AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು: ಪಂಚಾಯತ್ ರಾಜ್ ಇಲಾಖೆ ಹಿರಿಯ ಸಹಾಯಕಿಗೆ ಸೈಬರ್ ವಂಚನೆ; ಕಳೆದುಕೊಂಡ ಹಣವೆಷ್ಟು ಗೊತ್ತಾ?

ರಾಜ್ಯದಲ್ಲಿ ಸೈಬರ್​ ವಂಚನೆ ಪ್ರಕರಣಗಳು ಹೆಚ್ಚಾಗಿ ವರದಿ ಆಗುತ್ತಿವೆ. ಇದೀಗ ಬೆಂಗಳೂರಿನ ಪಂಚಾಯತ್ ರಾಜ್ ಇಲಾಖೆಯ ಹಿರಿಯ ಸಹಾಯಕಿ ಅಧಿಕಾರಿ ಸೈಬರ್​ ವಂಚನೆಗೆ ಒಳಗಾಗಿದ್ದು, 45 ಸಾವಿರ ರೂ ಹಣ ಕಳದುಕೊಂಡಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ವಿಧಾನಸೌಧ ಠಾಣೆಗೆ ದೂರು ನೀಡಿದ್ದು, ಎಫ್​ಐಆರ್​ ದಾಖಲಾಗಿದೆ.

ಬೆಂಗಳೂರು: ಪಂಚಾಯತ್ ರಾಜ್ ಇಲಾಖೆ ಹಿರಿಯ ಸಹಾಯಕಿಗೆ ಸೈಬರ್ ವಂಚನೆ; ಕಳೆದುಕೊಂಡ ಹಣವೆಷ್ಟು ಗೊತ್ತಾ?
ಪ್ರಾತಿನಿಧಿಕ ಚಿತ್ರ
ಗಂಗಾಧರ​ ಬ. ಸಾಬೋಜಿ
|

Updated on:Aug 11, 2025 | 7:57 AM

Share

ಬೆಂಗಳೂರು, ಆಗಸ್ಟ್ 11: ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸೈಬರ್​ ವಂಚನೆಗಳು (cyber fraud) ನಡೆಯುತ್ತಿವೆ. ಯಾವುದೋ ಒಂದು ಲಿಂಕ್​ ಕಳುಹಿಸಿ ಅಥವಾ ಹೆದರಿಸಿ ಬೆದರಿಸಿ ಕೋಟ್ಯಂತರ ರೂ ಸುಲಿಗೆ ಮಾಡಲಾಗುತ್ತಿದೆ. ಇದೀಗ ಅಂತಹದೊಂದು ಸೈಬರ್ ವಂಚನೆ ನಡೆದಿದ್ದು, ಪಂಚಾಯತ್ ರಾಜ್ ಇಲಾಖೆಯ ಹಿರಿಯ ಸಹಾಯಕಿ 45 ಸಾವಿರ ರೂ ಕಳೆದುಕೊಂಡಿದ್ದಾರೆ. ಈ ಬಗ್ಗೆ ಸೋನುಕುಮಾರ್ ಎಂಬುವರ ವಿರುದ್ಧ ವಿಧಾನಸೌಧ ಠಾಣೆಯಲ್ಲಿ ಎಫ್​ಐಆರ್ (FIR)​ ದಾಖಲಾಗಿದೆ.

ಹೇಮಲತಾ ಎಂಬುವವರು ಸೈಬರ್ ವಂಚನೆಯಿಂದ 45 ಸಾವಿರ ರೂ. ಕಳೆದುಕೊಂಡ ಪಂಚಾಯತ್ ರಾಜ್ ಇಲಾಖೆಯ ಹಿರಿಯ ಸಹಾಯಕಿ ಅಧಿಕಾರಿ. ಆ. 6ರಂದು ಅಧೀನ ಕಾರ್ಯದರ್ಶಿಗಳ ವಾಟ್ಸ್ಆ್ಯಪ್‌ನಿಂದ 45 ಸಾವಿರ ರೂ ಅವಶ್ಯಕತೆ ಇದೆ ಎಂದು ಸಂದೇಶ ಬಂದಿತ್ತು. ಕೂಡಲೇ ಹೇಮಲತಾ ಸಂದೇಶದಲ್ಲಿದ್ದ ನಂಬರ್‌ಗೆ ಗೂಗಲ್ ಪೇ ಮೂಲಕ ಹಣ ಕಳುಹಿಸಿದ್ದರು. ಆದರೆ ಕರೆ ಮಾಡಿದಾಗ ಮೊಬೈಲ್ ನಂಬ‌ರ್ ಹ್ಯಾಕ್ ಆಗಿರುವುದು ತಿಳಿದುಬಂದಿದೆ.

ಬೆಂಗಳೂರಿನ ವೃದ್ದ ದಂಪತಿಗೆ ಡಿಜಿಟಲ್ ಅರೆಸ್ಟ್​: ನಾಲ್ಕುವರೆ ಕೋಟಿ ರೂ ಸುಲಿಗೆ

ಇನ್ನು ಕೆಲ ದಿನಗಳ ಹಿಂದೆ ಬೆಂಗಳೂರಿನ ವೃದ್ದ ದಂಪತಿಯನ್ನ ಡಿಜಿಟಲ್ ಅರೆಸ್ಟ್ ಮಾಡಲಾಗಿತ್ತು. ಸುಮಾರು ಎರಡೂವರೆ ತಿಂಗಳ ಕಾಲ ಡಿಜಿಟಲ್ ಅರೆಸ್ಟ್ ಮಾಡಿ ಸುಮಾರು ನಾಲ್ಕುವರೆ ಕೋಟಿ ರೂ ಸುಲಿಗೆ ಮಾಡಿರುವಂತಹ ಘಟನೆ ನಡೆದಿತ್ತು.

ಇದನ್ನೂ ಓದಿ
Image
357 ಬ್ಯಾಂಕ್ ಖಾತೆ ಸೈಬರ್ ವಂಚಕರಿಗೆ ಮಾರಾಟ ಮಾಡಿದ್ದ ಗ್ಯಾಂಗ್ ಪತ್ತೆ
Image
ರಜೆ ಮಜಾ ಮಾಡಲು ಹೋಗಿ ಸೈಬರ್ ವಂಚಕರ ಬಲೆಗೆ ಬಿದ್ದ
Image
ನಿಮ್ಮ ಫೋನ್‌ನಲ್ಲಿ 1930 ಸಂಖ್ಯೆಯನ್ನು ಸೇವ್ ಮಾಡಿದ್ದೀರ? ಏನು ಪ್ರಯೋಜನ?
Image
ಸೈಬರ್​ ಕ್ರೈಂ: ವೃದ್ಧೆಯಿಂದ 1 ಕೋಟಿಗೂ ಅಧಿಕ ಹಣ ದೋಚಿದ ವಂಚಕರು

ಇದನ್ನೂ ಓದಿ: ಕಾಲ್ ಗರ್ಲ್ ಬೇಕೆಂದು ಲಿಂಕ್ ಕ್ಲಿಕ್ ಮಾಡಿ ಪೇಮೆಂಟ್! ಬೆಂಗಳೂರು ಟೆಕ್ಕಿಗೆ ಲಕ್ಷಾಂತರ ರೂ. ಪಂಗನಾಮ

ನೈಜೀರಿಯಾದಲ್ಲಿ ಇಂಜಿನಿಯರ್ ಕೆಲಸ ಮಾಡಿ ನಿವೃತ್ತಿ ಹೊಂದಿದ್ದ ಮಂಜುನಾಥ್​ ಎಂಬುವವರಿಗೆ ಕ್ರೆಡಿಟ್ ಕಾರ್ಡ್ ಬಿಲ್ ಓವರ್ ಡ್ಯೂ ಆಗಿದೆ ಎಂದು ಕರೆ ಬಂದಿತ್ತು. ಬಳಿಕ ನಿಮ್ಮ ಅಕೌಂಟ್​ನಲ್ಲಿ ಮನಿ ಲಾಂಡರಿಂಗ್ ಆಗಿದೆ ಎಂದು ಹೆದರಿಸಿ ಇಡಿ, ಸಿಬಿಐನಲ್ಲಿ ನಿಮ್ಮ ವಿರುದ್ದ ಕೇಸ್ ಆಗಿದೆ. ನಿಮ್ಮನ್ನು ತಿಹಾರ್ ಜೈಲಿಗೆ ಹಾಕುತ್ತೆವೆ ಎಂದು ವಾರಂಟ್ ಕಳಿಸಿದ್ದ ಆರೋಪಿಗಳು, ಹಂತ ಹಂತವಾಗಿ ಸುಮಾರು ನಾಲ್ಕುವರೆ ಕೋಟಿ ರೂ ಸುಲಿಗೆ ಮಾಡಿದ್ದರು. ಈ ವಿಚಾರ ಪೊಲೀಸರಿಗೆ ಗೊತ್ತಾಗಿ ಇದೊಂದು ಸುಳ್ಳು ವಿಚಾರ, ನಿಮ್ಮನ್ನು ವಂಚನೆ ಮಾಡಿದ್ದಾರೆ ಎಂದು ವೃದ್ದ ದಂಪತಿಯನ್ನ ರಕ್ಷಣೆ ಮಾಡಲಾಗಿತ್ತು.

ವರದಿ: ಪ್ರದೀಪ್​ ಚಿಕ್ಕಾಟಿ 

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 7:56 am, Mon, 11 August 25