
ಬೆಂಗಳೂರು, ಆಗಸ್ಟ್ 31: ನಾಡಿನೆಲ್ಲೆಡೆ ಗಣೇಶ ಚತುರ್ಥಿ (Ganesh Chaturthi) ಹಬ್ಬದ ಸಂಭ್ರಮ ಮನೆ ಮಾಡಿದೆ. ಎಲ್ಲೆಡೆ ಕೂಡ ಗಣಪತಿ ಬಪ್ಪ ಮೋರೆಯಾ ಎಂಬ ಘೋಷಣೆಗಳು ಕೇಳಿಬರುತ್ತಿವೆ. ವರ್ಷಕ್ಕೊಮ್ಮೆ ಬರುವ ನೆಚ್ಚಿನ ಹಬ್ಬವನ್ನು ಜನರು ಭಕ್ತಿ ಭಾವದಿಂದ ಆಚರಿಸಿದರು. ಇಂದಿಗೆ ಗಣೇಶನನ್ನು ಕುರಿಸಿ ಐದು ದಿನವಾಗಿದೆ. ಹಲವೆಡೆ ಇಂದೇ ಮೆರವಣಿಗೆ ಮೂಲಕ ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡಲಾಗುತ್ತದೆ. ಹೀಗಾಗಿ ಮಧ್ಯಾಹ್ನ 1 ರಿಂದ ರಾತ್ರಿ 10 ಗಂಟೆ ವರೆಗೆ ನಗರದ ಕೆಲ ಪ್ರದೇಶಗಳಲ್ಲಿ ವಾಹನ ಸಂಚಾರ (traffic advisory) ನಿರ್ಬಂಧಿಸಲಾಗಿದ್ದು, ಪರ್ಯಾಯ ಮಾರ್ಗಗಳನ್ನು ಸೂಚಿಸಲಾಗಿದೆ.
ಈ ಕುರಿತಾಗಿ ಬೆಂಗಳೂರು ಸಿಟಿಮಾರ್ಕೆಟ್ ಸಂಚಾರ ಪೊಲೀಸ್ ಠಾಣಾದಿಂದ ಟ್ವೀಟ್ ಮಾಡಲಾಗಿದೆ. ಆಗಸ್ಟ್ 31 ರಂದು ಗಣೇಶ ಹಬ್ಬದ ಗಣೇಶ ಮೂರ್ತಿಗಳನ್ನು ಅಲಂಕೃತ ವಾಹನದ ಮೇಲೆ ಕೂರಿಸಿಕೊಂಡು ಮೆರವಣಿಗೆ ಮೂಲಕ ಹಲಸೂರು ಕೆರೆಗೆ ತೆರಳಲಿದ್ದಾರೆ. ಆ ವೇಳೆಯಲ್ಲಿ ಬಿ.ವಿ.ಕೆ ಅಯ್ಯಂಗಾರ ರಸ್ತೆ, ಚಿಕ್ಕಪೇಟೆ ಮುಖ್ಯ ರಸ್ತೆ, ಕೆ.ವಿ ದೇವಸ್ಥಾನ ರಸ್ತೆ, ಸುಲ್ತಾನಪೇಟೆ ಮುಖ್ಯ ರಸ್ತೆ, ಅಕ್ಕಿಪೇಟೆ ಮುಖ್ಯ ರಸ್ತೆಗಳಲ್ಲಿ, ಓಟಿಸಿ ರಸ್ತೆ, ಬಳೇಪೇಟೆ ಮುಖ್ಯ ರಸ್ತೆ, ಆರ್.ಟಿ ಸ್ಟ್ರೀಟ್, ಅವೆನ್ಯೂ ರಸ್ತೆ, ಕಿಲಾರಿ ರಸ್ತೆ, ಹಾಸ್ಪಿಟಲ್ ರಸ್ತೆ ಮತ್ತು ಕಬ್ಬನಪೇಟ್ ಮುಖ್ಯ ರಸ್ತೆಗಳಲ್ಲಿ ಹೆಚ್ಚು ವಾಹನ ಸಂಚಾರವಿರುತ್ತದೆ. ಹೀಗಾಗಿ ವಾಹನ ಸವಾರರು ಮೆರವಣಿಗೆ ಸಮಯದಲ್ಲಿ ಈ ಕೆಳಕಂಡಂತೆ ಪರ್ಯಾಯ ಮಾರ್ಗಗಳನ್ನು ಉಪಯೋಗಿಸುವಂತೆ ಕೋರಿದ್ದಾರೆ.
TRAFFIC ADVISORY. @blrcitytraffic @DCPTrWestBCP @acpwesttrf @chickpetetrfps @upparpetetrfps @halsurgate pic.twitter.com/QCPX1fdlCy
— ಸಿಟಿಮಾರ್ಕೆಟ್ ಸಂಚಾರ ಪೊ. ಠಾ. CITY MARKET TRAFFIC BTP (@citymarkettrps) August 30, 2025
ಇದನ್ನೂ ಓದಿ: ಗಣೇಶ ಮೆರವಣಿಗೆ: ಬೆಂಗಳೂರಿನ ಈ ಏರಿಯಾಗಳಿಂದ ಯಲಹಂಕಕ್ಕೆ ಸಂಪರ್ಕಿಸುವ ರಸ್ತೆಗಳಲ್ಲಿ ಸಂಚಾರ ಬಂದ್
ಇದನ್ನೂ ಓದಿ: ಹೆಬ್ಬಾಳ ವಿಸ್ತರಿತ ಫ್ಲೈಓವರ್ ಲೋಕಾರ್ಪಣೆಯಾದ್ರೂ ತಪ್ಪುತ್ತಿಲ್ಲ ಟ್ರಾಫಿಕ್ ಗೋಳು! ವೈರಲ್ ಆಯ್ತು ಡ್ರೋನ್ ವಿಡಿಯೋ
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:10 am, Sun, 31 August 25