Covid 19 Variant XBB.1.5: BF.7 ವೈರಸ್ ಭೀತಿ ನಡುವೆ ರಾಜ್ಯದಲ್ಲಿ ಮೊದಲ ಒಮಿಕ್ರಾನ್ ಉಪತಳಿ XBB.1.5 ವೈರಸ್ ಪತ್ತೆ
ಚೀನಾ ಅಮೇರಿಕಾದಲ್ಲಿ ಆರ್ಭಟಿಸುತ್ತಿರುವ ಹೊಸ ರೂಪಾಂತರಿ ಕೊವಿಡ್ XBB 1.5 ದೇಶದಲ್ಲಿ ಮೊದಲ ಬಾರಿಗೆ ಗುಜರಾತ್ನಲ್ಲಿ ಕಾಣಿಸಿಕೊಂಡಿತ್ತು. ಇದಾದ ಬಳಿಕ ಈಗ ರಾಜ್ಯದಲ್ಲೂ ಪತ್ತೆಯಾಗಿದೆ.

ಬೆಂಗಳೂರು: BF.7 ವೈರಸ್ ಭೀತಿ ನಡುವೆಯೂ ರಾಜ್ಯದಲ್ಲಿ ಹೊಸ ವೈರಸ್ ಪತ್ತೆಯಾಗಿದೆ. ಗುಜರಾತ್ ಬಳಿಕ ಕರ್ನಾಟಕದಲ್ಲೂ ಮೊದಲ ಒಮಿಕ್ರಾನ್ ಉಪತಳಿ XBB.1.5 ವೈರಸ್ ಪತ್ತೆಯಾಗಿದೆ. ಚೀನಾ ಅಮೇರಿಕಾದಲ್ಲಿ ಆರ್ಭಟಿಸುತ್ತಿರುವ ಹೊಸ ರೂಪಾಂತರಿ ಕೊವಿಡ್ XBB 1.5 ದೇಶದಲ್ಲಿ ಮೊದಲ ಬಾರಿಗೆ ಗುಜರಾತ್ನಲ್ಲಿ ಕಾಣಿಸಿಕೊಂಡಿತ್ತು. ಇದಾದ ಬಳಿಕ ಈಗ ರಾಜ್ಯದಲ್ಲೂ ಪತ್ತೆಯಾಗಿದೆ.
ಒಮಿಕ್ರಾನ್ ರೂಪಾಂತರಿ BF.7ಕ್ಕಿಂತ XBB.1.5 ರೂಪಾಂತರಿ ವೈರಸ್ ಅತಿವೇಗವಾಗಿ ಜನರಿಗೆ ಹರಡುವ ವೈರಸ್ ಆಗಿದೆ. ರೋಗನಿರೋಧಕ ಶಕ್ತಿ ಕಡಿಮೆ ಮಾಡುವ ಸಾಮರ್ಥ್ಯ ಇದಕ್ಕಿದೆ. ಹೀಗಾಗಿ ಕೊರೊನಾ ಹೊಸ ಅಲೆಯ ಬಗ್ಗೆ ಜನರಲ್ಲಿ ಆತಂಕ ಹೆಚ್ಚಾಗಿದೆ. ಈ ವರೆಗೆ ಗುಜರಾತ್ನಲ್ಲಿ 3, ಕರ್ನಾಟಕ 1, ರಾಜಸ್ಥಾನದಲ್ಲಿ ಒಬ್ಬರಿಗೆ XBB.1.5 ಪತ್ತೆಯಾಗಿದೆ.
ಇದನ್ನೂ ಓದಿ: Covid XXB.1.5 Variant: ಭಾರತಕ್ಕೆ ಕಾಲಿಟ್ಟ ಮತ್ತೊಂದು ಒಮಿಕ್ರಾನ್ ರೂಪಾಂತರಿ ಎಕ್ಸ್ಎಕ್ಸ್ಬಿ.1.5
ಒಮಿಕ್ರಾನ್ XBB.1.5 ಹೆಚ್ಚು ಸೋಂಕುಕಾರಕ; ಅಮೆರಿಕದ ತಜ್ಞರು
ಒಮಿಕ್ರಾನ್ XBB.1.5 ರೂಪಾಂತರಿ ವೈರಸ್ ಪ್ರತಿರಕ್ಷಣಾ ವ್ಯವಸ್ಥೆಯಿಂದ ತಪ್ಪಿಸಿಕೊಂಡು ಸೋಂಕು ಉಂಟುಮಾಡಬಲ್ಲಂಥದ್ದಾಗಿದೆ ಎಂದು ರೋಗ ನಿಯಂತ್ರಣ ಮತ್ತು ತಡೆ ಕೇಂದ್ರದ ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಎರಿಕ್ ಫೀಗಲ್-ಡಿಂಗ್ ತಿಳಿಸಿದ್ದಾರೆ. ಈ ರೂಪಾಂತರಿಯು BQ ಮತ್ತು XBB ಗಿಂತಲೂ ಹೆಚ್ಚು ಸೋಂಕುಕಾರಕ ಎಂದು ಅವರು ಹೇಳಿದ್ದಾರೆ. ಬಹುಶಃ ಜಗತ್ತು ಈಗ ಎದುರಿಸುತ್ತಿರುವ ಅತ್ಯಂತ ಕೆಟ್ಟ ಕೋವಿಡ್ ರೂಪಾಂತರವೆಂದರೆ XBB.1.5 ಎಂದು ಮಿನ್ನೇಸೋಟ ವಿಶ್ವವಿದ್ಯಾಲಯದ ಸಾಂಕ್ರಾಮಿಕ ರೋಗ ತಜ್ಞ ‘ರಾಯಿಟರ್ಸ್’ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಅಭಿಪ್ರಾಯಪಟ್ಟಿದ್ದಾರೆ.
ಅಮೆರಿಕದ ಈಶಾನ್ಯ ಭಾಗದಲ್ಲಿ ಅತಿಹೆಚ್ಚು ಮಂದಿ ಆಸ್ಪತ್ರೆಗೆ ದಾಖಲಾಗುತ್ತಿರುವ ರಾಜ್ಯಗಳ ಪೈಕಿ ಓಸ್ಟರ್ಹಾಮ್ ಕೂಡ ಮುಂಚೂಣಿಯಲ್ಲಿದೆ. ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ XBB ರೂಪಾಂತರ ದೃಢಪಡುತ್ತಿದೆ ಎಂದು ಅವರು ಹೇಳಿದ್ದಾರೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 10:06 am, Wed, 4 January 23