AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bengaluru Accident: ಚಾಲಕನಿಲ್ಲದ ಟ್ರಕ್ ತನ್ನಿಂತಾನೆ ಮುಂದೆಸಾಗಿ ಹಲವು ವಾನಗಳಿಗೆ ಡಿಕ್ಕಿ! ವಿಡಿಯೋ ಇಲ್ಲಿದೆ ನೋಡಿ

ರಸ್ತೆ ಬದಿ ನಿಂತಿದ್ದ ಚಾಲಕರಹಿತ ಟ್ರಕ್​ ಏಕಾಏಕಿ ಮುಂದೆ ಸಾಗಿ ಹಲವು ವಾಹನಗಳಿಗೆ ಡಿಕ್ಕಿ ಹೊಡೆದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಸದ್ಯ ಇದರ ವಿಡಿಯೋ ವೈರಲ್ ಆಗುತ್ತಿದೆ.

Bengaluru Accident: ಚಾಲಕನಿಲ್ಲದ ಟ್ರಕ್ ತನ್ನಿಂತಾನೆ ಮುಂದೆಸಾಗಿ ಹಲವು ವಾನಗಳಿಗೆ ಡಿಕ್ಕಿ! ವಿಡಿಯೋ ಇಲ್ಲಿದೆ ನೋಡಿ
ಬೆಂಗಳೂರಿನಲ್ಲಿ ಹಲವು ವಾಹನಗಳಿಗೆ ಡಿಕ್ಕಿ ಹೊಡೆದ ಟ್ರಕ್
Rakesh Nayak Manchi
|

Updated on:Apr 22, 2023 | 8:09 PM

Share

ಬೆಂಗಳೂರು: ಚಾಲಕ ಅಚಾತುರ್ಯವೋ? ನಿರ್ಲಕ್ಷ್ಯವೋ? ಹ್ಯಾಂಡ್​ಬ್ರೇಕ್ ಹಾಕದೆ ರಸ್ತೆ ಬದಿ ನಿಲ್ಲಿಸಿದ್ದ ಬೃಹತ್ ಟ್ರಕ್​ವೊಂದು ಏಕಾಕಿ ಮುಂದೆ ಸಾಗಿ ಹಲವು ವಾಹನಗಳಿಗೆ ಡಿಕ್ಕಿ ಹೊಡೆದು ಕೊನೆಗೆ ಪಲ್ಪಿ ಹೊಡೆದ ಘಟನೆ ನಗರದ ಕಾಮಾಕ್ಷಿಪಾಳ್ಯದಲ್ಲಿ (Series accident in Bengaluru) ಇಂದು (ಏಪ್ರಿಲ್ 22) ಮುಂಜಾನೆ ನಡೆದಿದೆ. ಕೊಂಚ ಇಳಿಜಾರಾಗಿರುವ ರಸ್ತೆಬದಿಯಲ್ಲಿ ಅಂಗಡಿಯೊಂದರ ಮುಂದೆ ಸಾಮಾಗ್ರಿಗಳನ್ನು ತುಂಬಿದ್ದ ಟ್ರಕ್ ಅನ್ನು ನಿಲ್ಲಿಸಲಾಗಿತ್ತು. ಈ ವೇಳೆ ಹ್ಯಾಂಡ್ ಬ್ರೇಕ್ ಹಾಕದೇ ಚಾಲಕ ಟ್ರಕ್​ನಿಂದ ಕೆಳಗಿಳಿದಿದ್ದನು. ನಂತರ ಮತ್ತೆ ಚಾಲಕ ಟ್ರಕ್ ಬಾಗಿಲು ತೆರೆದು ಒಳಗೆ ಕುಳಿತುಕೊಳ್ಳುವ ಮುನ್ನವೇ ಟ್ರಕ್ ಏಕಾಏಕಿ ಮುಂದೆ ಸಾಗಿದೆ. ಈ ವೇಳೆ ಭೀತಿಗೊಂಡ ಚಾಲಕ ಟ್ರಕ್​ನಿಂದ ಹಾರಿದ್ದಾನೆ.

ಟ್ರಕ್ ಏಕಾಏಕಿ ಮುಂದೆ ಸಾಗಿದ ಹಿನ್ನೆಲೆ ದಿಕ್ಕು ತೋಚದೆ ಟ್ರಕ್​ನಿಂದ ಚಾಲಕ ಹಾರಿದ್ದು, ಟ್ರಕ್ ವೇಗ ಪಡೆದು ಮುನ್ನುಗ್ಗಿ ಹಲವು ವಾಹನಗಳಿಗೆ ಡಿಕ್ಕಿ ಹೊಡೆದು ಕೊನೆಗೆ ಪಲ್ಟಿ ಹೊಡೆದಿದೆ. ಘಟನೆಯಲ್ಲಿ ಎರಡು ಕಾರುಗಳು, ಗೂಡ್ಸ್ ವಾಹನ ಮತ್ತು ನಾಲ್ಕು ದ್ವಿಚಕ್ರ ವಾಹನಗಳು ಹಾನಿಗೊಂಡಿದ್ದು, ಯಾವುದೇ ಸಾವುನೋವುಗಳು ಸಂಭವಿಸಿಲ್ಲ. ಮಾಹಿತಿ ತಿಳಿದ ಕಾಮಾಕ್ಷಿಪಾಳ್ಯ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಲ್ಲದೆ, ಹಾನಿಗೊಳಗಾದ ವಾಹನಗಳನ್ನು ತೆರವುಗೊಳಿಸಿದ್ದಾರೆ.

ಇದನ್ನೂ ಓದಿ: ಚನ್ನಪಟ್ಟಣ: ಬೆಂಗಳೂರು ಮೈಸೂರು ಎಕ್ಸ್​ಪ್ರೆಸ್​ ವೇನಲ್ಲಿ ಭೀಕರ ಅಪಘಾತ; ಐವರ ಸಾವು

ಘಟನೆಯ ದೃಶ್ಯಾವಳಿಗಳು ಸಿಸಿಟಿವಿಗಳಲ್ಲಿ ಸೆರೆಯಾಗಿವೆ. ವಿಡಿಯೋವೊಂದರಲ್ಲಿ ನೋಡುವಂತೆ, ನಾಲ್ಕು ಕಾರುಗಳ ಮುಂದೆ ನಿಂತಿದ್ದ ನಾಯಿಯೊಂದು ವೇಗವಾಗಿ ಓಡಲು ಆರಂಭಿಸುತ್ತದೆ, ಇದೇ ವೇಳೆ ಅತ್ತಿಂದ ಬಂದ ಲಾರಿ ಸಂಚರಿಸುತ್ತಿದ್ದ ಸಣ್ಣ ಗೂಡ್ಸ್ ವಾಹನಕ್ಕೆ ಡಿಕ್ಕಿ ಹೊಡೆದು ಬಳಿಕ ನಿಂತಿದ್ದ ಕಾರೊಂದಕ್ಕೆ ಗುದ್ದಿ ಪಲ್ಟಿ ಹೊಡೆದಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:05 pm, Sat, 22 April 23