ನಾಡಿನಾದ್ಯಂತ ಆಯುಧ ಪೂಜೆ, ವಿಜಯದಶಮಿ ಸಂಭ್ರಮ: ಕೆಆರ್ ಮಾರುಕಟ್ಟೆಯಲ್ಲಿ ಹೂವು, ಹಣ್ಣಿನ ದರ ಎಷ್ಟಿದೆ? ಇಲ್ಲಿದೆ ವಿವರ

ಆಯುಧ ಪೂಜೆ ಮತ್ತು ವಿಜಯದಶಮಿ ಹಿನ್ನೆಲೆಯಲ್ಲಿ ಬೆಂಗಳೂರಿನ ಕೆಆರ್ ಮಾರುಕಟ್ಟೆಯಲ್ಲಿ ಭಾನುವಾರ ಹೂವು, ಹಣ್ಣು ಹಾಗೂ ಪೂಜಾ ಸಾಮಗ್ರಿಗಳ ಖರೀದಿ ಭರಾಟೆ ಜೋರಾಗಿತ್ತು. ಮಳೆಯಿಂದ ಹೂವಿನ ಬೆಳೆ ಹಾನಿಯಾಗಿದ್ದು, ಪೂರೈಕೆಯ ಮೇಲೆ ಪರಿಣಾಮ ಬಿದ್ದಿರುವುದರಿಂದ ಹೂವುಗಳ ದರ ಏರಿಕೆಯಾಗಿದೆ. ಹೂವು-ಹಣ್ಣುಗಳ ದರ ವಿವರ ಇಲ್ಲಿದೆ.

ನಾಡಿನಾದ್ಯಂತ ಆಯುಧ ಪೂಜೆ, ವಿಜಯದಶಮಿ ಸಂಭ್ರಮ: ಕೆಆರ್ ಮಾರುಕಟ್ಟೆಯಲ್ಲಿ ಹೂವು, ಹಣ್ಣಿನ ದರ ಎಷ್ಟಿದೆ? ಇಲ್ಲಿದೆ ವಿವರ
ಮಾರುಕಟ್ಟೆಯಲ್ಲಿ ಹೂವಿನ ಮಾಲೆ
Image Credit source: tv9
Edited By:

Updated on: Oct 19, 2026 | 8:25 AM

ಮುಖ್ಯಾಂಶಗಳು

  • ಆಯುಧ ಪೂಜೆ, ವಿಜಯದಶಮಿಗೆ ಕೆಆರ್ ಮಾರುಕಟ್ಟೆಯಲ್ಲಿ ಜನಸಾಗರ
  • ಹೂವು, ಹಣ್ಣುಗಳ ದರ ಏರಿಕೆ; ಗ್ರಾಹಕರಿಗೆ ಬೆಲೆ ಹೆಚ್ಚಳ ಬಿಸಿ
  • ಬೆಳೆ ಹಾನಿ, ಪೂರೈಕೆಗೆ ಅಡ್ಡಿಯೇ ಕಾರಣ

ಬೆಂಗಳೂರು, ಅಕ್ಟೋಬರ್ 19: ನಾಡಿನಾದ್ಯಂತ ಆಯುಧ ಪೂಜೆ ಮತ್ತು ವಿಜಯದಶಮಿ ಹಬ್ಬದ ಸಂಭ್ರಮ ಮನೆಮಾಡಿದೆ. ಹಬ್ಬದ ಪೂಜೆಗೆ ಬೇಕಾದ ಹೂವು, ಹಣ್ಣು ಹಾಗೂ ಇತರ ಸಾಮಗ್ರಿಗಳನ್ನು ಖರೀದಿಸಲು ಬೆಂಗಳೂರಿನ ಕೆಆರ್ ಮಾರುಕಟ್ಟೆಯಲ್ಲಿ ಭಾನುವಾರ ಜನಸಾಗರವೇ ಹರಿದುಬಂದಿತ್ತು. ಹಬ್ಬದ ಹಿನ್ನೆಲೆಯಲ್ಲಿ ಹೂವು ಮತ್ತು ಹಣ್ಣುಗಳ ಬೆಲೆ ಏರಿಕೆಯಾಗಿದ್ದು, ಗ್ರಾಹಕರ ಜೇಬಿಗೆ ಬಿಸಿ ತಟ್ಟಿದೆ. ಹಾಗಾದರೆ ಕೆಆರ್ ಮಾರುಕಟ್ಟೆಯಲ್ಲಿ ಹೂವು, ಹಣ್ಣುಗಳ ದರ ಎಷ್ಟಿದೆ? ಇಲ್ಲಿದೆ ವಿವರ.

ಕೆಆರ್ ಮಾರುಕಟ್ಟೆಯಲ್ಲಿ ಹಬ್ಬದ ಹಿಂದಿನ ದಿನವೇ ಖರೀದಿ ಭರಾಟೆ ಜೋರಾಗಿತ್ತು. ಹಬ್ಬದ ದಿನ ಹೂವು, ಹಣ್ಣುಗಳ ಬೆಲೆ ಮತ್ತಷ್ಟು ಹೆಚ್ಚಾಗಬಹುದು ಎಂಬ ನಿರೀಕ್ಷೆಯಿಂದ ಅನೇಕರು ಮುಂಚಿತವಾಗಿಯೇ ಖರೀದಿಗೆ ಮುಂದಾಗಿದ್ದರು. ಆದರೆ, ಹೂವುಗಳ ದರ ಹೆಚ್ಚಳದಿಂದ ವ್ಯಾಪಾರ ವಹಿವಾಟು ಕಡಿಮೆಯಾಗಿದೆ ಎಂದು ವ್ಯಾಪಾರಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಹಬ್ಬದ ಸಂಭ್ರಮದ ನಡುವೆಯೂ ಬೆಲೆ ಏರಿಕೆ ಗ್ರಾಹಕರಿಗೆ ಹೊರೆಯಾಗಿದೆ.

Loading...

ಕೆಆರ್ ಮಾರುಕಟ್ಟೆಯಲ್ಲಿ ಹೂವು ಮತ್ತು ಹಾರಗಳ ದರ

  • ಸೇವಂತಿಗೆ: ಒಂದು ಮಾರು ₹150
  • ಮಲ್ಲಿಗೆ: ಒಂದು ಮಾರು ₹120
  • ಕನಕಾಂಬರ: ಒಂದು ಮಾರು ₹120
  • ಸಣ್ಣ ಮಿನಿ ರೋಸ್ ಹಾರ: ₹550
  • ದೊಡ್ಡ ರೋಸ್ ಹಾರ: ₹800
  • ಸುಗಂಧರಾಜ ಹಾರ: ₹300
  • ದೊಡ್ಡ ತೋಮಾಲೆ: ₹2,500
  • ಮಿನಿ ಮಲ್ಲಿಗೆ ಹಾರ: ₹600
  • ಸಾಮಾನ್ಯ ಜೋಡಿ ತೋಮಾಲೆ: ₹3,000
  • ತುಳಸಿ ಹಾರ: ₹30–₹40

ಹಣ್ಣು ಮತ್ತು ಇತರ ಪೂಜಾ ಸಾಮಗ್ರಿಗಳ ದರ

  • ಕಪ್ಪು ದ್ರಾಕ್ಷಿ: ಕೆಜಿಗೆ ₹200
  • ಹಸಿರು ದ್ರಾಕ್ಷಿ: ಕೆಜಿಗೆ ₹280
  • ಕಿತ್ತಳೆ: ಕೆಜಿಗೆ ₹100
  • ಸೇಬು: ಕೆಜಿಗೆ ₹140–₹200
  • ಸಪೋಟ: ಕೆಜಿಗೆ ₹100
  • ದಾಳಿಂಬೆ: ಕೆಜಿಗೆ ₹200–₹250
  • ಏಲಕ್ಕಿ ಬಾಳೆಹಣ್ಣು: ₹80
  • ದೊಡ್ಡ ಬಾಳೆಹಣ್ಣು: ₹40
  • ಅನಾನಸ್: ಜೋಡಿಗೆ ₹120
  • ಕುಂಬಳಕಾಯಿ: ಕೆಜಿಗೆ ₹40
  • ಬಾಳೆಕಂದು: ₹50–₹100
  • ವೀಳ್ಯದೆಲೆ: ಒಂದು ಕಟ್ಟು ₹80

ಮಳೆಯಿಂದ ಹೂವಿನ ಬೆಳೆ ಹಾನಿ: ದರ ಏರಿಕೆ

ಕಳೆದ ಎರಡು ದಿನಗಳಿಂದ ಬೆಂಗಳೂರು ನಗರ ಮತ್ತು ಗ್ರಾಮಾಂತರ ಭಾಗಗಳಲ್ಲಿ ಸುರಿದ ಮಳೆಯಿಂದ ಹೂವು ಕಟಾವು ಮಾಡಲು ರೈತರಿಗೆ ತೊಂದರೆಯಾಗಿದೆ. ಮಳೆಯಿಂದ ಹೂವಿನ ಬೆಳೆ ಹಾನಿಯಾಗಿದ್ದು, ಮಾರುಕಟ್ಟೆಗೆ ಬರುವ ಹೂವುಗಳ ಪೂರೈಕೆಯ ಮೇಲೂ ಪರಿಣಾಮ ಬೀರಿದೆ. ಇದರಿಂದ ಹೂವುಗಳ ದರ ಹೆಚ್ಚಾಗಿದ್ದು, ಅದರ ಹೊರೆ ಗ್ರಾಹಕರ ಮೇಲೆ ಬಿದ್ದಿದೆ.

ಹೂವು ಖರೀದಿಸಲು ಮಾರುಕಟ್ಟೆಗೆ ಬಂದ ಗ್ರಾಹಕರೂ ಬೆಲೆ ಏರಿಕೆಯಿಂದ ತೊಂದರೆಯಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಟ್ರಾಫಿಕ್ ಜಾಮ್‌ನಿಂದ ವಾಹನ ಸವಾರರ ಪರದಾಟ

ಭಾನುವಾರ ಕೆಆರ್ ಮಾರುಕಟ್ಟೆಯಲ್ಲಿ ಹಬ್ಬದ ಖರೀದಿಗಾಗಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರಿಂದ ಮಾರುಕಟ್ಟೆಯ ಸುತ್ತಮುತ್ತ ಟ್ರಾಫಿಕ್ ಜಾಮ್ ಉಂಟಾಗಿತ್ತು. ವಾಹನಗಳ ಸಂಚಾರ ಸುಗಮಗೊಳಿಸಲು ಟ್ರಾಫಿಕ್ ಪೊಲೀಸರು ಹರಸಾಹಸ ಪಟ್ಟರು.

ಒಟ್ಟಿನಲ್ಲಿ, ಆಯುಧ ಪೂಜೆ ಮತ್ತು ವಿಜಯದಶಮಿ ಹಬ್ಬದ ಖರೀದಿ ಭರಾಟೆ ಕೆಆರ್ ಮಾರುಕಟ್ಟೆಯಲ್ಲಿ ಜೋರಾಗಿದ್ದರೂ, ಹೂವು ಮತ್ತು ಹಣ್ಣುಗಳ ಬೆಲೆ ಏರಿಕೆ ಗ್ರಾಹಕರಿಗೆ ಹೊರೆಯಾಗಿದೆ. ಹಬ್ಬದ ಸಿದ್ಧತೆಯ ನಡುವೆ ಅಗತ್ಯ ವಸ್ತುಗಳ ಖರೀದಿಗೆ ಹೆಚ್ಚಿನ ಹಣ ವ್ಯಯಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಕಿರಣ್​ ಸೂರ್ಯ

ಕಿರಣ್ ಸೂರ್ಯ (Kiran Surya) ಅವರು ಟಿವಿ9 ಕನ್ನಡ (TV9 Kannada) ವಾಹಿನಿಯಲ್ಲಿ ಹಿರಿಯ ವರದಿಗಾರರಾಗಿ (Senior Reporter) ಕಾರ್ಯನಿರ್ವಹಿಸುತ್ತಿದ್ದಾರೆ

Read More
Loading...
Unable to load recommendations.
Follow Us