ದೀಪಾವಳಿ ಸ್ಪೆಷಲ್: ಬೆಂಗಳೂರಿನಿಂದ ತೂತುಕುಡಿ ಹಾಗೂ ಕಣ್ಣೂರಿಗೆ ವಿಶೇಷ ರೈಲು ಸೌಲಭ್ಯ!

ದೀಪಾವಳಿ ಹಬ್ಬದ ಪ್ರಯುಕ್ತ ಪ್ರಯಾಣಿಕರ ದಟ್ಟಣೆ ಕಡಿಮೆ ಮಾಡಲು ನೈಋತ್ಯ ರೈಲ್ವೆಯು ಬೆಂಗಳೂರಿನಿಂದ ತೂತುಕುಡಿ ಮತ್ತು ಕಣ್ಣೂರಿಗೆ ವಿಶೇಷ ರೈಲುಗಳ ಸೇವೆಯನ್ನು ಘೋಷಿಸಿದೆ. ನವೆಂಬರ್ 6 ಮತ್ತು 7 ರಂದು ಸಂಚರಿಸಲಿರುವ ಈ ವಿಶೇಷ ರೈಲುಗಳ ವೇಳಾಪಟ್ಟಿ ಹಾಗೂ ಮುಂಗಡ ಕಾಯ್ದಿರಾತಿ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ದೀಪಾವಳಿ ಸ್ಪೆಷಲ್: ಬೆಂಗಳೂರಿನಿಂದ ತೂತುಕುಡಿ ಹಾಗೂ ಕಣ್ಣೂರಿಗೆ ವಿಶೇಷ ರೈಲು ಸೌಲಭ್ಯ!
ಸಾಂದರ್ಭಿಕ ಚಿತ್ರ
Image Credit source: PTI

Updated on: Oct 31, 2026 | 8:29 AM

ಮುಖ್ಯಾಂಶಗಳು

  • ದೀಪಾವಳಿ ಪ್ರಯಾಣಿಕರ ದಟ್ಟಣೆ ತಡೆಯಲು ಬೆಂಗಳೂರಿನಿಂದ ವಿಶೇಷ ರೈಲುಗಳ ಘೋಷಣೆ.
  • ಬೆಂಗಳೂರು ಕಂಟೋನ್‌ಮೆಂಟ್‌ ಹಾಗೂ ಎಸ್‌ಎಂವಿಟಿ ಯಿಂದ ತೂತುಕುಡಿ ಮತ್ತು ಕಣ್ಣೂರಿಗೆ ಸಂಚಾರ.
  • ನವೆಂಬರ್ 6 ಹಾಗೂ 7 ರಂದು ವಿಶೇಷ ರೈಲುಗಳ ಕಾರ್ಯಾಚರಣೆ ಆರಂಭ.

ಬೆಂಗಳೂರು, ಅಕ್ಟೋಬರ್ 31: ದೀಪಾವಳಿ ಹಬ್ಬದ ಪ್ರಯುಕ್ತ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿಯಂತ್ರಿಸಲು ನೈಋತ್ಯ ರೈಲ್ವೆಯು ಬೆಂಗಳೂರಿನಿಂದ ತೂತುಕುಡಿ ಮತ್ತು ಕಣ್ಣೂರು ಮಾರ್ಗಗಳಿಗೆ ವಿಶೇಷ ರೈಲುಗಳನ್ನು ಕಾರ್ಯಾಚರಣೆಗೊಳಿಸುವುದಾಗಿ ಘೋಷಿಸಿದೆ. ಹಬ್ಬದ ಸಾಲು ರಜೆಗಳಲ್ಲಿ ತಮ್ಮೂರುಗಳಿಗೆ ತೆರಳುವ ಸಾರ್ವಜನಿಕರಿಗೆ ಈ ವಿಶೇಷ ರೈಲು ಸೇವೆಗಳು ಅತ್ಯಂತ ಸಹಕಾರಿಯಾಗಲಿವೆ.

ಬೆಂಗಳೂರು – ತೂತುಕುಡಿ ವಿಶೇಷ ರೈಲು ವೇಳಾಪಟ್ಟಿ

  • ರೈಲು ಸಂಖ್ಯೆ 06533 ನವೆಂಬರ್ 6 ರ ರಾತ್ರಿ 9.45 ಕ್ಕೆ ಬೆಂಗಳೂರು ಕಂಟೋನ್ಮೆಂಟ್ ನಿಲ್ದಾಣದಿಂದ ಹೊರಟು, ಮರುದಿನ ಅಂದರೆ ನವೆಂಬರ್ 7 ರ ಮಧ್ಯಾಹ್ನ 12.30 ಕ್ಕೆ ತೂತುಕುಡಿ ತಲುಪಲಿದೆ.
  • ರೈಲು ಸಂಖ್ಯೆ 06534 ನವೆಂಬರ್ 7 ರ ಮಧ್ಯಾಹ್ನ 3.30 ಕ್ಕೆ ತೂತುಕುಡಿ​ನಿಂದ ಹೊರಟು, ನವೆಂಬರ್ 8 ರ ಬೆಳಿಗ್ಗೆ 5.30 ಕ್ಕೆ ಬೆಂಗಳೂರು ಕಂಟೋನ್ಮೆಂಟ್ ತಲುಪಲಿದೆ.

ಬೆಂಗಳೂರು – ಕಣ್ಣೂರು ವಿಶೇಷ ರೈಲು ವೇಳಾಪಟ್ಟಿ

  • ರೈಲು ಸಂಖ್ಯೆ 06545 ನವೆಂಬರ್ 7 ರಂದು ರಾತ್ರಿ 12.05 ಕ್ಕೆ (ಮಧ್ಯರಾತ್ರಿ) ಎಸ್‌ಎಂವಿಟಿ ಬೆಂಗಳೂರು (SMVT Bengaluru) ನಿಲ್ದಾಣದಿಂದ ಹೊರಟು ಅಂದೇ ಮಧ್ಯಾಹ್ನ 2 ಗಂಟೆಗೆ ಕಣ್ಣೂರು ತಲುಪಲಿದೆ.
  • ಹಿಂತಿರುಗುವ ಮಾರ್ಗದಲ್ಲಿ, ರೈಲು ಸಂಖ್ಯೆ 06546 ನವೆಂಬರ್ 7 ರಂದು ಸಂಜೆ 6.25 ಕ್ಕೆ ಕಣ್ಣೂರಿನಿಂದ ಹೊರಟು, ನವೆಂಬರ್ 8 ರ ಬೆಳಿಗ್ಗೆ 9.45 ಕ್ಕೆ ಎಸ್‌ಎಂವಿಟಿ ಬೆಂಗಳೂರು ತಲುಪಲಿದೆ.

ಹಬ್ಬದ ಸಮಯದಲ್ಲಿ ಉಂಟಾಗುವ ಸೀಟುಗಳ ಕೊರತೆ ನಿವಾರಣೆ

ಹಬ್ಬದ ಸಮಯದಲ್ಲಿ ಉಂಟಾಗುವ ಸೀಟುಗಳ ಕೊರತೆ ಮತ್ತು ಜನ ದಟ್ಟಣೆಯನ್ನು ನಿವಾರಿಸಲು ರೈಲ್ವೆ ಇಲಾಖೆ ಕೈಗೊಂಡಿರುವ ಈ ಕ್ರಮದಿಂದ ಸಾವಿರಾರು ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಪ್ರಯಾಣಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಹಾಗೂ ಮುಂಗಡ ಕಾಯ್ದಿರಾತಿ ವಿವರಗಳಿಗಾಗಿ ಅಧಿಕೃತ ರೈಲ್ವೆ ವೆಬ್‌ಸೈಟ್ ಅಥವಾ ಆಪ್‌ಗಳನ್ನು ಗಮನಿಸುವಂತೆ ಕೋರಲಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಭಾವನಾ ಹೆಗಡೆ

ಭಾವನಾ ಹೆಗಡೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನವರು. ಬಿಎಸ್ಸಿ ಪದವಿ ಮುಗಿಸಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಡಿಪ್ಲೊಮಾ ಮಾಡಿದ್ದಾರೆ ಪತ್ರಿಕೋದ್ಯಮ ಇವರು ಇಷ್ಟ ಪಟ್ಟು ಆಯ್ದುಕೊಂಡ ಕ್ಷೇತ್ರ. ಟಿವಿ9 ಡಿಜಿಟಲ್​ನಲ್ಲಿ ವೃತ್ತಿ ಜೀವನ ಆರಂಭಿಸಿದ್ದಾರೆ. ರಾಜ್ಯ, ರಾಷ್ಟ್ರಕ್ಕೆ ಸಂಬಂಧಿಸಿದ ಕ್ಷಣಕ್ಷಣದ ಮಾಹಿತಿಗಳನ್ನು ಓದುಗರಿಗೆ ಒದಗಿಸುವ ಆಶಯ ಹೊಂದಿದ್ದಾರೆ.

Read More
Loading...
Unable to load recommendations.
Follow Us