International Girl Child Day: ಮಹಿಳಾ ಸಿಬ್ಬಂದಿ ಭೇಟಿ ಮಾಡಿ ಸಿಹಿ ಹಂಚಿ, ಸೆಲ್ಫೀ ಕ್ಲಿಕ್ಕಿಸಿಕೊಂಡ ರೈಲ್ವೆ ಎಡಿಜಿಪಿ ಭಾಸ್ಕರ್ ರಾವ್
ಇದೇ ವೇಳೆ, ರೈಲ್ವೆ ಪೊಲೀಸ್ ಸಿಬ್ಬಂದಿ ಜೊತೆಗೆ ದಸರಾ ಆಚರಣೆ ಮಾಡಲಾಗಿದೆ. ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ಹಬ್ಬದ ಸಂಭ್ರಮ ಕಂಡುಬಂದಿದೆ. ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ವಿನೂತನ ಪ್ರಯತ್ನ ಮಾಡಲಾಗಿದೆ.
ಬೆಂಗಳೂರು: ಅಂತಾರಾಷ್ಟ್ರೀಯ ಹೆಣ್ಣು ಮಗುವಿನ ದಿನ ಹಿನ್ನಲೆಯಲ್ಲಿ ರೈಲ್ವೆ ಎಡಿಜಿಪಿ ಭಾಸ್ಕರ್ ರಾವ್ ಮಹಿಳಾ ಸಿಬ್ಬಂದಿ ಭೇಟಿ ಮಾಡಿದ್ದಾರೆ. ಆರ್ಪಿಎಫ್ ಮಹಿಳಾ ಸಿಬ್ಬಂದಿಗಳನ್ನು ಎಡಿಜಿಪಿ ಭೇಟಿಯಾಗಿದ್ದಾರೆ. ಬಳಿಕ ಸಿಹಿ ಹಂಚಿ ಅವರೊಂದಿಗೆ ಫೋಟೊ ಕ್ಲಿಕ್ಕಿಸಿಕೊಂಡಿದ್ದಾರೆ. ಇದೇ ವೇಳೆ, ರೈಲ್ವೆ ಪೊಲೀಸ್ ಸಿಬ್ಬಂದಿ ಜೊತೆಗೆ ದಸರಾ ಆಚರಣೆ ಮಾಡಲಾಗಿದೆ. ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ಹಬ್ಬದ ಸಂಭ್ರಮ ಕಂಡುಬಂದಿದೆ. ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ವಿನೂತನ ಪ್ರಯತ್ನ ಮಾಡಲಾಗಿದೆ.
ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಸಾರ್ವಜನಿಕರ ವೀಕ್ಷಣೆಗೆ ಸುಂದರ ಬೊಂಬೆಗಳ ಅನಾವರಣ ಮಾಡಲಾಗಿದೆ. ಆನೆ ಹಾಗೂ ಅದರ ರಥದಲ್ಲಿ ದಸರಾ ಬೊಂಬೆಗಳ ಕಿರು ಸನ್ನಿವೇಶ ಅನಾವರಣ ಮಾಡಲಾಗಿದೆ. ಪ್ರಯಾಣಿಕರ ಕಣ್ಮನ ಸೆಳೆಯುವ ಮಾದರಿ ಸೃಷ್ಠಿಯಾಗಿದೆ. ಸಾರ್ವಜನಿಕರಿಗೆ ಬೊಂಬೆಗಳ ಮುಕ್ತ ವೀಕ್ಷೆಣೆಯನ್ನು ರೈಲ್ವೆ ಎಡಿಜಿಪಿ ಭಾಸ್ಕರ್ ರಾವ್ ಉದ್ಘಾಟನೆ ಮಾಡಲಿದ್ದಾರೆ. ರೈಲ್ವೆ ಡಿಸಿಪಿ ಸಿರಿಗೌರಿ ಸೇರಿದಂತೆ ಹಲವು ರೈಲ್ವೆ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.
ನಾಡ ಹಬ್ಬವನ್ನು ಸಂಭ್ರಮದಿಂದ ರೈಲ್ವೆ ಪೊಲೀಸ್ ಸಿಬ್ಬಂದಿ ಆಚರಿಸುತಿದ್ದೇವೆ. ಕಲಾವಿದ ಅರುಣ್ ಸಾಗರ್ ಯೋಚನೆಯಲ್ಲಿ ಮೂಡಿ ಬಂದ ದಸರಾ ಗೊಂಬೆಗಳು ಇದಾಗಿದೆ. ರೈಲ್ವೆ ಪೊಲೀಸ್ ಇಲಾಖೆಯಿಂದ ಇದೇ ಮೊದಲ ಬಾರಿಗೆ ವಿನೂತನ ಪ್ರಯತ್ನ ಮಾಡಲಾಗಿದೆ. ರಾಷ್ಟ್ರದ ವಿವಿಧ ಕಡೆಗಳಿಂದ ಜನ ರೈಲಿನಲ್ಲಿ ಪ್ರಯಾಣಿಸುತ್ತಾರೆ. ಅದೇ ರೀತಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಸಾರ್ವಜನಿಕರು ಸಂಚರಿಸುತ್ತಾರೆ. ಈ ಮೂಲಕ ಎಲ್ಲಾ ಜನರಿಗೂ ನಮ್ಮ ನಾಡ ಹಬ್ಬ ಕಣ್ತುಂಬಿಸುವ ಪ್ರಯತ್ನ ಮಾಡಲಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಫೋನ್ ಕದ್ದಾಲಿಕೆ ಪ್ರಕರಣ: ಐಪಿಎಸ್ ಭಾಸ್ಕರ್ ರಾವ್ ಪ್ರೊಟೆಸ್ಟ್ ಪಿಟಿಷನ್, ಕೋರ್ಟ್ಗೆ ಬಿ ರಿಪೋರ್ಟ್ ಸಲ್ಲಿಸದೆ ವಾಪಸಾದ ಸಿಬಿಐ
ಇದನ್ನೂ ಓದಿ: Bhaskar Rao ರೈಲ್ವೆ ADGP ಆಗಿ ಭಾಸ್ಕರ್ ರಾವ್ ವರ್ಗಾವಣೆ