AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು ಟ್ರಾಫಿಕ್ ನಿಯಂತ್ರಣಕ್ಕೆ ಡ್ರೋನ್ ಕಣ್ಗಾವಲು; ಎನ್​ಎಂಐಟಿಯ ವಿದ್ಯಾರ್ಥಿಗಳಿಂದ ಹೊಸ ಸಾಫ್ಟ್​​ವೇರ್

ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ಬಗೆಹರಿಸಲು ಒಂದಲ್ಲ ಒಂದು ರೀತಿಯ ಕ್ರಮಗಳನ್ನು ಕೈಗೊಳ್ಳುವುದು, ಹೊಸ ವಿಧಾನಗಳನ್ನು ಅನ್ವೇಷಣೆ ಮಾಡುವುದು ಸದಾ ನಡೆಯುತ್ತಲೇ ಇರುತ್ತದೆ. ಆದರೆ, ಅದಕ್ಕೆ ಪರಿಹಾರ ಮಾತ್ರ ದೊರೆಯುತ್ತಿಲ್ಲ. ಇದೀಗ ಟ್ರಾಫಿಕ್ ನಿಭಾಯಿಸಲು ಬೆಂಗಳೂರಿನ ಕಾಲೇಜೊಂದರ ವಿದ್ಯಾರ್ಥಿಗಳ ತಂಡ ಹೊಸ ಅನ್ವೇಷಣೆ ಮಾಡಿದೆ. ಡ್ರೋನ್ ಸಹಾಯದಿಂದ ಟ್ರಾಫಿಕ್ ನಿಯಂತ್ರಣದ ಹೊಸ ತಂತ್ರಜ್ಞಾನ ಯೋಗಿಕವಾಗಿ ಯಶಸ್ವಿಯಾಗಿದೆ. ಆ ಕುರಿತ ವಿವರ ಇಲ್ಲಿದೆ.

ಬೆಂಗಳೂರು ಟ್ರಾಫಿಕ್ ನಿಯಂತ್ರಣಕ್ಕೆ ಡ್ರೋನ್ ಕಣ್ಗಾವಲು; ಎನ್​ಎಂಐಟಿಯ ವಿದ್ಯಾರ್ಥಿಗಳಿಂದ ಹೊಸ ಸಾಫ್ಟ್​​ವೇರ್
ಬೆಂಗಳೂರು ಟ್ರಾಫಿಕ್ ನಿಯಂತ್ರಣಕ್ಕೆ ಡ್ರೋನ್ ಕಣ್ಗಾವಲು
Vinayak Hanamant Gurav
| Updated By: Ganapathi Sharma|

Updated on: Jun 21, 2024 | 8:06 AM

Share

ಬೆಂಗಳೂರು, ಜೂನ್ 21: ಬೆಂಗಳೂರಿನಲ್ಲಿ ಎಲ್ಲಿ ನೋಡಿದರೂ ಟ್ರಾಫಿಕ್ ಜಾಮ್ (Bengaluru Traffic Jam) ಸಹಜ. ಈ ಟ್ರಾಫಿಕ್ ನಿಯಂತ್ರಿಸುವುದು ಪೊಲೀಸ್ ಇಲಾಖೆಗೆ ದೊಡ್ಡ ತಲೆ ನೋವು. ಇದೀಗ ನಗರದ ಟ್ರಾಫಿಕ್ ನಿಭಾಯಿಸಲು ಬೆಂಗಳೂರಿನ (Bengaluru) ಕಾಲೇಜೊಂದರ ವಿದ್ಯಾರ್ಥಿಗಳ ತಂಡ ಹೊಸ ಅನ್ವೇಷಣೆಯೊಂದನ್ನು ಮಾಡಿದೆ. ಡ್ರೋನ್ ಕಣ್ಗಾವಲು (Drone surveillance) ಮೂಲಕ ಟ್ರಾಫಿಕ್ ಸಮಸ್ಯೆ ನಿಭಾಯಿಸಲು ನಿಟ್ಟೆ ಮೀನಾಕ್ಷಿ ಇನ್ಸ್​​ಟಿಟ್ಯೂಟ್ ಆಫ್ ಟೆಕ್ನಾಲಜಿ ಸಂಸ್ಥೆಯ (NMIT) ಏರೋನಾಟಿಕ್ಸ್ ವಿಭಾಗದ 40 ವಿದ್ಯಾರ್ಥಿಗಳ ತಂಡ ಸಾಫ್ಟ್​​ವೇರ್ ಅಭಿವೃದ್ಧಿ ಮಾಡಿದೆ. ಡ್ರೋನ್‌ಗೆ ಅಳವಡಿಸಿದ ಕ್ಯಾಮರಾ ಮೂಲಕ ಟ್ರಾಫಿಕ್ ಕಂಟ್ರೋಲ್ ರೂಮ್‌ಗೆ ಇನ್ಪುಟ್ ಕೊಡುವ ಮೂಲಕ ನಗರದಲ್ಲಿ ಟ್ರಾಫಿಕ್ ಕಂಟ್ರೋಲ್ ಮಾಡಬಹುದಾದಂತಹ ಸಾಫ್ಟವೇರ್ ಅನ್ನು ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿದ್ದಾರೆ.

ಡಿಸಾಲ್ಟ್ ಸಿಸ್ಟಮ್ಸ್ ಮತ್ತು ಲಾ ಫೌಂಡೆಶನ್ ಸಹಯೋಗದೊಂದಿಗೆ ನಿಟ್ಟೆ ಮೀನಾಕ್ಷಿ ಇನ್ಸ್​​ಟಿಟ್ಯೂಟ್ ಆಫ್ ಟೆಕ್ನಾಲಜಿ ವಿದ್ಯಾರ್ಥಿಗಳು ಸ್ವಾರ್ನ್ ಡ್ರೋನ್ ಟೆಕ್ನಾಲಜಿ ಮೂಲಕ ಟ್ರಾಫಿಕ್, ಜಿಕೆವಿಕೆಯ ಹಿರಿಯ ಅಧಿಕಾರಿಗಳ‌ ಮುಂದೆ ಪ್ರಾಯೋಗಿಕವಾಗಿ ಡ್ರೋನ್ ಹಾರಾಟ ನಡೆಸಿ ತೋರಿಸಿದ್ದಾರೆ. ಇದು ಯಶಸ್ವಿ ಆಗಿದೆ.

ಹೇಗೆ ಕಾರ್ಯನಿರ್ವಹಿಸುತ್ತದೆ?

ಒಂದಕ್ಕಿಂತ ಹೆಚ್ಚಿನ ಡ್ರೋನ್​​ಗಳು ಏಕಕಾಲದಲ್ಲಿ ಸ್ವಯಂ ಚಾಲಿತವಾಗಿ ಕೆಲಸ ಮಾಡುತ್ತವೆ. ಎಐ (ಆರ್ಟಿಫಿಷಿಯಲ್ ಇಂಟಲಿಜೆನ್ಸ್) ಎಂಲ್ (ಮಷಿನ್ ಲರ್ನಿಂಗ್) ಮೂಲಕ ಸಾಫ್ಟ್​​​ವೇರ್ ಅಭಿವೃದ್ಧಿಪಡಿಸಲಾಗಿದ್ದು, ಪ್ರಮುಖವಾಗಿ ಮಾಸ್ಟರ್ ಡ್ರೋನ್​​ಗೆ ಸ್ಲೇವ್ ಡ್ರೋನ್​​​ಗಳು ಕೊಡುವ ಮಾಹಿತಿಯನ್ನು ಗ್ರೌಂಡ್ ಸ್ಟೇಷನ್‌ಗೆ ಮಾಸ್ಟರ್ ಡ್ರೋನ್ ಮಾಹಿತಿ ಕಳಿಹಿಸುತ್ತದೆ. ಟ್ರಾಫಿಕ್ ಜೊತೆಗೆ ಕೃಷಿ ಇಲಾಖೆ ಸಂಬಂಧಿಸಿದಂತೆ ಕೆಲಸಗಳನ್ನೂ ಈ ತಂತ್ರಜ್ಞಾನದಿಂದ ಮಾಡಬಹುದಾಗಿದೆ. ಮುಂದಿನ ದಿನಗಳಲ್ಲಿ ಬೇರೆ ಬೇರೆ ಕ್ಷೇತ್ರಗಳಲ್ಲಿ ಇದರ ಬಳಕೆ ಸಾಧ್ಯವಾಗಲಿದ್ದು, ತುರ್ತು ಸಂದರ್ಭಗಳಲ್ಲೂ ಈ ಸ್ವಾರ್ನ್ ಡ್ರೋನ್ ಬಳಕೆ ಮಾಡಿಕೊಳ್ಳಬಹುದಾಗಿದೆ.

ಇದನ್ನೂ ಓದಿ: ಬೆಂಗಳೂರು ಟ್ರಾಫಿಕ್ ಪರಿಹಾರಕ್ಕೆ ಸುರಂಗ ಮಾರ್ಗ: ಎಲ್ಲೆಲ್ಲಿ ಹಾದುಗೋಗಲಿದೆ? ಎಂಟ್ರಿ – ಎಕ್ಸಿಟ್ ವಿವರ ಇಲ್ಲಿದೆ ನೋಡಿ

ಸ್ವಾರ್ನ್ ಡ್ರೋನ್ ಟೆಕ್ನಾಲಜಿ ಮೂಲಕ ಬೆಂಗಳೂರು ಟ್ರಾಫಿಕ್ ಕಂಟ್ರೊಲ್‌ಗೆ ವಿದ್ಯಾರ್ಥಿಗಳು ಮಾಡಿರುವ ಪ್ಲ್ಯಾನ್ ಪ್ರಾಯೋಗಿಕವಾಗಿ ಯಶಸ್ವಿಯಾಗಿದ್ದು, ಮುಂದಿನ ದಿನಗಳಲ್ಲಿ ಈ ತಂತ್ರಜ್ಞಾನ ಹೇಗೆ ಟ್ರಾಫಿಕ್ ಕಂಟ್ರೊಲ್ ಮಾಡಲಿದೆ ಎಂಬುದನ್ನು ಕಾದು ನೋಡಬೇಕು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ