ಶಾಸಕ ಜಮೀರ್ ಆಪ್ತ ಮುಜಾಹಿದ್ ಮನೆ ಮೇಲೂ ಇಡಿ ದಾಳಿ

ಶಾಸಕ ಜಮೀರ್ ಆಪ್ತ ಮುಜಾಹಿದ್ ಮನೆ ಮೇಲೂ ಇಡಿ ದಾಳಿ
ಮುಜಾಹಿದ್- ಜಮೀರ್ (ಸಂಗ್ರಹ ಚಿತ್ರ)

ಜಮೀರ್ ಆಪ್ತವಲಯದಲ್ಲಿ ಪ್ರಮುಖನಾಗಿರುವ ಮುಜಾಹಿದ್ ಅವರ ಬೆಂಗಳೂರಿನ ಫ್ರೇಜರ್ಟೌನ್ ಎಂ.ಎಂ.ಸ್ಟ್ರೀಟ್ ನಲ್ಲಿರುವ ಮನೆಯಲ್ಲಿ ಇಡಿ ಅಧಿಕಾರಿಗಳು ಶೋಧ ನಡೆಸಿದ್ದಾರೆ.

TV9kannada Web Team

| Edited By: Rashmi Kallakatta

Aug 05, 2021 | 9:08 PM

ಬೆಂಗಳೂರು: ಶಾಸಕ ಜಮೀರ್ ಆಪ್ತ ಮುಜಾಹಿದ್ ಮನೆ ಮೇಲೂ ಗುರುವಾರ ಇಡಿ ದಾಳಿ ನಡೆದಿದೆ. ಜಮೀರ್ ಆಪ್ತವಲಯದಲ್ಲಿ ಪ್ರಮುಖನಾಗಿರುವ ಮುಜಾಹಿದ್ ಅವರ ಬೆಂಗಳೂರಿನ ಫ್ರೇಜರ್ ಟೌನ್ ಎಂ.ಎಂ.ಸ್ಟ್ರೀಟ್ ನಲ್ಲಿರುವ ಮನೆಯಲ್ಲಿ ಇಡಿ ಅಧಿಕಾರಿಗಳು ಶೋಧ ನಡೆಸಿದ್ದಾರೆ. ಮುಜಾಹಿದ್ ಈ ಹಿಂದೆ ಬಿಬಿಎಂಪಿ ಚುನಾವಣೆಯಲ್ಲಿ ಶಿವಾಜಿನಗರ ವಾರ್ಡ್ ನಿಂದ ಸ್ಪರ್ಧಿಸಿ ಪರಾಭವಗೊಂಡಿದ್ದು, ಬಿಬಿಎಂಪಿ ಮುಂದಿನ ಚುನಾವಣೆಗೆ ಸ್ಪರ್ಧೆಗೆ ಸಿದ್ಧತೆ ನಡೆಸುತ್ತಿದ್ದರು.

ಫ್ರೇಜರ್ಟೌನ್ ವಾರ್ಡ್ ಅಭ್ಯರ್ಥಿ ಎಂದು ಬಿಂಬಿತವಾಗಿದ್ದರು. ಮುಜಾಹಿದ್ ವಿರುದ್ಧ ಮನ್ಸೂರ್ ಖಾನ್ಗೆ ನೆರವು ಆರೋಪವಿದೆ. ಮನ್ಸೂರ್ ದೇಶ ಬಿಡುವಾಗ ಏರ್ಪೋರ್ಟ್ವರೆಗೆ ಮುಜಾಹಿದ್ ಪ್ರಯಾಣ ಮಾಡಿದ್ದರು. ಎಸ್ ಐಟಿ ಮುಜಾಹಿದ್ ನ್ನು  ವಶಕ್ಕೆ ಪಡೆದು ವಿಚಾರಣೆ ನಡೆಸಿತ್ತು.

ಶಾಸಕ ಜಮೀರ್ ಅಹ್ಮದ್ ಸಹೋದರನನ್ನು​ ಇಡಿ ಅಧಿಕಾರಿಗಳ ವಶಕ್ಕೆ ಪಡೆದು ಬಿಡುಗಡೆ

ಶಾಸಕ ಜಮೀರ್ ಅಹ್ಮದ್ ಮನೆಯಲ್ಲಿ ಸತತ 11 ಗಂಟೆಗಳ ಪರಿಶೀಲನೆ ನಡೆಸಿದ ಇ.ಡಿ ಅಧಿಕಾರಿಗಳು ಅವರ ಸಹೋದರ ಬಿ.ಝಡ್. ಶಕೀಲ್ ಅಹ್ಮದ್ ಖಾನ್​ರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಶಾಸಕ ಜಮೀರ್ ಅಹ್ಮದ್‌ ಖಾನ್‌ ಅವರ 3ನೇ ತಮ್ಮ ಶಕೀಲ್ ಅಹ್ಮದ್ ಖಾನ್ ಆಗಿದ್ದು, ಇ.ಡಿ ಅಧಿಕಾರಿಗಳು ಅವರನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.

ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್‌ಗೆ ಇ.ಡಿ. ಶಾಕ್: ದೆಹಲಿಯಿಂದ ಬಂದಿರುವ 45  ಇ.ಡಿ.  (ED) ಅಧಿಕಾರಿಗಳ ತಂಡ ಶಾಸಕ ಜಮೀರ್ ಅಹಮದ್​ ನಿವಾಸಗಳ ಮೇಲೆ ದಾಳಿ ನಡೆಸಿದೆ. ವಸಂತನಗರದಲ್ಲಿರುವ ಜಮೀರ್ ಹಳೇ ನಿವಾಸ, ಬಂಬೂ ಬಜಾರ್ ನ ನಿವಾಸ, ಕಲಾಸಿಪಾಳ್ಯದ ನ್ಯಾಷನಲ್ ಟ್ರಾವೆಲ್ಸ್ ಕಚೇರಿ, ಸದಾಶಿವನಗರದ ಜಮೀರ್ ಆಪ್ತನ ನಿವಾಸ ಹಾಗೂ ಜಮೀರ್ ಪಿ.ಎ ಮನೆ ಸೇರಿ 6 ಕಡೆ ದಾಳಿ ನಡೆದಿದೆ.

ಜಮೀರ್ ಅಹ್ಮದ್ ನಿವಾಸ, ಕಚೇರಿ, ಫ್ಲ್ಯಾಟ್‌ನಲ್ಲಿ ಇ.ಡಿ. ಅಧಿಕಾರಿಗಳು ತಂಡೋಪಾದಿಯಲ್ಲಿ ದಾಖಲೆಗಳ ಪರಿಶೀಲನೆ, ಶೋಧ ನಡೆಸುತ್ತಿದ್ದಾರೆ. ಜಮೀರ್ ಅಹ್ಮದ್ ಗೆ ಸೇರಿದ ಮನೆ, ಯುಬಿ ಸಿಟಿಯಲ್ಲಿರುವ ಫ್ಲ್ಯಾಟ್, ನ್ಯಾಷನಲ್ ಟ್ರಾವೆಲ್ಸ್ ಕಚೇರಿ ಮೇಲೆ ದಾಳಿ ಮಾಡಲಾಗಿದೆ.

ಇದನ್ನೂ ಓದಿ: ಜಮೀರ್ ನಿವಾಸದ ಮುಂದೆ ಬೆಂಬಲಿಗರ ಕಣ್ಣೀರು; ಶಿವಮೊಗ್ಗದಲ್ಲಿ ಪ್ರತಿಭಟನೆ

‘ನಿಮ್ಮ ಮನೆ ವಾಚ್‌ಮನ್ ಮೇಲೆ ಇ.ಡಿ ದಾಳಿಯಾಗಿದೆ ಸರ್’ ಅಂದಿದ್ದಕ್ಕೆ ಬೆಚ್ಚಿಬಿದ್ದ ಮಾಜಿ ಸಿಎಂ ಯಡಿಯೂರಪ್ಪ!

Follow us on

Related Stories

Most Read Stories

Click on your DTH Provider to Add TV9 Kannada