ನಂದಿಗಿರಿಧಾಮದಲ್ಲಿ ಜೋಡಿ ಹಕ್ಕಿಗಳ ಕಲರವ: ಪೊಲೀಸರನ್ನ ಕಂಡು ಪೊದೆಯಿಂದ ಬಂದ ಪ್ರೇಮಿಗಳು
ಪ್ರೇಮಿಗಳು ವ್ಯಾಲೆಂಟೈನ್ಸ್ ಡೇ ಆಚರಿಸಲು ಚಿಕ್ಕಬಳ್ಳಾಪುರದ ನಂದಿಗಿರಿಧಾಮಕ್ಕೆ ಭೇಟಿ ನೀಡಿದ್ದರು. ನಂದಿಗಿರಿಯ ಸುಂದರವಾದ ವಾತಾವರಣದಲ್ಲಿ ಪ್ರೇಮಿಗಳು ಸ್ವಚ್ಛಂದವಾಗಿ ತಮ್ಮ ಪ್ರೇಮವನ್ನು ವ್ಯಕ್ತಪಡಿಸಿದರು. ಪೊಲೀಸರು ಬಂದೋಬಸ್ತ್ ಏರ್ಪಡಿಸಿದ್ದರೂ, ಕೆಲವು ಜೋಡಿಗಳು ಸಾರ್ವಜನಿಕವಾಗಿಯೇ ಯಾರ ಅಂಜಿಕೆ ಅಳುಕು ಇಲ್ಲದೆ ಕಿಸ್ಸಿಂಗ್ ಮಾಡಿರುವಂತಹ ಘಟನೆ ನಡೆದಿದೆ.

ಚಿಕ್ಕಬಳ್ಳಾಪುರ, ಫೆಬ್ರವರಿ 14: ಫೆಬ್ರವರಿ 14 ಪ್ರೇಮಿಗಳ ದಿನಾಚರಣೆ (Valentine’s Day). ಈ ದಿನ ವಿಶ್ವದಾದ್ಯಂತ ಬಲು ಸಂಭ್ರಮದಿಂದ ಆಚರಿಸಲಾಗುತ್ತದೆ. ವ್ಯಾಲೆಂಟೈನ್ಸ್ ಡೇ ಪಾಶ್ಚಾತ್ಯ ದೇಶದ ಆಚರಣೆಯಾಗಿದ್ದರೂ, ಇಂದು ಭಾರತದ ಎಲ್ಲೆಡೆ ಸಡಗರದಿಂದ ಆಚರಿಸಲಾಗುತ್ತಿದೆ. ಇದೇ ಪ್ರೀತಿಗೆ ಇರುವ ಶಕ್ತಿ ಎಂದೇ ಹೇಳಬಹುದು. ಆದರೆ ಇಂದು ನಂದಿಗಿರಿಧಾಮದ ಪ್ರೇಮಿಗಳ ಸರಸ ಸಲ್ಲಾಪಕ್ಕೆ ಸಾಕ್ಷಿಯಾಗಿತ್ತು.
ರಾಜಧಾನಿ ಬೆಂಗಳೂರು ಪ್ರೇಮಿಗಳಿಗೆ ಅಚ್ಚುಮೆಚ್ಚಿನ ತಾಣಗಳಲ್ಲಿ ಒಂದು. ಆದರೆ ಇಂದು ವಾಲೆಂಟೈನ್ಸ್ ಡೇ ಹಿನ್ನಲೆ ರಾಜಧಾನಿ ಬೆಂಗಳೂರಿನ ಪ್ರೇಮಿಗಳು ಕೂಡ ಚಿಕ್ಕಬಳ್ಳಾಪುರ ತಾಲೂಕಿನ ನಂದಿಗಿರಿಧಾಮಕ್ಕೆ ಲಗ್ಗೆ ಇಟ್ಟಿದ್ದರು. ಅದರಲ್ಲಿ ಕೆಲವು ಜೋಡಿಗಳು ಯಾರ ಅಂಜು ಅಳುಕು, ಮುಲಾಜು ಇಲ್ಲದೆ ಸ್ವಚ್ಚಂದವಾಗಿ ಒಬ್ಬರಿಗೊಬ್ಬರು ತಬ್ಬಿ, ಮುದ್ದಾಡಿಕೊಂಡು ಪ್ರೇಮಿಗಳ ದಿನ ಆಚರಿಸಿದ್ದಾರೆ.
ಇದನ್ನೂ ಓದಿ: ಪ್ರೇಮಿಗಳ ದಿನಾಚರಣೆ: ಗುಲಾಬಿ ಹೂಗಳಿಗೆ ಭಾರಿ ಬೇಡಿಕೆ, ರೈತರಿಗೆ ಹಣವೋ ಹಣ
ಇಂದು ಬೆಂಗಳೂರು ಸೇರಿದಂತೆ ಸ್ಥಳಿಯ ಕೆಲವು ಪ್ರಣಯ ಪಕ್ಷಿಗಳು ನಂದಿಗಿರಿಧಾಮದಲ್ಲಿ ಪ್ರೇಮಿಗಳ ದಿನ ಆಚರಿಸಿಕೊಂಡಿದ್ದು ವಿಶೇಷವಾಗಿತ್ತು. ಇನ್ನೂ ನಂದಿಗಿರಿಧಾಮ ಅಂದರೆ ಪ್ರೀತಿ, ಪ್ರೇಮ ಪ್ರಣಯಕ್ಕೆ ಖ್ಯಾತಿ. ಪ್ರೇಮಿಗಳ ದಿನ ಅಂದರೆ ಕೇಳಬೇಕಾ. ಗಿರಿಧಾಮದದಲ್ಲಿ ಎತ್ತ ನೋಡಿದ್ರೂ ಪ್ರೀತಿಸುವ ಯುವ ಜೋಡಿಗಳೇ ಕಾಣುತ್ತಿದ್ದರು. ಇದರಿಂದ ಯಾವುದೇ ಅಹಿತಕರ ಘಟನೆ ನಡೆಯದಂತೆ ನಂದಿಗಿರಿಧಾಮ ಪೊಲೀಸ್ ಠಾಣೆಯ ಪೊಲೀಸರು ಗಿರಿಧಾಮದಲ್ಲಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದ್ದರು. ಪೊದೆಗಳಲ್ಲಿ ಅಡಗಿರುವ ಪ್ರೇಮಿಗಳನ್ನು ಬೈಯ್ದು ಕಳುಹಿಸಿದ್ದಾರೆ.
ಇದನ್ನೂ ಓದಿ: ವ್ಯಾಲೆಂಟೈನ್ಸ್ ಡೇಗೆ ಬಾಡಿಗೆ ಬಾಯ್ ಫ್ರೆಂಡ್: ಬೆಂಗಳೂರಿನಲ್ಲಿ ಸಂಚನ ಮೂಡಿಸಿದ QR ಕೋಡ್
ಪ್ರೀತಿ ಪ್ರೇಮ ಪ್ರಣಯದ ಹೆಸರಿನಲ್ಲಿ ಪ್ರೇಮ ದಿನಾಚರಣೆ ಮಾಡಿಕೊಂಡರೆ ಎಲ್ಲಿ ಸ್ನೇಹಿತರು ಹಾಗೂ ಸಂಬಂಧಿಗಳ ಕೈಗೆ ಸಿಕ್ಕಿ ಬೀಳುತ್ತೇವೆ ಅಂತ ಬೆಂಗಳೂರಿನಿಂದ ಚಿಕ್ಕಬಳ್ಳಾಪುರದ ನಂದಿಗಿರಿಧಾಮಕ್ಕೆ ಆಗಮಿಸಿ ಕೆಲವು ಜೋಡಿಗಳು ಪ್ರೇಮ ನಿವೇದನೆಯಲ್ಲಿ ತೊಡಗಿದ್ದು ವಿಶೇಷವಾಗಿತ್ತು.
ಕರ್ನಾಟಕದ ಮತ್ತಷ್ಟ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.