ಇಂಜಿನಿಯರಿಂಗ್ ಸೀಟ್​ ಬ್ಲಾಕಿಂಗ್​​ ದಂಧೆ: ಕೋಟ್ಯಾಂತರ ರೂ. ಹಣ, ಮಹತ್ವದ ದಾಖಲೆಗಳು ಇಡಿ ವಶಕ್ಕೆ

ಬೆಂಗಳೂರಿನ ಬಿಎಂಎಸ್ ಕಾಲೇಜು ಸೇರಿದಂತೆ 17 ಕಡೆ ಜಾರಿ ನಿರ್ದೇಶನಾಲಯ ದಾಳಿ ನಡೆಸಿತ್ತು. ಇಂಜಿನಿಯರಿಂಗ್ ಸೀಟ್ ಬ್ಲಾಕಿಂಗ್ ದಂಧೆಗೆ ಸಂಬಂಧಿಸಿದಂತೆ ಈ ದಾಳಿ ನಡೆದಿದ್ದು, 1.37 ಕೋಟಿ ರೂ. ನಗದು ಮತ್ತು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. 2021-22ರಲ್ಲಿ ನಡೆದ ಅಕ್ರಮ ಸೀಟ್ ಬ್ಲಾಕಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಎಂಎಸ್ ಟ್ರಸ್ಟ್ ವಿರುದ್ಧ ಈಗಾಗಲೇ ಪ್ರಕರಣ ದಾಖಲಾಗಿತ್ತು.

ಇಂಜಿನಿಯರಿಂಗ್ ಸೀಟ್​ ಬ್ಲಾಕಿಂಗ್​​ ದಂಧೆ: ಕೋಟ್ಯಾಂತರ ರೂ. ಹಣ, ಮಹತ್ವದ ದಾಖಲೆಗಳು ಇಡಿ ವಶಕ್ಕೆ
ಇಡಿ
Edited By:

Updated on: Jun 28, 2025 | 9:53 PM

ಬೆಂಗಳೂರು, ಜೂನ್​ 28: ಇಂಜಿನಿಯರಿಂಗ್ ಅಕ್ರಮ ಸೀಟ್ ಬ್ಲಾಕಿಂಗ್ (Seat Blocking) ದಂಧೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ (ED) ಅಧಿಕಾರಿಗಳು ಬೆಂಗಳೂರಿನ ಬಿಎಂಎಸ್ ಕಾಲೇಜು (BMS College) ಸೇರಿಂದತೆ 17 ಕಡೆ ದಾಳಿ ಮಾಡಿದ್ದ ವೇಳೆ 1.37 ಕೋಟಿ ನಗದು, ಮಹತ್ವದ ದಾಖಲೆ ಪತ್ತೆಯಾಗಿದ್ದು, ವಶಕ್ಕೆ ಪಡೆದುಕೊಂಡಿದ್ದಾರೆ. ಇಡಿ ಅಧಿಕಾರಿಗಳು ಜೂ.25 ಮತ್ತು 26ರಂದು ಆಕಾಶ್ ಇನ್ಸ್​ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ & ಟೆಕ್ನಾಲಜಿ, ನ್ಯೂ ಹಾರಿಜನ್ ಕಾಲೇಜ್ ಆಫ್ ಇಂಜಿನಿಯರಿಂಗ್, ಬಿಎಂಎಸ್ ಕಾಲೇಜು ಮತ್ತು ಕಾಲೇಜಿಗೆ ಸಂಬಂಧಿಸಿದವರ ಮನೆ ಸೇರಿದಂತೆ 17 ಸ್ಥಳಗಳಲ್ಲಿ ದಾಳಿ ಮಾಡಿದ್ದರು.

ಶೈಕ್ಷಣಿಕ ಸಲಹಾ ಸೇವೆಗಳಲ್ಲಿ ತೊಡಗಿರುವ ಕೆಲವು ಸಂಸ್ಥೆಗಳು, ಕೆಲವು ಏಜೆಂಟ್​ರ ಮನೆ ಮತ್ತು ಕಚೇರಿಗಳಲ್ಲಿ ಶೋಧ ನಡೆಸಿದ್ದರು. ಶೋಧ ಕಾರ್ಯ ವೇಳೆ ವೃತ್ತಿಪರ ಕೋರ್ಸ್‌ಗಳಲ್ಲಿ ಪ್ರವೇಶ ಪ್ರಕ್ರಿಯೆಯಲ್ಲಿ ನಡೆದ ಸೀಟ್ ಬ್ಲಾಕ್​ಗೆ ಮತ್ತು ಹಣದ ಬಳಕೆಗೆ ಸಂಬಂಧಿಸಿದ ಸಾಕ್ಷಿಗಳು ಪತ್ತೆಯಾಗಿವೆ.

ಇದನ್ನೂ ಓದಿ
ಪಿಯುಸಿಯಲ್ಲಿ ಫೇಲ್​​ ಆಗಿದ್ದ ವಿದ್ಯಾರ್ಥಿನಿ ಮೊದಲ ಪ್ರಯತ್ನದಲ್ಲೇ UPSCಪಾಸ್
SSLC ಫಲಿತಾಂಶ ಕಡಿಮೆ ಬಂದರೆ ಶಿಕ್ಷಕರ ವಾರ್ಷಿಕ ವೇತನ ಬಡ್ತಿಗೆ ತಡೆ!
UPSC ಫಲಿತಾಂಶ: ಹಾವೇರಿ ವೈದ್ಯನಿಗೆ 41ನೇ ರ‍್ಯಾಂಕ್
ಶಾಲಾ ಶುಲ್ಕ ಆಯ್ತು, ಇದೀಗ ಪಠ್ಯ ಪುಸ್ತಕಗಳ ಬೆಲೆ ಶೇ 10 ಏರಿಕೆ‌

ಟ್ವಿಟರ್ ಪೋಸ್ಟ್​

ಬಿಎಂಎಸ್​ ಟ್ರಸ್ಟ್​ ವಿರುದ್ಧ ದಾಖಲಾಗಿತ್ತು ಪ್ರಕರಣ ​

2021-22ರಲ್ಲಿ ನಡೆದಿದ್ದ ಅಕ್ರಮ ಸೀಟ್ ಬ್ಲಾಕಿಂಗ್ ದಂಧೆಯಲ್ಲಿ ಬಿಎಂಎಸ್​ ಕಾಲೇಜಿನ ಟ್ರಸ್ಟ್ ವಿರುದ್ಧ ಹನುಮಂತ ನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ಸೀಟ್ ಬ್ಲಾಕಿಂಗ್ ಕುರಿತು ರಮೇಶ್ ನಾಯಕ್ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಟ್ರಸ್ಟ್​ ಅಧ್ಯಕ್ಷೆ ರಾಗಿಣಿ ನಾರಾಯಣ ವಿರುದ್ಧ ಎಫ್​ಐಆರ್​ ದಾಖಲಾಗಿತ್ತು. ಎಐಸಿಟಿಇ, ಯುಜಿಸಿ ನಿಯಮ ಉಲ್ಲಂಘಿಸಿ ಮೆರಿಟ್ ಸೀಟ್ ಹಂಚಿಕೆ ಮಾಡದೆ, ಅಕ್ರಮವಾಗಿ ಏಜೆಂಟ್​ ಮೂಲಕ ಸೀಟ್ ಹಂಚಿಕೆ ಮಾಡಲಾಗಿತ್ತು. ಆ ಮೂಲಕ ಖಾಸಗಿ ಕಾಲೇಜುಗಳು ಕೋಟ್ಯಂತರ ರೂ. ಹಣ ಸಂಗ್ರಹ ಮಾಡಿರುವ ಆರೋಪ ಕೇಳಿಬಂದಿತ್ತು.

ಇದನ್ನೂ ಓದಿ: ಸೀಟ್ ಬ್ಲಾಕಿಂಗ್ ತಡೆಗೆ KEA ಹೊಸ ನಿಯಮ: 3 ವರ್ಷ ಬ್ಯಾನ್​

ಏನಿದು ಸೀಟ್ ಬ್ಲಾಕಿಂಗ್ ದಂಧೆ?

ಸಿಂಪಲ್​ ಆಗಿ ಹೇಳುವುದಾದರೆ ಮೊದಲೇ ಕಾಯ್ದಿರಿಸುವುದು ಅಥವಾ ರಿಸರ್ವೇಶನ್ ಪದ್ಧತಿ ಎನ್ನಬಹುದು. ಕೆಲವು ಪ್ರತಿಷ್ಠಿತ ಕಾಲೇಜುಗಳು ಮುಂಬರುವ ಶೈಕ್ಷಣಿಕ ವರ್ಷಕ್ಕೂ ಮೊದಲೇ ಸೀಟ್ ರಿಸರ್ವ್ ಮಾಡುತ್ತವೆ ಎನ್ನಬಹುದು.
ಪ್ರತಿ ವರ್ಷ ಅತ್ಯುತ್ತಮ ಕಾಲೇಜುಗಳಿಗೆ‌ ಸೇರಬೇಕೆಂಬುವುದು ಮಕ್ಕಳು ಮತ್ತ ಪೋಷಕರಲ್ಲಿ ತವಕ ಹೆಚ್ಚಿದೆ. ಇದನ್ನೇ ಭಂಡವಾಳವಾಗಿಸಿಕೊಂಡಿರುವ ಖಾಸಗಿ ಸಂಸ್ಥೆಗಳು ಈ ಸೀಟ್ ಬ್ಲಾಕಿಂಗ್ ದಂಧೆ ನಡೆಸಿವೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:57 pm, Sat, 28 June 25