ಮತದಾರರ ಮಾಹಿತಿ ಕಳ್ಳತನ ಸಂಬಂಧ ಸುದ್ದಿಗೋಷ್ಠಿ: ಬಿಜೆಪಿ ವಿರುದ್ಧ ರಣದೀಪ್ ಸುರ್ಜೇವಾಲ ವಾಗ್ದಾಳಿ
Congress Laders Pressmeet: ರಾಜ್ಯ ಉಸ್ತುವಾರಿ ಸುರ್ಜೇವಾಲ, ಮಾಜಿ ಸಿಎಂ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಸುದ್ದಿಗೋಷ್ಠಿ
ಬೆಂಗಳೂರು: ಮತದಾರರ ಪಟ್ಟಿ ನವೀಕರಣಕ್ಕೆ ನೀಡಿದ್ದ ಅನುಮತಿ ದುರ್ಬಳಕೆ ವಿಚಾರಕ್ಕೆ ಸಂಬಂಧಿಸಿ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ನಾಯಕರಾದ ಕರ್ನಾಟಕ ಉಸ್ತುವಾರಿ ರಣದೀಪ್ ಸುರ್ಜೇವಾಲ(Randeep Surjewala) ಮಾಜಿ ಸಿಎಂ ಸಿದ್ದರಾಮಯ್ಯ(Siddaramaiah) ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್(DK Shivakmar) ಸುದ್ದಿಗೋಷ್ಠಿ ನಡೆಸಿದ್ದಾರೆ.
ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸುವ ಮೂಲಕ ಸುರ್ಜೇವಾಲ ಸುದ್ದಿಗೋಷ್ಠಿ ಆರಂಭಿಸಿದ್ದಾರೆ. 40% ಕಮಿಷನ್ ಸರ್ಕಾರ ಭ್ರಷ್ಟಾಚಾರದ ರಾಜಧಾನಿಯಾಗುತ್ತಿದೆ. ಕೇವಲ ಗುತ್ತಿಗೆಯಲ್ಲಿ ಮಾತ್ರವಲ್ಲ, ಎಲ್ಲ ವಿಚಾರದಲ್ಲೂ ಭ್ರಷ್ಟಾಚಾರ ಮುಗಿಲು ಮುಟ್ಟಿದೆ. ಇದೀಗ ಪ್ರಜಾಪ್ರಭುತ್ವದ ವಿಷಯದಲ್ಲೂ ಹಗರಣ ನಡೆಯುತ್ತಿದೆ. ಇಂಥದ್ದೊಂದು ಅಕ್ರಮ ಹಿಂದೆಂದೂ ನಡೆದಿರಲಿಲ್ಲ. 40% ಕಮಿಷನ್ ಸರ್ಕಾರ ಜನರ ದುಡ್ಡನ್ನು ಕಳ್ಳತನ ಮಾಡಿದೆ. ಈ ಸರ್ಕಾರ ಚುನಾವಣಾ ಹಕ್ಕನ್ನೂ ಕದಿಯುವ ಪ್ರಯತ್ನ ಮಾಡಿದೆ. ಮಾಹಿತಿ ಕಳ್ಳತನ, ಬಿಬಿಎಂಪಿಯ ಅಕ್ರಮ ಇದೀಗ ಬಯಲಾಗಿದೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ: ನಂಬಿಕೆ ದ್ರೋಹ: ಮತದಾರರ ಪಟ್ಟಿ ನವೀಕರಣ ನೆಪದಲ್ಲಿ ಬೆಂಗಳೂರಿನ ಸಾವಿರಾರು ಮಂದಿಯ ಸೂಕ್ಷ್ಮ ಮಾಹಿತಿ ಸಂಗ್ರಹಿಸಿದ ಎನ್ಜಿಒ
ಬಿಜೆಪಿ ಸರ್ಕಾರ ವೋಟರ್ ಮಾಹಿತಿ ಕದಿಯುವ ಕೆಲಸ ಮಾಡಿದೆ. ತುಷಾರ್ ಗಿರಿನಾಥ್ ಬಿಬಿಎಂಪಿ ಚುನಾವಣಾಧಿಕಾರಿಯೂ ಆಗಿದ್ದಾರೆ. ಮಹದೇವಪುರದಲ್ಲಿ ಜಾಗೃತಿ ಮೂಡಿಸಲು ಚಿಲುಮೆ NGOಗೆ ಅನುಮತಿ ನೀಡಿದ್ದರು. ಈ ಕಂಪನಿ ಡಿಜಿಟಲ್ ಸಮೀಕ್ಷಾ ಎಂಬ ಮೊಬೈಲ್ ಆ್ಯಪ್ ಹೊಂದಿದೆ. ವೋಟರ್ ಡೇಟಾ ಸಂಗ್ರಹ ಮಾಡಿರುವುದು ಮೊದಲನೇ ಅಪರಾಧ. ಬೂತ್ ಮಟ್ಟದ ಅಧಿಕಾರಿಗಳು ಡೇಟಾ ಸಂಗ್ರಹ ಮಾಡಿದ್ದಾರೆ. ಕಳೆದ ಮೂರು ವರ್ಷಗಳಿಂದ ಬಿಬಿಎಂಪಿ ಬಿಜೆಪಿ ಹಿಡಿತದಲ್ಲೇ ಇದೆ ಎಂದಿದ್ದಾರೆ.
ಸಿಎಂ ಬೊಮ್ಮಾಯಿ ತಕ್ಷಣ ರಿಸೈನ್ ಮಾಡಬೇಕು
ಸಿಎಂ ಬೊಮ್ಮಾಯಿ, ಅಶ್ವತ್ಥ ನಾರಾಯಣ ಹಾಗೂ ಈ ಸಂಸ್ಥೆಗಳಿಗೆ ಏನು ಸಂಬಂಧ? ಅಕ್ರಮದ ಅನುಮಾನ ಇರುವ ವ್ಯಕ್ತಿ ಜೊತೆಗೆ ಸಿಎಂ ಹಾಗೂ ಸಚಿವರ ಸಂಬಂಧ ಏನಿದೆ? ಸಿಎಂ ಬೊಮ್ಮಾಯಿ ತಕ್ಷಣ ರಿಸೈನ್ ಮಾಡಬೇಕು. ಚುನಾವಣಾ ಆಯೋಗ ಚುನಾವಣಾ ಅಕ್ರಮ ಎಸಗಿದವರ ವಿರುದ್ದ ಕ್ರಮ ಜರುಗಿಸಬೇಕು. ಸಿಎಂ ಬೊಮ್ಮಾಯಿ ಕಂಬಿ ಹಿಂದೆ ಹೋಗಲೇಬೇಕು. ಮತದಾರರ ಪಟ್ಟಿ ನವೀಕರಣಕ್ಕೆ ಯಾಕೆ ಇದೇ ಸಂಸ್ಥೆಗೆ ಅನುಮತಿ ನೀಡಲಾಗಿದೆ? ಖಾಸಗಿ ಏಜೆನ್ಸಿಗೆ ಕನ್ನಡಿಗರ ವೈಯಕ್ತಿಕ ಮಾಹಿತಿ ಕಳ್ಳತನ ಮಾಡಲು ಅವಕಾಶ ನೀಡಲಾಗಿದೆ. ಇದು ಖಾಸಗಿತನದ ವಂಚನೆಯ ಪ್ರಕರಣ. ಗುತ್ತಿಗೆ ನೌಕರರು ಹೇಗೆ ಸರ್ಕಾರಿ ನೌಕರರಂತೆ ಬೂತ್ ಲೆವೆಲ್ ಆಫಿಸರ್ ಐಡಿ ಕಾರ್ಡ್ ನೀಡಲಾಗುತ್ತದೆ? ಖಾಸಗಿ ವೈಯಕ್ತಿಕ ಡೇಟಾಗಳು ಕಮರ್ಷಿಯಲ್ ಆ್ಯಪ್ ಗೆ ಹೇಗೆ ಮಾರಾಟ ಮಾಡಲಾಗ್ತಿದೆ? ಎಂದು ಸುದ್ದಿಗೋಷ್ಠಿ ವೇಳೆ ರಣದೀಪ್ ಸುರ್ಜೇವಾಲ ಪ್ರಶ್ನೆ ಮಾಡಿದ್ದಾರೆ.
ವೋಟರ್ ಐಡಿ ಅಕ್ರಮದ ಹಿಂದೆ ಅಶ್ವತ್ಥ್ ನಾರಾಯಣ ಕೈವಾಡ ಆರೋಪ
ಸರ್ಕಾರ ಈ ಮಾಹಿತಿ ಕಲೆ ಹಾಕಲು ಅನುಮತಿ ನೀಡಿದೆ. ಚಿಲುಮೆ ಎಂಟರ್ ಪ್ರೈಸಸ್, DAP ಹೊಂಬಾಳೆ ಪ್ರೈವೇಟ್ ಲಿಮಿಟೆಡ್ ಈ ಎರಡು ಸಂಸ್ಥೆಗಳ ಎಂ.ಡಿ ಒಬ್ಬರೆ. ಈ ಎರಡು ಸಂಸ್ಥೆಗಳು EVM ಪ್ರಿಪರೇಷನ್ ಅನ್ನು ಮಾಡುತ್ತೆ. ಓಟರ್ ಐಡಿ ಅಕ್ರಮದ ಹಿಂದೆ ಅಶ್ವತ್ಥ ನಾರಾಯಣ ಇದ್ದಾರೆ ಎಂದು ಹೆಸರು ಉಲ್ಲೇಖಿಸದೇ ಕೇವಲ ಕ್ಷೇತ್ರದ ಹೆಸರು ಹೇಳಿ ಅಶ್ವತ್ಥ ನಾರಾಯಣ ವಿರುದ್ದ ಸುರ್ಜೇವಾಲ ಆರೋಪ ಮಾಡಿದ್ದಾರೆ.
ಬೂತ್ ಲೆವೆಲ್ ಆಫಿಸರ್ ಅಂತ ಐಡಿ ಕಾರ್ಡ್ ನೀಡಲಾಗಿದೆ. ಓಟರ್ ಐಡಿಗಳಿಂದ ಸಂಗ್ರಹಿಸಿದ ಡೇಟಾವನ್ನು ಅವರು ಚುನಾವಣಾ ಕಮಿಷನ್ ಗೆ ಅಪ್ಲೋಡ್ ಮಾಡ್ತಿಲ್ಲ. ಖಾಸಗಿ ವ್ಯಕ್ತಿಗಳಿಗೆ ಮಾಹಿತಿ ನೀಡುತ್ತಿದ್ದಾರೆ. ಕೃಷ್ಣಪ್ಪ ಹಾಗೂ ರವಿಕುಮಾರ್ ಇದರ ಕಿಂಗ್ ಪಿನ್. ಇವರು ಮಾಜಿ ಡಿಸಿಎಂ ಹಾಗೂ ಹಾಲಿ ಸಚಿವರಿಗೆ ಆತ್ಮೀಯರು. ಹಾಲಿ ಸಚಿವರು ಕಿಂಗ್ ಪಿನ್ ಕೃಷ್ಣಪ್ಪ ಜೊತೆಗೆ ಮಿಂಗಲ್ ಆಗಿದ್ದಾರೆ. ಹಾಗೂ ಮಲ್ಲೇಶ್ವರಂ ಕ್ಷೇತ್ರದ ಸಚಿವರಿಗೆ ಸಂಬಂಧಿಸಿದವರು ಕೃಷ್ಣಪ್ಪ.
ಈ ಕಂಪನಿ ಡಿಜಿಟಲ್ ಸಮೀಕ್ಷಾ ಎಂಬ ಮೊಬೈಲ್ ಆ್ಯಪ್ ಹೊಂದಿದೆ. ಓಟರ್ ಡೆಟಾ ಸಂಗ್ರಹ ಮಾಡಿರುವುದು ಮೊದಲನೇ ಅಪರಾಧ. ಬೂತ್ ಲೆವೆಲ್ ಆಫಿಸರ್ ನಿಂದ ಡೇಟಾ ಕಲೆಕ್ಟ್ ಮಾಡಿದ್ದಾರೆ. ಕಳೆದ ಮೂರು ವರ್ಷಗಳಿಂದ ಬಿಬಿಎಂಪಿ ಬಿಜೆಪಿ ಹಿಡಿತದಲ್ಲೇ ಇದೆ. ಓಟರ್ ಮಾಹಿತಿ ಕದಿಯುವ ಕೆಲಸವನ್ನು ಬಿಬಿಎಂಪಿ ಹಾಗೂ ಬೊಮ್ಮಾಯಿ ಸರ್ಕಾರ ಮಾಡಿದೆ. ಅನುಭವವೇ ಇಲ್ಲದೇ ಚಿಲುಮೆ ಎನ್.ಜಿ.ಓ ಮನೆಮನೆಗೆ ಹೋಗಿ ಜಾಗೃತಿ ಮೂಡಿಸುತ್ತೇವೆ ಎನ್ನುತ್ತದೆ. ಹೊಂಬಾಳೆ ಪ್ರೈವೇಟ್ ಲಿಮಿಟೆಡ್ ಹಾಗೂ ಚಿಲುಮೆ ಎನ್.ಜಿಓ ದ ಪದಾಧಿಕಾರಿಗಳು ಎಲ್ಲರೂ ಒಂದೇ ಸಂಸ್ಥೆಗೆ ಸೇರಿದವರು ಎಂದು ಸುರ್ಜೇವಾಲ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
Published On - 10:02 am, Thu, 17 November 22