ಇಂದು ಮಧ್ಯರಾತ್ರಿ 12ರಿಂದ ಲಾರಿ ಮುಷ್ಕರ; ಸರಕು ಸಾಗಣೆಯಲ್ಲಿ ವ್ಯತ್ಯಯ ಸಾಧ್ಯತೆ
ಮುಷ್ಕರ ಹಿನ್ನೆಲೆ ಇಂದಿನಿಂದ ಸರಕು ಸಾಗಣೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ. ಇಂದು ಮಧ್ಯ ರಾತ್ರಿಯಿಂದಲೇ ಹೂವು, ಹಣ್ಣು, ಹಾಲು ತರಕಾರಿಗಳನ್ನು ಸಪ್ಲೈ ಮಾಡಲು ಲಘುವಾಹನಗಳು ಸಿಗಲ್ಲ.
ಬೆಂಗಳೂರು: ಕರ್ನಾಟಕದ ಲಾರಿ ಮಾಲೀಕರು ಮತ್ತು ಏಜೆಂಟರ ಸಂಘಗಳ ಒಕ್ಕೂಟ ಮಾರ್ಚ್ 16ರ ಮಧ್ಯರಾತ್ರಿಯಿಂದ ಪ್ರತಿಭಟನೆ ನಡೆಸಲು ಕರೆ ನೀಡಿದೆ. ವಾಣಿಜ್ಯ ವಾಹನಗಳ ಎಫ್.ಸಿ ನವೀಕರಣಕ್ಕೆ ಕ್ಯೂಆರ್ ಕೋಡ್ ಇರುವ ರೆಟ್ರೋ ರಿಫ್ಲೆಕ್ಟರ್ ಟೇಪ್ ಅಳವಡಿಸಿಕೊಂಡು ಬರುವಂತೆ ಸರ್ಕಾರ ಆದೇಶ ಹೊರಡಿಸಿದ್ದು ಇದಕ್ಕೆ ಕರ್ನಾಟಕ ಲಾರಿ ಮಾಲೀಕರು ಮತ್ತು ಏಜೆಂಟರ ಸಂಘಗಳ ಒಕ್ಕೂಟ ವಿರೋಧ ವ್ಯಕ್ತಪಡಿಸಿದೆ. ಹಾಗೂ ಬೆಂಗಳೂರು ನಗರದಲ್ಲಿ ಸರಕು ಸಾಗಣೆ ವಾಹನಗಳ ಪ್ರವೇಶ ರದ್ದು ಪಡಿಸಿರುವುದನ್ನು ಖಂಡಿಸಿ 16ರ ಮಧ್ಯರಾತ್ರಿಯಿಂದ ಅಗತ್ಯ ವಸ್ತುಗಳ ಪೂರೈಕೆಯನ್ನು ಸ್ಥಗಿತಗೊಳಿಸಿ ಪ್ರತಿಭಟನೆ ಮಾಡಲು ನಿರ್ಧರಿಸಲಾಗಿದೆ.
ಮುಷ್ಕರ ಹಿನ್ನೆಲೆ ಇಂದಿನಿಂದ ಸರಕು ಸಾಗಣೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ. ಇಂದು ಮಧ್ಯ ರಾತ್ರಿಯಿಂದಲೇ ಹೂವು, ಹಣ್ಣು, ಹಾಲು ತರಕಾರಿಗಳನ್ನು ಸಪ್ಲೈ ಮಾಡಲು ಲಘುವಾಹನಗಳು ಸಿಗಲ್ಲ. ಇಂದು ರಾತ್ರಿ 12 ಗಂಟೆಯಿಂದ ಗೂಡ್ಸ್ ವೆಹಿಕಲ್ ಮಾಲೀಕರ ಅನಿರ್ದಿಷ್ಟವಧಿ ಮುಷ್ಕರ ನಡೆಯಲಿದೆ. ಫೆಡರೇಷನ್ ಆಫ್ ಕರ್ನಾಟಕ ಸ್ಟೇಟ್ ಲಾರಿ ಓನರ್ಸ್ ಅಂಡ್ ಏಜೆಂಟ್ಸ್ ಅಸೋಸಿಯೇಷನ್ ನಿಂದ ಮುಷ್ಕರಕ್ಕೆ ಕರೆ ನೀಡಲಾಗಿದೆ.
ಇದನ್ನೂ ಓದಿ: ಪ್ರಯಾಣಿಕರಿಗೆ ಶಾಕ್: ಮಾ. 21ರಿಂದ ಸಾರಿಗೆ ನೌಕರರ ಮುಷ್ಕರ, ರಸ್ತೆಗೆ ಇಳಿಯಲ್ಲ KSRTC ಬಸ್ಗಳು
ಲಾರಿ ಮಾಲೀಕರ ಸಂಘದ ಬೇಡಿಕೆಗಳೇನು?
- ಕ್ಯೂಆರ್ ಕೋಡ್ ಆಧಾರಿತ ರಿಫ್ಲ್ಕ್ಟರ್ ಟೇಪುಗಳನ್ನು ಅಳವಡಿಸಿಕೊಳ್ಳಬೇಕು ಅನ್ನೋ ನಿಯಮ ತೆಗೆಯಬೇಕು
- ಬೆಂಗಳೂರು- ಮೈಸೂರು ರಸ್ತೆಯಲ್ಲಿ ದ್ವಿಚಕ್ರ ಮತ್ತು ಮಂದಗತಿಯಲ್ಲಿ ಚಲಿಸುವ ಟ್ರಾಕ್ಟರ್ ಆಟೋರಿಕ್ಷಾಗಳ ಓಡಾಟ ನಿಷೇಧಿಸಬೇಕು
- ನೈಸ್ ರಸ್ತೆಯಲ್ಲಿ ಕಳೆದ 10 ವರ್ಷಗಳಿಗೂ ಹೆಚ್ಚು ಟೋಲ್ ಹಣ ತೆಗೆದುಕೊಳ್ಳುತ್ತಿದ್ದಾರೆ. ಆದ್ರಿಂದ ಹಗಲು ದರೋಡೆ ಮಾಡಲಾಗುತ್ತಿದೆ. ಅದನ್ನು ಈ ಕೂಡಲೇ ತೆರವು ಮಾಡಬೇಕು
- ಲಾರಿ ಬಾಡಿಗೆಯೊಂದಿಗೆ ಟೋಲ್ ಸುಂಕವನ್ನು ಬಾಡಿಗೆ ನೀಡಿದವರೆ ಕೊಡಬೇಕು
- ನಗರದ ಒಳಗೆ ಅವೈಜ್ಞಾನಿಕ ವಾಹನಗಳನ್ನ ನಿಷೇಧಿಸಿರುವ ನಿಯಮವನ್ನ ವಾಪಸ್ಸು ಪಡೆಯಬೇಕುಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 10:24 am, Thu, 16 March 23