ಬೆಂಗಳೂರಿನಲ್ಲಿ ನಡೆಯುವ ಸಂಕಲ್ಪ ಸಿದ್ದಿ ಸಮಾವೇಶಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾಗಿ ಸಾಧ್ಯತೆ
ಆಗಸ್ಟ್ 4ರಂದು ಬೆಂಗಳೂರಿನ ತಾಜ್ ವೆಸ್ಟೆಂಡ್ ಹೋಟೆಲ್ನಲ್ಲಿ ಕಾನ್ಫಿಡರೇಷನ್ ಆಫ್ ಇಂಡಿಯನ್ ಇಂಡಸ್ಟ್ರೀಸ್ (CII) ನಿಂದ ಸಂಕಲ್ಪ್ ಸಿದ್ದಿ ಸಮಾವೇಶ ನಡೆಯಲಿದೆ.
ಬೆಂಗಳೂರು: ಆಗಸ್ಟ್ 4ರಂದು ಬೆಂಗಳೂರಿನ (Bengaluru) ತಾಜ್ ವೆಸ್ಟೆಂಡ್ ಹೋಟೆಲ್ನಲ್ಲಿ ಕಾನ್ಫಿಡರೇಷನ್ ಆಫ್ ಇಂಡಿಯನ್ ಇಂಡಸ್ಟ್ರೀಸ್ (CII) ನಿಂದ ಸಂಕಲ್ಪ್ ಸಿದ್ದಿ ಸಮಾವೇಶ ನಡೆಯಲಿದೆ. ಸಮಾವೇಶದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit shah) ಭಾಷಣ ಮಾಡಲಿದ್ದಾರೆ. ಆದರೆ ಸಮಾವೇಶದಲ್ಲಿ ಅಮಿತ್ ಶಾ ಪಾಲ್ಗೊಳ್ಳುವ ಬಗ್ಗೆ ಇನ್ನೂ ಅಧಿಕೃತವಾಗಿಲ್ಲ. ಸಮಾವೇಶದಲ್ಲಿ ಅಮಿತ್ ಶಾ ವರ್ಚುವಲ್ ಆಗಿಯೂ ಪಾಲ್ಗೊಳ್ಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಸಮಾವೇಶದಲ್ಲಿ ಪಾಲ್ಗೊಳ್ಳಲು ಬೆಂಗಳೂರಿಗೆ ಭೇಟಿ ಬಗ್ಗೆ ನಾಳೆ ಅಧಿಕೃತಗೊಳ್ಳುವ ನಿರೀಕ್ಷೆ ಇದೆ. ಬಿಜೆಪಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಬಗ್ಗೆಯೂ ಕೂಡ ಇನ್ನೂ ಅಧಿಕೃತ ವೇಳಾಪಟ್ಟಿ ಸಿದ್ಧವಾಗಿಲ್ಲ. ಸಮಾವೇಶದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಕಿಶನ್ ರೆಡ್ಡಿ ಮತ್ತು ವಿವಿಧ ಉದ್ಯಮಿಗಳು ಭಾಗಿಯಾಗಲಿದ್ದಾರೆ.
Published On - 11:06 pm, Mon, 1 August 22