ಕೆ.ಸಿ.ಜನರಲ್ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ಮಗು ಹುಟ್ಟುವ ಮುಂಚೆಯೇ ಸಾವು; ಆಸ್ಪತ್ರೆ ಮುಂದೆ ಕುಟುಂಬಸ್ಥರ ಆಕ್ರಂದನ
ಬೆಂಗಳೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಮಗು ಹುಟ್ಟುವ ಮುಂಚೆಯೇ ಸಾವನ್ನಪ್ಪಿದೆ. ಕುಟುಂಬಸ್ಥರು ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯ ಅಂತಾ ಆರೋಪಿಸಿ ಗಲಾಟೆ ಮಾಡಿದ್ದಾರೆ. ಮಲ್ಲೇಶ್ವರಂನ ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ವೈದ್ಯರ ವಿರುದ್ಧ ಡೆಲಿವರಿ ಮಾಡೋದರಲ್ಲಿ ವಿಳಂಬ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ಬೆಂಗಳೂರು, ಡಿ.18: ನಗರದ ಮಲ್ಲೇಶ್ವರಂನ ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ (KC General Hospital) ವೈದ್ಯರ ವಿರುದ್ಧ ಡೆಲಿವರಿ ಮಾಡೋದರಲ್ಲಿ ವಿಳಂಬ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ (Doctor Negligence). ಅಲ್ಲದೆ ಮಗು ಹುಟ್ಟುವ ಮುಂಚೆಯೇ ಸಾವನ್ನಪ್ಪಿದ್ದು ಕುಟುಂಬಸ್ಥರು ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯ ಎಂದು ಆರೋಪಿಸಿ ಗಲಾಟೆ ಮಾಡಿದ್ದಾರೆ. ಆಸ್ಪತ್ರೆ ವಿರುದ್ಧ ಕುಟುಂಬಸ್ಥರು ಆಕ್ರೋಶ ಹೊರ ಹಾಕಿದ್ದಾರೆ.
ಚೊಕ್ಕಸಂದ್ರದ ಗರ್ಭಿಣಿ ದೇವಿಕಾ ಅವರಿಗೆ 9 ತಿಂಗಳು 12 ದಿನಗಳು ತುಂಬಿತ್ತು. ಆಸ್ಪತ್ರೆ ವೈದ್ಯರು 9 ತಿಂಗಳು ತುಂಬಿದ್ರೂ ಹೆರಿಗೆ ಮಾಡಿರಲಿಲ್ಲ. ಹೀಗಾಗಿ ಡೇಟ್ ಮೀರಿದೆ ಸಿಸೇರಿಯನ್ ಮಾಡಿ ಎಂದು ಕುಟುಂಬಸ್ಥರು ಮನವಿ ಮಾಡಿದ್ದರು. ಆದರೆ ವೈದ್ಯರು ಸಿಸೇರಿಯನ್ಗೆ ಒಪ್ಪದೇ ನಾರ್ಮಲ್ಗೆ ಮುಂದಾಗಿದ್ದರು. ನಾರ್ಮಲ್ ಡೆಲಿವರಿ ಮಾಡಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಾಗ ಕೊನೆಗೆ ನಾರ್ಮಲ್ ಆಗಲ್ಲ ಸಿಸೇರಿಯನ್ ಮಾಡಬೇಕು ಎಂದು ಸಿಬ್ಬಂದಿ ಹೇಳಿದ್ದಾರೆ. ಬಳಿಕ ಮಗು ಗಲೀಜು ನೀರು ಕುಡಿದು ಸತ್ತು ಹೋಗಿದೆ ಅಂತ ವೈದ್ಯರು ಹೇಳಿದ್ದಾರೆ. ಇದ್ರಿಂದ ಕೆರಳಿದ ಸಂಬಂಧಿಕರು ಕೆ.ಸಿ.ಜನರಲ್ ಆಸ್ಪತ್ರೆಯ ಮುಂದೆ ಗಲಾಟೆ ಮಾಡಿದ್ದಾರೆ. ಆಸ್ಪತ್ರೆಯ ಆವರಣದಲ್ಲಿ ತಾಯಿ ದೇವಿಕಾ ಕಣ್ಣೀರು ಹಾಕಿ ಲಂಚ ಲಂಚ ಅಂತಾ ಸಾಯ್ತಾ ಇದ್ದಾರೆ ಎಂದು ವೈದ್ಯರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ: ಚಿಕ್ಕಬಳ್ಳಾಪುರ ಅಂಚೆ ಇಲಾಖೆಯ ನಿರ್ಲಕ್ಷ್ಯಕ್ಕೆ ಸಾರ್ವಜನಿಕರ ಪರದಾಟ, ತಿಂಗಳುಗಳೇ ಕಳೆದರೂ ವಿತರಣೆಯಾಗದ ದಾಖಲೆಗಳು
ನಿರ್ಲಕ್ಷ್ಯ ಕಂಡುಬಂದರೆ ಕ್ರಮ ಕೈಗೊಳ್ಳುತ್ತೇವೆ
ಇನ್ನು ಈ ಘಟನೆ ಸಂಬಂಧ ಕೆಸಿ ಜನರಲ್ ಮೆಡಿಕಲ್ ಆಫೀಸರ್ ಡಾ ಮೋಹನ್ ಪ್ರತಿಕ್ರಿಯೆ ನೀಡಿದ್ದು, ಡಾ ವಿಜಯಲಕ್ಷ್ಮಿ ಅವರು ಈ ಕೇಸನ್ನು ನೋಡುತ್ತಿದ್ರು. ಡಿಸೆಂಬರ್ 10ಕ್ಕೆ ಡೆಲಿವರಿ ಡೇಟ್ ಇತ್ತು. ಸಿಸೇರಿಯನ್ ಅಗತ್ಯವಿಲ್ಲ ಎಂಬ ನಿರ್ಧಾರಕ್ಕೆ ಬಂದಿದ್ರು. ಆದರೆ ನಾರ್ಮಲ್ ಆಗದೇ ಇರೋದ್ರಿಂದ ಸಿಸೇರಿಯನ್ ಮಾಡಿದ್ದಾರೆ. ಹಾರ್ಟ್ ಬೀಟ್ ಕಡಿಮೆ ಇತ್ತು. ಎನ್ಐಸಿಯುಗೆ ಶಿಫ್ಟ್ ಮಾಡಿದ್ದಾರೆ. ವೈದ್ಯೆ ನನ್ನ ಕಡೆಯಿಂದ ತಪ್ಪಾಗಿಲ್ಲ ಅಂತಾ ಹೇಳಿದ್ದಾರೆ. ಆದರೆ ವೈದ್ಯೆಯ ನಿರ್ಲಕ್ಷ್ಯ ಕಂಡುಬಂದರೆ ಖಂಡಿತಾ ಕ್ರಮ ಕೈಗೊಳ್ಳುತ್ತೇವೆ. ಆಂತರಿಕ ತನಿಖೆ ಮಾಡುತ್ತೇವೆ. ವರದಿ ತಯಾರಿ ಮಾಡಿದ ಬಳಿಕ ಕೇಸ್ ಶೀಟ್ ತಗೊಂಡು ನಿರ್ಧಾರ ಮಾಡ್ತೇವೆ ಎಂದು ತಿಳಿಸಿದ್ದಾರೆ.
ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ