Mekedatu Padayatra: 2ನೇ ಹಂತದ ಪಾದಯಾತ್ರೆಯಲ್ಲಿ ಬದಲಾವಣೆ; ಫೆಬ್ರವರಿ 27 ರಿಂದ ಶುರು, ಮಾರ್ಚ್ 3ಕ್ಕೆ ಅಂತ್ಯ
ಫೆಬ್ರವರಿ 27 ರಿಂದ ಶುರುವಾಗುವ ಪಾದಯಾತ್ರೆ ಮಾರ್ಚ್ 3ಕ್ಕೆ ಅಂತ್ಯವಾಗಲಿದೆ. ಮಾರ್ಚ್ 5ರ ಬದಲಾಗಿ ಮಾರ್ಚ್ 3ಕ್ಕೆ ಪಾದಯಾತ್ರೆ ಅಂತ್ಯಗೊಳಿಸುವ ಬಗ್ಗೆ ಹೇಳಲಾಗಿದೆ. ಮಾರ್ಚ್ 3ಕ್ಕೆ ಸಂಜೆ ಬಸವನಗುಡಿಯಲ್ಲಿ ಪಾದಯಾತ್ರೆ ಅಂತ್ಯಗೊಳ್ಳಲಿದೆ.
ಬೆಂಗಳೂರು: ಮೇಕೆದಾಟು ಯೋಜನೆ (Mekedatu Project) ಅನುಷ್ಠಾನಕ್ಕೆ ಆಗ್ರಹಿಸಿ ಕಾಂಗ್ರೆಸ್ನ (Congress) 2ನೇ ಹಂತದ ಪಾದಯಾತ್ರೆಯಲ್ಲಿ ಬದಲಾವಣೆ ಮಾಡಲಾಗಿದೆ. ಫೆಬ್ರವರಿ 27 ರಿಂದ ಶುರುವಾಗುವ ಪಾದಯಾತ್ರೆ (Mekedatu Padayatra) ಮಾರ್ಚ್ 3ಕ್ಕೆ ಅಂತ್ಯವಾಗಲಿದೆ. ಮಾರ್ಚ್ 5ರ ಬದಲಾಗಿ ಮಾರ್ಚ್ 3ಕ್ಕೆ ಪಾದಯಾತ್ರೆ ಅಂತ್ಯಗೊಳಿಸುವ ಬಗ್ಗೆ ಹೇಳಲಾಗಿದೆ. ಮಾರ್ಚ್ 3ಕ್ಕೆ ಸಂಜೆ ಬಸವನಗುಡಿಯಲ್ಲಿ ಪಾದಯಾತ್ರೆ ಅಂತ್ಯಗೊಳ್ಳಲಿದೆ.
ವಿಧಾನಸಭೆಯಲ್ಲಿ ಮಂಗಳವಾರ ರಾಜ್ಯಪಾಲರ (Governor Speech) ಭಾಷಣದ ವಂದನಾ ನಿರ್ಣಯದ ಮೇಲಿನ ಚರ್ಚೆ ಸಮಯದಲ್ಲಿ ಮೇಕೆದಾಟು ಯೋಜನೆಯ ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರ ನಡುವೆ ಆರೋಪ ಪ್ರತ್ಯಾರೋಪ ನಡೆಯಿತು. ಕಾಂಗ್ರೆಸ್ ಪಕ್ಷವನ್ನು ತರಾಟೆಗೆ ತೆಗೆದುಕೊಂಡ ಬಿಜೆಪಿ ಸದಸ್ಯ ಪಿ.ರಾಜೀವ್, ಇದೀಗ ಪಾದಯಾತ್ರೆ ಮಾಡಿರುವ ಕಾಂಗ್ರೆಸ್ ಕೈಲೇ 5 ವರ್ಷಗಳ ಅಧಿಕಾರ ಇತ್ತು. ಇವರ ಔಟ್ ಕಂ ಏನು? ಆಗ ಮೇಕೆದಾಟು ನೆನಪಾಗಲಿಲ್ಲವೆ ಎಂದು ಪ್ರಶ್ನಿಸಿದ್ದರು.
ಅಂತಾರಾಜ್ಯ ಯೋಜನೆ ಆರಂಭಿಸಲು 4 ಹಂತ ಇರುತ್ತದೆ. ಡಿಪಿಅರ್, ಅರಣ್ಯ ನಾಶದ ಅಂದಾಜು ಮತ್ತು ಬೇರೆಡೆ ಸಸ್ಯಗಳನ್ನು ಬೆಳೆಸಲು ಭೂಮಿ ಗುರುತಿಸುವುದು, ಪರಿಸರ ಇಲಾಖೆಯ ಅನುಮೋದನೆ ಮತ್ತು ಕೇಂದ್ರ ಜಲ ಪ್ರಾಧಿಕಾರದ ಅನುಮೋದನೆ ಎಂಬ ಹಲವು ಹಂತಗಳನ್ನು ದಾಟಬೇಕು. ಕಾಂಗ್ರೆಸ್ ಐದು ವರ್ಷ ಅಧಿಕಾರದಲ್ಲಿ ಇದ್ದಾಗ ಏನೆಲ್ಲಾ ಕೆಲಸಗಳ ಆಗಿದ್ದವು ಎಂದು ಪ್ರಶ್ನಿಸಿದರು. ಸಮ್ಮಿಶ್ರ ಸರ್ಕಾರ ಬರುವವರೆಗೆ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಲ್ಲಿಕೆಯಾಗಿರಲಿಲ್ಲ ಎಂದು ಹೇಳಿದ್ದರು.
ರಾಜೀವ್ ಅವರ ಮಾತಿಗೆ ವಿಪಕ್ಷ ಉಪನಾಯಕ ಖಾದರ್ ವಿರೋಧ ವ್ಯಕ್ತಪಡಿಸಿದ್ದರು. ಕಾಂಗ್ರೆಸ್ ಸರ್ಕಾರ ಇದ್ದಾಗಲೇ ಡಿಪಿಆರ್ ಆಗಿತ್ತು. ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಡಿಪಿಆರ್ ಪರಿಷ್ಕರಿಸಲಾಯಿತು. ಕೇಂದ್ರ ಸರ್ಕಾರ ಈಗ ಅನುಮತಿ ಕೊಡಬೇಕು. ಮೇಕೆದಾಟು ಯೋಜನೆಗೆ ಬೆಂಬಲಿಸಬೇಕು ಎಂದು ಮನವಿ ಮಾಡಿದರು. ಮಧ್ಯಪ್ರವೇಶ ಮಾಡಿ ಮಾತನಾಡಿದ ಕುಣಿಗಲ್ ಶಾಸಕ ರಂಗನಾಥ್ ಎರಡೂ ಕಡೆ ನಿಮ್ಮದೇ ಬಿಜೆಪಿ ಸರ್ಕಾರ ಇದೆ. ಪರಿಸರ ಇಲಾಖೆಯ ಕ್ಲಿಯರೆನ್ಸ್ ತೆಗೆದುಕೊಳ್ಳಲು ಆಗಿಲ್ಲ. ಅನುಮೋದನೆ ತೆಗೆದುಕೊಳ್ಳಿ ಎಂದು ಸಲಹೆ ಮಾಡಿದ್ದರು.
ಇದನ್ನೂ ಓದಿ: ಮೇಕೆದಾಟು ಕುರಿತ ಸಂಸದ ಪ್ರಜ್ವಲ್ ರೇವಣ್ಣ ಪ್ರಶ್ನೆಗೆ ಉತ್ತರಿಸಿದ ಲೋಕಸಭೆ
ಇದನ್ನೂ ಓದಿ: ವಿಧಾನಸಭೆಯಲ್ಲಿ ಪ್ರತಿಧ್ವನಿಸಿದ ಮೇಕೆದಾಟು: ಪರಸ್ಪರರ ಕಾಲೆಳೆದ ಬಿಜೆಪಿ ಕಾಂಗ್ರೆಸ್ ಶಾಸಕರು
Published On - 7:43 pm, Thu, 17 February 22