ಹಣ ಕೊಡಬೇಕಾಗುತ್ತೆಂದು ಎಲ್ಲೆಂದರಲ್ಲಿ ತ್ಯಾಜ್ಯ ಡಂಪ್ ಮಾಡುತ್ತಿರುವ ಕಾರ್ಖಾನೆಗಳು, ಸ್ಥಳೀಯರಿಗೆ ಸಂಕಷ್ಟ

ಮನೆ ಕಸವನ್ನು ಸಂಗ್ರಹಿಸಿ ಡಂಪ್ ಯಾಡ್​ಗಳಿಗೆ ಕಳಿಸುವಂತೆ ಕಾರ್ಖಾನೆಗಳ ಕಸವನ್ನು ಸಂಗ್ರಹಿಸಿ ಕಳಿಸಲಾಗುವುದಿಲ್ಲ. ಫ್ಯಾಕ್ಟರಿಗಳು ಹಣ ನೀಡಿ ಕಸವನ್ನು ವಿಲೇವಾರಿ ಮಾಡಬೇಕು. ಹೀಗಾಗಿ ಬಿಬಿಎಂಪಿಗೆ ಹಣವೇನು ನೀಡಬೇಕೆಂದು ಕೆಲ ಕಾರ್ಖಾನೆಗಳು ರಾತ್ರಿ ವೇಳೆ ಜನರಿಲ್ಲದನ್ನು ನೋಡಿ ಎಲ್ಲೆಂದರಲ್ಲಿ ಕಸ ಹಾಕುತ್ತಿದ್ದಾರೆ. ಇದು ಸಾರ್ವಜನಿಕರಿಗೆ ಸಮಸ್ಯೆಯಾಗುತ್ತಿದೆ.

ಹಣ ಕೊಡಬೇಕಾಗುತ್ತೆಂದು ಎಲ್ಲೆಂದರಲ್ಲಿ ತ್ಯಾಜ್ಯ ಡಂಪ್ ಮಾಡುತ್ತಿರುವ ಕಾರ್ಖಾನೆಗಳು, ಸ್ಥಳೀಯರಿಗೆ ಸಂಕಷ್ಟ
ಹಣ ಕೊಡಬೇಕಾಗುತ್ತೆಂದು ಕಾರ್ಖಾನೆಗಳಿಂದ ಎಲ್ಲೆಂದರಲ್ಲಿ ತ್ಯಾಜ್ಯ ಡಂಪ್
Follow us
Vinayak Hanamant Gurav
| Updated By: ಆಯೇಷಾ ಬಾನು

Updated on: May 22, 2024 | 7:30 AM

ಬೆಂಗಳೂರು, ಮೇ.22: ಮನೆಗಳಿಂದ ಸಂಗ್ರಹವಾಗುವ ಕಸವನ್ನು ಬಿಬಿಎಂಪಿ (BBMP) ಗಾರ್ಬೆಜ್ ವಾಹನದಲ್ಲಿ ತೆಗೆದುಕೊಂಡು ಹೋಗಲಾಗುತ್ತೆ. ಆದರೆ ವಾಣಿಜ್ಯ ಬಳಕೆಯ ಗಾರ್ಬೆಜನ್ನು (Garbage) ಆ ವಾಹನಗಳಲ್ಲಿ ತೆಗೆದುಕೊಂಡು ಹೋಗುವಂತಿಲ್ಲ. ಹೀಗಾಗಿ ದುಡ್ಡು ಕೊಟ್ಟು ನೇರ ಡಂಪ್ ಯಾರ್ಡ್ಗೆ (Dumping Yard) ಸಾಗಿಸಬೇಕು. ಆದರೆ ಹಣ ಉಳಿಸುವುದಕ್ಕಾಗಿ ಕೆಲವರು ಕಾರ್ಖಾನೆ, ಮೆಕಾನಿಕ್​ ಶಾಪ್​ನ  ಅಪಾಯಕಾರಿ ತ್ಯಾಜ್ಯ ಕಸವನ್ನ ಲೈಟ್​ ಕಂಬದ ಹತ್ತಿರ ಹಾಕಿ ಹೋಗುತ್ತಿದ್ದಾರೆ. ಇದರಿಂದ ಜನ ಸಾಮಾನ್ಯರಿಗೆ ಸಮಸ್ಯೆಗಳಾಗುತ್ತಿವೆ.

ಗೂಡ್ಸ್ ವಾಹನಗಳಲ್ಲಿ ತ್ಯಾಜ್ಯ ತುಂಬಿಕೊಂಡು ಬಂದು ಯಾರೂ ಇಲ್ಲದ ಸಮಯ ನೋಡಿ ರಾತ್ರೋ ರಾತ್ರಿ ರಸ್ತೆ ಬದಿಗೆ ಕಸ ಸುರಿದು ಹೋಗಲಾಗುತ್ತಿದೆ. ಮೂವರು ಖದೀಮರು ಗೂಡ್ಸ್ ವಾಹನದಲ್ಲಿ ಕಸ ತುಂಬಿಕೊಂಡು ಬಂದು ರಿವರ್ಸ್ ಹಾಕಿ ಕಾರ್ಖಾನೆ, ಮೆಕಾನಿಕ್​ ಶಾಪ್​ನ ಅಪಾಯಕಾರಿ ತ್ಯಾಜ್ಯಕಸವನ್ನ ಲೈಟ್​ ಕಂಬದ ಹತ್ತಿರ ರಾಶಿ ಹಾಕಿ ಎಸ್ಕೇಪ್ ಆಗಿದ್ದಾರೆ. ಬೆಂಗಳೂರು ಮೈಸೂರು ರಸ್ತೆಯಲ್ಲಿ ಹಾಗೂ ಬಾಪುಜಿ ನಗರದಲ್ಲಿ ರಾತ್ರೋ ರಾತ್ರಿ ಕಸ ತಂದು ಹಾಕುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಇನ್ನೂ ಮನೆ ಕಸ ಬಿಬಿಎಂಪಿ ಗಾರ್ಬೆಜ್ ವಾಹನದಲ್ಲಿ ತೆಗೆದುಕೊಂಡು ಹೋಗ್ತಾರೆ. ಆದರೆ ವಾಣಿಜ್ಯ ಬಳಕೆಯ ಗಾರ್ಬೆಜ್ ನ್ನು ಇದರಲ್ಲಿ ತೆಗೆದುಕೊಂಡು ಹೋಗುವಂತಿಲ್ಲ. ದುಡ್ಡು ಕೊಟ್ಟು ನೇರ ಡಂಪ್ ಯಾರ್ಡ್ಗೆ ಸಾಗಿಸಬೇಕು. ಇದರ ದುಡ್ಡು ಉಳಿಸಲು ಕಾರ್ಖಾನೆಯವರು ಹೀಗೆ ಎಲ್ಲೆಂದರಲ್ಲಿ ಹೇಗೆಂದರೆ ಹಾಗೆ ಡೇಂಜರ್ ಗಾರ್ಬಜ್ ರಸ್ತೆ ಬದಿಗೆ ಬಿಸಾಡುತ್ತಿದ್ದಾರೆ. ಅಲ್ಲದೇ ಕೆಲವೊಬ್ಬರು ರಾಜಕಾಲುವೆಗಳಿಗೆ ಸುರಿತಾರೆ.‌ ಇನ್ನೂ ಸುಮಾರು ದಿನಗಳಿಂದ ಮಳೆಯಾಗದ ಪರಿಣಾಮ ವಾಣಿಜ್ಯ ಉದ್ಯಮ ಹಾಗೂ ಕಾರ್ಖಾನೆಯರು ಸಂಗ್ರಹಿಸಿ ಇಡುವ ತ್ಯಾಜ್ಯ ಮಳೆ ನೀರಿನ ಮೂಲಕ ಚರಂಡಿಗಳಿಗೆ ಸೇರುವುದಲ್ಲದೇ ಅಧಿಕ ಮಳೆಯಾದಾಗ ನೀರು ಸರಾಗವಾಗಿ ಹೋಗದೆ ತೊಂದರೆ ಆಗುತ್ತೆ ಎಂದು ಬೆಂಗಳೂರು ನಿವಾಸಿಗಳು ಅಸಮಾಧಾನ ಹೊರ ಹಾಕಿದ್ದಾರೆ.

ಇದನ್ನೂ ಓದಿ: ಕೆಲವೇ ದಿನಗಳ ಮಳೆಗೆ ಬೆಂಗಳೂರಿನಲ್ಲಿ 800 ವಿದ್ಯುತ್ ಕಂಬ ಧರೆಗೆ! ವಾಲಿವೆ ಹಲವಾರು ಕಂಬ

ತ್ಯಾಜ್ಯ ಕುರಿತು ಸಾಕಷ್ಟು ಜಾಗೃತಿ ಮೂಡಿಸಿದರು ಕಾರ್ಖಾನೆಯವರು ರಬ್ಬರ್, ಪ್ಲಾಸ್ಟಿಕ್, ರಾಸಾಯನಿಕ ತ್ಯಾಜ್ಯ ಕಸದ ರಾಶಿಯನ್ನು 15 ದಿನಗಳ ವರೆಗೆ ಸಂಗ್ರಹಿಸಿ ಇಟ್ಟು ಅದನ್ನ ರಾತ್ರೋ ರಾತ್ರಿ ಚರಂಡಿಗಳಿಗೆ ಇಲ್ಲ ಪ್ರಮುಖ ರಸ್ತೆಗಳಲ್ಲಿ ಎಲ್ಲೆಂದರಲ್ಲಿ ಹಾಕುವುದಲ್ಲದೇ ಬೆಂಕಿ ಇಡುತ್ತಾರೆ. ಇನ್ನೂ ನಿನ್ನೆ ಹಳೆ ಗುಡ್ಡದಹಳ್ಳಿಯಲ್ಲಿ ಈ ರೀತಿ ಗಾರ್ಬೆಜ್ ಡಂಪ್ ಮಾಡುವಾಗ ಬಿಬಿಎಂಪಿ ಮಾರ್ಷಲ್ ಕಣ್ಣಿಗೆ ಬಿದ್ದಿದ್ದು, ಸಿಸಿಟಿವಿ ಆಧರಿಸಿ 20 ಸಾವಿರ ದಂಡವನ್ನು ಹಾಕಿದ್ದಾರೆ.

ಒಟ್ಟಿನಲ್ಲಿ ರಾಸಾಯನಿಕ ತ್ಯಾಜ್ಯ ವಿಲೇವಾರಿ ಮಾಡದೇ ರಸ್ತೆಬದಿಗೆ ರಾತ್ರೋ ರಾತ್ರಿ ಡಂಪ್ ಮಾಡ್ತಿರೋದು ಅಪಾಯಕಾರಿ ಅಷ್ಟೇ ಅಲ್ಲದೇ ಜನರ ಆರೋಗ್ಯದ ಮೇಲೂ ವ್ಯತಿರಿಕ್ತ ಪರಿಣಾಮ ಬೀರುತ್ತೆ.‌ ಪಾಲಿಕೆ 8 ವಲಯಗಳಲ್ಲಿ ಗಾರ್ಬೇಜ್‌ಗೆ ಸಂಬಂಧಪಟ್ಟಂತೆ ಕಠಿಣ ಕಾನೂನು ಅವಶ್ಯಕತೆ ಇದೆ. ಇಲ್ಲದಿದ್ದರೆ ಮುಂದೊಂದು ದಿನ ಸಿಲಿಕಾನ್ ಸಿಟಿ ಜನರಿಗೆ ಅಪಾಯ ಕಾದಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು