ಇಬ್ರಾಹಿಂ ನೋಡಿ ಏಯ್ ಏನ್ ಗುಟುರು ಹಾಕ್ತಿದ್ದೀಯಾ ಎಂದು ತಮಾಷೆ ಮಾಡಿದ ಮಾಜಿ ಸಿಎಂ ಸಿದ್ದರಾಮಯ್ಯ

| Updated By: preethi shettigar

Updated on: Mar 28, 2022 | 3:05 PM

ಏನ್ ಈ ಕಡೆ ಬಂದಿದ್ದೀಯಾ ಎಂದು ಕೇಳಿದ ಸಿದ್ದರಾಮಯ್ಯನವರಿಗೆ ಅಲ್ಲಿ ಏನಿಲ್ಲ ಅದಕ್ಕೆ ಈ ಕಡೆ ಬಂದೆ ಎಂದು ಇಬ್ರಾಹಿಂ ಉತ್ತರಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯನವರು ಅಲ್ಲಿ ಏನಿಲ್ವೋ ಎಂದು ತಮಾಷೆ ಮಾಡಿದ್ದಾರೆ.

ಇಬ್ರಾಹಿಂ ನೋಡಿ ಏಯ್ ಏನ್ ಗುಟುರು ಹಾಕ್ತಿದ್ದೀಯಾ ಎಂದು ತಮಾಷೆ ಮಾಡಿದ ಮಾಜಿ ಸಿಎಂ ಸಿದ್ದರಾಮಯ್ಯ
ಸಿದ್ದರಾಮಯ್ಯ ಮತ್ತು ಇಬ್ರಾಹಿಂ
Follow us on

ವಿಧಾನಸಭೆ ಮೊಗಸಾಲೆಯಲ್ಲಿ ಸಿ.ಎಂ.ಇಬ್ರಾಹಿಂ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ( Siddaramaiah) ಮುಖಾಮುಖಿಯಾಗಿದ್ದಾರೆ. ಇಬ್ರಾಹಿಂ (Ibrahim) ನೋಡಿ ವಾಟ್ ಲೀಡರ್ ಎಂದು ಸಿದ್ದರಾಮಯ್ಯ ಹೇಳಿದ್ದು, ಇದಕ್ಕೆ ಸಿದ್ದರಾಮಯ್ಯ ಮುಖವನ್ನೇ ನೋಡುತ್ತಾ ಇಬ್ರಾಹಿಂ ನಿಂತಿದ್ದಾರೆ. ಬಳಿಕ ಏಯ್ ಏನ್ ಗುಟುರು ಹಾಕ್ತಿದ್ದೀಯಾ ಎಂದು ಪ್ರಶ್ನಿಸಿದ ಸಿದ್ದರಾಮಯ್ಯನವರಿಗೆ  ಏನಿಲ್ಲ ಸುಮ್ನೆ ಎಂದು ಸಿ.ಎಂ.ಇಬ್ರಾಹಿಂ ಉತ್ತರಿಸಿದ್ದಾರೆ. ನಂತರ ಏನ್ ಈ ಕಡೆ ಬಂದಿದ್ದೀಯಾ ಎಂದು ಕೇಳಿದ ಸಿದ್ದರಾಮಯ್ಯನವರಿಗೆ ಅಲ್ಲಿ ಏನಿಲ್ಲ ಅದಕ್ಕೆ ಈ ಕಡೆ ಬಂದೆ ಎಂದು ಇಬ್ರಾಹಿಂ ಉತ್ತರಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯನವರು ಅಲ್ಲಿ ಏನಿಲ್ವೋ ಎಂದು ತಮಾಷೆ ಮಾಡಿದ್ದಾರೆ.

ಹಾಸನ: ಹಿಂದೂ ಮುಸ್ಲಿಂ ಎಂದು ಯಾರಾದ್ರು ಅಡೆತಡೆ ಮಾಡಿದ್ರೆ..: ಹಾಸನದಲ್ಲಿ ಗುಡುಗಿದ ಹೆಚ್.ಡಿ ರೇವಣ್ಣ

ನಮ್ಮ ತಾಯಿಗೆ ಐಟಿ ನೋಟಿಸ್ ನೀಡಿದ್ದಾರೆ. ಒಬ್ಬ ಮಾಜಿ ಪ್ರಧಾನಿ ಪತ್ನಿಗೆ ಐಟಿ ನೋಟಿಸ್ ನೀಡಿದ್ದಾರೆ. ಅಸ್ತಿ ವಿವರದ ಬಗ್ಗೆ ಮಾಹಿತಿ ಕೇಳಿ ನೋಟಿಸ್ ನೀಡಿದ್ದಾರೆ. ನಮ್ಮಮ್ಮ, ನಮ್ಮಪ್ಪ ಕೋಟ್ಯಂತರ ರೂ. ಆಸ್ತಿ ಮಾಡಿದ್ದಾರಾ? ನಾನು ಆಲೂಗಡ್ಡೆ ಬೆಳೆದಿದ್ದೆ, ಈಗ ಕಬ್ಬು ಬೆಳೆದಿದ್ದೇನೆ. ನಮ್ಮ ಜಮೀನಿನಲ್ಲಿ ನಾವು ಕಬ್ಬು ಬೆಳೆಯುತ್ತೇವೆ. ನೋಟಿಸ್ ಕೊಟ್ಟಿದ್ದರು ಉತ್ತರ ಕೊಡ್ತೀವಿ ಅದಕ್ಕೇನೂ ಇಲ್ಲ. ಬೇಕಿದ್ದರೆ ನನಗೆ ಐಟಿ ನೋಟಿಸ್ ಕೊಡಲಿ ಅದಕ್ಕೇನೂ ಇಲ್ಲ ಎಂದು ಹಾಸನದಲ್ಲಿ ಮಾಜಿ ಸಚಿವ ಹೆಚ್​.ಡಿ. ರೇವಣ್ಣ ಹೇಳಿಕೆ ನೀಡಿದ್ದಾರೆ. ಒಬ್ಬೊಬ್ಬ RTO ನೂರು ಇನ್ನೂರು ಕೋಟಿ ಮಾಡಿದ್ದಾರಲ್ಲ. ಆರ್​ಟಿಒಗಳು ಕೆಲಸಕ್ಕೆ ಸೇರಿದಾಗ ಎಷ್ಟು ಆಸ್ತಿ ಇತ್ತು. ಆಮೇಲೆ ಎಷ್ಟಾಯ್ತು, ಅವರಿಗೆ ನೋಟಿಸ್ ಯಾರು ಕೊಡೋದು? ದ್ವೇಷದ ರಾಜಕಾರಣ ಯಾವ ಮಟ್ಟಿಗೆ ಇದೆ ನೋಡಿ ಎಂದು ಕಿಡಿಕಾರಿದ್ದಾರೆ. JDS ನವರು ಯಾರು ಎಂದು ಆರಿಸಿ ನೋಟಿಸ್ ಕೊಡುತ್ತಿದ್ದಾರೆ. ಕಾಲ ಬರುತ್ತೆ ಎಲ್ಲದಕ್ಕೂ ಉತ್ತರ ಕೊಡುತ್ತೇವೆ ಎಂದು ರೇವಣ್ಣ ಗುಡುಗಿದ್ದಾರೆ.

ಇತ್ತ ಬೇಲೂರು ಚೆನ್ನಕೇಶವ ದೇಗುಲದ ಬಳಿ ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ ವಿಚಾರಕ್ಕೆ ಸಂಬಂಧಿಸಿ ಹಾಸನದಲ್ಲಿ ಮಾಜಿ ಸಚಿವ ಹೆಚ್.ಡಿ ರೇವಣ್ಣ ಪ್ರತಿಕ್ರಿಯೆ ನೀಡಿದ್ದಾರೆ. ಹಾಸನ ಜಿಲ್ಲೆಯಲ್ಲಿ ಹಿಂದೂ, ಮುಸ್ಲಿಂ ಐಕ್ಯತೆಯಿಂದ ಬದುಕುತ್ತಿದ್ದಾರೆ. ಹಿಂದೂ ಬೇರೆಯಲ್ಲ, ಮುಸ್ಲಿಂ ಬೇರೆಯಲ್ಲ. ಮುಸ್ಲಿಂರಿಗೆ ಬೇರೆ ರೀತಿ ಅಡ್ಡಿಪಡಿಸಿದ್ರೆ ಕಾನೂನು ರೀತಿಯ ಕ್ರಮ ಕೈಗೊಳ್ಳಿ. ಅಣ್ಣ ತಮ್ಮಂದಿರು ಹಾಗೇ ಹೋಗಬೇಕು. ಯಾರೋ ನಾಲ್ಕು ಜನ ಕೇಸರಿ ಶಾಲು ಹಾಕಿಕೊಂಡು ಬಂದ್ರೆ ಕೇರ್ ಮಾಡಲ್ಲ. ಎಲ್ಲಾ ಸಮಾಜದವರು ಒಟ್ಟಾಗಿ ಸಾಮರಸ್ಯದಿಂದ ಬದುಕಬೇಕು. ಸಾಬ್ರಾಗಿ ಹುಟ್ಟಿ ಜೀವನ ಮಾಡಬೇಡಿ ಅನ್ನೋಕೆ ಆಗುತ್ತಾ. ಬೇಲೂರು, ಹೊಳೆನರಸೀಪುರ ಇರಲಿ ಎಲ್ಲಿಯೂ ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ ಹೇರಬಾರದು. ಹಿಂದೂ, ಮುಸ್ಲಿಂ ಭಾವೈಕ್ಯತೆಯಿಂದ ಬದುಕಬೇಕು ಎಂದು ಹಿಂದುಯೇತರರಿಗೆ ವ್ಯಾಪಾರ ನಿರ್ಬಂಧದ ಬಗ್ಗೆ ರೇವಣ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಿಂದುಯೇತರರಿಗೆ ವ್ಯಾಪಾರ ನಿರ್ಬಂಧ ವಿಚಾರದಲ್ಲಿ ಕ್ರಮಕ್ಕೆ ಆಗ್ರಹ

ಹಿಂದುಯೇತರರಿಗೆ ವ್ಯಾಪಾರ ನಿರ್ಬಂಧ ವಿಚಾರದಲ್ಲಿ ಕ್ರಮಕ್ಕೆ ಆಗ್ರಹಿಸಲಾಗಿದೆ. ಹಿಂದೂ ಮುಸ್ಲಿಂ ಎಂದು ಯಾರಾದ್ರು ಅಡೆತಡೆ ಮಾಡಿದ್ರೆ ಯಾವುದೇ ಪಾರ್ಟಿ ಆಗಲಿ ಅವರನ್ನ ಬಲಿಹಾಕಬೇಕಾಗುತ್ತೆ. ಈ ಬಗ್ಗೆ ಎಸ್​ಪಿ, ಡಿಸಿ ಇಬ್ಬರೂ ಕ್ರಮ ವಹಿಸಬೇಕು. ಈ ಜಿಲ್ಲೆಯಲ್ಲಿ ಹಿಂದೂ ಬೇರೆಯಲ್ಲ‌ ಮುಸ್ಲಿಂ ಬೇರೆಯಲ್ಲ ಎಲ್ಲರೂ ಐಕ್ಯತೆಯಿಂದ ಇದ್ದೇವೆ. ಒಂದು ಸಮಾಜ ಗುರಿ ಇಟ್ಟು ಕೊಂಡು ಹೋಗೋದಕ್ಕೆ ನನ್ನ ವಿರೋಧ ಇದೆ. ಹಿಂದು ಇರಲಿ ಮುಸ್ಲಿಂ ಇರಲಿ‌ ಈ ಹಿಂದೆ ಹೇಗಿತ್ತೋ ಹಾಗೇ ನಡೆಯಬೇಕು. ಯಾರಾದ್ರು ಅಡ್ಡಿ ಮಾಡಿದ್ರೆ ಕಾನೂನು ಕೈಗೆತ್ತಿಕೊಳ್ಳೋರ ವಿರುದ್ದ ಕ್ರಮ ಕೈಗೊಳ್ಳಿ. ಸೌಹಾರ್ದ ತೆಗೆ ಧಕ್ಕೆ ಆಗದಂತೆ ಎಲ್ಲರು ನಡೆದುಕೊಳ್ಲಬೇಕು ಎಂದು ರೇವಣ್ಣ ತಿಳಿಸಿದ್ದಾರೆ.

ಇದನ್ನೂಓದಿ:

ಸಿದ್ದರಾಮಯ್ಯ ಮಾತ್ರ ಬ್ರಿಲಿಯಂಟ್ ಅಲ್ಲಾ ತಲೆಲಿ ಕೂದಲು ಉದುರಿದೆಯಾದ್ರು ನನಗೂ ಜ್ಞಾಪಕ ಶಕ್ತಿ ಇದೆ: ಹೆಚ್​ಡಿ ಕುಮಾರಸ್ವಾಮಿ

ಹಿಜಾಬ್, ದುಪಟ್ಟಾ ಜತೆ ಸ್ವಾಮೀಜಿ ಪೇಟಾ ಹೋಲಿಸಬಾರದು; ಸಿದ್ದರಾಮಯ್ಯ ಹೇಳಿಕೆಗೆ ಪ್ರಮೋದ್ ಮುತಾಲಿಕ್ ಟಾಂಗ್

Published On - 3:04 pm, Mon, 28 March 22