ಬೆಂಗಳೂರಿನ ವಿವಿಧೆಡೆ ಇಂದು ಬರಲ್ಲ ಕಾವೇರಿ ನೀರು: ಏರಿಯಾ ವಿವರ ಇಲ್ಲಿದೆ
Bangalore Water Cut: ಬೆಂಗಳೂರು ನಗರದ ಅನೇಕ ಪ್ರದೇಶಗಳಿಗೆ ಇಂದು ಬೆಳಗ್ಗೆಯಿಂದ ಗುರುವಾರ ಬೆಳಗ್ಗೆ 5ರ ವರೆಗೆ ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಈ ವಿಚಾರವಾಗಿ ಜಲ ಮಂಡಳಿ ಮಾಹಿತಿ ನೀಡಿದ್ದು, ಸಾರ್ವಜನಿಕರು ಸಹಕರಿಸುವಂತೆ ಜಲಮಂಡಳಿ ಅಧ್ಯಕ್ಷ ರಾಮ ಪ್ರಸಾತ್ ಮನೋಹರ್ ಕೇಳಿಕೊಂಡಿದ್ದಾರೆ. ಯಾವೆಲ್ಲ ಪ್ರದೇಶಗಳಿಗೆ ನೀರು ಬರುವುದಿಲ್ಲ ಎಂಬ ವಿವರ ಇಲ್ಲಿದೆ.
ಬೆಂಗಳೂರು, ಜನವರಿ 22: ಮುಖ್ಯ ಪೈಪ್ ಲೈನ್ನ ನೀರು ನಿಲುಗಡೆ ಕಾಮಗಾರಿ ಹಿನ್ನೆಲೆಯಲ್ಲಿ ಬೆಂಗಳೂರಿನ ವಿವಿಧೆಡೆ ಇಂದು (ಬುಧವಾರ) ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ 4ನೇ ಹಂತ, 2ನೇ ಹೆಗ್ಗನಹಳ್ಳಿಯಿಂದ ಜಿಕೆವಿಕೆ ಕಡೆಗೆ ಸಾಗುವ 1800 ಮಿ.ಮೀ ವ್ಯಾಸದ ನೀರಿನ ಮುಖ್ಯ ಕೊಳವೆಯ ನೀರು ನಿಲುಗಡೆ ಮಾಡುವ ಕಾಮಗಾರಿ ಆರಂಭವಾಗುತ್ತಿದೆ. ಹೀಗಾಗಿ ಇಂದು ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಬೆಂಗಳೂರು ಜಲಮಂಡಳಿ ತಿಳಿಸಿದ್ದು, ಬೆಂಗಳೂರಿನ ಬಹುತೇಕ ಏರಿಯಾಗಳಿಗೆ ಇಂದು ಕಾವೇರಿ ನೀರು ಬರುವುದಿಲ್ಲ.
ಇಂದು ಬೆಳಗ್ಗೆ 5 ಗಂಟೆಯಿಂದ ನಾಳೆ (ಗುರುವಾರ) ಬೆಳಗ್ಗೆ 5 ಗಂಟೆ ವರೆಗೆ ಹಲವು ಪ್ರದೇಶಗಳಲ್ಲಿ ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಈ ಅವಧಿಯಲ್ಲಿ ಸಾರ್ವಜನಿಕರು ಜಲಮಂಡಳಿಯೊಂದಿಗೆ ಸಹಕರಿಸುವಂತೆ ಜಲಮಂಡಳಿ ಅಧ್ಯಕ್ಷ ರಾಮ ಪ್ರಸಾತ್ ಮನೋಹರ್ ಮನವಿ ಮಾಡಿದ್ದಾರೆ.
ಯಾವ್ಯಾವ ಏರಿಯಾಗಳಲ್ಲಿ ನೀರು ಬರಲ್ಲ?
ಆರ್.ಆರ್.ನಗರ, ಐಡಿಯಲ್ ಹೋಮ್ಸ್, ಕೆಂಚೇನಹಳ್ಳಿ, ಕೋಡಿಪಾಳ್ಯ, ಚನ್ನಸಂದ್ರ, ಕೆಂಗೇರಿ, ನಾಗದೇವನಹಳ್ಳಿ, ಮರಿಯಪ್ಪನಪಾಳ್ಯ, ನಾಗರಬಾವಿ, ಮಲ್ಲತ್ತಹಳ್ಳಿ, ಕೊಟ್ಟಿಗೆಪಾಳ್ಯ, ಹೇರೋಹಳ್ಳಿ, ಹೆಗ್ಗನಹಳ್ಳಿ, ಸುಂಕದಕಟ್ಟೆ, ರಾಜಗೋಪಾಲನಗರ, ಲಕ್ಷ್ಮೀ ದೇವಿನಗರ, ಲಗ್ಗೆರೆ, ಪೀಣ್ಯ ಕೈಗಾರಿಕಾ ಪ್ರದೇಶ, ಪೀಣ್ಯ, ಟಿ.ದಾಸರಹಳ್ಳಿ, ಹೆಚ್ಎಂಟಿ ಲೇಔಟ್, ಬಾಗಲಗುಂಟೆ, ಅಬ್ಬಿಗೆರೆ, ಬ್ಯಾಟರಾಯನಪುರ, ಅಮೃತಹಳ್ಳಿ, ಜಕ್ಕೂರು, ಕೆಂಪಾಪುರ, ಯಲಹಂಕ ಓಲ್ಡ್ & ನ್ಯೂಟೌನ್, ವಿದ್ಯಾರಣ್ಯಪುರ, ಸಿಂಗಾಪುರ, ಜಾಲಹಳ್ಳಿ, ಬಿಇಎಲ್ ರಸ್ತೆ, ಮುತ್ಯಾಲನಗರ, ಜೆ.ಪಿ.ಪಾರ್ಕ್, ದಾಸರಹಳ್ಳಿ, ಮಹಾಲಕ್ಷ್ಮಿಲೇಔಟ್, ಸುಬ್ರಹ್ಮಣ್ಯನಗರ, ಗಾಯತ್ರಿನಗರ, ಜೆ.ಸಿ.ನಗರ, ಕುರುಬರಹಳ್ಳಿ, ನಂದಿನಿ ಲೇಔಟ್, ಪ್ರಕಾಶನಗರ, ಗೊರಗುಂಟೆಪಾಳ್ಯ, ಕಾಮಾಕ್ಷಿಪಾಳ್ಯ, ಬಸವೇಶ್ವನಗರ, ಶಿವನಹಳ್ಳಿ, ಮಂಜುನಾಥನಗರ, ಶಂಕರಮಠ, ಮಹಾಲಕ್ಷ್ಮೀಪುರಂ, ಶಂಕರನಗರ, ಕಮಲಾನಗರ, ವಿಜಯನಗರ, ಆರ್‌ಪಿಸಿ ಲೇಔಟ್, ಚೋಳರಪಾಳ್ಯ, ಹಂಪಿನಗರ, ಅಗ್ರಹಾರ ದಾಸರಹಳ್ಳಿ, ರಾಜಾಜಿನಗರ 6ನೇ ಬ್ಲಾಕ್ ಪ್ರದೇಶಗಳಿಗೆ ಗುರುವಾರ ಬೆಳಗ್ಗೆ ವರೆಗೆ ಕಾವೇರಿ ನೀರು ಪೂರೈಕೆ ಇರುವುದಿಲ್ಲ.
ಇದನ್ನೂ ಓದಿ: ತೆರಿಗೆ ಬಾಕಿ ಉಳಿಸಿಕೊಂಡವರಿಗೆ ಬಿಬಿಎಂಪಿ ಶಾಕ್: ಆಸ್ತಿ ಹರಾಜಿಗೆ ಪ್ಲ್ಯಾನ್
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ