರಿಗಳ ಸಿಟ್ಟಿಗೆ ಕಾರಣವಾಗಲಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 5:03 pm, Thu, 19 May 22