ಮರಳಿ ಯತ್ನವ ಮಾಡು ಉಕ್ತಿಯನ್ನು ಪರಿಶ್ರಮ ಮತ್ತು ಬದ್ಧತೆಯೊಂದಿಗೆ ಪಾಲಿಸಿದ ಬೆಂಗಳೂರಿನ ಯುವಕ ಗೂಗಲ್ ಸಂಸ್ಥೆಯಲ್ಲಿ ನೌಕರಿ ಗಿಟ್ಟಿಸಿಬಿಟ್ಟರು!

ನೌಕರಿಗಳಿಗಾಗಿ ಪ್ರತಿವಾರ ಒಂದು ಲಕ್ಷ ಅರ್ಜಿಗಳು ಗೂಗಲ್ ಸಂಸ್ಥೆಯ ಮುಖ್ಯ ಕಚೇರಿ ತಲುಪುತ್ತವೆ. ಅದರಲ್ಲಿ ಕೇವಲ 144 ಜನ ಮಾತ್ರ ಕಚೇರಿಯಿಂದ ಕರೆ ಸ್ವೀಕರಿಸುತ್ತಾರೆ. ಅದರರ್ಥ ಈ ಕಂಪನಿಯಲ್ಲಿ ನಿಮಗೆ ಕೆಲಸ ಸಿಗುವ ಸಾಧ್ಯತೆ ಶೇಕಡ 1ಕ್ಕಿಂತ ಕಡಿಮೆ.

ಮರಳಿ ಯತ್ನವ ಮಾಡು ಉಕ್ತಿಯನ್ನು ಪರಿಶ್ರಮ ಮತ್ತು ಬದ್ಧತೆಯೊಂದಿಗೆ ಪಾಲಿಸಿದ ಬೆಂಗಳೂರಿನ ಯುವಕ ಗೂಗಲ್ ಸಂಸ್ಥೆಯಲ್ಲಿ ನೌಕರಿ ಗಿಟ್ಟಿಸಿಬಿಟ್ಟರು!
ಅಮ್ಮನೊಂದಿಗೆ ಅಡ್ವಿನ್ ರಾಯ್ ನೆಟ್ಟೊ
Follow us
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Nov 18, 2022 | 12:09 PM

ಬೆಂಗಳೂರು:  ಎಡೆಬಿಡದ ಪ್ರಯತ್ನ, ಗುರಿ ಸಾಧಿಸುವ ಛಲಗಾರಿಕೆಯಿದ್ದರೆ ಬದುಕಿನಲ್ಲಿ ಅಂದುಕೊಂಡಿದನ್ನು ಸಾಧಿಸಬಹುದು ಅನ್ನೋದನ್ನ ನಮ್ಮ ಬೆಂಗಳೂರಿನ ಒಬ್ಬ ಟೆಕ್ಕಿ ಸಾಬೀತು ಮಾಡಿದ್ದಾರೆ. ನಾವು ಚರ್ಚಿಸುತ್ತಿರುವುದು ಇತ್ತೀಚಿಗೆ ಗೂಗಲ್ (Google) ಸಂಸ್ಥೆಯಲ್ಲಿ ನೌಕರಿ ಗಿಟ್ಟಿಸಿದ ಅಡ್ವಿನ್ ರಾಯ್ ನೆಟ್ಟೊ (Advin Roy Netto) ಬಗ್ಗೆ. ಇವತ್ತಿನ ದಿನಗಳಲ್ಲಿ ವಿದೇಶಿ ಮೂಲದ ಟೆಕ್ ಸಂಸ್ಥೆಗಳಲ್ಲಿ (Tech Companies) ನೌಕರಿ ಪಡೆಯುವುದು ಅಷ್ಟು ದೊಡ್ಡ ಸಂಗತಿಯೇನಲ್ಲ. ಆದರೆ, ನೆಟ್ಟೊ ಅವರ ಸಾಧನೆ ಯಾಕೆ ವಿಶಿಷ್ಟ ಅನಿಸುತ್ತದೆ ಅಂದರೆ, ಗೂಗಲ್ ನಂಥ ಬೃಹತ್ ಕಂಪನಿಯಲ್ಲಿ ಉದ್ಯೋಗ ಪಡೆಯಲು ಅವರು ಬರೋಬ್ಬರಿ ಒಂದು ದಶಕ ಕಾಲ ಅವಿರತ ಪ್ರಯತ್ನ ನಡೆಸಿದ್ದರು.

ಹತ್ತು ವರ್ಷಗಳ ಪರಿಶ್ರಮ ಫಲ ನೀಡಿತು!

ನೌಕರಿ ಸಲುವಾಗಿ ಹತ್ತು ವರ್ಷಗಳ ಕಾಲ ಸತತವಾಗಿ ಅರ್ಜಿಗಳನ್ನು ಸಲ್ಲಿಸಿದ ಬಳಿಕ ಗೂಗಲ್ ಕಂಪನಿಯಲ್ಲಿ ನೆಟ್ಟೊಗೆ ಯುಎಕ್ಸ್ ಡಿಸೈನರ್ ಕೆಲಸ ಸಿಕ್ಕಿದೆ. ಲಿಂಕ್ಡೆನ್ ನಲ್ಲಿ ಅವರ ಪ್ರೊಫೈಲ್ ನೋಡಿದ್ದೇಯಾದರೆ, 2007 ರಲ್ಲಿ ಅವರು ಅನಿಮೇಷನ್ ಮತ್ತು ಗ್ರಾಫಿಕ್ ಡಿಸೈನಿಂಗ್ ನಲ್ಲಿ ಪದವಿ ಪಡೆದು ಸರಿಗಮ್ ಲಕ್ಸುರಿ ವಿಲ್ಲಾ ರಿಟ್ರೀಟ್ ನಲ್ಲಿ ವೆಬ್ ಡಿಸೈನರ್ ಆಗಿ ಕೆಲಸಕ್ಕೆ ಸೇರಿದ್ದರು. ತನ್ನ ಮೊದಲ ನೌಕರಿಯಲ್ಲಿ ಒಂದೂ ಕಾಲು ವರ್ಷ ದುಡಿದ ನಂತರ ನೆಟ್ಟೊ ಬಿಲ್ಟ್.ಐಒ ಕಂಪನಿಯನ್ನು ಕ್ರಿಯೇಟಿವ್ ಡಿಸೈನರ್ ಆಗಿ ಸೇರಿದ್ದರು.

ಇಲ್ಲಿ ಕೆಲಸಕ್ಕೆ ಸೇರಿಕೊಂಡ ಬಳಿಕ ಅವರು ಗೂಗಲ್ ಸಂಸ್ಥೆಯಲ್ಲಿ ಕೆಲಸ ಮಾಡುವ ಗುರಿಯಿಟ್ಟುಕೊಂಡು ಅರ್ಜಿ ಸಲ್ಲಿಸಲಾರಂಭಿಸಿದ್ದಾರೆ. ಮುಂದಿನ 12 ವರ್ಷಗಳ ಅವಧಿಯಲ್ಲಿ ಅವರು 7 ಕಂಪನಿಗಳಲ್ಲಿ ಬೇರೆ ಬೇರೆ ಸಾಮರ್ಥ್ಯದಲ್ಲಿ ಕೆಲಸ ಮಾಡಿದ ಅನುಭವ ಪಡೆದು ಅಂತಿಮವಾಗಿ ತನ್ನ ಕನಸಿನ ಕಂಪನಿಯಲ್ಲಿ ಉದ್ಯೋಗ ಪಡೆಯಲು ಸಫಲರಾಗಿದ್ದಾರೆ!

ಸಂತಸವನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ್ದಾರೆ 

ಗೂಗಲ್ ನಲ್ಲಿ ನೌಕರಿ ಗಿಟ್ಟಿಸಿದ ಸಂತಸ ಮತ್ತು ತಮ್ಮ ಕುಟುಂಬ ಸದಸ್ಯರ ಪ್ರತಿಕ್ರಿಯೆಯನ್ನು ನೆಟ್ಟೊ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಅದರ ಜೊತೆಗೆ, ವಿಶ್ವದ ದೊಡ್ಡ ದೊಡ್ಡ ಕಂಪನಿಗಳಲ್ಲಿ ಕೆಲಸ ಮಾಡುವ ಕನಸು ಬೆನ್ನಟ್ಟುವ ಯುವಕರಿಗೆ ಸಲಹೆ ಮತ್ತು ಮಾರ್ಗದರ್ಶನ ಸಹ ನೀಡಿದ್ದಾರೆ. ‘ಸಾಮಾಜಿಕ ಜಾಲತಾಣಗಳಲ್ಲಿ ಸಾಮಾನ್ಯವಾಗಿ ನಾವು ಯಾವುದೇ ಕತೆಯ ಒಳ್ಳೆ ಭಾಗವನ್ನು ಮಾತ್ರ ಆರಿಸಿಕೊಳ್ಳುತ್ತೇವೆ, ಆದರೆ ಅದರ ಹಿಂದಿನ ಪರಿಶ್ರಮವನ್ನು ಕಡೆಗಣಿಸುತ್ತೇವೆ,’ ಎಂದು ನೆಟ್ಟೊ ಇನ್ಸ್ಟಾಗ್ರಾಮ್ ನಲ್ಲಿ ಬರೆದಿದ್ದಾರೆ.

‘ಪ್ರತಿ ವರ್ಷ ವೈಫಲ್ಯ ಎದುರಾದಾಗ ನಾನು ಧೃತಿಗಡದೆ ನನ್ನಿಂದ ಎಲ್ಲಿ ಪ್ರಮಾದವಾಗಿರಬಹುದು ಅಂತ ಯೋಚಿಸುತ್ತಿದ್ದೆ. ಅದಕ್ಕನುಗುಣವಾಗಿ ನನ್ನ ರೆಸ್ಯೂಮೆ ಹಾಗೂ ಪ್ರೊಫೈಲ್ ಗಳಲ್ಲಿ ಬದಲಾವಣೆಗಳನ್ನು ಮಾಡಿ ಪುನಃ ಪ್ರಯತ್ನಿಸುತ್ತಿದ್ದೆ,’ ಎಂದು ತಮ್ಮ 10 ವರ್ಷಗಳ ಪ್ರಯತ್ನಗಳನ್ನು ಜ್ಞಾಪಿಸಿಕೊಳ್ಳುತ್ತಾ ಅವರು ಸಂದೇಶದಲ್ಲಿ ಬರೆದಿದ್ದಾರೆ.

ನೆಟ್ಟೊಯಿಸಂ!

ತನ್ನ ಹಾಗೆ ಕನಸಿಟ್ಟುಕೊಂಡವರಿಗೆ ಅವರು ಮತ್ತಷ್ಟು ಸಲಹೆಗಳನ್ನು ನೀಡಿದ್ದಾರೆ. ‘ನಿಮ್ಮ ಹೆಸರು ಪರಿಗಣನೆಗೆ ಬಂದು ಶಾರ್ಟ್ ಲಿಸ್ಟ್ ಆಗಬೇಕಾದರೆ ಕೆಲಸಕ್ಕಾಗಿ ನಿಮ್ಮಲ್ಲಿರುವ ತುಡಿತವನ್ನು ವ್ಯಕ್ತಪಡಿಸಿ. ಬೇರೆಯವರಿಂದ ಸಹಾಯ ಪಡೆದು ನಿಮ್ಮಿಂದ ಸಾಧ್ಯವಾಗುವ ಸಹಾಯವನ್ನು ಅವರಿಗೆ ಮಾಡಿ. ಚೆನ್ನಾಗಿ ಪರಿಚಯ ಇರುವವರ ಜೊತೆ ನಿಮ್ಮ ಪ್ರೊಫೈಲ್ ಶೇರ್ ಮಾಡಿ ಒಂದು ಅಣಕು ಇಂಟರ್ ವ್ಯೂ ಆಯೋಜಿಸಿಕೊಳ್ಳಿ. ಸಲಹೆಗಳನ್ನು ಅವರಿಂದ ಪಡೆದುಕೊಳ್ಳಿ. ನಿಮಗೆ ಸಮಯ ನೀಡಲು ಜನರಿಗೆ ಸಾಧ್ಯವಾಗಲಿಕ್ಕಿಲ್ಲ. ಯಾಕೆಂದರೆ, ಇವತ್ತಿನ ಯುಗದಲ್ಲಿ ಪ್ರತಿಯೊಬ್ಬರೂ ಬ್ಯೂಸಿಯಾಗಿರುತ್ತಾರೆ. ಹಾಗಂತ ನಿರಾಶರಾಗಬೇಡಿ. ಸಹಾಯ ಕೇಳುವುದನ್ನು, ಸಮಾಲೋಚನೆ ನಡೆಸುವ ಪ್ರಯತ್ನವನ್ನು ಮುಂದುವರಿಸಿ. ನಿಮ್ಮ ಸಹಾಯಕ್ಕೆ ಯಾರಾದರೊಬ್ಬರು ಸಿಕ್ಕೇ ಸಿಗುತ್ತಾರೆ,’ ಎಂದು ಅವರು ಬರೆದಿದ್ದಾರೆ.

ವಾರಕ್ಕೆ 1 ಲಕ್ಷ ಅಪ್ಲಿಕೇಶನ್​ಗಳು!

ಕುತೂಹಲಕಾರಿ ಸಂಗತಿಯೇನು ಗೊತ್ತಾ? ನೌಕರಿಗಳಿಗಾಗಿ ಪ್ರತಿವಾರ ಒಂದು ಲಕ್ಷ ಅರ್ಜಿಗಳು ಗೂಗಲ್ ಸಂಸ್ಥೆಯ ಮುಖ್ಯ ಕಚೇರಿ ತಲುಪುತ್ತವೆ. ಅದರಲ್ಲಿ ಕೇವಲ 144 ಜನ ಮಾತ್ರ ಕಚೇರಿಯಿಂದ ಕರೆ ಸ್ವೀಕರಿಸುತ್ತಾರೆ. ಅದರರ್ಥ ಈ ಕಂಪನಿಯಲ್ಲಿ ನಿಮಗೆ ಕೆಲಸ ಸಿಗುವ ಸಾಧ್ಯತೆ ಶೇಕಡ 1ಕ್ಕಿಂತ ಕಡಿಮೆ. ಹಾಗಾಗಿ ನೆಟ್ಟೊ ಅವರ ಕತೆ ಬೃಹತ್ ಟೆಕ್ ಕಂಪನಿಗಳಾದ ಗೂಗಲ್, ಌಪಲ್, ಅಮೇಜಾನ್ ಕಂಪನಿಗಳಲ್ಲಿ ನೌಕರಿ ಗಿಟ್ಟಿಸುವ ಮಹತ್ವಾಕಾಂಕ್ಷೆ ಇಟ್ಟುಕೊಂಡವರಿಗೆ ಅತ್ಯಂತ ಪ್ರೇರಣಾದಾಯಕವಾಗಿದೆ.

ಜಾಬ್ ಸೆಕ್ಯೂರಿಟಿ ಇಲ್ಲ!

ಆದರೆ, ಪ್ರಸ್ತುತವಾಗಿ ಆರ್ಥಿಕ ಜಂಜಡಗಳಿಂದ ಬಳಲುತ್ತಿರುವ ವಿಶ್ವದಲ್ಲಿ ದೊಡ್ಡ ಟೆಕ್ ಕಂಪನಿಗಳಲ್ಲಿ ನೌಕರಿ ಪಡೆದರೂ ಅದರ ಭಧ್ರತೆ ಬಗ್ಗೆ ಖಾತ್ರಿಯಿರಲಾರದು ಎಂಬ ಅಂಶವನ್ನು ನಾವು ಗಮನಿಸಬೇಕು. ಇತ್ತೀಚಿಗೆ, ಅಮೆಜಾನ್ ಸಂಸ್ಥೆಯು ಎಲ್ಲ ವಿಭಾಗಗಳಲ್ಲಿ ಉದ್ಯೋಗಿಗಳ ಸಂಖ್ಯೆಯಲ್ಲಿ ಕಡಿತಗೊಳಿಸಿದೆ. ಅದರ ಹಾಗೆಯೇ, ಮಿಟಾ ಮತ್ತು ಟ್ಟಿಟ್ಟರ್ ಸಹ ಸಹಸ್ರಾರು ನೌಕರರಿಗೆ ಕೆಲಸದಿಂದ ತೆಗೆದುಹಾಕಿ ತಮ್ಮ ವರ್ಕ್ ಫೋರ್ಸ್ ತಂಡಗಳನ್ನು ಮರುವಿನ್ಯಾಸಗೊಳಿಸಿವೆ.

ಗೂಗಲ್ ಸಹ ಪ್ರಸಕ್ತ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ ನೇಮಕಾತಿ ಮಾಡಿಕೊಳ್ಳುವುದನ್ನು ನಿಲ್ಲಿಸಿತ್ತು. ಈಗಷ್ಟೆ ಪ್ರಮುಖ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುವ ಪ್ರಕ್ರಿಯೆ ಆರಂಭಿಸಿದೆ.

ಚಾಮುಂಡಿ ಬೆಟ್ಟಕ್ಕೆ ಬಂದ ಸುದೀಪ್​; ಕಿಚ್ಚನ ನೋಡಲು ಜನಸಾಗರ
ಚಾಮುಂಡಿ ಬೆಟ್ಟಕ್ಕೆ ಬಂದ ಸುದೀಪ್​; ಕಿಚ್ಚನ ನೋಡಲು ಜನಸಾಗರ
ಸುದೀಪ್ ಇರುವಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುತ್ತಿಗೆ ಪೆಟ್ಟು, ಮಾತಿನ ಏಟು
ಸುದೀಪ್ ಇರುವಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುತ್ತಿಗೆ ಪೆಟ್ಟು, ಮಾತಿನ ಏಟು
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ
3 ಸುಲಭ ಕ್ಯಾಚ್ ಕೈಚೆಲ್ಲಿದ ಜೈಸ್ವಾಲ್: ಆಕ್ರೋಶ ಹೊರಹಾಕಿದ ರೋಹಿತ್ ಶರ್ಮಾ
3 ಸುಲಭ ಕ್ಯಾಚ್ ಕೈಚೆಲ್ಲಿದ ಜೈಸ್ವಾಲ್: ಆಕ್ರೋಶ ಹೊರಹಾಕಿದ ರೋಹಿತ್ ಶರ್ಮಾ
Video: ದಕ್ಷಿಣ ಕೊರಿಯಾದಲ್ಲಿ 170 ಪ್ರಯಾಣಿಕರಿದ್ದ ವಿಮಾನ ಪತನ
Video: ದಕ್ಷಿಣ ಕೊರಿಯಾದಲ್ಲಿ 170 ಪ್ರಯಾಣಿಕರಿದ್ದ ವಿಮಾನ ಪತನ