Murder: ಕಾಮಾಕ್ಷಿಪಾಳ್ಯದಲ್ಲಿ ಭೀಕರ ಘಟನೆ, ಟ್ರಿಪ್ ವಿಚಾರಕ್ಕೆ ಚಾಕು ಇರಿದು ಮಗನನ್ನೇ ಕೊಂದ ತಂದೆ

ತಂದೆ ಹಾಗೂ ಮಗ ಇಬ್ಬರೂ RTO ಕಚೇರಿಯಲ್ಲಿ ಏಜೆಂಟರಾಗಿದ್ದರು. ಕಳೆದ ಕೆಲ ದಿನಗಳ ಹಿಂದೆ ಮಗ ಸಂತೋಷ್ ಪ್ರವಾಸಕ್ಕೆ ಹೋಗಿ ಬಂದಿದ್ದ. ಇದೇ ವಿಚಾರಕ್ಕೆ ಗಲಾಟೆ ನಡೆದು ತಂದೆ ಮಗನನ್ನು ಕೊಲೆ ಮಾಡಿದ್ದಾನೆ ಎಂಬ ಶಂಕೆ ವ್ಯಕ್ತವಾಗಿದೆ. ಇಷ್ಟೇ ಅಲ್ಲದೆ ಹತ್ಯೆ ಬಳಿಕ ಸಾಕ್ಷ್ಯ ನಾಶಗೊಳಿಸಲು ಗುರುರಾಜ್ ಯತ್ನಿಸಿದ್ದಾನೆ.

Murder: ಕಾಮಾಕ್ಷಿಪಾಳ್ಯದಲ್ಲಿ ಭೀಕರ ಘಟನೆ, ಟ್ರಿಪ್ ವಿಚಾರಕ್ಕೆ ಚಾಕು ಇರಿದು ಮಗನನ್ನೇ ಕೊಂದ ತಂದೆ
ಪ್ರಾತಿನಿದಿಕ ಚಿತ್ರ

ಬೆಂಗಳೂರು: ತಂದೆಯಿಂದಲೇ ಮಗನ ಬರ್ಬರ ಹತ್ಯೆ ನಡೆದಿರುವ ಭೀಕರ ಘಟನೆ ಬೆಂಗಳೂರಿನ ಕಾಮಾಕ್ಷಿಪಾಳ್ಯದ ಕೃಷ್ಣ ಕನ್ವೆನ್ಷನ್ ಹಾಲ್ ಬಳಿ ನಡೆದಿದೆ. ಚಾಕು ಇರಿದು ಮಗ ಸಂತೋಷ್ನನ್ನು ತಂದೆ ಗುರುರಾಜ್ ಹತ್ಯೆಗೈದಿದ್ದಾರೆ.

ತಂದೆ ಹಾಗೂ ಮಗ ಇಬ್ಬರೂ RTO ಕಚೇರಿಯಲ್ಲಿ ಏಜೆಂಟರಾಗಿದ್ದರು. ಕಳೆದ ಕೆಲ ದಿನಗಳ ಹಿಂದೆ ಮಗ ಸಂತೋಷ್ ಪ್ರವಾಸಕ್ಕೆ ಹೋಗಿ ಬಂದಿದ್ದ. ಇದೇ ವಿಚಾರಕ್ಕೆ ಗಲಾಟೆ ನಡೆದು ತಂದೆ ಮಗನನ್ನು ಕೊಲೆ ಮಾಡಿದ್ದಾನೆ ಎಂಬ ಶಂಕೆ ವ್ಯಕ್ತವಾಗಿದೆ. ಇಷ್ಟೇ ಅಲ್ಲದೆ ಹತ್ಯೆ ಬಳಿಕ ಸಾಕ್ಷ್ಯ ನಾಶಗೊಳಿಸಲು ಗುರುರಾಜ್ ಯತ್ನಿಸಿದ್ದಾನೆ.

ಮಗನನ್ನು ಕೊಲೆ ಮಾಡಿ ಮನೆ ತುಂಬಾ ಚೆಲ್ಲಾಡಿದ್ದ ರಕ್ತವನ್ನು ತೊಳೆದಿದ್ದಾನೆ. ಸದ್ಯ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇನ್ನು ಮತ್ತೊಂದು ಕಡೆ ಕುಡಿದ ಮತ್ತಿನಲ್ಲಿ ಮಹಿಳೆ ಸರ ಕದಿಯಲು ಹೋಗಿ ಸಿಕ್ಕಿಬಿದ್ದ ಕಳ್ಳನಿಗೆ ಗೂಸಾ ಕೊಟ್ಟಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ಟಿ.ಬೇಗೂರಲ್ಲಿ ನಡೆದಿದೆ. ಹಾಗೂ ಕಳ್ಳನನ್ನ ಥಳಿಸಿ ಜನ ಪೊಲೀಸರಿಗೊಪ್ಪಿಸಿದ್ದಾರೆ.

ಹನುಮಕ್ಕ ಎಂಬುವರ ಮಾಂಗಲ್ಯ ಸರ ಕದಿಯಲು ಯತ್ನಿಸಿದ ಕಲಬುರಗಿ ಮೂಲದ ಮಾರುತಿಯನ್ನ ಜನರು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ನೆಲಮಂಗಲ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: ಗೋಡಂಬಿ ಫ್ಯಾಕ್ಟರಿ ಸಿಬ್ಬಂದಿ ಕೊಲೆ ಪ್ರಕರಣ; ನಾಪತ್ತೆಯಾಗಿದ್ದ ಡಿಎಂಕೆ ಸಂಸದ ಕೋರ್ಟ್​ನಲ್ಲಿ ಶರಣು

ತಾಯಿ-ಮಗುವನ್ನು ಕೊಂದಿದ್ದ ಆರೋಪಿ ಅರೆಸ್ಟ್; ಅರೆಬೆತ್ತಲೆ ವಿಡಿಯೋ ಕೊಲೆಗೆ ಕಾರಣ!

Read Full Article

Click on your DTH Provider to Add TV9 Kannada