AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭ್ರಷ್ಟಾಚಾರ ಆರೋಪಿ ಕೆಎಚ್​ಬಿ ಎಂಜಿನಿಯರ್ ನಂಜುಂಡಪ್ಪಗೆ ಲೋಕಾಯುಕ್ತದಲ್ಲೇ ಸಿಕ್ತು ಫಲವತ್ತಾದ ಪೋಸ್ಟಿಂಗ್​! ತೀವ್ರ ಆಕ್ಷೇಪ -ಮುಂದೇನು?

ಕಳಪೆ ಕಾಮಗಾರಿ, ಕರ್ತವ್ಯ ಲೋಪದಂತಹ ಆರೋಪ ಎದುರಿಸುತ್ತಿರುವ ಕೆ.ಎಚ್.ಬಿ. ಮುಖ್ಯ ಎಂಜಿನಿಯರ್ ನಂಜುಂಡಪ್ಪ ಅವರನ್ನು ಲೋಕಾಯುಕ್ತ ಮುಖ್ಯ ಎಂಜಿನಿಯರ್ ಆಗಿ ವರ್ಗಾವಣೆ ಮಾಡಲಾಗಿದೆ. ಈ ವಿಚಾರ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ವರ್ಗಾವಣೆ ಬಗ್ಗೆ ಆಕ್ಷೇಪವ್ಯಕ್ತಪಡಿಸಿ ಲೋಕಾಯುಕ್ತಕ್ಕೆ ಮನವಿ ಸಲ್ಲಿಸಲಾಗಿದೆ.

ಭ್ರಷ್ಟಾಚಾರ ಆರೋಪಿ ಕೆಎಚ್​ಬಿ ಎಂಜಿನಿಯರ್ ನಂಜುಂಡಪ್ಪಗೆ ಲೋಕಾಯುಕ್ತದಲ್ಲೇ ಸಿಕ್ತು ಫಲವತ್ತಾದ ಪೋಸ್ಟಿಂಗ್​! ತೀವ್ರ ಆಕ್ಷೇಪ -ಮುಂದೇನು?
ಲೋಕಾಯುಕ್ತ
TV9 Web
| Updated By: ಆಯೇಷಾ ಬಾನು|

Updated on:Mar 21, 2024 | 3:01 PM

Share

ಬೆಂಗಳೂರು, ಮಾರ್ಚ್​.21: ಕೆ.ಎಚ್.ಬಿ. ಬಡಾವಣೆಯಲ್ಲಿ ಕಳಪೆ ಕಾಮಗಾರಿ ಮಾಡಿದ್ದರೂ ಕ್ರಮ ವಹಿಸದೆ ಕರ್ತವ್ಯ ಲೋಪ ಮಾಡಿರುವ, ಉದ್ಯಾನವನ ಜಾಗ ಒತ್ತುವರಿ ಆಗಿದ್ದರೂ ತೆರವುಗೊಳಿಸದ, ನಮ್ಮ ಬಡಾವಣೆಯ ಒಂದೇ ಒಂದು ಉದ್ಯಾನವನ್ನೂ ಅಭಿವೃದ್ಧಿ ಮಾಡದೆ ಕರ್ತವ್ಯ ಲೋಪ ಎಸಗಿದ್ದ ಕೆ.ಎಚ್.ಬಿ. ಮುಖ್ಯ ಎಂಜಿನಿಯರ್ ನಂಜುಂಡಪ್ಪ (Nanjundappa) ವಿರುದ್ಧ ನೀಡಲಾಗಿರುವ ದೂರು ವಿಚಾರಣೆ ಹಂತದಲ್ಲಿರುವಾಗಲೇ ನಂಜುಂಡಪ್ಪ ಅವರು ಲೋಕಾಯುಕ್ತ (Lokayukta) ಮುಖ್ಯ ಎಂಜಿನಿಯರ್ ಆಗಿ ವರ್ಗಾವಣೆಯಾಗಿದ್ದಾರೆ. ಈ ವಿಚಾರ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.

ಈ ಹಿಂದೆ ನಂಜುಂಡಪ್ಪ ವಿರುದ್ಧ ಹಲವು ಆರೋಪಗಳು ಕೇಳಿ ಬಂದಿದ್ದು ಲೋಕಾಯುಕ್ತಕ್ಕೆ ದೂರು ನೀಡಲಾಗಿತ್ತು. ದೂರು ಬಂದ ಹಿನ್ನೆಲೆಯಲ್ಲಿ ನಾಗರತ್ನ ಅವರು ಬಂದು ಸ್ಥಳಪರಿಶೀಲನೆ ಮಾಡಿ, ಭ್ರಷ್ಟಾಚಾರ ಮತ್ತು ಕಳಪೆ ಕಾಮಗಾರಿ ಆಗಿದೆ ಎಂಬುದನ್ನು ಉಲ್ಲೇಖಿಸಿ ತನಿಖಾ ವರದಿ ನೀಡಿದ್ದರು. ಈಗ ಅದೇ ನಂಜುಂಡಪ್ಪ ಅವರು ಲೋಕಾಯುಕ್ತ ಮುಖ್ಯ ಎಂಜಿನಿಯರ್ ಆಗಿ ವರ್ಗಾವಣೆಯಾಗಿದ್ದಾರೆ. ಈ ಬಗ್ಗೆ ಆಕ್ಷೇಪವ್ಯಕ್ತಪಡಿಸಿ ಲೋಕಾಯುಕ್ತಕ್ಕೆ ಮನವಿ ಸಲ್ಲಿಸಲಾಗಿದೆ.

ಇದನ್ನೂ ಓದಿ: ಕುಮಾರಸ್ವಾಮಿಯವರ ಹಾರ್ಟ್ ಆಪರೇಶನ್ ಯಶಸ್ವೀಯಾಗಿ ನಡೆದಿದೆ, ಒಂದೆರಡು ದಿನಗಳಲ್ಲಿ ಡಿಸ್ಚಾರ್ಜ್ ಆಗಲಿದ್ದಾರೆ: ಹೆಚ್ ಡಿ ರೇವಣ್ಣ

ಬೆಂಗಳೂರು ಕೆಂಗೇರಿ, ಬಂಡೇಮಠ ಕೆ.ಎಚ್.ಬಿ. ಬಡಾವಣೆಯಲ್ಲಿ ಮೂಲಸೌಕರ್ಯ ಕಲ್ಪಿಸದೆ ಕರ್ತವ್ಯ ಲೋಪ ಎಸಗಿರುವ, ಡಾಂಬರು ರಸ್ತೆ ಅಭಿವೃದ್ಧಿಯಲ್ಲಿ ಕಳಪೆ ಕಾಮಗಾರಿ ಆಗಿದ್ದರೂ ಬಿಲ್ ಪಾವತಿಗೆ ಶಿಫಾರಸು ಮಾಡಿರುವ, ಹಲವು ದೂರು ನೀಡಿದರೂ ಮೂಲ ಸೌಕರ್ಯ ಕಲ್ಪಿಸದೆ, ಖಾಸಗಿ ಗೇಟೆಡ್ ಕಮ್ಯೂನಿಟಿಯವರು ಉದ್ಯಾನಕ್ಕೆ ಮೀಸಲಿಟ್ಟ ಜಾಗವನ್ನು ಒತ್ತುವರಿ ಮಾಡಿದ್ದರೂ ತೆರವು ಮಾಡಿಸುವಲ್ಲಿ ವಿಫಲವಾಗಿ ಕರ್ತವ್ಯಲೋಪ ಎಸಗಿರುವ ಆರೋಪಗಳು ನಂಜುಂಡಪ್ಪ ಅವರ ವಿರುದ್ಧ ಕೇಳಿ ಬಂದಿದೆ. ಈ ಪ್ರಕರಣ ವಿಚಾರಣಾ ಹಂತದಲ್ಲಿದೆ.

ಇನ್ನು ಕೆ.ಎಚ್.ಬಿ. ಬಂಡೇಮಠ ಬಡಾವಣೆಯನ್ನು 2022ರ ಆಗಸ್ಟ್ 03ರಿಂದ ಅನ್ವಯವಾಗುವಂತೆ ಬಿಬಿಎಂಪಿಗೆ ಹಸ್ತಾಂತರಿಸಲಾಗಿದ್ದು, ಇನ್ನು ಮುಂದೆ ಬಡಾವಣೆಯ ಮೂಲಸೌಕರ್ಯ/ದುರಸ್ತಿಯನ್ನು ಬಿಬಿಎಂಪಿಯೇ ನಿರ್ವಹಿಸುತ್ತದೆ ಎಂದು ಲೋಕಾಯುಕ್ತಕ್ಕೆ ಸುಳ್ಳು ಹೇಳಿಕೆ ನೀಡಿ ದಾರಿತಪ್ಪಿಸುವ ಕಾರ್ಯವನ್ನು ನಂಜುಡಪ್ಪ ಮಾಡಿದ್ದರು. ಆದರೆ ವಾಸ್ತವವಾಗಿ ಈ ಬಡಾವಣೆ ಬಿಬಿಎಂಪಿಗೆ ಹಸ್ತಾಂತರ ಆಗಿದ್ದು 6 ತಿಂಗಳ ನಂತರ 2023ರ ಫೆಬ್ರವರಿ 27ರಂದು. ಅಂದರೆ ನಂಜುಂಡಪ್ಪನವರು ಲೋಕಾಯುಕ್ತವನ್ನೇ ದಾರಿತಪ್ಪಿಸುವ ಕೆಲಸ ಮಾಡಿದ್ದರು. ಇಷ್ಟೆಲ್ಲಾ ಅಕ್ರಮ ಎಸಗಿದ್ದರೂ ಅವರ ಮೇಲಿನ ಆರೋಪ ತನಿಖೆ ಹಂತದಲ್ಲಿದ್ದರೂ ನಂಜುಂಡಪ್ಪ ಅವರನ್ನು ಲೋಕಾಯುಕ್ತಕ್ಕೆ ಇಂಜಿನಿಯರ್​ ಆಗಿ ವರ್ಗಾವಣೆ ಮಾಡಲಾಗಿದೆ. ಈ ಸಂಬಂಧ ಬಡಾವಣೆಯಲ್ಲಿ ಆಕ್ರೋಶ ಭುಗಿಲೆದ್ದಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 2:53 pm, Thu, 21 March 24

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ