ಚಿಕ್ಕಬಳ್ಳಾಪುರ: ಗಾಂಜಾ ಸಾಗಿಸುತ್ತಿದ್ದ ತಂದೆ, ಮಗಳು, ಮೊಮ್ಮಗ ಸೇರಿ ಐವರ ಬಂಧನ
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ, ತಂದೆ, ಮಗಳು ಮತ್ತು ಮೊಮ್ಮಗ ಸೇರಿದಂತೆ ಐದು ಜನರನ್ನು ಗಾಂಜಾ ಸಾಗಾಟದ ಆರೋಪದ ಮೇಲೆ ಬಂಧಿಸಲಾಗಿದೆ. ಪೊಲೀಸರು 17.5 ಲಕ್ಷ ರೂಪಾಯಿ ಮೌಲ್ಯದ 35 ಕೆಜಿ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತರು ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಮತ್ತು ತುಮಕೂರು ಜಿಲ್ಲೆಗಳಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಚಿಕ್ಕಬಳ್ಳಾಪುರ, ಫೆಬ್ರವರಿ 19: ಅವರು ಒಂದೇ ಕುಟುಂಬದವರು. ತಂದೆ, ಮಗಳು, ಮೊಮ್ಮಗ ಎಲ್ಲರೂ ಅಕ್ರಮವಾಗಿ ಮಾದಕವಸ್ತು ಗಾಂಜಾ (ganja) ಸರಬರಾಜು ಸಾಗಾಟ ಮಾಡುತ್ತಿದ್ದರು. ಆದರೆ ಹೆಚ್ಚು ದಿನ ಅವರ ಕಳ್ಳಾಟ ನಡೆಯಲಿಲ್ಲ. ಚಿಕ್ಕಬಳ್ಳಾಪುರ ಸೈಬರ್ ಠಾಣೆ ಪೊಲೀಸರು ಕೊನೆಗೆ ಅವರನ್ನು ಬಂಧಿಸಿರುವಂತಹ ಘಟನೆ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಗರಿಗೆರೆಡ್ಡಿಪಾಳ್ಯಾ ನಿವಾಸಿಗಳಾಗಿರುವ ಮಾರಪ್ಪ, ಮಾರಪ್ಪನ ಮಗಳು ದೇವಮ್ಮ, ದೇವಮ್ಮನ ಮಗ ಆಂಜಿಯನ್ನು ಸದ್ಯ ಪೊಲೀಸರು ಬಂಧಿಸದ್ದಾರೆ. ನ್ಯಾಯಯುತವಾಗಿ ದುಡಿದು ತಿನ್ನುವುದರ ಬದಲು, ರಾತ್ರೋರಾತ್ರಿ ಶ್ರೀಮಂತರಾಗುವ ಕನಸ್ಸು ಕಂಡು ಅಕ್ರಮವಾಗಿ ಮಾದಕವಸ್ತು ಗಾಂಜಾವನ್ನು ಮಾರಾಟ ಮಾಡುತ್ತಿದ್ದರು. ಆದರೆ ನಿನ್ನೆ ಜಿಲ್ಲೆಯ ಚಿಂತಾಮಣಿ ನಗರದ ಮಾಡಿಕೆರೆ ಕ್ರಾಸ್ ಬಳಿ ಮಹಿಂದ್ರಾ ಎಕ್ಸ್ ಯುವಿ 500 ಕಾರಿನಲ್ಲಿ 17 ಲಕ್ಷದ 50 ಸಾವಿರ ರೂ. ಮೌಲ್ಯದ 35 ಕೆಜಿ ಗಾಂಜಾವನ್ನ ಸಾಗಾಟ ಮಾಡುತ್ತಿದ್ದಾಗ ಚಿಕ್ಕಬಳ್ಳಾಪುರ ಸೈಬರ್ ಠಾಣೆ ಪೊಲೀಸರ ಅತಿಥಿಗಳಾಗಿದ್ದಾರೆ.
ಇದನ್ನೂ ಓದಿ: ಮೋಸ್ಟ್ ವಾಟೆಂಡ್ ಕಿಡ್ನ್ಯಾಪರ್ ಬಾಂಬೆ ಸಲೀಂ ಬಂಧನ: ಈತನ ಕ್ರೈಂ ಹಿಸ್ಟರಿಯೇ ಭಯಾನಕ
ಇನ್ನೂ ಬಂಧಿತ ಮಾರಪ್ಪ, ದೇವಮ್ಮ, ಆಂಜಿ ಜೊತೆ ಅವರ ಕಾರಿನಲ್ಲಿದ್ದ ಆದಿನಾರಾಯಣ, ವೆಂಕಟರಮಣನನ್ನು ಬಂಧಿಸಲಾಗಿದೆ. ತಂದೆ, ಮಗಳು, ಮೊಮ್ಮಗನ ಮೇಲೆ ಕೋಲಾರ ಚಿಕ್ಕಬಳ್ಳಾಪುರ ಬೆಂಗಳೂರು ಗ್ರಾಮಾಂತರ ಸೇರಿದಂತೆ ತುಮಕೂರು ಜಿಲ್ಲೆಗಳಲ್ಲಿ ಗಾಂಜಾ ಮಾರಾಟ, ಸಾಗಟದ ಕೇಸ್ಗಳಿವೆ. ಆದರೂ ಬುದ್ದಿ ಕಲಿಯದ ಇವರು ಜೈಲಿಗೆ ಹೋಗುವುದು ಮತ್ತೆ ಜಾಮೀನು ಮೇಲೆ ಆಚೆ ಬರುವುದು, ಗಾಂಜಾ ಮಾರಾಟ ಮಾಡುವುದನ್ನೇ ಕಾಯಕ ಮಾಡಿಕೊಂಡಿದ್ದಾರಂತೆ.
ಇದನ್ನೂ ಓದಿ: ಒಂದೇ ರಾತ್ರಿ ಎರಡು ಕೊಲೆ, 1 ಅನುಮಾನಸ್ಪದ ಶವ ಪತ್ತೆ: 3 ಮೃತದೇಹ ಕಂಡು ಬೆಚ್ಚಿಬಿದ್ದ ಚಿಂತಾಮಣೆ ಜನ
ಒಟ್ಟಿನಲ್ಲಿ ಅಕ್ರಮ ಮಾದಕ ವಸ್ತು ಗಾಂಜಾ ಸಾಗಾಟ, ಮಾರಾಟವನ್ನೂ ಸಹ ಒಬ್ಬರಿಂದ ಇನ್ನೊಬ್ಬರಿಗೆ ಬಳುವಳಿಯಾಗಿ ಮಾಡಿಕೊಂಡಿದ್ದರು. ಸದ್ಯ ಎಲ್ಲರಿಗೂ ಪೊಲೀಸರು ಸರಿಯಾಗೆ ಬುದ್ದಿ ಕಲಿಸಬೇಕಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:52 pm, Wed, 19 February 25