ಬೆಂಗಳೂರಿನಾದ್ಯಂತ ಪಟಾಕಿಗಳ ಮಾರಾಟ ಆರಂಭ, ಈ ಬಾರಿ ‘ಹಸಿರು’ ಪಟಾಕಿಗೆ ವ್ಯಾಪಾರಿಗಳು ಒತ್ತು
ದೀಪಾವಳಿ ಆಚರಣೆಗೆ ಈಗಿನಿಂದಲ್ಲೇ ತಯಾರಿ ನಡೆಯುತ್ತಿದೆ. ದಸರಾ ಮುಗಿಯುತ್ತಿದ್ದಂತೆ ಎಲ್ಲ ಕಡೆ ದೀಪಾವಳಿ ಹಬ್ಬಕ್ಕೆ ತಯಾರಿ ನಡೆಯುತ್ತಿದೆ. ಅದರಲ್ಲೂ ಈ ಬಾರಿ ಪಟಾಕಿ ಮಾರಾಟದ ಬಗ್ಗೆ ಕೆಲವೊಂದು ನಿಯಮಗಳನ್ನು ಸರ್ಕಾರ ಈಗಿನಿಂದಲ್ಲೇ ಜಾರಿಗೊಳಿಸಿದೆ. ಈ ಬಾರಿ ಸರ್ಕಾರದ ಜತೆಗೆ ಪಟಾಕಿ ಮಾರಾಟ ವರ್ತಕರು ಕೂಡ ಕೈಜೋಡಿಸಿದ್ದಾರೆ. ಯಾವೆಲ್ಲ ಕ್ರಮಗಳನ್ನು ಹಾಗೂ ನಿಯಮಗಳನ್ನು ತರಲಾಗಿದೆ ಎಂಬುದನ್ನು ಇಲ್ಲಿ ತಿಳಿಸಲಾಗಿದೆ ನೋಡಿ

ಈ ಬಾರಿ ದೀಪಾವಳಿ ತುಂಬಾ ವಿಭಿನ್ನವಾಗಿ ಆಚರಣೆ ಮಾಡಲಿ ಸರ್ಕಾರ ಕಾರ್ಯಪ್ರವೃತ್ತವಾಗಿದೆ. ಮಾಲಿನ್ಯರಹಿತವಾಗಿ ದೀಪಾವಳಿ ಆಚರಣೆಯನ್ನು (green’ fireworks) ಮಾಡಬೇಕು ಎಂಬುದು ಸರ್ಕಾರ ಪ್ರತಿವರ್ಷ ಒಂದು ಮಾನದಂಡವನ್ನು ಹಾಕಿಕೊಳ್ಳುತ್ತಿತ್ತು. ಈ ಬಾರಿ ಅದನ್ನು ಕಟ್ಟುನಿಟ್ಟಾಗಿ ತರಲು ಮುಂದಾಗಿದೆ. ಬೆಂಗಳೂರು ಮತ್ತು ಅದರ ಹೊರವಲಯಗಳಲ್ಲಿ ಬೆಳಕಿನ ಹಬ್ಬಕ್ಕೆ ಈಗಲೇ ತಯಾರಿ ನಡೆಯುತ್ತಿದೆ. ಈಗಾಗಲೇ ಪಟಾಕಿ ಮಾರಾಟಕ್ಕೆ ಕ್ಷಣಗಣನೆ ಶುರುವಾಗಿದೆ. ಅದರಲ್ಲೂ ಹೊಸೂರಿನಂತಹ ಗಡಿ ಪ್ರದೇಶಗಳಲ್ಲಿ ಇದರ ಬೇಡಿಕೆ ಈಗಿನಿಂದಲ್ಲೇ ಶುರುವಾಗಿದೆ. ಈ ವರ್ಷ ವ್ಯಾಪಾರ ಇನ್ನು ಆಶಾದಾಯಕವಾಗಿವೆ, ವಿಶೇಷವಾಗಿ ನಗರದ ಹೊರವಲಯ ಮತ್ತು ಹೊಸೂರಿನಂತಹ ಗಡಿ ಪಟ್ಟಣಗಳ ಸುತ್ತಮುತ್ತ ಪಟಾಕಿ ಮಾರಾಟ ಇಂದಿನ ಶುರುವಾಗಿದೆ. ಈ ಕುರಿತು ವಿಶಾಲ ಕರ್ನಾಟಕ ಪಟಾಕಿ ವರ್ತಕರ ಕ್ಷೇಮ ಅಭಿವೃದ್ಧಿ ಸಂಘದ ರಾಜ್ಯ ಅಧ್ಯಕ್ಷ ಕೇಶವ ಕೆಲವೊಂದು ವಿಚಾರಗಳನ್ನು ಹಿಂದೂಸ್ಥಾನ್ ಟೈಮ್ಸ್ ಜತೆಗೆ ಹಂಚಿಕೊಂಡಿದ್ದಾರೆ. “ಸರ್ಕಾರ ನಮಗಾಗಿ ಮಳಿಗೆಗಳನ್ನು ಒದಗಿಸಿದೆ ಮತ್ತು ಜನರಲ್ಲಿ ಪಟಾಕಿಗಳೊಂದಿಗೆ ಹಬ್ಬವನ್ನು ಆಚರಿಸುವ ಉತ್ಸಾಹ ಇನ್ನೂ ಜೀವಂತವಾಗಿದೆ” ಎಂದು ಹೇಳಿದ್ದಾರೆ.
ಪಟಾಕಿ ಮಾರಾಟಕ್ಕಾಗಿ ವ್ಯಾಪಾರಿಗಳಿಗೆ ಮಳಿಗೆಗಳ ಹಂಚಿಕೆ:
ಹಬ್ಬದ ಋತುವಿನಲ್ಲಿ ಸುರಕ್ಷಿತ ಮತ್ತು ನಿಯಂತ್ರಿತ ಮಾರಾಟವನ್ನು ಖಚಿತಪಡಿಸಿಕೊಳ್ಳಲು ಸರ್ಕಾರವು ಕರ್ನಾಟಕದಾದ್ಯಂತ ಗೊತ್ತುಪಡಿಸಿದ ಅಧಿಕೃತ ಕೇಂದ್ರಗಳಲ್ಲಿ ಪಟಾಕಿ ಅಂಗಡಿಗಳನ್ನು ಹಂಚಿಕೆ ಮಾಡುತ್ತದೆ. ಬೆಂಗಳೂರಿನ ಪ್ರತಿ ವಾರ್ಡ್‌ನಲ್ಲಿರುವ ಬಿಬಿಎಂಪಿ ಆಟದ ಮೈದಾನಗಳಲ್ಲಿ ಪಟಾಕಿ ಅಂಗಡಿಗಳನ್ನು ಸ್ಥಾಪಿಸಲಾಗುವುದು. ಅವುಗಳ ಸೂಕ್ತತೆಯನ್ನು ಪರಿಶೀಲಿಸಲು ನಾಗರಿಕ ಅಧಿಕಾರಿಗಳು ಸುರಕ್ಷತಾ ತಪಾಸಣೆ ನಡೆಸುತ್ತಾರೆ. ನಂತರ ಪೊಲೀಸ್ ಆಯುಕ್ತರು ಹಂಚಿಕೆ ಪ್ರಕ್ರಿಯೆಯನ್ನು ನೋಡಿಕೊಳ್ಳುತ್ತಾರೆ. ಇದರ ಜತೆಗೆ ಪಾರದರ್ಶಕತೆಯನ್ನು ಹೆಚ್ಚಿಸಲು ಪರವಾನಗಿಗೆ ಪಡೆದ ವ್ಯಾಪಾರಿಗಳಿಗೆ ಮಳಿಗೆಗಳನ್ನು ನಿಯೋಜಿಸುತ್ತಾರೆ.
ಇದನ್ನೂ ಓದಿ: ಬೆಂಗಳೂರು ಕುಡಿಯುವ ನೀರಿನ ಘಟಕಗಳಿಗೆ ಡಿಜಿಟಲ್ ಸ್ಪರ್ಶ: ಇನ್ಮುಂದೆ ಕಾಯಿನ್ ಬೇಡ ಫೋನ್ ಪೇ, ಗೂಗಲ್ ಪೇ ಮಾಡಿ ನೀರು ತನ್ನಿ!
ಹಸಿರು ಪಟಾಕಿಗಳು ಮಾತ್ರ
ಈ ದೀಪಾವಳಿಯಲ್ಲಿ ಮಾರಾಟವಾಗುವ ಎಲ್ಲಾ ಪಟಾಕಿಗಳು ಹಸಿರು ಪಟಾಕಿಗಳಾಗಿವೆ. ಪಟಾಕಿ ಉತ್ಪಾದನೆಯ ಕೇಂದ್ರವಾದ ಶಿವಕಾಶಿಯಿಂದ ತಯಾರಿಸಲ್ಪಟ್ಟ ಮತ್ತು ಸಾಗಿಸಲಾದ ಎಲ್ಲವೂ ಹಸಿರು ಮಾನದಂಡಗಳನ್ನು ಅನುಸರಿಸುತ್ತದೆ ಎಂದು ಕೇಶವ ಅವರು ಹೇಳಿದ್ದಾರೆ. ಈ ಹಸಿರು ಪಟಾಕಿಗಳಿಗೆ QR ಕೋಡ್, ಹಸಿರು ನಿಶಾನ (ಹಸಿರು ಗುರುತು) ಮತ್ತು NIRI ಲೋಗೋದೊಂದಿಗೆ ಬರುತ್ತವೆ. ಇದರ ಜತೆಗೆ ಶಬ್ದ ಮಟ್ಟವನ್ನು ಕೂಡ ಇದು ಕಡಿಮೆ ಮಾಡುತ್ತದೆ ಎಂದು ಹೇಳಿದೆ. ಎರಡು ವರ್ಷಗಳ ಹಿಂದೆ, ಸರ್ಕಾರ ಹಸಿರು ಪಟಾಕಿಗಳನ್ನು ಮಾತ್ರ ಉಪಯೋಗಿಸಬೇಕು ಎಂಬ ನಿಯಮ ಜಾರಿಗೊಳಿಸಿತ್ತು, ಇದೀಗ ಕರ್ನಾಟಕದಾದ್ಯಂತ ಎಲ್ಲಾ ತಯಾರಕರು ಈ ಬದಲಾವಣೆಗೆ ಮುಂದಾಗಿದ್ದಾರೆ. ಹಾಗಾಗಿ ಮುಂದಿನ ದಿನಗಳಲ್ಲಿ ಔಪಚಾರಿಕ ಮಾರುಕಟ್ಟೆಯಲ್ಲಿ ನೀವು ಯಾವುದೇ ಹಸಿರು ಅಲ್ಲದ ಪಟಾಕಿಗಳನ್ನು ಕಾಣುವುದಿಲ್ಲ.
ಇದರಿಂದ ಪರಿಸರ ಕಾಳಜಿ ಕೂಡ ಮಾಡಬಹುದು, ದೀಪಾವಳಿಯನ್ನು ಸಾಂಪ್ರದಾಯಿಕ ರೀತಿಯಲ್ಲಿ ಆಚರಿಸಿಕೊಳ್ಳಬಹುದು. ಇನ್ನು ಸಾರ್ವಜನಿಕರಲ್ಲಿ ವಿಶಾಲ ಕರ್ನಾಟಕ ಪಟಾಕಿ ವರ್ತಕರ ಕ್ಷೇಮ ಅಭಿವೃದ್ಧಿ ಸಂಘದ ರಾಜ್ಯ ಅಧ್ಯಕ್ಷ ಕೇಶವ ಅವರು ಮನವಿಯೊಂದನ್ನು ಮಾಡಿಕೊಂಡಿದ್ದಾರೆ. ಇರುವವರಿಗೆ, ನಮ್ಮ ಸಂಸ್ಕೃತಿಯನ್ನು ಸಂರಕ್ಷಿಸಬೇಕು ಎಂದು ನಾನು ಹೇಳಲು ಬಯಸುತ್ತೇನೆ. ವ್ಯಾಪಾರಿಗಳಾಗಿ, ಪರಿಸರವನ್ನು ಬೆಂಬಲಿಸಲು ನಾವು ತಲಾ ಐದು ಸಸಿಗಳನ್ನು ನೆಡುವುದಾಗಿ ಪ್ರತಿಜ್ಞೆ ಮಾಡುತ್ತೇವೆ, ಆದರೆ ನಮ್ಮ ಸಂಪ್ರದಾಯಗಳು ಸಹ ಜೀವಂತವಾಗಿರಲು ಪಟಾಕಿ ಸಿಡಿಸಬೇಕು ಎಂದು ಹೇಳಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




