ಬೆಂಗಳೂರಿನಲ್ಲಿ ಪೈಶಾಚಿಕ ಕೃತ್ಯ: ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ

|

Updated on: Feb 21, 2025 | 6:38 PM

ಮಹಿಳೆ ಮೇಲೆ ನಾಲ್ವರಿಂದ ಸಾಮೂಹಿಕ ಅತ್ಯಾಚಾರವೆಸಗುವ ಮೂಲಕ ಬೆಂಗಳೂರಿನಲ್ಲಿ ಪೈಶಾಚಿಕ ಕೃತ್ಯವೆಸಗಲಾಗಿದೆ. ನಗರದ ಕೋರಮಂಗಲದಲ್ಲಿ ಘಟನೆ ನಡೆದಿದೆ. ಸದ್ಯ ಮೂವರನ್ನು ಬಂಧಿಸಿದ್ದು, ಓರ್ವ ತಲೆಮರೆಸಿಕೊಂಡಿದ್ದಾನೆ. ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಆರೋಪಿಗಳು ಹೋಟೆಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಡಿಸಿಪಿ ಸಾರಾ ಫಾತಿಮಾ ಹೇಳಿದ್ದಿಷ್ಟು.

ಬೆಂಗಳೂರಿನಲ್ಲಿ ಪೈಶಾಚಿಕ ಕೃತ್ಯ: ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ
ಬೆಂಗಳೂರಿನಲ್ಲಿ ಪೈಶಾಚಿಕ ಕೃತ್ಯ: ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ
Follow us on

ಬೆಂಗಳೂರು, ಫೆಬ್ರವರಿ 21: ನಗರದಲ್ಲಿ ಮಹಿಳೆ ಮೇಲೆ ನಾಲ್ವರಿಂದ ಸಾಮೂಹಿಕ ಅತ್ಯಾಚಾರ ಮಾಡಿರುವ ಆರೋಪ ಕೇಳಿಬಂದಿದೆ. ಕೋರಮಂಗಲದಲ್ಲಿ (Koramangala) ಘಟನೆ ನಡೆದಿದೆ. ಸದ್ಯ ಕೊರಮಂಗಲ ಪೊಲೀಸ್ ಠಾಣೆಯಲ್ಲಿ ಗ್ಯಾಂಗ್ ರೇಪ್ ಕೇಸ್ ದಾಖಲಾಗಿದ್ದು, ಪಶ್ಚಿಮ ಬಂಗಾಳ ಮತ್ತು ಉತ್ತರ ಪ್ರದೇಶ ಮೂಲದ ಮೂವರು ಆರೋಪಿಗಳಾದ ಅಜಿತ್, ವಿಶ್ವಾಸ್, ಶಿವು ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ತಲೆಮರೆಸಿಕೊಂಡಿರುವ ಓರ್ವ ಆರೋಪಿಗಾಗಿ ಹುಡುಕಾಟ ನಡೆಸಿದ್ದಾರೆ. ಆರೋಪಿಗಳು ಹೋಟೆಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.

ನಡೆದದ್ದೇನು?

ರಸ್ತೆಯಲ್ಲಿ ನಡೆದುಕೊಂಡು ಬರುವಾಗ ತಡರಾತ್ರಿ ಹನ್ನೆರಡು ಘಂಟೆ ಸುಮಾರಿಗೆ ಮಹಿಳೆಯನ್ನು ನಾಲ್ವರು ಭೇಟಿ ಮಾಡಿದ್ದಾರೆ. ನಂತರ ಹಳೆ ಪರಿಚಯಸ್ಥರ ರೀತಿ ಮಾತನಾಡಿ ಕರೆದುಕೊಂಡು ಹೋಗಿದ್ದಾರೆ. ಮುಚ್ಚಿ ಹೋಗಿದ್ದ ಹೋಟೆಲ್​ ಒಂದರ ಟೆರೇಸ್​ ಮೇಲೆ ಕರೆದುಕೊಂಡು ಹೋಗಿ ಊಟ ಮಾಡಿದ್ದಾರೆ.

ಇದನ್ನೂ ಓದಿ: ಅನೈತಿಕ ಸಂಬಂಧ ಆರೋಪ: ಎರಡನೇ ಹೆಂಡತಿಯನ್ನ ಕೂಡಿಹಾಕಿ ಮೊದಲನೇ ಪತ್ನಿ ಕಡೆಯವರಿಂದ ಹಲ್ಲೆ

ಬಳಿಕ ನಾಲ್ವರಿಂದ ಮಹಿಳೆ ಮೇಲೆ ಅತ್ಯಾಚಾರವೆಸಗಿರುವ ಆರೋಪ ಮಾಡಲಾಗಿದೆ. ಬೆಳಗ್ಗೆ ಐದು ಘಂಟೆ ಸುಮಾರಿಗೆ ಮೊಬೈಲ್, ಪರ್ಸ್ ಕಿತ್ತುಕೊಂಡು ಮಹಿಳೆಯನ್ನು ಆರೋಪಿಗಳು ಓಡಿಸಿದ್ದಾರೆ. ಘಟನೆ ಬಳಿಕ 122 ಕರೆ ಮಾಡಿದ ಮಹಿಳೆ ಮಾಹಿತಿ ನೀಡಿದ್ದಾರೆ.

ಡಿಸಿಪಿ ಸಾರಾ ಫಾತಿಮಾ ಹೇಳಿದ್ದಿಷ್ಟು 

ಆಗ್ನೇಯ ವಿಭಾಗದ ಡಿಸಿಪಿ ಸಾರಾ ಫಾತಿಮಾ ಹೇಳಿಕೆ ನೀಡಿದ್ದು, ಇಂದು ಮುಂಜಾನೆ ಮಹಿಳೆಯ ಮೇಲೆ ಅತ್ಯಾಚಾರವೆಸಗಿದ್ದಾರೆ. ಬೆಳಗ್ಗೆ 7-8 ಗಂಟೆಗೆ ನಮಗೆ ಮಾಹಿತಿ ಗೊತ್ತಾಯಿತು. ಈಗಾಗಲೇ ಆರೋಪಿಗಳನ್ನು ಅರೆಸ್ಟ್‌ ಮಾಡಲಾಗಿದೆ. ಸಂತ್ರಸ್ತ ಮಹಿಳೆಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಫ್ರೆಂಡ್‌ನನ್ನು ಮಾತನಾಡಿಸಲು ಆಕೆ ಹೋದಾಗ ಕೃತ್ಯವೆಸಗಿದ್ದಾರೆ. ಎಲ್ಲರೂ ಉತ್ತರ ಭಾರತದವರು, ಹೋಟೆಲ್‌ನಲ್ಲಿ ಕೆಲಸ ಮಾಡ್ತಿದ್ದರು. ಗ್ಯಾಂಗ್‌ರೇಪ್‌ ಪ್ರಕರಣ ಸಂಬಂಧ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದಿದ್ದಾರೆ.

ಚಾಕುವಿನಿಂದ ಇರಿದು ವ್ಯಕ್ತಿಯ ಕೊಲೆ: ಓರ್ವ ಅರೆಸ್ಟ್​

ಚಾಕುವಿನಿಂದ ಇರಿದು ವ್ಯಕ್ತಿಯ ಬರ್ಬರ ಕೊಲೆ ಮಾಡಿರುವಂತಹ ಘಟನೆ ಮೆಜೆಸ್ಟಿಕ್ ಕೆಎಸ್​ಆರ್​ಟಿಸಿ ನಿಲ್ದಾಣದಲ್ಲಿ ನಿನ್ನೆ ಮಧ್ಯಾಹ್ನ ನಡೆದಿದೆ. ಚಂದ್ರಪ್ಪ(44) ಮೃತ ವ್ಯಕ್ತಿ. ಮೆಜೆಸ್ಟಿಕ್​ ಕೆಎಸ್​ಆರ್​​ಟಿಸಿ ಬಸ್​ ನಿಲ್ದಾಣದಲ್ಲಿ ಚಂದ್ರಪ್ಪ ಮಲಗಿದ್ದ. ಇಬ್ಬರು ವ್ಯಕ್ತಿಗಳು ಚಂದ್ರಪ್ಪ ಮೊಬೈಲ್ ಕಿತ್ತುಕೊಳ್ಳಲು ಹೋಗಿದ್ದಾರೆ.  ಈ ವೇಳೆ ಚಾಕುವಿನಿಂದ ಇರಿದು ಚಂದ್ರಪ್ಪನ ಕೊಲೆಗೈದಿದ್ದಾರೆ.

ಇದನ್ನೂ ಓದಿ: ಚಿಕ್ಕಬಳ್ಳಾಪುರ: ಗಾಂಜಾ ಸಾಗಿಸುತ್ತಿದ್ದ ತಂದೆ, ಮಗಳು, ಮೊಮ್ಮಗ ಸೇರಿ ಐವರ ಬಂಧನ

ಸದ್ಯ ಆರೋಪಿ ವಿಜಯ್ ಎಂಬಾತನ ಬಂಧನವಾಗಿದ್ದು, ಮತ್ತೊಬ್ಬನಿಗಾಗಿ ಹುಡುಕಾಟ ನಡೆಸಿದ್ದಾರೆ. ಉಪ್ಪಾರಪೇಟೆ ಪೊಲೀಸ್​ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.

ವರದಿ: ಪ್ರದೀಪ್​ ಚಿಕ್ಕಾಟಿ 

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:27 pm, Fri, 21 February 25