ನಕಲಿ ಔಷಧ ಜಾಲ: 15 ಆಸ್ಪತ್ರೆಗೆಳ ಫಾರ್ಮಸಿಗಳಿಗೆ ನೋಟಿಸ್​​, ಡಿಸ್ಟ್ರಿಬ್ಯೂಟರ್​​ಗಳ ವಿರುದ್ಧವೂ ಕ್ರಮ

ಒಂದೆಡೆ ನಕಲಿ ಔಷಧ ಜಾಲದ ಬಗ್ಗೆ ಎಸ್​ಐಟಿ ಅಧಿಕಾರಿಗಳು ತನಿಖೆ ಮುಂದುವರಿಸಿದ್ದರೆ ಮತ್ತೊಂದೆಡೆ ಫೇಕ್​​ ಮೆಡಿಸಿನ್​​ಗಳು ಸಪ್ಲೈ ಆಗಿದ್ದ ಆಸ್ಪತ್ರೆಗಳ ಪಾರ್ಮಸಿಗಳಿಗೆ ಆಹಾರ ಮತ್ತು ಔಷಧ ಆಡಳಿತ ಇಲಾಖೆ ನೋಟಿಸ್​​ ನೀಡಿದೆ. ಹಲವು ಮೆಡಿಸಿನ್​​ಗಳಿಗೆ ಪ್ರಿಸ್ಕ್ರಿಪ್ಷನ್ ಅತ್ಯಗತ್ಯ. ಆದರೆ ಆನ್‌ಲೈನ್‌ನಲ್ಲಿ ಇವುಗಳನ್ನು ಗಾಳಿಗೆ ತೂರಿ ಔಷಧ ಮಾರಾಟ ನಡೆಯುತ್ತಿರುವ ಕಾರಣ ಆ ಬಗ್ಗೆಯೂ ಕ್ರಮಕ್ಕೆ ಇಲಾಖೆ ಮುಂದಾಗಿದೆ.

ನಕಲಿ ಔಷಧ ಜಾಲ: 15 ಆಸ್ಪತ್ರೆಗೆಳ ಫಾರ್ಮಸಿಗಳಿಗೆ ನೋಟಿಸ್​​, ಡಿಸ್ಟ್ರಿಬ್ಯೂಟರ್​​ಗಳ ವಿರುದ್ಧವೂ ಕ್ರಮ
15 ಆಸ್ಪತ್ರೆಗೆಳ ಫಾರ್ಮಸಿಗಳಿಗೆ ನೋಟಿಸ್
Image Credit source: Getty Images
Edited By:

Updated on: Sep 20, 2026 | 2:54 PM

ಬೆಂಗಳೂರು, ಸೆಪ್ಟೆಂಬರ್​ 20: ನಕಲಿ ಔಷಧ ಜಾಲದ ಬಗ್ಗೆ ಬಗೆದಷ್ಟೂ ಸ್ಫೋಟಕ ಮಾಹಿತಿ ಲಭ್ಯವಾಗುತ್ತಿದೆ. ಈ ನಡುವೆ ಯಾವೆಲ್ಲ ಆಸ್ಪತ್ರೆಗಳಿಗೆ ಈ ಜಾಲ ನಕಲಿ ಔಷಧಗಳನ್ನು ಸಪ್ಲೈ ಮಾಡಿತ್ತು ಎಂಬುದನ್ನು ಎಸ್​ಐಟಿ ಅಧಿಕಾರಿಗಳು ಪತ್ತೆ ಹೆಚ್ಚಿರುವ ಬೆನ್ನಲ್ಲೇ ದೇಶದ ಹಲವೆಡೆ ಆಸ್ಪತ್ರೆಗಳಿಗೆ ಆಹಾರ ಮತ್ತು ಔಷಧ ಆಡಳಿತ ಇಲಾಖೆ (FDA) ಬಿಗ್​​ ಶಾಕ್​​ ಕೊಟ್ಟಿದೆ. ಬೆಂಗಳೂರು ಸೇರಿ 15ಕ್ಕೂ ಹೆಚ್ಚು ಆಸ್ಪತ್ರೆಗಳ ಫಾರ್ಮಸಿಗಳಿಗೆ ನೋಟಿಸ್ ನೀಡಲಾಗಿದ್ದು, ಫಾರ್ಮಸಿಗಳ ಲೈಸೆನ್ಸ್ ರದ್ದು ಮಾಡಲಾಗಿದೆ.

ಫಾರ್ಮಸಿಗಳ ಜೊತೆ ಡಿಸ್ಟ್ರಿಬ್ಯೂಟರ್​​ಗಳ ಲೈಸೆನ್ಸ್ ರದ್ದಿಗೂ ಕ್ರಮ

ಇಷ್ಟೇ ಅಲ್ಲದೆ ಕ್ಯಾನ್ಸರ್ ಔಷಧ, ಜೀವ ರಕ್ಷಕ ಔಷಧ ಹಾಗೂ ICU ಇಂಜೆಕ್ಷನ್‌ಗಳನ್ನು ಆಸ್ಪತ್ರೆಗಳಿಗೆ ಪೂರೈಸಿದ ಡಿಸ್ಟ್ರಿಬ್ಯೂಟರ್‌ಗಳು, ಮೆಡಿಕಲ್ ರೆಪ್ರೆಸೆಂಟೇಟಿವ್‌ಗಳನ್ನೂ ವಿಚಾರಣೆಗೆ ಒಳಪಡಿಸಲಾಗಿದೆ. ಯಾರೆಲ್ಲ ನಿಯಮ ಉಲ್ಲಂಘಿಸಿದ್ದಾರೆ? ಮಾನದಂಡಗಳನ್ನು ಫಾಲೋ ಮಾಡಿಲ್ಲ? ಎಂಬುದರ ಪರಿಶೀಲನೆ ನಡೆಯುತ್ತಿದ್ದು, ಕೇವಲ ಆಸ್ಪತ್ರೆಗಳ ಫಾರ್ಮಸಿ ಪರವಾನಿಗೆ ಮಾತ್ರವಲ್ಲದೆ ಡಿಸ್ಟ್ರಿಬ್ಯೂಟರ್​​ಗಳ ಲೈಸೆನ್ಸ್ ರದ್ದಿಗೂ ಕ್ರಮ ಕೈಗೊಳ್ಳಲಾಗಿದೆ. ಇದಿರಂದ ನಕಲಿ ಔಷಧ ಜಾಲದಲ್ಲಿ ಸೇರಿಕೊಂಡು ಜನರ ಜೀವದ ಜೊತೆ ಚೆಲ್ಲಾಟ ಆಡುತ್ತಿದ್ದ ಎಲ್ಲ ಆರೋಪಿಗಳಿಗೂ ನಡುಕ ಶುರುವಾಗಿದೆ.

ಇದನ್ನೂ ಓದಿ: ಇಡೀ ದೇಶಕ್ಕೆ ವ್ಯಾಪಿಸಿದ ಬೆಂಗಳೂರಿನ ನಕಲಿ ಔಷಧಿ ದಂಧೆ: ಎಸ್‌ಐಟಿ ತನಿಖೆಯಲ್ಲಿ ಸ್ಫೋಟಕ ಮಾಹಿತಿ ಬಯಲು

ಆನ್​​ಲೈನ್​​ ಮೂಲಕ ಔಷಧ ಮಾರಾಟದ ಮೇಲೂ FDA ಕಣ್ಣು

ಮತ್ತೊಂದೆಡೆ ವ್ಯಾಪಕ ಡಿಸ್ಕೌಂಟ್ ನೀಡಿ ಔಷಧ ಮಾರಾಟ ಮಾಡುತ್ತಿರುವ ಕಂಪನಿಗಳಿಗೆ ಆಹಾರ ಮತ್ತು ಔಷಧ ಆಡಳಿತ ಇಲಾಖೆ ಶಾಕ್ ನೀಡಿದ್ದು, ಔಷಧಗಳ ಗುಣಮಟ್ಟ ಟೆಸ್ಟ್ ಮಾಡಲು ಮುಂದಾಗಿದೆ. ರ್ಯಾಂಡಮ್​​ ಟೆಸ್ಟ್​​ ಮೂಲಕ ಗುಣಮಟ್ಟ ಪರೀಕ್ಷೆ ನಡೆಯಲಿದೆ. ಹಲವು ಮೆಡಿಸಿನ್​​ಗಳಿಗೆ ಪ್ರಿಸ್ಕ್ರಿಪ್ಷನ್ ಅತ್ಯಗತ್ಯ. ಆದರೆ ಆನ್‌ಲೈನ್‌ನಲ್ಲಿ ಔಷಧ ಆರ್ಡರ್ ಮಾಡುವಾಗ ವೈದ್ಯರ ಸಲಹೆ ಮತ್ತು ಪ್ರಿಸ್ಕ್ರಿಪ್ಷನ್ ಪರಿಶೀಲನೆ ಸರಿಯಾಗಿ ನಡೆಯುತ್ತಿಲ್ಲ. ವೈದ್ಯರು ಬರೆದಿರುವ ಔಷಧದ ಬದಲಿಗೆ ಪರ್ಯಾಯ ಬ್ರ್ಯಾಂಡ್ ಅಥವಾ ಬೇರೆ ಔಷಧದ ಸಲಹೆ ನೀಡಲಾಗುತ್ತಿದೆ. ಇದರಿಂದ ರೋಗಿಯ ಚಿಕಿತ್ಸೆಯ ಪರಿಣಾಮಕಾರಿತ್ವ ಮತ್ತು ಸುರಕ್ಷತೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಹೀಗಿದ್ದರೂ ಕೆಲವು ಕಂಪನಿಗಳು ಭಾರಿ ಡಿಸ್ಕೌಂಟ್ ಜಾಹೀರಾತುಗಳ ಮೂಲಕ ಗ್ರಾಹಕರನ್ನು ಸೆಳೆಯುವ ಬಗ್ಗೆ ಕೂಡ ವಿರೋಧ ಕೇಳಿ ಬಂದಿದೆ. ಹೀಗಾಗಿ ಇವುಗಳ ನಿಯಂತ್ರಣಕ್ಕೂ FDA ಮುಂದಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

 

ವಿನಯ್​ ಕಾಶಪ್ಪನವರ್​

ವಿನಯಕುಮಾರ್ ಕಾಶಪ್ಪನವರ್ ಅವರು ಸಮೂಹ ಸಂವಹನ ಹಾಗೂ ತಂತ್ರಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಮತ್ತು ಪತ್ರಿಕೋದ್ಯಮದಲ್ಲಿ ವಿದ್ಯಾಭ್ಯಾಸ ಪಡೆದಿದ್ದಾರೆ. ಕಳೆದ 8 ವರ್ಷಗಳಿಂದ ಟಿವಿ9 ಕನ್ನಡದಲ್ಲಿ ಹಿರಿಯ ವರದಿಗಾರನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬೆಂಗಳೂರು ನಗರ, ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಗಳಲ್ಲಿ 10 ವರ್ಷಗಳ ವರದಿಗಾರಿಕೆ ಅನುಭವ ಹೊಂದಿದ್ದು, ಸಮಾಜಮುಖಿ ಹಾಗೂ ತನಿಖಾ ವರದಿಗಳ ಮೂಲಕ ಜನಪರ ವಿಷಯಗಳನ್ನು ಬೆಳಕಿಗೆ ತರುತ್ತಿದ್ದಾರೆ.

Read More
Loading...
Unable to load recommendations.
Follow Us