ಎಣ್ಣೆ ಏಟಲ್ಲಿ ಕ್ಯಾಬ್​​ಗೆ ಸ್ಕೂಟಿ ಗುದ್ದಿ ಯುವತಿಯರ ರಂಪಾಟ: ಸ್ಥಳೀಯರ ಜೊತೆಗೂ ಕಿರಿಕ್​​

ಬೆಂಗಳೂರಿನ ಹುಳಿಮಾವು ಬಳಿ ಮದ್ಯದ ಅಮಲಿನಲ್ಲಿ ಯುವತಿಯರು ಸ್ಕೂಟಿಯಿಂದ ಕ್ಯಾಬ್‌ಗೆ ಡಿಕ್ಕಿ ಹೊಡೆದು ರಂಪಾಟ ಮಾಡಿದ್ದಾರೆ. ಚಾಲಕ ಪ್ರಶ್ನಿಸಿದಾಗ ಹಲ್ಲೆ ಮಾಡಲು ಯತ್ನಿಸಿ, ಸ್ಥಳೀಯರ ಜೊತೆ ಕಿರಿಕ್ ಮಾಡಿದ್ದಾರೆ. ಸಾರ್ವಜನಿಕರ ಮಧ್ಯಪ್ರವೇಶದ ನಂತರ ಪೊಲೀಸರು ಸ್ಥಳಕ್ಕಾಗಮಿಸಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ. ಈ ಘಟನೆ ಸಂಬಂಧ ಇಬ್ಬರು ಯುವತಿಯರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಎಣ್ಣೆ ಏಟಲ್ಲಿ ಕ್ಯಾಬ್​​ಗೆ ಸ್ಕೂಟಿ ಗುದ್ದಿ ಯುವತಿಯರ ರಂಪಾಟ: ಸ್ಥಳೀಯರ ಜೊತೆಗೂ ಕಿರಿಕ್​​
ಯುವತಿಯರ ಕಿರಿಕ್​
Image Credit source: Tv9 Kannada
Edited By:

Updated on: Feb 08, 2026 | 8:05 AM

ಬೆಂಗಳೂರು, ಫೆಬ್ರವರಿ 08: ಮದ್ಯದ ಅಮಲಿನಲ್ಲಿ ಕಾರು, ಬೈಕ್​ಗಳಿಗೆ ದ್ವಿಚಕ್ರ ವಾಹನ ಗುದ್ದಿ ಯುವತಿಯರು ಕಿರಿಕ್ ಮಾಡಿರುವ ಘಟನೆ ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯ ಹುಳಿಮಾವು ಬಳಿ ನಡೆದಿದೆ. ಕ್ಯಾಬ್ ಡ್ರೈವರ್ ಜೊತೆ ವಾಗ್ವಾದ ನಡೆಸಿ ಆತನ ಮೇಲೆ ಹಲ್ಲೆ ನಡೆಸಲು ಉತ್ತರ ಭಾರತೀಯ ಯುವತಿಯರು ಯತ್ನಿಸಿದ್ದು, ಪ್ರಶ್ನಿಸಿದ ಜನರ ಜೊತೆಗೂ ಯುವತಿಯರು ಅಸಭ್ಯವಾಗಿ ವರ್ತಿಸಿದ್ದಾರೆ. ಕೂಡಲೇ ಸಾರ್ವಜನಿಕರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳ್ಕೆ ಬಂದರೂ ಯುವತಿಯರ ಹೈಡ್ರಾಮಾ ಮಾತ್ರ ನಿಂತಿಲ್ಲ.

ಕೈಗೆ ಚೈನ್ ಸುತ್ತಿಕೊಂಡು ಹಲ್ಲೆ ಆರೋಪ

ಸ್ನೇಹಿತರ ಜೊತೆಗೆ ಖಾಸಗಿ ಹೋಟೆಲ್​ಗೆ ಬಂದಿದ್ದ ಜೆ.ಪಿ.ನಗರ ಹಾಗೂ ಕೋರಮಂಗಲದದ ಇಬ್ಬರು ಯುವತಿಯರು ವಾಪಸ್ ಹೋಗುವಾಗ ಹಿಂದಿನಿಂದ ಕ್ಯಾಬ್​ಗೆ ಸ್ಕೂಟಿ ಡಿಕ್ಕಿ ಹೊಡೆದಿದ್ದಾರೆ.  ಯುವತಿಯರನ್ನು ಕ್ಯಾಬ್ ಚಾಲಕ ಅಹ್ಮದ್ ಪ್ರಶ್ನೆ ಮಾಡಿದ್ದಕ್ಕೆ, ಆತನಿಗೆ ನಿಂದಿಸಿ ಎಸ್ಕೇಪ್ ಆಗಲು ಯತ್ನಿಸಿದ್ದ ಯುವತಿಯರನ್ನು ಸ್ಥಳೀಯರು ತಡೆದಿದ್ದಾರೆ. ಈ ವೇಳೆ ಕೈಗೆ ಚೈನ್ ಸುತ್ತಿಕೊಂಡು ಕ್ಯಾಬ್ ಚಾಲಕನ ಮೇಲೆ ಹಲ್ಲೆ ನಡೆಸಿದ್ದಲ್ಲದೆ, ಅಸಭ್ಯ ಸನ್ನೆ ತೋರಿಸಿ ನಿಂದನೆ ನಡೆಸಿರುವ ಆರೋಪ ಕೇಳಿಬಂದಿದೆ. ಬಳಿಕ ಇಬ್ಬರು ಯುವತಿಯರನ್ನು ಹಿಡಿದು ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದ್ದು, ಲೀಸಾ ಮತ್ತು ಮ್ಯಾಥ್ಯೂ ಎಂಬ ಯುವತಿಯರ ವಿರುದ್ಧ ಹುಳಿಮಾವು ಪೊಲೀಸ್ ಠಾಣೆಯಲ್ಲಿ ಎಫ್​ಐಆರ್​ ದಾಖಲಾಗಿದೆ.

ಇದನ್ನೂ ಓದಿ: ಗ್ಯಾಸ್​​ ಗೀಸರ್​​ ಲೀಕ್​​ ಆಗಿ ಪತಿ ಸಾವು; ವಿಷಯ ತಿಳಿದು ಪತ್ನಿಯೂ ಆತ್ಮಹತ್ಯೆ!

‘ಕೀ ತೆಗೆಯಲು ಹೋದಾಗ ಹಲ್ಲೆ’

ಇನ್ನು ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಕ್ಯಾಬ್ ಚಾಲಕ ಅಹ್ಮದ್, ಕಸ್ಟಮರ್​​ ಪಿಕ್​​ಅಪ್​​ಗೆಂದು ತೆರಳುತ್ತಿದ್ದ ವೇಳೆ ಹಿಂದಿನಿಂದ ಬಂದು ಸ್ಕೂಟಿನ ಕ್ಯಾಬ್​​ಗೆ ಟಚ್​​ ಮಾಡಿದ್ದಾರೆ. ಈ ವೇಳೆ ಗಾಡಿಗೆ ಡ್ಯಾಮೇಜ್ ಆಗಿದ್ದನ್ನ ಕಟ್ಟಿಕೊಡಿ ಎಂದು ಅವರ ಬಳಿ ಕೇಳಿದ್ದೇನೆ. ಆ ಸಂದರ್ಭದಲ್ಲಿ ಅವರು ಗಾಡಿ ಸ್ಟಾರ್ಟ್ ಮಾಡಿಕೊಂಡು ಹೋಗೋಕೆ ನೋಡಿದ್ದು, ಕೂಡಲೇ ಸ್ಥಳೀಯರೆಲ್ಲ ಸೇರಿ ಅವರನ್ನ ಹಿಡಿದುಕೊಂಡಿದ್ದಾರೆ. ನಾನು ಕೀ ತೆಗೆಯಲು ಹೋದಾಗ ನನ್ನ ಮೇಲೆ ಹಲ್ಲೆ ಮಾಡಿದ್ದು, ಚೈನ್ ಸುತ್ತಿಕೊಂಡು ಮುಖ, ಕೈ, ಬೆನ್ನಿನ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ಸ್ಥಳೀಯರೆಲ್ಲ ಸೇರಿ ನನಗೆ ಸಪೋರ್ಟ್​​ ಮಾಡಿದ್ದು, ಘಟನೆ ಬಗ್ಗೆ ದೂರು ನೀಡಿರೋದಾಗಿ ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 8:02 am, Sun, 8 February 26

Follow Us