ಜಯನಗರ ಆಸ್ಪತ್ರೆ ಮೆಡಿಕಲ್ ಸೂಪರ್ಡೆಂಟ್ ಹಾಗೂ ಆರ್ಟಿಇ ಕಾರ್ಯಕರ್ತನಿಂದ ವೈದ್ಯರಿಗೆ ಕಿರುಕುಳ ಆರೋಪ; ಶಾಸಕರ ಬಳಿ ಅಳಲು ತೋಡಿಕೊಂಡ ಸಿಬ್ಬಂದಿ
ಜಯನಗರ ಆಸ್ಪತ್ರೆಯಲ್ಲಿ ಮೆಡಿಕಲ್ ಸೂಪರ್ಡೆಂಟ್ ಆಗಿರುವ ರಾಮಕೃಷ್ಣಪ್ಪ ಹಾಗೂ ಆರ್ಟಿಇ ಕಾರ್ಯಕರ್ತ ದಯಾನಂದ್ ಸಾಗರ್ ಎಂಬುವರು ಸೇರಿ ಆಸ್ಪತ್ರೆಯಲ್ಲಿ ಕೆಲಸ ಮಾಡುವ ವೈದ್ಯರಿಗೆ, ನರ್ಸಿಂಗ್ ಸಿಬ್ಬಂದಿಗಳಿಗೆ ಜೊತೆಗೆ ನರ್ಸಿಂಗ್ ವಿದ್ಯಾರ್ಥಿಗಳಿಗೂ ಕಿರುಕುಳ ಕೊಡ್ತಿದ್ದಾರಂತೆ.
ಬೆಂಗಳೂರು: ಅತ್ಯಾಧುನಿಕ ಉಪಕರಣ, ಸೌಲಭ್ಯಗಳನ್ನು ಹೊಂದಿರುವ ಜೊತೆಗೆ ಉತ್ತಮ ಸೇವೆ ನೀಡುವ ಮೂಲಕ ಇತರೆ ಸರಕಾರಿ ಆಸ್ಪತ್ರೆಗಳಿಗೆ ಮಾದರಿಯಾಗಿದ್ದ ಜಯನಗರ ಜನರಲ್ ಆಸ್ಪತ್ರೆ(Jayanagar General Hospital) ಸದ್ಯ ವೈದ್ಯರು ಹಾಗೂ ಸಿಬ್ಬಂದಿಗಳ ಪಾಲಿಗೆ ನರಕವಾಗಿದೆ. ಆಸ್ಪತ್ರೆಯ ಮೆಡಿಕಲ್ ಸೂಪರ್ಡೆಂಟ್ ಹಾಗೂ ಆರ್ಟಿ ಕಾರ್ಯಕರ್ತನೊಬ್ಬನಿಂದ ಇಡೀ ಆಸ್ಪತ್ರೆ ರಣರಂಗಾವಾಗಿದೆ.
ಇಷ್ಟು ದಿನ ಬಡರೋಗಿಗಳಿಗೆ ಒಳ್ಳೆಯ ಚಿಕಿತ್ಸೆ ಮೂಲಕ ಸುದ್ದಿಯಲ್ಲಿದ್ದ ಜಯನಗರ ಸಾರ್ವಜನಿಕ ಆಸ್ಪತ್ರೆ ಸದ್ಯ ಹೊಸ ಎಡವಟ್ಟಿನಿಂದ ಸುದ್ದಿಯಲ್ಲಿದೆ. ಹೌದು ಜಯನಗರ ಸಾರ್ವಜನಿಕ ಆಸ್ಪತ್ರೆಯಲ್ಲಿ ಕಳೆದೊಂದು ವರ್ಷದಿಂದ ವೈದ್ಯರು, ನರ್ಸಿಂಗ್ ಸಿಬ್ಬಂದಿ ಕೆಲಸಗಾರರಿಗೆ ಇಲ್ಲದ ಕಿರುಕುಳ ಶುರುವಾಗಿದೆಯಂತೆ. ಜಯನಗರ ಸರ್ಕಾರಿ ಆಸ್ಪತ್ರೆಯ ಮೆಡಿಕಲ್ ಸೂಪರ್ಡೆಂಟ್ ರಾಮಕೃಷ್ಣಪ್ಪ ಹಾಗೂ ಆರ್ಟಿಐ ಕಾರ್ಯಕರ್ತ ರಮಾನಂದ್ ಸಾಗರ್ ಎಂಬುವರದ್ದೆ ದರ್ಬಾರ್ ನಿಂದ ವೈದ್ಯರು, ಸಿಬ್ಬಂದಿ ನಿತ್ಯ ಕಿರುಕುಳ ಅನುಭವಿಸುತ್ತಿದ್ದಾರಂತೆ.
ಜಯನಗರ ಆಸ್ಪತ್ರೆಯಲ್ಲಿ ಮೆಡಿಕಲ್ ಸೂಪರ್ಡೆಂಟ್ಆಗಿರುವ ರಾಮಕೃಷ್ಣಪ್ಪ ಹಾಗೂ ಆರ್ಟಿಇ ಕಾರ್ಯಕರ್ತ ದಯಾನಂದ್ ಸಾಗರ್ ಎಂಬುವರು ಸೇರಿ ಆಸ್ಪತ್ರೆಯಲ್ಲಿ ಕೆಲಸ ಮಾಡುವ ವೈದ್ಯರಿಗೆ, ನರ್ಸಿಂಗ್ ಸಿಬ್ಬಂದಿಗಳಿಗೆ ಜೊತೆಗೆ ನರ್ಸಿಂಗ್ ವಿದ್ಯಾರ್ಥಿಗಳಿಗೂ ಕಿರುಕುಳ ಕೊಡ್ತಿದ್ದಾರಂತೆ. ಸುಖಾ ಸುಮ್ಮನೆ ವೈಯಕ್ತಿಕ ನಿಂದನೆ ಸೇರಿದಂತೆ ಇನ್ನಿಲ್ಲದಂತೆ ಕಿರುಕುಳ ಕೊಡ್ತಿದ್ದು ಆಸ್ಪತ್ರೆಯ ವೈದ್ಯರ ತಂಡ ಪರದಾಡುವಂತಾಗಿದೆಯಂತೆ. ಇನ್ನೂ ಆಸ್ಪತ್ರೆಯ ಎಂಎಸ್ ರಾಮಕೃಷ್ಣಪ್ಪ ಆರ್ಟಿಇ ಕಾರ್ಯಕರ್ತ ದಯಾನಂದ ಸಾಗರ ಎಂಬುವರ ಜೊತೆ ಸೇರಿಕೊಂಡು ಆರ್ಟಿಇ ಹೆಸರಿನಲ್ಲಿ ವೈದ್ಯರಿಗೆ ಕಿರುಕುಳ ಕೊಡ್ತಿದ್ದು ವೈದ್ಯರಿಗೆ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡ್ತಿರುವ ಆರೋಪ ಕೇಳಿ ಬಂದಿದೆ.
ಇದನ್ನೂ ಓದಿ: Karnataka Budget 2023: ದೇಶದಲ್ಲೇ ಮೊದಲ ಅಂಗಾಂಗ ಜೋಡಣೆ ಆಸ್ಪತ್ರೆ ಸ್ಥಾಪನೆ, ಸಿದ್ದರಾಮಯ್ಯ ಘೋಷಣೆ
ಸದ್ಯ ಜಯನಗರ ಸರ್ಕಾರಿ ಆಸ್ಪತ್ರೆಯಲ್ಲಿ ಎಂಎಸ್ ರಾಮಕೃಷ್ಣಪ್ಪ ಹಾಗೂ ಆರ್ಟಿಇ ಕಾರ್ಯಕರ್ತ ದಯಾನಂದ್ ಸಾಗರ್ ಇವರು ಆಡಿದ್ದೆ ಆಟ ಮಾಡಿದ್ದೆ ಪಾಠ ಎಂಬುವಂತಾಗಿದ್ದು ಈ ಇಬ್ಬರ ಕಿರುಕುಳಕ್ಕೆ ನೂರಾರು ಸಿಬ್ಬಂದಿ ಕಣ್ಣೀರು ಹಾಕುವಂತಾಗಿದೆ. ರೋಗಿಗಳಿಗೆ ಚಿಕಿತ್ಸೆ ನೀಡಲು ಸಾಧ್ಯವಾಗದೆ ಪರದಾಡುವ ಸ್ಥಿತಿ ಇದೆ ಅಂತಾ ಪರದಾಡುತ್ತಿದ್ದಾರೆ. ಇದರಿಂದ ಜಯನಗರ ಆಸ್ಪತ್ರೆಯಲ್ಲಿ ವೈದ್ಯರಿಗೆ ಬೆಲೆ ಇಲ್ಲದಂತಾಗಿದೆ. ಸದ್ಯ ಜಯನಗರ ಆಸ್ಪತ್ರೆಯ ಬಗ್ಗೆ ಗಂಭೀರ ಆರೋಪ ಬರ್ತಿದ್ದಂತೆ ಸ್ಥಳೀಯ ಶಾಸಕ ಸಿ.ಕೆ. ರಾಮಮೂರ್ತಿ ಆಸ್ಪತ್ರೆಗೆ ಭೇಟಿ ನೀಡಿ ಸಮಸ್ಯೆ ಆಲಿಸಿದ್ರು. ಈ ವೇಳೆ ಜಯನಗರ ಆಸ್ಪತ್ರೆಯ ವೈದ್ಯರು, ನರ್ಸ್ಗಳು, ಸಿಬ್ಬಂದಿಗಳು ಸಾಲು ಸಾಲು ಕಿರುಕುಳಗಳ ಪಟ್ಟಿಯನ್ನೇ ಶಾಸಕರ ಮುಂದೆ ಬಿಚ್ಚಿಟ್ಟರು. ತಮ್ಮ ನೋವುಗಳ ಪಟ್ಟಿಯನ್ನೇ ಶಾಸಕರ ಮುಂದೆ ತೋಡಿಕೊಂಡ್ರು. ಇನ್ನು ಈ ಬಗ್ಗೆ ಮಾತನಾಡಿದ ಶಾಸಕ ರಾಮಮೂರ್ತಿ ಸದ್ಯ ಸಾಕಷ್ಟು ಕಂಪ್ಲೇಟ್ ಬಂದಿದೆ. ಆರೋಗ್ಯ ಸಚಿವರ ಗಮನಕ್ಕೆ ತರ್ತಿನಿ. ಕಲಾಪದಲ್ಲಿಯೂ ಇದನ್ನ ಪ್ರಶ್ನೆ ಮಾಡ್ತೀನಿ ಅಂತಾ ಹೇಳಿದ್ರು.
ಇನ್ನು ಕಳೆದ ತಿಂಗಳ ಹಿಂದೆಯಷ್ಟೇ ಆಸ್ಪತ್ರೆಯ ಸಿಬ್ಬಂದಿಗಳು ಪೊಲೀಸ್ ಠಾಣೆ ಮೆಟ್ಟಿಲೇರಿ ದೂರು ಕೂಡಾ ನೀಡಿದ್ದರು ವೈದ್ಯರು ಸಿಬ್ಬಂದಿಗಳ ಕಂಪ್ಲೇಟ್ ಆಧಾರದ ಮೇಲೆ ಆರ್ಟಿಐ ಕಾಯ್ದೆಯಡಿ ಜಯನಗರ ಸರ್ಕಾರಿ ಆಸ್ಪತ್ರೆಯ ವೈದ್ಯರ ಮತ್ತು ಅಧಿಕಾರಿಗಳ ಮಾಹಿತಿ ಪಡೆದು ಕಿರುಕುಳ ನೀಡಿ, ಕರ್ತವ್ಯಕ್ಕೆ ಅಡ್ಡಿ ಪಡಿಸುತ್ತಿದ್ದ ಆರೋಪದಡಿ ಆರ್ಟಿಐ ಕಾರ್ಯಕರ್ತನನ್ನು ರಮಾನಂದ ಸಾಗರ್ ನನ್ನ ತಿಲಕ್ನಗರ ಪೊಲೀಸರು ಬಂಧಿಸಿದ್ರು. ಇನ್ನು ಆಸ್ಪತ್ರೆಯ ಸಿಬ್ಬಂದಿ ಮಾಡ್ತೀರೊ ಆರೋಪಕ್ಕೆ ಪ್ರತಿಕ್ರಿಯೇ ನೀಡಿರುವ ಎಮ್ ಎಸ್ ರಾಮಕೃಷ್ಣಪ್ಪ ಇದೆಲ್ಲ ಸುಳ್ಳು ಆರೋಪ ನಾನು ಯಾವುದೇ ರೀತಿಯಲ್ಲಿ ಕಿರುಕುಳ ನೀಡಿಲ್ಲ ವೈದ್ಯರು ಹಾಗೂ ಸಿಬ್ಬಂದಿಗಳು ಉದ್ದೇಶ ಪೂರ್ವಕವಾಗಿ ಈ ಆರೋಪ ಮಾಡ್ತೀದ್ದಾರೆ. ಆದ್ರೆ ನಂದೇನು ತಪ್ಪಿಲ್ಲ ಅಂತಿದ್ದಾರೆ.
ಒಟ್ನಲ್ಲಿ ಜನರಿಗೆ ಉಚಿತ, ಒಳ್ಳೆಯ ಚಿಕಿತ್ಸೆ ಮೂಲಕ ಇತರೆ ಆಸ್ಪತ್ರೆಗಳಿಗೆ ಮಾದರಿಯಾಗಿದ್ದ ಜಯನಗರ ಸರ್ಕಾರಿ ಆಸ್ಪತ್ರೆ ಸದ್ಯ ಎಡವಟ್ಟುಗಳಿಂದ ಸುದ್ದಿಯಲ್ಲಿದೆ. ಕೂಡಲೇ ಆರೋಗ್ಯ ಇಲಾಖೆ ಹಾಗೂ ಸಚಿವರು ಮಧ್ಯ ಪ್ರವೇಶ ಮಾಡಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮಕ್ಕೆ ಮುಂದಾಗಬೇಕಿದೆ. ಈ ಎಲ್ಲ ಸಮಸ್ಯೆಗಳಿಗೂ ಬ್ರೇಕ್ ಹಾಕಬೇಕಿದೆ.
ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ