ಬೆಂಗಳೂರು; ಧೂಳಿನಿಂದಾಗಿ ಮಕ್ಕಳಲ್ಲಿ ಹೆಚ್ಚಾಗುತ್ತಿವೆ ಶ್ವಾಸಕೋಶದ ಸಮಸ್ಯೆ
ಬೆಂಗಳೂರಿನಲ್ಲಿ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದ್ದು ವಾಯು ಮಾಲಿನ್ಯ ಕೂಡ ಹೆಚ್ಚಾಗಿದೆ. ಇದರಿಂದ ಮಕ್ಕಳಲ್ಲಿ ಶ್ವಾಸಕೋಶದ ಸಮಸ್ಯೆ ಹೆಚ್ಚಾಗುತ್ತಿದೆ. ಮಕ್ಕಳು ಮನೆಯಿಂದ ಹೋಗುವಾಗ ಮಾಸ್ಕ್ ಹಾಕಿ ಕಳಿಸಿ. ಮಕ್ಕಳ ಆರೋಗ್ಯ ಹದಗೆಟ್ಟಾಗಾ ಅದನ್ನ ಉಡಾಫೆ ಮಾಡ್ಬೇಡಿ ಅಂತ ಡಾಕ್ಟರ್ಗಳು ಸಲಹೆ ನೀಡ್ತಿದ್ದಾರೆ.
ಬೆಂಗಳೂರು, ಮಾರ್ಚ್.02: ರಾಜಧಾನಿಯಲ್ಲಿ ದಿನೇ ದಿನೇ ಧೂಳು, ಹೊಗೆ ಪ್ರಮಾಣ ಜಾಸ್ತಿಯಾಗುತ್ತಿದೆ. ಬೆಂಗಳೂರು, ಉದ್ಯಾನ ನಗರಿ ಎಂಬ ಪಟ್ಟವನ್ನು ನಿಧಾನಕ್ಕೆ ಕಳೆದುಕೊಳ್ಳುತ್ತಿದೆ. ಇದೀಗ ಗಾರ್ಡನ್ ಸಿಟಿ (Garden City), ಗ್ರೀನ್ ಸಿಟಿ ಬದಲು ಬೆಂಗಳೂರಿಗೆ ಪಲ್ಯೂಷನ್ ಸಿಟಿ (Pollution City) ಎಂಬ ಕಳಂಕ ಅಂಟಿಕೊಂಡಿದ್ದು, ಈ ವಾಯು ಮಾಲಿನ್ಯದಿಂದಾಗಿ ಮಕ್ಕಳಲ್ಲಿ ಲಂಗ್ಸ್ ಸಮಸ್ಯೆ (Lung Infection) ಹೆಚ್ಚಳವಾಗಿದೆ.
ಮಾಲಿನ್ಯ, ಮಾಲಿನ್ಯ, ಎಲ್ಲಿ ನೋಡಿದರೂ ವಾಯು ಮಾಲಿನ್ಯ. ಅದ್ಯಾಕೋ ಏನೋ ಬೆಂಗಳೂರಿಗೆ ಗಾರ್ಡನ್ ಸಿಟಿ ಅಂತ ಕರೀತಾ ಇದ್ರು. ಆದರೆ ಈಗ ವಾಯು ಮಾಲಿನ್ಯದ ಸಿಟಿ, ಆರೋಗ್ಯಕ್ಕೆ ಹಾನಿಕಾರಕವಾದ ಸಿಟಿ ಅನ್ನುವ ಪರಿಸ್ಥಿತಿಗೆ ಬಂದಿದೆ. ಸಿಲಿಕಾನ್ ಸಿಟಿಯಲ್ಲಿ ವಾಯು ಮಾಲಿನ್ಯ ಹೆಚ್ಚಾಗುತ್ತಿರುವುದರಿಂದಾಗಿ ಇದೀಗ ರಾಜ್ಯ ರಾಜಧಾನಿ ಬೆಂಗಳೂರು ಮತ್ತೊಂದು ದೆಹಲಿ ಆಗುವತ್ತ ಹೊರಟಿದೆ. ಬೆಂಗಳೂರಿಗರು ಬೆಂಗಳೂರಿನಲ್ಲಿ ಎಷ್ಟು ಸೇಫ್ ಆಗಿದ್ದಾರೆ ಅನ್ನೋದೇ ಪ್ರಶ್ನೆಯಾಗಿದೆ.
ಇದನ್ನೂ ಓದಿ: ಲಾಲ್ ಬಾಗ್ನಲ್ಲಿ ಪಶ್ಚಿಮ ಘಟ್ಟದ ಕಾಡು ನಿರ್ಮಾಣ; ಆರು ಎಕರೆ ಜಾಗದಲ್ಲಿ 300ಕ್ಕೂ ಹೆಚ್ಚು ಬಗೆಯ ಗಿಡಗಳು
ಹೊಗೆಯಿಂದಾಗಿ ವಾಯು ಮಾಲಿನ್ಯ ಹೆಚ್ಚಾಗುತ್ತಿರುವುದರಿಂದ ಅತಿ ಹೆಚ್ಚು ಅನಾರೋಗ್ಯಕ್ಕೆ ಜನ ತುತ್ತಾಗುತ್ತಿದ್ದಾರೆ. ಅದರಲ್ಲೂ ಮುಖ್ಯವಾಗಿ ಶ್ವಾಸಕೋಶದ ಕಾಯಿಲೆಗೆ ಬೆಂಗಳೂರು ಮಂದಿ ಅತಿ ಹೆಚ್ಚಾಗಿ ತುತ್ತಾಗುತ್ತಿದ್ದಾರೆ. ಸಾರಜನಕ, ಸಲ್ಫರ್ ಡೈ ಆಕ್ಸೈಡ್ ಮತ್ತು ಕಾರ್ಬನ್ ಮೋನಾಕ್ಸೈಡ್‌ನಂತಹ ಅಪಾಯಕಾರಿ ಅನಿಲಗಳಿಂದ ಶ್ವಾಸಕೋಶಗಳ ಸಂಬಂಧಿ ಕಾಯಿಲೆ ಹರಡುತ್ತಿವೆ. ಗಾಳಿಯ ಮಾನದಂಡಕ್ಕಿಂತ 5 ಪಟ್ಟು ಕೆಟ್ಟ ಗಾಳಿ ಸೇವನೆಯಾಗ್ತಿದೆ. ಹೃದಯ ಸಂಬಂಧಿ ಕಾಯಿಲೆಯವರಿಗೆ ಮತ್ತಷ್ಟು ತೊಂದರೆಯಾಗುತ್ತಿದೆ. ಮಕ್ಕಳಿಗೆ ಉಸಿರಾಟದ ಸಮಸ್ಯೆ, ಚರ್ಮ ಖಾಯಿಲೆ, ಮುಖದ ಕಾಂತಿ ಕಳೆದುಕೊಳ್ಳುವುದು ಹೀಗೆ ಬೆಂಗಳೂರು ಮಂದಿಗೆ ಹಲವು ಬಗೆಯ ಸಮಸ್ಯೆಗಳು ಕಾಡ್ತಿದ್ದು, ಇತ್ತೀಚಿಗೆ ಮಕ್ಕಳಲ್ಲಿ ಶ್ವಾಸಕೋಶದ ಸಮಸ್ಯೆಗಳು ಹೆಚ್ಚಾಗಿವೆ. ಮಕ್ಕಳು ಮನೆಯಿಂದ ಹೋಗುವಾಗ ಮಾಸ್ಕ್ ಹಾಕಿ ಕಳಿಸಿ. ಮಕ್ಕಳ ಆರೋಗ್ಯ ಹದಗೆಟ್ಟಾಗಾ ಅದನ್ನ ಉಡಾಫೆ ಮಾಡ್ಬೇಡಿ ಅಂತ ಡಾಕ್ಟರ್ಗಳು ಸಲಹೆ ನೀಡ್ತಿದ್ದಾರೆ.
ಒಟ್ಟಾರೆ ಬೆಂಗಳೂರಿನಲ್ಲಿ ವಾಹನಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಗಾಳಿಯಲ್ಲಿ ಕಾರ್ಬನ್ ಡೈಆಕ್ಸೈಡ್ ಹೆಚ್ಚಾಗುತ್ತಿದೆ. ಈ ಹೊಗೆಯಿಂದ ವಾಯು ಮಾಲಿನ್ಯ ಹೆಚ್ಚಾಗುತ್ತಿದ್ದು, ಸರಿಯಾಗಿ ವಾಹನಗಳ ನಿರ್ವಹಣೆ ಇಲ್ಲದೆ ಇರುವುದೇ ಇದಕ್ಕೆ ಕಾರಣ ಎನ್ನಲಾಗುತ್ತಿದೆ. ಇದಕ್ಕೆ ಆದಷ್ಟು ಬೇಗ ಪರಿಹಾರವಾದ್ರೆ ಮಾತ್ರ ನಮ್ಮ ಸಿಟಿ ಉದ್ಯಾನ ನಗರಿಯಾಗಿಯೇ ಮುಂದುವರೆಯುತ್ತೆ. ಇಲ್ಲದಿದ್ರೆ ಪಲ್ಯೂಷನ್ ಸಿಟಿಯಂತ ಕುಖ್ಯಾತಿ ಪಡೆಯುವುದರಲ್ಲಿ ಡೌಟೇ ಇಲ್ಲ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ