ಖ್ಯಾತ ವೈದ್ಯ, ಅಂಬೇಡ್ಕರ್ ಮೆಡಿಕಲ್ ಕಾಲೇಜು ಸಂಸ್ಥಾಪಕ ಟ್ರಸ್ಟಿ ಡಾ ಶಿವಲಿಂಗಯ್ಯ ಕೊಲೆ ಯತ್ನ; ಮಣಿಪಾಲ್ ಅಸ್ಪತ್ರೆಯಲ್ಲಿ ಚಿಕಿತ್ಸೆ

ಅಲ್ಯೂಮಿನಿಯಂ ಅಂಶದ ಮಾತ್ರೆಗಳನ್ನು ನೀಡಿ ವಿಷ ಪ್ರಾಷನ ಮಾಡಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಈ ಬಗ್ಗೆ ಮೆಡಿಕಲ್ ಟೆಸ್ಟ್ ಮಾಡಿಸಿದಾಗ ದೇಹದಲ್ಲಿ ಜೀವಕ್ಕೆ ಅಪಾಯ ಆಗುವಷ್ಟು ಅಲ್ಯೂಮಿನಿಯಂ ಅಂಶ ಪತ್ತೆಯಾಗಿದೆ.

ಖ್ಯಾತ ವೈದ್ಯ, ಅಂಬೇಡ್ಕರ್ ಮೆಡಿಕಲ್ ಕಾಲೇಜು ಸಂಸ್ಥಾಪಕ ಟ್ರಸ್ಟಿ ಡಾ ಶಿವಲಿಂಗಯ್ಯ ಕೊಲೆ ಯತ್ನ; ಮಣಿಪಾಲ್ ಅಸ್ಪತ್ರೆಯಲ್ಲಿ ಚಿಕಿತ್ಸೆ
ಖ್ಯಾತ ವೈದ್ಯ, ಅಂಬೇಡ್ಕರ್ ಮೆಡಿಕಲ್ ಕಾಲೇಜು ಸಂಸ್ಥಾಪಕ ಟ್ರಸ್ಟಿ ಡಾ ಶಿವಲಿಂಗಯ್ಯ
Follow us
TV9 Web
| Updated By: ಆಯೇಷಾ ಬಾನು

Updated on:Apr 11, 2022 | 11:33 AM

ಬೆಂಗಳೂರು: ಖ್ಯಾತ ವೈದ್ಯರು ಹಾಗು ಅಂಬೇಡ್ಕರ್ ಮೆಡಿಕಲ್ ಕಾಲೇಜು ಸಂಸ್ಥಾಪಕ ಟ್ರಸ್ಟಿ ಡಾ ಶಿವಲಿಂಗಯ್ಯರ ಕೊಲೆಗೆ ಯತ್ನ ನಡೆದಿದೆ. ಅಂಬೇಡ್ಕರ್ ಮೆಡಿಕಲ್ ಕಾಲೇಜು, ಅಂಬೇಡ್ಕರ್ ದಂತ ವೈದ್ಯ ಕಾಲೇಜು, ಅಂಬೇಡ್ಕರ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಸಂಸ್ಥಾಪಕರಾದ ತೊಂಬತ್ತೆರಡು ವರ್ಷ ವಯಸ್ಸಿನ ಡಾ ಶಿವಲಿಂಗಯ್ಯರವರ ಕೊಲೆಗೆ ಯತ್ನ ನಡೆದಿದ್ದು ಸದ್ಯ ಮಣಿಪಾಲ್ ಅಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅಲ್ಯೂಮಿನಿಯಂ ಅಂಶದ ಮಾತ್ರೆಗಳನ್ನು ನೀಡಿ ವಿಷ ಪ್ರಾಷನ ಮಾಡಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಈ ಬಗ್ಗೆ ಮೆಡಿಕಲ್ ಟೆಸ್ಟ್ ಮಾಡಿಸಿದಾಗ ದೇಹದಲ್ಲಿ ಜೀವಕ್ಕೆ ಅಪಾಯ ಆಗುವಷ್ಟು ಅಲ್ಯೂಮಿನಿಯಂ ಅಂಶ ಪತ್ತೆಯಾಗಿದೆ. ಸಾಮಾನ್ಯವಾಗಿ 10 MICG/L ಕಿಂತ ಕಡಿಮೆ ಅಲ್ಯೂಮಿನಿಯಂ ಅಂಶ ದೇಹದಲ್ಲಿ ಇರುತ್ತೆ. ಆದ್ರೆ ಡಾ ಶಿವಲಿಂಗಯ್ಯ ರವರ ದೇಹದಲ್ಲಿ ಮಾರ್ಚ್ 4ರಂದು ಪರೀಕ್ಷೆ ಮಾಡಿಸಿದಾಗ 26.4 MICG/L ನಷ್ಟು ಅಂಶ ಪತ್ತೆಯಾಗಿದೆ. ಬಳಿಕ 22 ಮಾರ್ಚ್ನಲ್ಲಿ ಪರೀಕ್ಷೆ ಮಾಡಿದಾಗ 33.7 MICG/L ನಷ್ಟು ಅಂಶ ಪತ್ತೆಯಾಗಿದೆ. ಇದೇ ರೀತಿ ಅಲ್ಯೂಮಿನಿಯಂ ಅಂಶ ಹೆಚ್ಚಾದಲ್ಲಿ ದೇಹ ಬಹು ಅಂಗಾಂಗಗಳ ವೈಫಲ್ಯದಿಂದ ಸಾವನಪ್ಪುವ ಸಾಧ್ಯತೆ ಇದೆ.

ಕಳೆದ ಹದಿನೈದು ವರ್ಷಗಳಿಂದ ಜೊತೆಗೆ ಇದ್ದು ಡಾ ಶಿವಲಿಂಗಯ್ಯ ರನ್ನು ನೋಡಿಕೊಳ್ಳುತಿದ್ದ ಧಾನಮಣಿ ಹಾಗು ಕಳೆದ 26 ವರ್ಷಗಳಿಂದ ಜೊತೆಗೆ ಇದ್ದ ವೆಂಕಟೇಶ ಮೂರ್ತಿರಿಂದ ಕೃತ್ಯ ಎಡೆದಿದೆ ಎಂಬ ಆರೋಪ ಕೇಳಿ ಬಂದಿದೆ. ಡಾ ಶಿವಲಿಂಗಯ್ಯರವರ ಹೆಸರಲ್ಲಿ ಸಾವಿರಾರು ಕೋಟಿ ಬೆಲೆ ಬಾಳುವ ಆಸ್ತಿ ಇದೆ. ಹಾಗೂ ಮನೆಯಲ್ಲಿ ಕೋಟಿ ಕೋಟಿ ಬಾಳುವ ಚಿನ್ನ ಸಹ ಇದೆ. ಹೀಗಾಗಿ ಈ ಕೃತ್ಯ ಎಸಗಿದ್ದಾರೆ ಎನ್ನಲಾಗುತ್ತಿದೆ. ಅಲ್ಲದೆ ಸದ್ಯ ಡಾ ಶಿವಲಿಂಗಯ್ಯ ರವರ ಕಡೆಯಿಂದ ಖಾಲಿ ಛಾಪ ಕಾಗದಗಳಿಗೆ ಸಹಿ ಪಡೆದಿರೋದು ಪತ್ತೆಯಾಗಿದೆ.

ಕೃತ್ಯದ ಬಗ್ಗೆ ಡಾ ಶಿವಲಿಂಗಯ್ಯ ಪುತ್ರ ಖ್ಯಾತ ವೈದ್ಯ ಡಾ ರವಿ ಪ್ರಕಾಶ್ ದೂರು ಸಲ್ಲಿಸಿದ್ದಾರೆ. ದೂರಿನ ಅನ್ವಯ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. IPC ಸೆಕ್ಷನ್ 307 ಮತ್ತು 328 ಅಡಿಯಲ್ಲಿ ಕೇಸ್ ದಾಖಲಿಸಲಾಗಿದೆ.

ನಮ್ಮ ತಂದೆಗೆ ಕಾಫಿ ಅಭ್ಯಾಸ ಮಾಡಿಸಿದ್ದಾರೆ ಇನ್ನು ಈ ಸಂಬಂಧ ಮಾತನಾಡಿರುವ ಡಾ ರವಿ ಪ್ರಕಾಶ್, ನಮ್ಮ ತಂದೆಯವರಿಗೆ ಕಾಫಿ ಕುಡಿಯುವ ಅಭ್ಯಾಸ ಇರಲಿಲ್ಲ. ಅವರಿಗೆ ಕಾಫಿ ಅಭ್ಯಾಸ ಮಾಡಿಸಿದ್ದಾರೆ. ಅಲ್ಯೂಮಿನಿಯಂ ಕಹಿ ಇರತ್ತೆ. ಕಾಫಿಯಲ್ಲಿ ಹಾಕಿ ಕೊಟ್ರೆ ಗೊತ್ತಾಗಲ್ಲಾ ಅಂತ. ಹಂತ ಹಂತವಾಗಿ ಅಲ್ಯೂಮಿನಿಯಂ ನೀಡಲಾಗಿದೆ. ನೂರಾರು ಕೋಟಿ ಆಸ್ತಿ ಇದೆ. ಆಕೆ ಕೇರ್ ಟೇಕರ್ ಎಂದು ಬಂದದ್ದು ಈಗ ತನ್ನನ್ನು ಮದುವೆ ಆಗಿದ್ದಾರೆ ಎಂದು ದಾಖಲಾತಿ ಮಾಡಿಕೊಂಡಿದ್ದಾರೆ. ಪೊಲೀಸರು ಕೇಸ್ ದಾಖಲು ಮಾಡಿ ತನಿಖೆ ನಡೆಸುತಿದ್ದಾರೆ. ಆಶ್ರಯ ಕೊಟ್ಟವರನ್ನೆ ಹಣಕ್ಕೆ ಬಳಸಿಕೊಂಡು ಕೊಲ್ಲಲು ಮುಂದಾಗಿದ್ದು ಎಷ್ಟು ಸರಿ? ಎಂದು ಡಾ ಶಿವಲಿಂಗಯ್ಯ ನವರ ಮಗ ಆಕ್ರೋಶ ಹೊರ ಹಾಕಿದ್ದಾರೆ.

ಇದನ್ನೂ ಓದಿ: ಗುಜರಾತ್​ನ ರಾಸಾಯನಿಕ ಕಾರ್ಖಾನೆಯೊಂದರಲ್ಲಿ ಭೀಕರ ಸ್ಫೋಟ, ಬೆಂಕಿ; ಆರು ಮಂದಿ ಕಾರ್ಮಿಕರ ದುರ್ಮರಣ

Sanju Samson: ಪಂದ್ಯ ಮುಗಿದ ಬಳಿಕ ಸಂಜು ಸ್ಯಾಮ್ಸನ್ ರಿವೀಲ್ ಮಾಡಿದ್ರು ರಣ ರೋಚಕ ಪ್ಲಾನ್

Published On - 11:17 am, Mon, 11 April 22

ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?