ಅಧಿಕಾರಿಗಳ ಸೋಗಲ್ಲಿ ಉದ್ಯಮಿಗೆ ಕರೆ: ಭಯಗೊಂಡ ಉದ್ಯಮಿಯಿಂದ 1.32 ಕೋಟಿ ರೂ. ಸುಲಿಗೆ

ಬೆಂಗಳೂರಿನ 56 ವರ್ಷದ ಉದ್ಯಮಿಯೊಬ್ಬರು ನಕಲಿ ಅಧಿಕಾರಿಗಳಿಂದ 1.32 ಕೋಟಿ ರೂ. ವಂಚನೆಗೆ ಒಳಗಾಗಿದ್ದಾರೆ. ಮನಿ ಲಾಂಡರಿಂಗ್ ಮತ್ತು ಅಶ್ಲೀಲ ವಿಡಿಯೋಗಳ ಆರೋಪದಡಿ ತನಿಖೆ ನೆಪದಲ್ಲಿ ಕರೆ ಮಾಡಿದ್ದ ನಕಲಿ ಅಧಿಕಾರಿಗಳು, ಹಣ ವರ್ಗಾಯಿಸಿಕೊಂಡು ಬಳಿಕ ಸಂಪರ್ಕ ಕಡಿತಗೊಳಿಸಿದ್ದಾರೆ. ವಂಚನೆಗೆ ಒಳಗಾದ ಉದ್ಯಮಿ ನೀಡಿರುವ ದೂರಿನ ಅನ್ವಯ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

ಅಧಿಕಾರಿಗಳ ಸೋಗಲ್ಲಿ ಉದ್ಯಮಿಗೆ ಕರೆ: ಭಯಗೊಂಡ ಉದ್ಯಮಿಯಿಂದ 1.32 ಕೋಟಿ ರೂ.  ಸುಲಿಗೆ
ಸೈಬರ್​ ವಂಚನೆ (ಸಾಂದರ್ಭಿಕ ಚಿತ್ರ)

Updated on: Oct 29, 2025 | 12:41 PM

ಬೆಂಗಳೂರು, ಅಕ್ಟೋಬರ್​ 29: ಜನರನ್ನು ಹೊಡೆಯುತ್ತಿರುವ ನಕಲಿ ವಿಡಿಯೋವನ್ನು ಬಳಸಿಕೊಂಡು, ಕಾನೂನು ಜಾರಿಗೆ ಸಂಬಂಧಿಸಿದ ಅಧಿಕಾರಿಗಳಂತೆ ನಟಿಸಿ ಉದ್ಯಮಿಗೆ 1.32 ಕೋಟಿ ರೂಪಾಯಿಗಳನ್ನ ವಂಚಿಸಿರುವ (Cyber Fraud) ಘಟನೆ ಬೆಂಗಳೂರಲ್ಲಿ ನಡೆದಿದೆ. ವಂಚನೆಗೊಳಗಾದ 56 ವರ್ಷದ ಉದ್ಯಮಿ ಮೇಲೆ ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಗೆ ಬೆಂಬಲ ನೀಡಿರುವ ಮತ್ತು ಉಗ್ರ ಚಟುವಟಿಕೆಗಳಿಗೆ ಹಣ ನೀಡಿರುವ ಆರೋಪ ಇದೆ ಎನ್ನಲಾಗಿದೆ.

ಮುಂಬೈ ಪೊಲೀಸ್‌ನ ಎನ್‌ಫೋರ್ಸ್ ಡಿಪಾರ್ಟ್‌ಮೆಂಟ್ ಹೆಸರು ಹೇಳಿ ಉದ್ಯಮಿಗೆ ಕರೆ ಮಾಡಿರುವ ಆರೋಪಿ, ಮನಿ ಲಾಂಡರಿಂಗ್​ ಮತ್ತು ಅಶ್ಲೀಲ ವಿಡಿಯೋಗಳನ್ನು ಹಂಚಿಕೊಂಡಿದ್ದಕ್ಕಾಗಿ ನಿಮ್ಮ ವಿರುದ್ಧ ತನಿಖೆ ನಡೆಸಲಾಗುತ್ತಿದೆ. ಓಂ ಅಬ್ದುಲ್ ಸಲಾಂ ಎಂಬ ವ್ಯಕ್ತಿಯ ಮನೆಯಲ್ಲಿ ದಾಳಿ ನಡೆಸಿದಾಗ ನಿಮ್ಮ ಹೆಸರಿನ ಕೆನರಾ ಬ್ಯಾಂಕ್ ಡೆಬಿಟ್ ಕಾರ್ಡ್ ಸಿಕ್ಕಿದೆ ಎಂದು ತಿಳಿಸಿದ್ದಾರೆ. ಅಲ್ಲದೆ, ಈ ಪ್ರಕರಣದಿಂದ ನೀವು ಹೊರಬರಬೇಕು ಎಂದರೆ ಹೇಳಿದ ಖಾತೆಗೆ ಹಣ ವರ್ಗಾಯಿಸುವಂತೆ ಸೂಚಿಸಿದ್ದಾನೆ. ಪರಿಶೀಲನೆ ಬಳಿಕ ಅದನ್ನು ಹಿಂತಿರುಗಿಸುವ ಭರವಸೆ ನೀಡಿದ್ದು, ಹಣ ನೀಡದೆ ಹೋದರೆ ನಿಮ್ಮ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ಬೆದರಿಸಿದ್ದಾನೆ ಎನ್ನಲಾಗಿದೆ.

ಇದನ್ನೂ ಓದಿ: ಸೈಬರ್ ವಂಚನೆ ಕಡಿವಾಣಕ್ಕೆ ದಿಟ್ಟ ಹೆಜ್ಜೆಯಿಟ್ಟ ಸರ್ಕಾರ: ಸೈಬರ್ ಕಮಾಂಡ್ ಸೆಂಟರ್ ಆರಂಭ

ಇಷ್ಟೇ ಅಲ್ಲದೆ ಇದು ರಹಸ್ಯ ವಿಚಾರವಾಗಿದ್ದು, ಇದನ್ನು ಪತ್ನಿಗೂ ಸೇರಿ ಯಾರ ಜೊತೆಯೂ ಹಂಚಿಕೊಳ್ಳಬಾರದು. ಒಂದೊಮ್ಮೆ ವಿಷಯ ಹೊರಗಡೆ ಹೋದರೆ ನಿಮ್ಮನ್ನು ಬಂಧಿಸಲಾಗುವುದು ಎಂದುಹೆದರಿಸಲಾಗಿದೆ. ಇದರಿಂದಾಗಿ ಗಾಬರಿಗೊಂಡ ಉದ್ಯಮಿ, ಯಾರಿಗೂ ವಿಷಯ ತಿಳಿಸಿಲ್ಲ. ಜೊತೆಗೆ ತನ್ನ ಬ್ಯಾಂಕ್​ ಖಾತೆಯಲ್ಲಿದ್ದ ಹಣವನ್ನು ಆರ್‌ಟಿಜಿಎಸ್ ಮೂಲಕ ಆರೋಪಿ ಹೇಳಿದ್ದ ಅಕೌಂಟ್​ಗೆ ವರ್ಗಾಯಿಸಿದ್ದಾರೆ. ಅಕ್ಟೋಬರ್ 8ರಿಂದ 16ರ ನಡುವೆ ಒಟ್ಟು ಆರು ಬಾರಿ ಆರೋಪಿಗೆ ಉದ್ಯಮಿ ಹಣ ವರ್ಗಾಯಿಸಿದ್ದು, ಒಟ್ಟು 1.32 ಕೋಟಿ ರೂ. ನೀಡಿದ್ದಾರೆ. ಹಣ ಪಡೆದ ವಂಚಕ ಮತ್ತೆ ಸಂಪರ್ಕಕ್ಕೆ ಸಿಗದ ಕಾರಣ ಉದ್ಯಮಿ ಈ ಬಗ್ಗೆ ದೂರು ನೀಡಿದ್ದು, ಪ್ರಕರಣದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ.

 

 

ಪ್ರಸನ್ನ ಹೆಗಡೆ

ಪ್ರಸನ್ನ ಹೆಗಡೆ ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕು. 9 ವರ್ಷಗಳಿಂದ ಪತ್ರಕರ್ತನಾಗಿ ಕೆಲಸ ಮಾಡಿರುವ ಅನುಭವವಿದೆ. ಮುದ್ರಣ, ಟಿವಿ ಮತ್ತು ಡಿಜಿಟಲ್​ ಮಾಧ್ಯಮಗಳಲ್ಲಿ ವಿವಿಧ ಜವಾಬ್ದಾರಿ ನಿಭಾಯಿಸಿದ್ದೇನೆ. ರಾಜಕೀಯ, ಸಿನಿಮಾ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿ ಇದೆ. ಕವನಗಳ ರಚನೆ, ಪುಸ್ತಕಗಳನ್ನ ಓದುವುದು ನೆಚ್ಚಿನ ಹವ್ಯಾಸಗಳು.

Read More
Loading...
Unable to load recommendations.
Follow Us