AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಲ್ಲಿ ಸೈನ್ಸ್​ ಗ್ಯಾಲರಿ ಉದ್ಘಾಟಿಸಿದ ಸಿಎಂ ಬಸವರಾಜ ಬೊಮ್ಮಾಯಿ

ವಿಜ್ಞಾನ ಮತ್ತು ಆಧ್ಮಾತ್ಮ ಒಂದೇ ನಾಣ್ಯದ ಎರಡು ಮುಖ. ತತ್ವಶಾಸ್ತ್ರ, ಆಧ್ಯಾತ್ಮ ಎಲ್ಲದರಲ್ಲೂ ವಿಜ್ಞಾನದ ಅಂಶಗಳು ಹೆಚ್ಚಾಗಿದೆ ಎಂದು ಸೈನ್ಸ್​ ಗ್ಯಾಲರಿ ಉದ್ಘಾಟನೆ ಬಳಿಕ ಭಾಷಣದಲ್ಲಿ ಹೇಳಿದರು.

ಬೆಂಗಳೂರಿನಲ್ಲಿ ಸೈನ್ಸ್​ ಗ್ಯಾಲರಿ ಉದ್ಘಾಟಿಸಿದ ಸಿಎಂ ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ
ಆಯೇಷಾ ಬಾನು
|

Updated on:Mar 18, 2023 | 1:18 PM

Share

ಬೆಂಗಳೂರು: ಸಂಜಯನಗರದಲ್ಲಿರುವ ಸೈನ್ಸ್​ ಗ್ಯಾಲರಿಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಅವರು ಇಂದು ಉದ್ಘಾಟನೆ ಮಾಡಿದ್ದಾರೆ. ಕಾರ್ಯಕ್ರಮದಲ್ಲಿ ಸಚಿವರಾದ ಎಸ್​​.ಟಿ.ಸೋಮಶೇಖರ್​, ಡಾ.ಅಶ್ವತ್ಥ್​ ನಾರಾಯಣ, ಉದ್ಯಮಿ ಕಿರಣ್ ಮಜುಂದಾರ್ ಸೇರಿದಂತೆ ಹಲವರು ಭಾಗಿಯಾಗಿದ್ದರು. ಈ ವೇಳೆ ಮಾತನಾಡಿದ ಅವರು, ನಾವು ಈಗ ಸಂಶೋಧಿಸಿರುವುದು ಕೇವಣ‌ ಸಣ್ಣ ಭಾಗ. ವಿಜ್ಞಾನದಲ್ಲಿ ಸಂಶೋಧನೆಗೆ ಇನ್ನೂ ಸಾಕಷ್ಟು ಜಾಗ ಇದೆ ಎಂದರು.

ಬೆಂಗಳೂರು ಸೈನ್ಸ್ ಗ್ಯಾಲರಿ ಉದ್ಘಾಟಿಸಿದ ಬಳಿಕ ಭಾಷಣ ಮಾಡಿದ ಸಿಎಂ ಬೊಮ್ಮಾಯಿ, ವಿಜ್ಞಾನ ಮತ್ತು ಆಧ್ಮಾತ್ಮ ಒಂದೇ ನಾಣ್ಯದ ಎರಡು ಮುಖ. ತತ್ವಶಾಸ್ತ್ರ, ಆಧ್ಯಾತ್ಮ ಎಲ್ಲದರಲ್ಲೂ ವಿಜ್ಞಾನದ ಅಂಶಗಳು ಹೆಚ್ಚಾಗಿದೆ. ನಾವು ಈಗ ಸಂಶೋಧಿಸಿರುವುದು ಕೇವಣ‌ ಸಣ್ಣ ಭಾಗ. ವಿಜ್ಞಾನದಲ್ಲಿ ಸಂಶೋಧನೆಗೆ ಇನ್ನೂ ಸಾಕಷ್ಟು ಜಾಗ ಇದೆ. ಆರ್​​ಎನ್​ಡಿ ಬಗ್ಗೆ ಪಾಲಿಸಿ ರೂಪಿಸಿದ ಮೊದಲ ರಾಜ್ಯ ಕರ್ನಾಟಕ. ಮಾನವನ ಮೆದುಳು ಇನ್ನೂ 75% ನಷ್ಟು ವಿಸ್ಕೃತವಾಗಬೇಕಿದೆ. ಕೇವಲ 25% ಮೆದುಳುನ್ನು ಬಳಸಿಕೊಂಡು ಮನುಷ್ಯ ಇಷ್ಟೆಲ್ಲಾ ಅದ್ಬುತ ಸೃಷ್ಟಿ ಮಾಡಿದ್ದಾನೆ. 100% ಮೆದುಳನ್ನು ಮನುಷ್ಯ ಉಪಯೋಗಿಸಿದರೆ ಏನೆಲ್ಲಾ‌ ಸೃಷ್ಟಿಸಬಹದು. ಸೈನ್ಸ್ ಗ್ಯಾಲರಿ ಕೂಡ ಅದೇ ನಿಟ್ಟಿನಲ್ಲಿ ಕೆಲಸ ಮಾಡಬೇಕು. ವ್ಯಕ್ತಿಯ ವೈಯಕ್ತಿಕ ವಿಕಸನಕ್ಕೆ ಸಹಾಯವಾಗಬೇಕು.

ಇದನ್ನೂ ಓದಿ: ಜಮಖಂಡಿ ನಗರದಲ್ಲಿ ಅನಧಿಕೃತ ಸರ್ಕಲ್​ ನಿರ್ಮಾಣ; ನಗರದಲ್ಲಿ 144 ಸೆಕ್ಷನ್ ಜಾರಿ

ಆರ್​ಎನ್​ಡಿ ಎಕೋ‌ ಸಿಸ್ಟಮ್, ಏರೋಸ್ಪೇಸ್ ಎಲ್ಲದರಲ್ಲೂ ಕೂಡ ರಾಜ್ಯ ಮುಂಚೂಣಿಯಲ್ಲಿದೆ. ರಾಜ್ಯ,ದೇಶ, ವಿಶ್ವದೆಲ್ಲೆಡೆ ಸೈನ್ಸ್ ಗ್ಯಾಲರಿಯ ಅನುಕೂಲವಾಗಲಿ. ಸಾಮಾನ್ಯ ವ್ಯಕ್ತಿಯೊಬ್ಬ ಸೈನ್ಸ್ ಗ್ಯಾಲರಿ ಪ್ರವೇಶಿಸಿ ವಿಜ್ಞಾನದ ಜ್ಞಾನ ಪಡೆದು ಹೊರ ಹೋಗುವಂತಾಗಲಿ. ರಾಜ್ಯ ಸರ್ಕಾರ ಎಲ್ಲಾ‌‌ ಸಹಕಾರ, ಬೆಂಬಲ ‌ನೀಡಲಿದೆ ಎಂದರು.

108 ಅಡಿ ಎತ್ತರದ ಮಾದಪ್ಪನ ಪ್ರತಿಮೆ ಲೋಕಾರ್ಪಣೆ ಮಾಡಿದ ಸಿಎಂ ಬಸವರಾಜ ಬೊಮ್ಮಾಯಿ

ಚಾಮರಾಜನಗರ: ಜಿಲ್ಲೆಯ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ(Male Mahadeshwara Betta) 108 ಅಡಿ ಎತ್ತರದ ಮಾದಪ್ಪನ ಪ್ರತಿಮೆ ಲೋಕಾರ್ಪಣೆ ಮಾಡಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಕ್ರೇನ್ ಸಹಾಯದಿಂದ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ ಮಾದಪ್ಪನ ಬೃಹತ್ ಪ್ರತಿಮೆ ಅನಾವರಣ ಮಾಡಿದರು. ಸಮಾರಂಭದಲ್ಲಿ ಸಚಿವರಾದ ವಿ.ಸೋಮಣ್ಣ, ಎಸ್​.ಟಿ.ಸೋಮಶೇಖರ್, ಶಾಸಕರಾದ ನರೇಂದ್ರ, ಎನ್.ಮಹೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಮಾಜಿ ಸಿಎಂ ಯಡಿಯೂರಪ್ಪ ಗೈರಾಗಿದ್ದಾರೆ.

ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಸತ್ತೇಗಾಲ ಬಳಿ ನಿನ್ನೆ(ಮಾರ್ಚ್ 17) ಮಾಧ್ಯಮದವರೊಂದಿಗೆ ಮಾತನಾಡಿದ್ದ ಸಚಿವ ವಿ.ಸೋಮಣ್ಣ, ಸಿಎಂ ಬಸವರಾಜ ಬೊಮ್ಮಾಯಿ ಬರುತ್ತಾರೆ. ಬಿ.ಎಸ್ ಯಡಿಯೂರಪ್ಪ, ಸಿಸಿ ಪಾಟೀಲ್, ಆರ್. ಅಶೋಕ್, ಶಶಿಕಲಾ ಜೊಲ್ಲೆ ಅವರನ್ನು ಆಹ್ವಾನಿಸಿದ್ದೇವೆ. ಆದರೆ ಮಾದಪ್ಪ ಯಾರ್ಯಾರನ್ನ ಕರೆಸಿಕೊಳ್ಳಬೇಕೋ ಕರೆಸಿಕೊಳ್ಳುತ್ತಾನೆ ಎಂದು ಮಾರ್ಮಿಕವಾಗಿ ನುಡಿದಿದ್ದರು. ಇಂದು ಸಿಎಂ ಬೊಮ್ಮಾಯಿ 108 ಅಡಿಯ ಬೃಹತ್ ಪ್ರತಿಮೆ ಅನಾವರಣಗೊಳಿಸಿದ್ದಾರೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 11:35 am, Sat, 18 March 23