ಸಿಲಿಕಾನ್ ಸಿಟಿ ಮಂದಿಗೆ ಕೊರೊನಾ ಶಾಕ್; ಸೋಂಕಿತರ ಸಂಖ್ಯೆ ಕಡಿಮೆಯಾದರೂ, ಸಾವಿನ ಸಂಖ್ಯೆಯಲ್ಲಿ ಏರಿಕೆ
ತಜ್ಞರು ಈ ಹಿಂದೆ ಮೂರನೇ ಅಲೆ ಬರುವ ಎಚ್ಚರಿಕೆ ನೀಡಿದ್ರು ಆದ್ರೆ ಸೋಂಕಿತರ ಸಂಖ್ಯೆ ಕಡಿಮೆಯಾದ ಕಾರಣ ಮೂರನೇ ಆರಂಭವಾಗಿಲ್ಲ ಎಂಬ ನಿರಾಳದಲ್ಲಿ ಬಿಬಿಎಂಪಿ, ಆರೋಗ್ಯ ಇಲಾಖೆ ಇತ್ತು. ಆದ್ರೆ ಈಗ ಮೂರನೇ ಅಲೆ ಸದ್ದಿಲ್ಲದೆ ಬಂದಿದೆಯಾ ಎಂಬ ಆತಂಕ ಉಂಟಾಗಿದೆ.
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕೊರೊನಾ ತಕ್ಕ ಮಟ್ಟಿಗೆ ನಿಯಂತ್ರಣಗೊಂಡಿದೆ. ಆದ್ರೆ ಕೊರೊನಾತಂಕ ಮಾತ್ರ ಕಡಿಮೆ ಆಗಿಲ್ಲ. ಸೋಂಕಿತರ ಸಂಖ್ಯೆಯಲ್ಲಿ ಇಳಿಮುಖ ಆದರೂ ಸಾವಿನ ಸಂಖ್ಯೆಯಲ್ಲಿ ಕಡಿಮೆ ಆಗಿಲ್ಲ. ಸೋಂಕಿತರ ಸಂಖ್ಯೆ ಇಳಿಮುಖ ಹಿನ್ನಲೆಯಲ್ಲಿ ಕೊರೊನಾ ಟೆಸ್ಟಿಂಗ್ ಕಡಿಮೆ ಮಾಡಲಾಗುತ್ತಿದೆ.
ತಜ್ಞರು ಈ ಹಿಂದೆ ಮೂರನೇ ಅಲೆ ಬರುವ ಎಚ್ಚರಿಕೆ ನೀಡಿದ್ರು ಆದ್ರೆ ಸೋಂಕಿತರ ಸಂಖ್ಯೆ ಕಡಿಮೆಯಾದ ಕಾರಣ ಮೂರನೇ ಆರಂಭವಾಗಿಲ್ಲ ಎಂಬ ನಿರಾಳದಲ್ಲಿ ಬಿಬಿಎಂಪಿ, ಆರೋಗ್ಯ ಇಲಾಖೆ ಇತ್ತು. ಆದ್ರೆ ಈಗ ಮೂರನೇ ಅಲೆ ಸದ್ದಿಲ್ಲದೆ ಬಂದಿದೆಯಾ ಎಂಬ ಆತಂಕ ಉಂಟಾಗಿದೆ.
ಮೂರನೇ ಅಲೆಯಲ್ಲಿ ಸೋಂಕಿನ ಲಕ್ಷಣಗಳೇ ಕಾಣಿಸಲ್ವಾ? ಹೌದು ಮೂರನೇ ಅಲೆಯಲ್ಲಿ ಯಾವುದೇ ರೀತಿಯ ಲಕ್ಷಣಗಳು ಕಾಣಿಸುವುದಿಲ್ಲ ಎಂದು ಹೇಳಲಾಗುತ್ತಿದೆ. ಸೋಂಕು ಇದ್ದರು ಕೊರೊನಾ ಸೋಂಕಿನ ಲಕ್ಷಣಗಳಾದ ಜ್ವರ, ಕೆಮ್ಮು, ನೆಗಡಿ ಸೇರಿದಂತೆ ಯಾವುದೆ ಲಕ್ಷಣಗಳು ಸೋಂಕು ಇದ್ದವರಲ್ಲಿ ಕಾಣಿಸಿಕೊಳ್ತಿಲ್ಲ. ಯಾವುದೇ ಖಾಯಿಲೆ ಇಲ್ಲದೆ ಸಾವನ್ನಪ್ಪುತ್ತಿರುವವರ ಸಂಖ್ಯೆಯಲ್ಲಿ ಹೆಚ್ಚಳ ಕಂಡು ಬಂದಿದೆ. ಕಳೆದ ವರ್ಷ ಹೋಲಿಸಿದರೆ, ಒಂದೇ ಮಾದರಿಯಲ್ಲಿ ಸೋಂಕಿನ ಪ್ರಮಾಣವಿದ್ದು ಕೊರೊನಾ ಸೋಂಕು ತಗ್ಗಿದ್ದರು ಸಾವಿನ ಪ್ರಮಾಣ ಹೇಗೆ ತಗ್ಗಿಲ್ಲವೆಂಬ ಆತಂಕ ಉಂಟಾಗಿದೆ.
ಸೋಂಕು ಧೃಡ ಪಟ್ಟು ಸಾವನ್ನಪ್ಪುವವರ ಸಂಖ್ಯೆ ಕಡಿಮೆಯಾಗಿದ್ದು ಸೋಂಕಿನ ಲಕ್ಷಣವಿಲ್ಲದೆ ಸಾವನ್ನಪ್ಪುತ್ತಿರುವವ ಸಂಖ್ಯೆಯಲ್ಲಿ ಏರಿಕೆ ಕಂಡು ಬಂದಿದೆ. ಇನ್ನು ಮೃತಪಟ್ಟರೂ ಅಧಿಕೃತ ಮಾಹಿತಿ ನೀಡಲು ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ.
ಇದನ್ನೂ ಓದಿ: ಕನ್ನಡ ರಾಜ್ಯೋತ್ಸವ 2021: ಪ್ರತಿ ಬಾರಿ ಕೇಳುವಾಗಲೂ ಕನ್ನಡಿಗರಿಗೆ ರೋಮಾಂಚನ ನೀಡುವ ಅದ್ಭುತ ಚಿತ್ರಗೀತೆಗಳಿವು