ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಆದಾಯ ಎಷ್ಟು? ಆಸ್ತಿ ಎಷ್ಟಿದೆ? ಎಸಿಬಿ ಎಫ್ಐಆರ್ನಲ್ಲಿ ಎಲ್ಲಾ ದಾಖಲಾಗಿದೆ! ವಿವರ ಇಲ್ಲಿದೆ
ಶಾಸಕ ಜಮೀರ್ ಅಹ್ಮದ್ ಮೇಲೆ ಎಸಿಬಿ ದಾಖಲಿಸಿದ ಎಫ್ಐಆರ್ ಪ್ರತಿ ಟಿವಿ9ಗೆ ಲಭ್ಯವಾಗಿದೆ. ಎಸಿಬಿ ಡಿವೈಎಸ್ ಪಿ ಬಸವರಾಜ ಮಗದುಮ್, ಜಮೀರ್ ಅಹ್ಮದ್ ವಿರುದ್ಧ ದೂರು ದಾಖಲಿಸಿದ್ದರು. ಈ ದೂರು ಮೇರೆಗೆ ಎಸಿಬಿ ಎಫ್ಐಆರ್ ದಾಖಲಿಸಿತ್ತು.
ಬೆಂಗಳೂರು: ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್(Zameer Ahmed Khan) ಅವರ ನಿವಾಸ, ಕಚೇರಿ ಮೇಳೆ ದಾಳಿ ನಡೆಸಿದ್ದ ಎಸಿಬಿ(ACB), ಜಮೀರ್ ಅವರ ಅಕ್ರಮ ಆಸ್ತಿಯನ್ನ ಪತ್ತೆ ಹಚ್ಚಿದೆ. ಸದ್ಯ ಶಾಸಕ ಜಮೀರ್ ಅಹ್ಮದ್ ಅವರ ಆದಾಯ ಎಷ್ಟು.? ಅವರ ಒಟ್ಟು ಆಸ್ತಿ ಎಷ್ಟು? ಅವರ ಒಟ್ಟು ವೆಚ್ಚ ಎಷ್ಟು.? ಎಂದು ಎಫ್ಐಆರ್ ನಲ್ಲಿ ಎಸಿಬಿ ದಾಖಲಿಸಿದ ಪ್ರಮುಖ ಅಂಶಗಳು ಈಗ ಲಭ್ಯವಾಗಿದೆ.
ಶಾಸಕ ಜಮೀರ್ ಅಹ್ಮದ್ ಮೇಲೆ ಎಸಿಬಿ ದಾಖಲಿಸಿದ ಎಫ್ಐಆರ್ ಪ್ರತಿ ಟಿವಿ9ಗೆ ಲಭ್ಯವಾಗಿದೆ. ಎಸಿಬಿ ಡಿವೈಎಸ್ ಪಿ ಬಸವರಾಜ ಮಗದುಮ್, ಜಮೀರ್ ಅಹ್ಮದ್ ವಿರುದ್ಧ ದೂರು ದಾಖಲಿಸಿದ್ದರು. ಈ ದೂರು ಮೇರೆಗೆ ಎಸಿಬಿ ಎಫ್ಐಆರ್ ದಾಖಲಿಸಿತ್ತು. ಪಿಎಂಎಲ್ಎ ಕಾಯ್ದೆ ಅನ್ವಯ ಇಡಿ ಕೊಟ್ಟ ಮಾಹಿತಿ ಮೇರೆಗೆ ಮೇ 5 ರಂದೇ ಭ್ರಷ್ಟಾಚಾರ ನಿಗ್ರಹ ಕಾಯ್ದೆ 1988 ಕಲಂ 13(1)(b)r/w13(2) ಅಡಿಯಲ್ಲಿ ಎಫ್ಐಆರ್ ದಾಖಲಾಗಿತ್ತು.
ಇಡಿ ದಾಖಲಿಸಿದ ಇಸಿಐಆರ್ ತನಿಖೆಯಲ್ಲಿ ಜಮೀರ್ ಅಹಮದ್ ಸಾರ್ವಜನಿಕ ಸೇವಕ. 2005 ರಿಂದ ಆಗಸ್ಟ್ 5, 2021 ರ ಅವಧಿಯಲ್ಲಿ ತನ್ನ ಅಧಿಕಾರವನ್ನ ದುರುಪಯೋಗ ಪಡಿಸಿಕೊಂಡು ಅಪಾರ ಪ್ರಮಾಣದ ಆಸ್ತಿ ಗಳಿಸಿದ್ದಾರೆ ಎಂದು ಉಲ್ಲೇಖಿಸಲಾಗಿತ್ತು.
ಜಾರಿ ನಿರ್ದೇಶನಾಲಯ ನೀಡಿದ ಮಾಹಿತಿಯ ದಾಖಲೆ ಪ್ರಕಾರ ಒಟ್ಟು ಆಸ್ತಿ-73,94,36,027 ಆದಾಯ-4,30,48,790 ವೆಚ್ಚ-17,80,18,000 ಹಾಗೂ ಆದಾಯಕ್ಕಿಂತ 87,44,05,057 ಹೆಚ್ಚಿನ ಆಸ್ತಿ ಗಳಿಸಿದ್ದಾರೆ ಎಂದು ಎಫ್ಐಆರ್ ನಲ್ಲಿ ಉಲ್ಲೇಖ ಮಾಡಲಾಗಿದೆ. ಅಧಿಕವಾಗಿ ಅಕ್ರಮವಾಗಿ ಆಸ್ತಿ ಗಳಿಸಿದ ಆರೋಪ ಎಸಗಿರಿವುದು ಕಂಡು ಬಂದಿದ್ದು ಕಾನೂನು ರೀತಿ ಕ್ರಮ ಕೈಗೊಳ್ಳಲು ಎಸಿಬಿ ಡಿವೈಎಸ್ ಪಿ ಕೆ. ರವಿಶಂಕರ್ ದೂರು ದಾಖಲಿಸಿ ತನಿಖೆಗೆ ಮುಂದಾಗಿದ್ರು. ಅಕ್ರಮ ಆಸ್ತಿ ಗಳಿಕೆ ಸಂಬಂಧ ದೂರುದಾರ ಬಸವರಾಜ ಮಗದುಮ್ ಕೊಟ್ಟ ಸೋರ್ಸ್ ವರದಿ ಹಾಗೂ ಇಡಿ ಅಧಿಕಾರಿಗಳು ನೀಡಿದ ಮಾಹಿತಿ ವರದಿ, ಇಡಿಯವರು ಎಸಿಬಿ ಎಡಿಜಿಪಿಯವರಿಗೆ ಬರೆದ ಪತ್ರ, ಎಸಿಬಿ ಎಸ್ಪಿ ಯವರು ನೀಡಿದ ಪತ್ರಗಳನ್ನ ಲಗತ್ತಿಸಿ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ.
16 ವರ್ಷಗಳ ಆದಾಯ ಕೆದಕುತ್ತಿದೆ ಎಸಿಬಿ ಸುಮಾರು 16 ವರ್ಷಗಳ ಆದಾಯ ಹಾಗೂ ತೆರಿಗೆ ಪಾವತಿ ತನಿಖೆ ನಡೆಸಲು ಎಸಿಬಿ ಮುಂದಾಗಿದೆ. ಇಡಿ ರಿಪೋರ್ಟ್ ಇಟ್ಟುಕೊಂಡು ಎಸಿಬಿ ತನಿಖೆ ಆರಂಭಿಸಿದೆ. ಇನ್ನು ಪ್ರತಿ ವರ್ಷ ತೆರಿಗೆ ಪಾವತಿ ಮಾಡಿದ್ದೇನೆ, ಎಲ್ಲ ದಾಖಲೆಗಳನ್ನ ಒದಗಿಸುತ್ತೇನೆ ಅಂತಾ ಜಮೀರ್ ಎಸಿಬಿ ಅಧಿಕಾರಿಗಳಿಗೆ ತಿಳಿಸಿದ್ದಾರಂತೆ. ಇದೀಗ ಜಮೀರ್ ಅಹಮ್ಮದ್ ಮನೆಯಲ್ಲಿ ವಶಕ್ಕೆ ಪಡೆದ ಕಡತಗಳು, ಆಸ್ತಿ ಪತ್ರಗಳು, ಆದಾಯ ವಿವರಗಳನ್ನ ಪರಿಶೀಲನೆ ನಡೆಸಲಾಗಿದೆ.
ಜಮೀರ್ ಮನೆ ಮೌಲ್ಯ ತಿಳಿಯಲು ಇಂಜಿನಿಯರ್‌ಗಳ ಮೊರೆ ಕಂಟೋನ್ಮೆಂಟ್ ರೈಲು ನಿಲ್ದಾಣ ಬಳಿ ಇರೋ ಜಮೀರ್ ಅರಮನೆ ನಿರ್ಮಾಣಕ್ಕೆ ವಿದೇಶದಿಂದಲೇ ಟೈಲ್ಸ್, ಪಿಠೋಪಕರಣ ತರಿಸಲಾಗಿದೆ. ಇಲ್ಲಿ ಬಳಸಿರೋ ಒಂದೊಂದು ಐಟಂನ ಮೌಲ್ಯವೂ ಹುಬ್ಬೇರಿಸುವಂತಿದೆ. ಅದ್ರಲ್ಲೂ ಇಲ್ಲಿ ಬಳಸಿರೋ ಐಟಂಗಳನ್ನ ಮೌಲ್ಯ ಮಾಡಲು ಎಸಿಬಿಗೂ ಸಾಧ್ಯವಾಗ್ತಿಲ್ಲ. ಹೀಗಾಗಿ ಮನೆ ಮೌಲ್ಯಮಾಪನ ಮಾಡಲು PWD ಇಲಾಖೆ ಇಂಜಿನಿಯರ್‌ಗಳನ್ನ ಬಳಸಿಕೊಳ್ಳಲು ಅಧಿಕಾರಿಗಳು ಮುಂದಾಗಿದ್ದಾರೆ. PWD ತಜ್ಞ ಇಂಜಿನಿಯರ್ ತಂಡ ಮನೆಯ ಸಂಪೂರ್ಣ ಮೌಲ್ಯಮಾಪನ ಮಾಡಿ, ರಿಪೋರ್ಟ್ ನೀಡಲಿದೆ.
ವಿಚಾರಣೆಗೆ ಹಾಜರಾಗುವಂತೆ ಶಾಸಕ ಜಮೀರ್ಗೆ ನೋಟಿಸ್ ಇನ್ನು ಮತ್ತೊಂದು ಕಡೆ ಇತ್ತೀಚೆಗೆ ಶಾಸಕ ಜಮೀರ್ ಮನೆ, ಕಚೇರಿ ಮೇಲೆ ನಡೆದ ಎಸಿಬಿ ದಾಳಿ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆಗೆ ಹಾಜರಾಗುವಂತೆ ಶಾಸಕ ಜಮೀರ್ಗೆ ನೋಟಿಸ್ ನೀಡಲಾಗಿದೆ. ಆದ್ರೆ ಬಕ್ರೀದ್ ಬಳಿಕ ವಿಚಾರಣೆಗೆ ಬರುವುದಾಗಿ ಜಮೀರ್ ಮನವಿ ಮಾಡಿದ್ದಾರೆ. ಹಾಗೂ ಎಸಿಬಿ ಶಾಸಕ ಜಮೀರ್ ಅಹ್ಮದ್ಗೆ ಆಸ್ತಿಯ ಲೆಕ್ಕ ಕೇಳಿದೆ. ಆಸ್ತಿ ದಾಖಲೆ ಒದಗಿಸುವಂತೆ ಸೂಚಿಸಲಾಗಿದೆ.
Published On - 3:18 pm, Fri, 8 July 22