ಕಂಡಕ್ಟರ್, ಡ್ರೈವರ್​ಗಳ ರಕ್ಷಣೆಗಾಗಿ ಗನ್ ಇಟ್ಟುಕೊಳ್ಳಲು ಅನುಮತಿ ನೀಡುವಂತೆ ಬಿಎಂಟಿಸಿ ಎಂಡಿಗೆ ಪತ್ರ

ಬಿಎಂಟಿಸಿ ಎಂಡಿ ರಾಮಚಂದ್ರನ್ ಅವರಿಗೆ ಪತ್ರ ಬರೆದಿರುವ ಬಿಎಂಟಿಸಿಯ ಡ್ರೈವರ್, ಕಂಡಕ್ಟರ್​ಗಳು ಆತ್ಮ ರಕ್ಷಣೆಗಾಗಿ ಗನ್ ಕೇಳಿದ್ದಾರೆ. ಮೊನ್ನೆ ಬಿಎಂಟಿಸಿ ಕಂಡಕ್ಟರ್​ಗೆ ಚಾಕು ಇರಿತದ ಹಿನ್ನೆಲೆಯಲ್ಲಿ ಚಾಲಕ ಮತ್ತು ನಿರ್ವಾಹಕರಿಗೆ ಗನ್ ಲೈಸನ್ಸ್‌ ಪಡೆಯಲು ಅನುಮತಿ ನೀಡುವಂತೆ ಮನವಿ ಮಾಡಿದ್ದಾರೆ.

ಕಂಡಕ್ಟರ್, ಡ್ರೈವರ್​ಗಳ ರಕ್ಷಣೆಗಾಗಿ ಗನ್ ಇಟ್ಟುಕೊಳ್ಳಲು ಅನುಮತಿ ನೀಡುವಂತೆ ಬಿಎಂಟಿಸಿ ಎಂಡಿಗೆ ಪತ್ರ
ಸಾಂದರ್ಭಿಕ ಚಿತ್ರ
Edited By: ಆಯೇಷಾ ಬಾನು

Updated on: Oct 03, 2024 | 2:57 PM

ಬೆಂಗಳೂರು, ಅ.03: ಅ.1ರ ಮಂಗಳವಾರ ಸಂಜೆ 7 ಗಂಟೆ ಸುಮಾರಿಗೆ ವೈಟ್‌ಫೀಲ್ಡ್‌ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಬಿಎಂಟಿಸಿ 13ನೇ ಘಟಕದ ವೋಲ್ವೋ ಬಸ್‌ ನಿರ್ವಾಹಕ ಯೋಗೇಶ್‌ ಎಂಬುವವರಿಗೆ ಪ್ರಯಾಣಿಕನೋರ್ವ ಚಾಕು ಇರಿದಿದ್ದ ಘಟನೆ ನಡೆದಿತ್ತು. ಈ ಘಟನೆ ಬೆನ್ನಲ್ಲೇ ಈಗ ಬಿಎಂಟಿಸಿಯ ಕಂಡಕ್ಟರ್, ಡ್ರೈವರ್​ಗಳು ಬಿಎಂಟಿಸಿ ಎಂಡಿಗೆ ಪತ್ರ ಬರೆದಿದ್ದು ಗನ್ ಇಟ್ಟುಕೊಳ್ಳಲು ಅನುಮತಿ ನೀಡುವಂತೆ ಕೋರಿದ್ದಾರೆ.

ಬಿಎಂಟಿಸಿ ಎಂಡಿ ರಾಮಚಂದ್ರನ್ ಅವರಿಗೆ ಪತ್ರ ಬರೆದಿರುವ ಬಿಎಂಟಿಸಿಯ ಡ್ರೈವರ್, ಕಂಡಕ್ಟರ್​ಗಳು ಆತ್ಮ ರಕ್ಷಣೆಗಾಗಿ ಗನ್ ಕೇಳಿದ್ದಾರೆ. ಮೊನ್ನೆ ಬಿಎಂಟಿಸಿ ಕಂಡಕ್ಟರ್​ಗೆ ಚಾಕು ಇರಿತದ ಹಿನ್ನೆಲೆಯಲ್ಲಿ ಚಾಲಕ ಮತ್ತು ನಿರ್ವಾಹಕರಿಗೆ ಗನ್ ಲೈಸನ್ಸ್‌ ಪಡೆಯಲು ಅನುಮತಿ ನೀಡುವಂತೆ ಮನವಿ ಮಾಡಿದ್ದಾರೆ.

ಮೊನ್ನೆ ಸಂಜೆ ವೈಟ್ ಫೀಲ್ಡ್ ಬಳಿಯ ಐಟಿಪಿಎಲ್ ಬಿಎಂಟಿಸಿ ಬಸ್ ಸ್ಟ್ಯಾಂಡ್ ನಲ್ಲಿ ಬಿಎಂಟಿಸಿ ಕಂಡಕ್ಟರ್ ಯೋಗೇಶ್ ಅವರಿಗೆ ಜಾರ್ಖಂಡ್ ಮೂಲದ ಹರ್ಷ ಸಿನ್ಹಾ ಚಾಕು ಇರಿದಿದ್ದ. ಕಂಡಕ್ಟರ್ ಯೋಗೇಶ್ ಸದ್ಯ ವೈದೇಹಿ ಆಸ್ಪತ್ರೆ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೀಗ ಬಿಎಂಟಿಸಿ ಕಂಡಕ್ಟರ್ ಡ್ರೈವರ್ ಗಳಿಗೆ ಆತ್ಮರಕ್ಷಣೆಗಾಗಿ ಗನ್ ಇಟ್ಟುಕೊಳ್ಳಲು ಅನುಮತಿ ನೀಡುವಂತೆ ಮನವಿ ಮಾಡಲಾಗಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಬೆಚ್ಚಿ ಬೀಳಿಸುವ ಘಟನೆ: BMTC ಕಂಡಕ್ಟರ್​ಗೆ ಚಾಕುವಿನಿಂದ ಇರಿದ ಪ್ರಯಾಣಿಕ

ಎಂಡಿಗೆ ಬರೆದ ಪತ್ರದ ಸಾರಾಂಶ ಹೀಗಿದೆ

ಪ್ರತಿ ದಿನ 24 ಗಂಟೆ ತಮ್ಮ ಜೀವದ ಹಂಗು ತೊರೆದು ಬೃಹತ್ ಬೆಂಗಳೂರು ಮಹಾನಗರದ ಸಂಚಾರಿ ದಟ್ಟಣೆಯಲ್ಲಿ, ಕಲುಷಿತ ವಾಯುಮಾಲಿನ್ಯದಿಂದ ನಿರಂತರ ಕರ್ತವ್ಯ ನಿರ್ವಹಿಸುವ ಚಾಲಕ ಮತ್ತು ನಿರ್ವಾಹಕರು ಮಾನಸಿಕವಾಗಿ ಕುಗ್ಗಿ ಹೋಗಿರುತ್ತಾರೆ. ತಮ್ಮ ಕುಟುಂಬದ ಸದಸ್ಯರೊಂದಿಗೆ ಸಮಯ ಕಳೆಯಲು ಸಾಧ್ಯವಾಗಿರುವುದಿಲ್ಲ. ಆದರೆ, ಸಂಚಾರಿ ದಟ್ಟಣೆಯಲ್ಲಿ ವಾಹನ ಸವಾರರ ಹಾಗೂ ಬಸ್ಸಿನ ಪ್ರಯಾಣಿಕರ ಜೊತೆಯಲ್ಲಿ ಸಣ್ಣ ಸಣ್ಣ ವಿಷಯಗಳಿಗೆ ಗಲಾಟೆಯಾಗಿ ಅವರಿಂದ ಮಾರಣಾಂತಿಕ ಹಲ್ಲೆಗೆ ಒಳಗಾಗಿರುವುದು ಸರ್ವೆ ಸಾಮಾನ್ಯವಾಗಿದೆ. ಸಂಸ್ಥೆಯ ಕನ್ನಡಿಗ ನೌಕರರ ಮೇಲೆ ಅನ್ಯ ರಾಜ್ಯದ ಪ್ರಯಾಣಿಕರಿಂದ ಮಾರಣಾಂತಿಕ ಹಲ್ಲೆ ನಡೆಯುತ್ತಿದೆ. ಉದಾಹಣೆಗೆ ದಿನಾಂಕ:01/10/2024 ರಂದು ಘಟಕ-13 ನಿರ್ವಾಹಕರಿಗೆ ಮಾರಣಾಂತಿಕ ಹಲ್ಲೆ ನೆಡೆದ ಘಟನೆಯೇ ಸಾಕ್ಷಿಯಾಗಿರುತ್ತದೆ. ಆದ್ದರಿಂದ ಇವರುಗಳ ಜೀವ ರಕ್ಷಣೆಗಾಗಿ ಗನ್ ಲೈಸನ್ಸ್ ಪಡೆಯಲು ಅನುಮತಿ ಕೊಡಿಸಬೇಕಾಗಿ ಸಮಸ್ತ ಸಾರಿಗೆ ಸಂಸ್ಥೆಯ ನೌಕರರ ಪರವಾಗಿ ತಮ್ಮಲ್ಲಿ ಮನವಿಮಾಡಿಕೊಳ್ಳುತ್ತೇನೆ ಎಂದು ಬಿಎಂಟಿಸಿ ಕಂಡಕ್ಟರ್ ಕಂ ಡ್ರೈವರ್ ಯೋಗೇಶ್ ಗೌಡ ಅವರು ಪತ್ರ ಬರೆದಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Kiran Surya

ಕಿರಣ್ ಸೂರ್ಯ (Kiran Surya) ಅವರು ಟಿವಿ9 ಕನ್ನಡ (TV9 Kannada) ವಾಹಿನಿಯಲ್ಲಿ ಹಿರಿಯ ವರದಿಗಾರರಾಗಿ (Senior Reporter) ಕಾರ್ಯನಿರ್ವಹಿಸುತ್ತಿದ್ದಾರೆ

Read More
Follow Us