ನಕಲಿ ಔಷಧ ಮಾರಾಟಗಾರರಿಗೆ ಭರ್ಜರಿ ಶಾಕ್​​: ಕೊಲೆ ಉದ್ದೇಶ ಆರೋಪದಡಿ ಕೇಸ್​​ ದಾಖಲಿಸಲು ಸರ್ಕಾರ ಚಿಂತನೆ

ನಕಲಿ ಔಷಧ ಮಾರಾಟ ಜಾಲದ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿರುವ ರಾಜ್ಯ ಸರ್ಕಾರ, ಜನರ ಜೀವದ ಜೊತೆ ಚೆಲ್ಲಾಟವಾಡುವವರ ವಿರುದ್ಧ ಕೊಲೆ ಉದ್ದೇಶ (ಇಂಟೆನ್ಷನ್ ಟು ಮರ್ಡರ್) ಪ್ರಕರಣ ದಾಖಲಿಸಲು ಸಿದ್ಧತೆ ನಡೆಸಿದೆ. ಮತ್ತೊಂದೆಡೆ ನಕಲಿ ಔಷಧಿ ಹಾವಳಿ ಮತ್ತು ಔಷಧಗಳ ದುರುಪಯೋಗವನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ ವೈದ್ಯರು, ಫಾರ್ಮಸಿಸ್ಟ್‌ಗಳು ಮತ್ತು ಆರೋಗ್ಯ ಸೇವಾ ಸಂಸ್ಥೆಗಳಿಗೆ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.

ನಕಲಿ ಔಷಧ ಮಾರಾಟಗಾರರಿಗೆ ಭರ್ಜರಿ ಶಾಕ್​​: ಕೊಲೆ ಉದ್ದೇಶ ಆರೋಪದಡಿ ಕೇಸ್​​ ದಾಖಲಿಸಲು ಸರ್ಕಾರ ಚಿಂತನೆ
ನಕಲಿ ಔಷಧ ಮಾರಾಟಗಾರರಿಗೆ ಭರ್ಜರಿ ಶಾಕ್​​: ಕೊಲೆ ಉದ್ದೇಶ ಆರೋಪದಡಿ ಕೇಸ್​​ ದಾಖಲಿಸಲು ಸರ್ಕಾರ ಚಿಂತನೆ
Edited By:

Updated on: Sep 24, 2026 | 9:56 AM

ಮುಖ್ಯಾಂಶಗಳು

  • ನಕಲಿ ಔಷಧ ಮಾರಾಟ ಜಾಲದ ವಿರುದ್ಧ ಕರ್ನಾಟಕ ಸರ್ಕಾರದ ಸಮರ
  • ಫೇಕ್ ಮೆಡಿಸಿನ್ ಮಾರಿ ಜನರ ಜೀವದ ಜೊತೆ ಚೆಲ್ಲಾಟವಾಡಿದ್ರೆ ಕಠಿಣ ಕ್ರಮ
  • ಕೊಲೆ ಉದ್ದೇಶ ಆರೋಪದಡಿ ಕೇಸ್​​ ದಾಖಲಿಸಲು ಸರ್ಕಾರದಿಂದ ಚಿಂತನೆ

ಬೆಂಗಳೂರು, ಸೆಪ್ಟೆಂಬರ್​​ 24: ನಕಲಿ ಔಷಧ ಮಾರಾಟ ಜಾಲದ ವಿರುದ್ಧ ಸಮರ ಸಾರಿರುವ ಕರ್ನಾಟಕ ಸರ್ಕಾರ, ಫೇಕ್ ಮೆಡಿಸಿನ್ ಮಾರಿ ಜನರ ಜೀವದ ಜೊತೆ ಚೆಲ್ಲಾಟವಾಡುವವರ ವಿರುದ್ಧ ಇಂಟೆನ್ಷನ್ ಟು ಮರ್ಡರ್ ಆರೋಪದಡಿ ಕೇಸ್​​ ದಾಖಲಿಸಲು ಚಿಂತನೆ ನಡೆಸಿದೆ. ಈ ನಡುವೆ ಪ್ರಕರಣ ಸಂಬಂಧ ಎಸ್​ಐಟಿ ತನಿಖೆ ಮುಂದುವರಿದಿದ್ದು, ನಕಲಿ ಔಷಧ ಜಾಲಕ್ಕೆ ಯಾರ್ಯಾರು ಸಹಕಾರ ನೀಡಿದ್ದಾರೆ ಎಂಬ ಬಗ್ಗೆ ಮಾಹಿತಿ ಕಲೆಹಾಕುವ ಕೆಲಸ ನಡೆಯುತ್ತಿದೆ. ಪೊಲೀಸ್ , FDA ಮತ್ತು ಕಮರ್ಷಿಯಲ್ ಟ್ಯಾಕ್ಸ್ ಇಲಾಖೆಗಳ ನಡುವೆ ಸಮನ್ವಯದ ಮೂಲಕ ನಕಲಿ ಔಷಧ ಜಾಲದ ಹಣಕಾಸು ಮತ್ತು ಪೂರೈಕೆ ಮಾರ್ಗದ ಬಗ್ಗೆಯೂ ತನಿಖೆ ನಡೆಸಲು ಸಿದ್ಧತೆ ನಡೆದಿದೆ.

ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆಯಿಂದ ಮಾರ್ಗಸೂಚಿ

New Rules To Curb Fake Medicine Racket | ಸರ್ಕಾರದಿಂದ ಡಾಕ್ಟರ್ಸ್ ಗಳಿಗೆ ಗೈಡ್ ಲೈನ್ಸ್

ಮತ್ತೊಂದೆಡೆ ನಕಲಿ ಔಷಧಿ ಹಾವಳಿ ಮತ್ತು ಔಷಧಗಳ ದುರುಪಯೋಗವನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆಯು ವೈದ್ಯರು, ಫಾರ್ಮಸಿಸ್ಟ್‌ಗಳು ಮತ್ತು ಆರೋಗ್ಯ ಸೇವಾ ಸಂಸ್ಥೆಗಳಿಗೆ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ರೋಗಿಯ ವಯಸ್ಸು, ಕಾಯಿಲೆ ಮತ್ತು ಪ್ರಸ್ತುತ ಬಳಸುತ್ತಿರುವ ಔಷಧಗಳನ್ನು ಪರಿಗಣಿಸಿ, ಅಗತ್ಯವಿದ್ದಲ್ಲಿ ಮಾತ್ರ ನೋವು ನಿವಾರಕಗಳು ಮತ್ತು ಆ್ಯಂಟಿಬಯಾಟಿಕ್‌ಗಳನ್ನು ಕಡಿಮೆ ಡೋಸ್‌ನಲ್ಲಿ ಮತ್ತು ಕಡಿಮೆ ಅವಧಿಗೆ ಬರೆಯುವಂತೆ ವೈದ್ಯರಿಗೆ ಸೂಚಿಸಲಾಗಿದೆ. ಅನಗತ್ಯ ಮತ್ತು ತಪ್ಪು ಸಂಯೋಜನೆಯ ಔಷಧಗಳನ್ನು ತಪ್ಪಿಸಲು ನಿರ್ದೇಶಿಸಲಾಗಿದೆ.

ಇದನ್ನೂ ಓದಿ: ನಕಲಿ ಔಷಧ ಜಾಲದ ತನಿಖೆ ಮತ್ತಷ್ಟು ಚುರುಕು: ಸೇವಿಸಿದ ರೋಗಿಗಳ ಮಾಹಿತಿ ಸಂಗ್ರಹಕ್ಕೆ ಮುಂದಾದ ಎಫ್​ಡಿಎ

ಫಾರ್ಮಸಿಸ್ಟ್‌ಗಳು ಮತ್ತು ಹೆಲ್ತ್‌ಕೇರ್ ಸೆಂಟರ್‌ಗಳು ಔಷಧ ಮಾರಾಟದ ಕಾನೂನುಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ವೈದ್ಯರ ಪ್ರಿಸ್ಕ್ರಿಪ್ಷನ್ ಇಲ್ಲದೆ ಮಾತ್ರೆ ಅಥವಾ ಟಾನಿಕ್ ಮಾರಾಟ ಮಾಡಬಾರದು. ಆ್ಯಂಟಿಬಯಾಟಿಕ್‌ಗಳು ಮತ್ತು ನೋವು ನಿವಾರಕಗಳನ್ನು ತೆಗೆದುಕೊಳ್ಳಲು ರೋಗಿಗಳನ್ನು ಪ್ರೋತ್ಸಾಹಿಸಬಾರದು ಎಂದು ಸೂಚಿಸಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 9:50 am, Thu, 24 September 26

ವಿನಯ್​ ಕಾಶಪ್ಪನವರ್​

ವಿನಯಕುಮಾರ್ ಕಾಶಪ್ಪನವರ್ ಅವರು ಸಮೂಹ ಸಂವಹನ ಹಾಗೂ ತಂತ್ರಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಮತ್ತು ಪತ್ರಿಕೋದ್ಯಮದಲ್ಲಿ ವಿದ್ಯಾಭ್ಯಾಸ ಪಡೆದಿದ್ದಾರೆ. ಕಳೆದ 8 ವರ್ಷಗಳಿಂದ ಟಿವಿ9 ಕನ್ನಡದಲ್ಲಿ ಹಿರಿಯ ವರದಿಗಾರನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬೆಂಗಳೂರು ನಗರ, ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಗಳಲ್ಲಿ 10 ವರ್ಷಗಳ ವರದಿಗಾರಿಕೆ ಅನುಭವ ಹೊಂದಿದ್ದು, ಸಮಾಜಮುಖಿ ಹಾಗೂ ತನಿಖಾ ವರದಿಗಳ ಮೂಲಕ ಜನಪರ ವಿಷಯಗಳನ್ನು ಬೆಳಕಿಗೆ ತರುತ್ತಿದ್ದಾರೆ.

Read More
Loading...
Unable to load recommendations.
Follow Us