ಹುಡುಗಿ ಆಸೆ ತೋರಿಸಿ ಸುಲಿಗೆ: ಆನ್ಲೈನ್ ನಲ್ಲಿ ನೋಡಿದ ಹುಡುಗಿ ಭೇಟಿಗೆ ಹೋಗಿ ತಗ್ಲಾಕೊಂಡ
ಆನ್‌ಲೈನ್‌ನಲ್ಲಿ ಡೇಟಿಂಗ್ ಗೆ ಸುಲಭವಾಗಿ ಹುಡುಗಿಯರು ಸಿಗ್ತಾರೆ ಅಂತ ಆಸೆಪಟ್ಟು ಹೋದರೆ ಪ್ರಾಣಕ್ಕೇ ಕುತ್ತು ಬರೋದು ಖಂಡಿತ. ವೆಬ್‌ಸೈಟ್‌ನಲ್ಲಿ ಹುಡುಗಿಯರ ಫೋಟೋ ನೋಡಿ ಆಕರ್ಷಿತರಾಗಿ ಭೇಟಿಯಾಗಲು ಹೋದವರನ್ನೇ ಕಿಡ್ನಾಪ್ ಮಾಡಿ, ಬೆದರಿಸಿ ಸುಲಿಗೆ ಮಾಡುತ್ತಿದ್ದ 11 ಜನರ ಜಾಲವನ್ನು ಸಿಸಿಬಿ ಪೊಲೀಸರು ಪತ್ತೆ ಹಚ್ಚಿ ಬಂಧಿಸಿದ್ದಾರೆ. ಅಷ್ಟಕ್ಕೂ ಆಗಿದ್ದೇನು? ಎನ್ನುವ ವಿವರ ಇಲ್ಲಿದೆ.

ಮುಖ್ಯಾಂಶಗಳು
- ಬೆಂಗಳೂರಿನಲ್ಲಿ ಹುಡುಗಿ ಆಸೆ ತೋರಿಸಿ ಅಪಹರಿಸಿ ಸುಲಿಗೆ
- ಯುವತಿಯರ ಹೆಸರಿನಲ್ಲಿ ಸುಲಿಗೆ ಮಾಡುತ್ತಿದ್ದ ಗ್ಯಾಂಗ್ ಅಂದರ್
- ಎರಡು ಆಟೋ, 4 ಬೈಕ್, 13 ಮೊಬೈಲ್ ಫೋನ್ ಗಳು ನಗದು ವಶ
ಬೆಂಗಳೂರು, (ಜುಲೈ 20): ಹುಡುಗಿ ಆಸೆ ತೋರಿಸಿ ವ್ಯಕ್ತಿಯನ್ನು ಸುಲಿಗೆ ಮಾಡಿದ್ದ 11 ಮಂದಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಚೇತನ್ ಮನು, ಶಾಬು , ಮಂಜುನಾಥ, ಜಯಕುಮಾರ್, ಅರುಣ ಕೀರ್ತಿ, ಕಾಂತ ರಾಜು, ಸಂದೀಪ್ ಬಂಧಿತ ಆರೋಪಿಗಳು. ಇವರು ಆ್ಯಪ್ ಒಂದರಲ್ಲಿ ಹುಡುಗಿಯರು ಇದ್ದಾರೆ ಎಂದು ಮೊದಲು ಪೋಸ್ಟ್ ಮಾಡಿದ್ದರು. ಇದನ್ನು ನಂಬಿ ಹುಡುಗಿಯನ್ನು ಭೇಟಿಯಾಗಲು ಹೋಗಿದ್ದ ವ್ಯಕ್ತಿಯನ್ನು ಆರೋಪಿಗಳು ಸುಲಿಗೆ ಮಾಡಿದ್ದರು. ಹೌದು…ವ್ಯಕ್ತಿಯೊಬ್ಬರು ವೆಬ್‌ಸೈಟ್‌ನಲ್ಲಿ ನೋಡಿದ ಹುಡುಗಿಯನ್ನ ಭೇಟಿ ಮಾಡಲು ಆಸೆಯಿಂದ ಹೆಚ್.ಆರ್.ಬಿ.ಆರ್ ಲೇಔಟ್‌ಗೆ ಸಿಕ್ಕಿಬಿದ್ದಿದ್ದು, ಯುವತಿಯನ್ನು ಭೇಟಿ ಮಾಡುವ ಮೊದಲೇ ಸಂಚು ಮಾಡಿದ್ದ ಗ್ಯಾಂಗ್, ವ್ಯಕ್ತಿಯನ್ನು ಸಿನಿಮೀಯ ಶೈಲಿಯಲ್ಲಿ ಕಿಡ್ನಾಪ್ ಹೊಡೆದು ಬಡಿದು ಸುಲಿಗೆ ಮಾಡಿ ಪರಾರಿಯಾಗಿತ್ತು. ಬಳಿಕ ಸಿಸಿಬಿ ಕಾರ್ಯಚರಣೆ ನಡೆಸಿ ಸುಲಿಗೆಕೋರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಘಟನೆ ವಿವರ
ಬಂಧಿತ ಗ್ಯಾಂಗ್ ವೆಬ್ಸೈಟ್ವೊಂದರಲ್ಲಿ ಹುಡುಗಿ ಫೋಟೋ ವ್ಯಕ್ತಿಯನ್ನು ಮರಳು ಮಾಡಿತ್ತು. ಬಳಿಕ ಹುಡುಗಿ ಭೇಟಿಗೆ ಬಂದವನನ್ನು ಪ್ಲ್ಯಾನ್ ಮಾಡಿಯೇ ರನ್ನು ಚೇತನ್, ಮನು, ಶಾಬು, ಮಂಜುನಾಥ್, ಜಯಕುಮಾರ್ ಸೇರಿದಂತೆ 9 ಮಂದಿ ಆರೋಪಿಗಳು ಸೇರಿ ಕಿಡ್ನಾಪ್ ಮಾಡಿದ್ದರು. ತದನಂತರ ಸಂತ್ರಸ್ತನನ್ನು ನಗರದ ವಿವಿಧ ಭಾಗಗಳಲ್ಲಿ ಆಟೋದಲ್ಲಿ ಸುತ್ತಾಡಿಸಿ, ಜೀವ ಬೆದರಿಕೆ ಹಾಕಿ, ಹಲ್ಲೆ ಮಾಡಿ . ಕೊನೆಗೆ ಆತನ ಬಳಿಯಿದ್ದ ನಗದು, ಚಿನ್ನದ ಚೈನ್ ಹಾಗೂ ಮೊಬೈಲ್ ಫೋನ್‌ಗಳನ್ನು ಕಿತ್ತುಕೊಂಡು ಪರಾರಿಯಾಗಿದ್ದರು.
ಇದನ್ನೂ ಓದಿ: ಅತಿ ಆಸೆ ಗತಿಗೇಡು: ಲೋನ್ ಆಸೆಗೆ ತಾಳಿ ಅಡವಿಟ್ಟು ಮುಂಗಾಡ ಹಣ ಕಟ್ಟಿ ಮೋಸ ಹೋದ ಮಹಿಳೆಯರು
ಈ ದರೋಡೆ ಕುರಿತು ಸಿಸಿಬಿಗೆ ಖಚಿತ ಮಾಹಿತಿ ಲಭ್ಯವಾಗುತ್ತಿದ್ದಂತೆ, ತಕ್ಷಣ ಕಾರ್ಯಪ್ರವೃತ್ತರಾದ ಸಿಸಿಬಿ WPW ವಿಭಾಗದ ಅಧಿಕಾರಿಗಳು, ದೂರು ದಾಖಲಿಸಿಕೊಂಡು ಕಾರ್ಯಾಚರಣೆ ನಡೆಸಿ ಇಬ್ಬರು ಮಹಿಳೆಯರು ಸೇರಿದಂತೆ ಒಟ್ಟು 11 ಜನ ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಂಧಿತರಿಂದ ಕೃತ್ಯಕ್ಕೆ ಬಳಸಿದ್ದ 2 ಆಟೋಗಳು, 4 ದ್ವಿಚಕ್ರ ವಾಹನಗಳು, 13 ಮೊಬೈಲ್ ಫೋನ್‌ಗಳು ಹಾಗೂ ಸುಲಿಗೆ ಮಾಡಿದ್ದ ನಗದನ್ನು ವಶಪಡಿಸಿಕೊಳ್ಳಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:33 pm, Mon, 20 July 26




