ಬೆಂಗಳೂರಿನ ಅಪಾರ್ಟ್‌ಮೆಂಟ್​ನಲ್ಲಿ ಹೆಚ್ಚುತ್ತಲೇ ಇದೆ ಕೊರೊನಾ ಸೋಂಕಿತರ ಸಂಖ್ಯೆ; ಆನೇಕಲ್‌ನಲ್ಲಿಯೂ ಕಾಲಿಟ್ಟಿದೆ!

SNN ರಾಜ್ ಲೇಕ್ ವ್ಯೂ ಅಪಾರ್ಟ್‌ಮೆಂಟ್‌ನಲ್ಲಿ ಸೋಂಕಿತರ ಸಂಖ್ಯೆ 106ಕ್ಕೆ ಏರಿಕೆಯಾಗಿದೆ. ನಿನ್ನೆವರೆಗೆ 103 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿತ್ತು. ಇಂದು ಮತ್ತೆ ಮೂವರಿಗೆ ಕೊರೊನಾ ಸೋಂಕು ಇರುವುದು ದೃಢವಾಗಿದೆ. ಇದರಿಂದ ದಿನೇ ದಿನೇ ಆತಂಕ ಹೆಚ್ಚುತ್ತಿದೆ.

  • TV9 Web Team
  • Published On - 14:17 PM, 17 Feb 2021
ಬೆಂಗಳೂರಿನ ಅಪಾರ್ಟ್‌ಮೆಂಟ್​ನಲ್ಲಿ ಹೆಚ್ಚುತ್ತಲೇ ಇದೆ ಕೊರೊನಾ ಸೋಂಕಿತರ ಸಂಖ್ಯೆ; ಆನೇಕಲ್‌ನಲ್ಲಿಯೂ ಕಾಲಿಟ್ಟಿದೆ!
ಸಾಂದರ್ಭಿಕ ಚಿತ್ರ

ಬೆಂಗಳೂರು: ಕೊರೊನಾ ಕಥೆ ಮುಗಿತು ಎಂದು ನಿಟ್ಟುಸಿರು ಬಿಟ್ಟವರೆಲ್ಲ ಮತ್ತೆ ಎಚ್ಚರವಾಗಬೇಕಿದೆ. ಲಸಿಕೆ ಬಂತು ಕೊರೊನಾ ಹೊಯ್ತು ಎಂದು ನಿಶ್ಚಿಂತೆಯಿಂದಿದ್ದರೆ ಅಪಾಯ ಕಟ್ಟಿ ಬುತ್ತಿ. ಏಕೆಂದರೆ ನಗರದಲ್ಲಿ ಮತ್ತೆ ಕೊರೊನಾ ಆತಂಕ ಹೆಚ್ಚಾಗುತ್ತಿದೆ. ಒಂದು ಕಡೆ ಬ್ರೆಜಿಲ್ ಮತ್ತು ದಕ್ಷಿಣ ಆಫ್ರಿಕಾದಲ್ಲಿ ನೂತನ ಕೊರೊನಾ ರೂಪಾಂತರಿ ವೈರಸ್ ಪತ್ತೆಯಾಗಿದ್ದು ಬೆಂಗಳೂರು ಏರ್​ಪೋರ್ಟ್​ನಲ್ಲಿ ಹೈ ಅಲರ್ಟ್​ ಮಾಡಲಾಗಿದೆ. ಮತ್ತೊಂದೆಡೆ ನಗರದ ಬೊಮ್ಮನಹಳ್ಳಿಯಲ್ಲಿರುವ ಎಸ್ಎನ್ಎನ್ ರಾಜ್ ಲೇಕ್ ವ್ಯೂ ಅಪಾರ್ಟ್‌ಮೆಂಟ್​ನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಇದರಿಂದ ಮತ್ತೊಮ್ಮೆ ಕೊರೊನಾ ಬೆಂಗಳೂರಿನಲ್ಲಿ ತನ್ನ ಅಟ್ಟಹಾಸ ಮೆರೆಯಲಿದೆಯಾ ಎಂಬ ಆತಂಕ ಹೆಚ್ಚಾಗಿದೆ.

SNN ರಾಜ್ ಲೇಕ್ ವ್ಯೂ ಅಪಾರ್ಟ್‌ಮೆಂಟ್‌ನಲ್ಲಿ ಸೋಂಕಿತರ ಸಂಖ್ಯೆ 106ಕ್ಕೆ ಏರಿಕೆಯಾಗಿದೆ. ನಿನ್ನೆವರೆಗೆ 103 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿತ್ತು. ಇಂದು ಮತ್ತೆ ಮೂವರಿಗೆ ಕೊರೊನಾ ಸೋಂಕು ಇರುವುದು ದೃಢವಾಗಿದೆ. ಇದರಿಂದ ದಿನೇ ದಿನೇ ಆತಂಕ ಹೆಚ್ಚುತ್ತಿದೆ. ಫೆಬ್ರವರಿ 6ರಂದು H1104 ಫ್ಲ್ಯಾಟ್​ನಲ್ಲಿ ಮದುವೆ ವಾರ್ಷಿಕೋತ್ಸವ ಕಾರ್ಯಕ್ರಮ ಮಾಡಲಾಗಿತ್ತು. ಈ ಕಾರ್ಯಕ್ರಮಕ್ಕೆ 30 ಫ್ಲ್ಯಾಟ್​ಗಳ ಜನರು ಭಾಗಿಯಾಗಿದ್ದರು. ಅದರಲ್ಲಿ ಓರ್ವ ವ್ಯಕ್ತಿ ಡೆಹ್ರಾಡೂನ್​ಗೆ ಹೋಗಿ ಬಂದಿದ್ದರು. ಡೆಹ್ರಾಡೂನ್​ಗೆ ಹೋಗಿ ಬಂದ ವ್ಯಕ್ತಿಗೆ ಸೋಂಕಿನ ಲಕ್ಷಣ ಕಾಣಿಸಿಕೊಂಡಿತ್ತು. ನಂತರ ಪರೀಕ್ಷೆ ನಡೆಸಿದಾಗ 106 ಜನ ಸೋಂಕಿತರು ಪತ್ತೆಯಾಗಿದ್ದಾರೆ. ಇಲ್ಲಿಯವರೆಗೂ 1,500ಕ್ಕೂ ಹೆಚ್ಚು ಜನರಿಗೆ ಕೊವಿಡ್ ಟೆಸ್ಟ್ ಮಾಡಲಾಗಿದೆ.

ಆನೇಕಲ್‌ನಲ್ಲಿ ಒಂದೇ ಕುಟುಂಬದ ಮೂವರಿಗೆ ಕೊರೊನಾ ಪಾಸಿಟಿವ್
ಇನ್ನು ಬೆಂಗಳೂರು ನಗರ ಜಿಲ್ಲೆಯ ಆನೇಕಲ್‌ನಲ್ಲಿ ಒಂದೇ ಕುಟುಂಬದ ಮೂವರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಬಿಬಿಎಂಪಿಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯ ಕುಟುಂಬದ ಮೂವರಲ್ಲಿ ಕೊವಿಡ್ ಪತ್ತೆಯಾಗಿದೆ. ವ್ಯಕ್ತಿಯ ತಾಯಿ, ಮಗು, ಪತ್ನಿಗೆ ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿದೆ. ಆದ್ರೆ ಕೆಲಸಕ್ಕೆ ಹೋಗುತ್ತಿದ್ದ ವ್ಯಕ್ತಿಯಲ್ಲಿ ಕೊರೊನಾ ಕಾಣಿಸಿಕೊಂಡಿಲ್ಲ. ಮನೆಯಲ್ಲೇ ಇದ್ದರೂ ಮೂವರಿಗೆ ಕೊರೊನಾ ಸೋಂಕು ಹೇಗೆ ಬಂತು ಎಂಬುವುದು ಗೊಂದಲವಾಗಿದೆ. ಸದ್ಯ ಸೋಂಕಿತರು ಸಂಜಯಗಾಂಧಿ ಆಸ್ಪತ್ರೆಗೆ ಶಿಫ್ಟ್ ಆಗಿದ್ದು ಪುರಸಭೆಯಿಂದ ಮನೆಯ ಸುತ್ತಮುತ್ತ ಸ್ಯಾನಿಟೈಸಿಂಗ್ ಮಾಡಲಾಗಿದೆ.

ಇದನ್ನೂ ಓದಿ: Coronavirus: ಬೆಂಗಳೂರಿನ ವಸತಿ ಸಮುಚ್ಛಯದಲ್ಲಿ ಪಾರ್ಟಿ ನಡೆದ ನಂತರ 100ಕ್ಕಿಂತಲೂ ಹೆಚ್ಚು ಮಂದಿಗೆ ಕೊವಿಡ್