ಬಿ.ಸಿ.ನಾಗೇಶ್ ಮನೆಗೆ NSUI ಮುತ್ತಿಗೆ ಖಂಡನೀಯ; ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು: ಎಚ್ಚರಿಕೆ ನೀಡಿದ ಸಿಎಂ

TV9 Digital Desk

| Edited By: ವಿವೇಕ ಬಿರಾದಾರ

Updated on:Jun 01, 2022 | 8:25 PM

ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರ ತಿಪಟೂರಿನ ಮನೆಯ ಆವರಣಕ್ಕೆ ನುಗ್ಗಿ NSUI ಕಾರ್ಯಕರ್ತರು ಪ್ರತಿಭಟನೆ ಮಾಡಿ ದಾಂಧಲೆ ನಡೆಸಿರುವುದು ಖಂಡನೀಯ. ಇಂತಹ ನಡೆ ವಿದ್ಯಾರ್ಥಿಗಳಿಗೆ, ಶಿಕ್ಷಣ ಪ್ರೇಮಿಗಳಿಗೆ ಶೋಭೆ ತರುವುದಿಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ

ಬಿ.ಸಿ.ನಾಗೇಶ್ ಮನೆಗೆ NSUI ಮುತ್ತಿಗೆ ಖಂಡನೀಯ; ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು: ಎಚ್ಚರಿಕೆ ನೀಡಿದ ಸಿಎಂ
ಸಿಎಂ ಬಸವರಾಜ ಬೊಮ್ಮಾಯಿ

ಬೆಂಗಳೂರು: ಶಿಕ್ಷಣ ಸಚಿವ ಬಿ.ಸಿ.ನಾಗೇಶ್ (BC Nagesh) ಅವರ ತಿಪಟೂರಿನ ಮನೆಯ ಆವರಣಕ್ಕೆ ನುಗ್ಗಿ NSUI ಕಾರ್ಯಕರ್ತರು ಪ್ರತಿಭಟನೆ ಮಾಡಿ ದಾಂಧಲೆ ನಡೆಸಿರುವುದು ಖಂಡನೀಯ. ಇಂತಹ ನಡೆ ವಿದ್ಯಾರ್ಥಿಗಳಿಗೆ, ಶಿಕ್ಷಣ ಪ್ರೇಮಿಗಳಿಗೆ ಶೋಭೆ ತರುವುದಿಲ್ಲ. ಈ ಕುಕೃತ್ಯ ನಡೆಸಿರುವ ದುಷ್ಕರ್ಮಿಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ (Bsavaraj Bommai)  ಟ್ವೀಟ್​ ಮೂಲಕ ಎಚ್ಚರಿಕೆ ನೀಡಿದ್ದಾರೆ.

ಇದನ್ನು ಓದಿ: ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಮನೆಗೆ ಮುತ್ತಿಗೆ ಪ್ರಕರಣ; ಮುತ್ತಿಗೆ ಹಾಕಿದ್ದ ಕೆಲ NSUI ಕಾರ್ಯಕರ್ತರನ್ನು ಬಂಧಿಸಿದ ಪೊಲೀಸರು

ಸಚಿವ ಬಿ.ಸಿ.ನಾಗೇಶ್​ ಮನೆ ಮುಂದೆ RSSನ ಚಡ್ಡಿ ಸುಟ್ಟ NSUI ಕಾರ್ಯಕರ್ತರು 

ತುಮಕೂರು: ಶಿಕ್ಷಣ ಸಚಿವ ಬಿ.ಸಿ.ನಾಗೇಶ್​ ಅವರ ಮನೆಗೆ NSUI ಕಾರ್ಯಕರ್ತರ ಮುತ್ತಿಗೆ ವಿಚಾರವಾಗಿ NSUI ಕಾರ್ಯಕರ್ತರು ನಾಗೇಶ್ ಅವರ​ ಮನೆ ಮುಂದೆ RSSನ ಚಡ್ಡಿ ಸುಟ್ಟಿದ್ದಾರೆ. ತುಮಕೂರು ಜಿಲ್ಲೆ ತಿಪಟೂರಿನಲ್ಲಿರುವ ಸಚಿವ ಬಿ.ಸಿ ನಾಗೇಶ್ ಅವರ  ನಿವಾಸದ ಮುಂದೆಯೇ ಚಡ್ಡಿಗೆ ಬೆಂಕಿ ಇಟ್ಟು NSUI ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು  ಧರಣಿನಿರತರನ್ನ ತೆರವುಗೊಳಿಸಿದ್ದಾರೆ.  ಪಠ್ಯ ಪರಿಷ್ಕರಣೆ ವಿಚಾರವಾಗಿ NSUI ಕಾರ್ಯಕರ್ತರು ಧರಣಿ ನಡೆಸಿದ್ದಾರೆ. ಬಿಸಿ ನಾಗೇಶ್ ಹೊರ ಬರುವಂತೆ NSUI ಕಾರ್ಯಕರ್ತರು ಘೋಷಣೆ ಕೂಗಿದ್ದಾರೆ.

ಇದನ್ನು ಓದಿ:

ಬಿ.ಸಿ.ನಾಗೇಶ್​ ಮನೆಗೆ ಭೇಟಿ ನೀಡಿ ಆರಗ ಜ್ಞಾನೇಂದ್ರ ಪರಿಶೀಲನೆ

ತುಮಕೂರು:  ಸಚಿವ ಬಿ.ಸಿ.ನಾಗೇಶ್​ ಮನೆಗೆ NSUI ಕಾರ್ಯಕರ್ತರ ಮುತ್ತಿಗೆ ವಿಚಾರಗಿನಾಗೇಶ್ ನಿವಾಸಕ್ಕೆ ಭೇಟಿ ನೀಡಿ ಗೃಹ ಸಚಿವ ಆರಗ ಜ್ಞಾನೇಂದ್ರ ಪರಿಶೀಲನೆ ನಡೆಸಿದ್ದಾರೆ. ಪಠ್ಯ ಪರಿಷ್ಕರಣೆ ವಿಚಾರವಾಗಿ NSUI ಕಾರ್ಯಕರ್ತರ ಧರಣಿ ನಡೆಸಿದ್ದಾರೆ. ಮನೆ ಬಳಿ RSS ಚಡ್ಡಿಗೆ ಬೆಂಕಿ ಹಚ್ಚಿ ಕಾರ್ಯಕರ್ತರ ಆಕ್ರೋಶ ಹೊರ ಹಾಕಿದ್ದಾರೆ.

ಇದನ್ನು ಓದಿ: ಐಸಿಎಆರ್​ನ ಸಹಾಯಕ ಹುದ್ದೆಗಳಿಗೆ ಅರ್ಜಿ ಆಹ್ವಾನ

ಕಾಂಗ್ರೆಸ್ ಪ್ರಚೋದಿತ ಕಿಡಿಗೇಡಿಗಳಿಂದ ಗಲಭೆ

ಬೆಂಗಳೂರು:  ಸಚಿವ ಬಿ.ಸಿ.ನಾಗೇಶ್​ ಮನೆಗೆ NSUI ಮುತ್ತಿಗೆ ವಿಚಾರವಾಗಿ ಕಾಂಗ್ರೆಸ್ ಪ್ರಚೋದಿತ ಕಿಡಿಗೇಡಿಗಳಿಂದ ಗಲಭೆಯಾಗಿದೆ. ಮನೆಗೆ ಬೆಂಕಿ ಹಾಕುವ ಪ್ರಯತ್ನವನ್ನು ಮಾಡಿದ್ದಾರೆ.  ಕೊಲೆ ಮಾಡುವ ಬೆದರಿಕೆ ತಾಲಿಬಾನ್ ಸಂಸ್ಕೃತಿಯಾಗಿದೆ. ಬೆಂಕಿ ಹಾಕುವ ಪ್ರಯತ್ನ ಇದು ತಾಲಿಬಾನ್ ಸಂಸ್ಕೃತಿಯಾಗಿದೆ. ಸಚಿವ ಅಖಂಡ ಶ್ರೀನಿವಾಸ್ ಮೂರ್ತಿ ಮನೆಗೆ ಬೆಂಕಿ ಹಾಕಿದಂತೆ, ನಾಗೇಶ್ ಮನೆಗೆ ಬೆಂಕಿ ಹಾಕುವ ಪ್ರಯತ್ನ ಮಾಡಿದ್ದಾರೆ. ಇದರಿಂದ ಸಚಿವ ಬಿ.ಸಿ.ನಾಗೇಶ್​ ಅಧೀರರಾಗಬಾರದು ಎಂದು ಬೆಂಗಳೂರಿನಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಆಕ್ರೋಶ ಹೊರಹಾಕಿದ್ದಾರೆ.

ಇದೆಲ್ಲಾ ಕೆಲ‌ವು ಕಾಲ ಮಾತ್ರ ವಿಜೃಂಭಿಸುತ್ತದೆ.  ಇಂತಹವರನ್ನು ಬುಡ ಸಮೇತ ಕಿತ್ತು ಹಾಕಬೇಕು. ಬೆಂಕಿ ಹಚ್ಚುವ ಪ್ರಯತ್ನ ಮಾಡಿದ್ದಾರೆ. ಅವರ ಮನೋಭಾವ ಬೆಂಕಿ ಹಾಕುವುದೇ ಆಗಿತ್ತು. ಅವರು ಚರ್ಚೆಗೆ ಬರಲಿ, ಅದನ್ನು ಬಿಟ್ಟು ಬೆಂಕಿ ಹಾಕುವ ಪ್ರಯತ್ನ ತಾಲಿಬಾನ್ ಸಂಸ್ಕೃತಿಯಾಗಿದೆ. ಕೊಲೆ ಮಾಡುವ ಬೆದರಿಕೆ ಹಾಕಿದ್ದಾರೆ.

ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ.  ಪ್ರಮುಖ  ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada