AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಿಯೋ ಕೇಬಲ್ ಕಾಮಗಾರಿ ವೇಳೆ ಗ್ಯಾಸ್ ಪೈಪ್ ಸ್ಫೋಟ: ಮಹಿಳೆ ಸೇರಿ ಹಲವರಿಗೆ ಗಾಯ

ಬೆಂಗಳೂರು: ನಿನ್ನೆ ಸಂಜೆ 7 ಗಂಟೆ ಸಮಯ. ಬೆಂಗಳೂರಿನ ಹೊಸರೋಡ್ ಬಳಿ ಜಿಯೋ ಕಂಪನಿಯ ಅಂಡರ್​ಗ್ರೌಂಡ್ ಕೇಬಲ್ ಕಾಮಗಾರಿ ನಡೀತಿತ್ತು. ಕಾರ್ಮಿಕರು ಕೆಲಸ ಮಾಡ್ತಿದ್ದಾಗ ಡ್ರಿಲ್ಲಿಂಗ್ ಮಷಿನ್ ಗೇಲ್ ಗ್ಯಾಸ್ ಪೈಪ್​ಗೆ ತಗುಲಿದೆ. ಅಷ್ಟೇ, ಯಾರೂ ಊಹಿಸದ ರೀತಿಯಲ್ಲಿ ನೋಡ ನೋಡ್ತಿದ್ದಂತೆ ಗ್ಯಾಸ್ ಪೈಪ್ ಸ್ಫೋಟಗೊಂಡಿದೆ. ಇದ್ರ ಹೊಡೆತಕ್ಕೆ ಸ್ಥಳದಲ್ಲಿದ್ದ ಕಲ್ಲುಗಳು ಚೂರು ಚೂರಾಗಿವೆ. ವಸ್ತುಗಳು ಹಾಳಾಗಿ ಹೋಗಿವೆ. ಅಂಗಡಿಯಲ್ಲಿದ್ದ ವಸ್ತುಗಳು ದಿಕ್ಕಾಪಾಲಾಗಿ ಬಿದ್ದಿವೆ. ಅಕ್ಕ ಪಕ್ಕದ ಮನೆಗಳ ಗೋಡೆಗಳು ಬಿರುಕು ಬಿಟ್ಟಿವೆ. ಡ್ರಿಲ್ಲಿಂಗ್ ಮಷಿನ್ ತಗುಲಿ […]

ಜಿಯೋ ಕೇಬಲ್ ಕಾಮಗಾರಿ ವೇಳೆ ಗ್ಯಾಸ್ ಪೈಪ್ ಸ್ಫೋಟ: ಮಹಿಳೆ ಸೇರಿ ಹಲವರಿಗೆ ಗಾಯ
ಸಾಧು ಶ್ರೀನಾಥ್​
|

Updated on:Jan 14, 2020 | 7:27 AM

Share

ಬೆಂಗಳೂರು: ನಿನ್ನೆ ಸಂಜೆ 7 ಗಂಟೆ ಸಮಯ. ಬೆಂಗಳೂರಿನ ಹೊಸರೋಡ್ ಬಳಿ ಜಿಯೋ ಕಂಪನಿಯ ಅಂಡರ್​ಗ್ರೌಂಡ್ ಕೇಬಲ್ ಕಾಮಗಾರಿ ನಡೀತಿತ್ತು. ಕಾರ್ಮಿಕರು ಕೆಲಸ ಮಾಡ್ತಿದ್ದಾಗ ಡ್ರಿಲ್ಲಿಂಗ್ ಮಷಿನ್ ಗೇಲ್ ಗ್ಯಾಸ್ ಪೈಪ್​ಗೆ ತಗುಲಿದೆ. ಅಷ್ಟೇ, ಯಾರೂ ಊಹಿಸದ ರೀತಿಯಲ್ಲಿ ನೋಡ ನೋಡ್ತಿದ್ದಂತೆ ಗ್ಯಾಸ್ ಪೈಪ್ ಸ್ಫೋಟಗೊಂಡಿದೆ. ಇದ್ರ ಹೊಡೆತಕ್ಕೆ ಸ್ಥಳದಲ್ಲಿದ್ದ ಕಲ್ಲುಗಳು ಚೂರು ಚೂರಾಗಿವೆ. ವಸ್ತುಗಳು ಹಾಳಾಗಿ ಹೋಗಿವೆ. ಅಂಗಡಿಯಲ್ಲಿದ್ದ ವಸ್ತುಗಳು ದಿಕ್ಕಾಪಾಲಾಗಿ ಬಿದ್ದಿವೆ. ಅಕ್ಕ ಪಕ್ಕದ ಮನೆಗಳ ಗೋಡೆಗಳು ಬಿರುಕು ಬಿಟ್ಟಿವೆ.

ಡ್ರಿಲ್ಲಿಂಗ್ ಮಷಿನ್ ತಗುಲಿ ಗ್ಯಾಸ್ ಪೈಪ್ ಸ್ಫೋಟ! ಇನ್ನು, ಚರಂಡಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿತ್ತು. ಹೀಗಾಗಿ, ಯಾವುದೇ ರೀತಿಯ ಅಗ್ನಿ ಅವಘಡ ಸಂಭವಿಸಿಲ್ಲ. ಆದ್ರೆ, ಹೂ ಮಾರುತ್ತಿದ್ದ ಸಂಧ್ಯಾ ರಾಣಿ ಎಂಬಾಕೆಗೆ ಗಂಭೀರವಾಗಿ ಗಾಯಗಳಾಗಿವೆ. ಜತೆಗೆ ಅಕ್ಕ ಪಕ್ಕದ ಕೆಲ‌ವರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು, ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಇನ್ನು, ಇದೇ ರೀತಿಯಲ್ಲಿ ಗೇಲ್ ಗ್ಯಾಸ್ ಪ್ರಕರಣಗಳು ಹೆಚ್ಚಾಗ್ತಿವೆ. ನಿನ್ನೆಯೂ ದೊಡ್ಡ ಅನಾಹುತವೊಂದು ತಪ್ಪಿದೆ. ಇಷ್ಟೆಲ್ಲಾ ಆಗ್ತಿದ್ರೂ ಸಂಬಂಧಪಟ್ಟ ಅಧಿಕಾರಿಗಳು ಸೈಲೆಂಟ್ ಆಗಿದ್ದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

Published On - 7:26 am, Tue, 14 January 20

Follow Us
ಹಗಲು ರಾತ್ರಿ ಹಣದ ಚಿಂತೆ ಮಾಡುತ್ತಿದ್ದೀರಾ? ಇದರಿಂದ ಯಾವ ದೋಷ ಬರುತ್ತೆ?
ಹಗಲು ರಾತ್ರಿ ಹಣದ ಚಿಂತೆ ಮಾಡುತ್ತಿದ್ದೀರಾ? ಇದರಿಂದ ಯಾವ ದೋಷ ಬರುತ್ತೆ?
ಇಂದು ಈ ರಾಶಿಯವರು ಅತಿಯಾದ ಕೋಪವನ್ನು ಕೈಬಿಡಿ
ಇಂದು ಈ ರಾಶಿಯವರು ಅತಿಯಾದ ಕೋಪವನ್ನು ಕೈಬಿಡಿ
ಪ್ರಧಾನಿ ಮೋದಿ ಹಾಸನದ ಮೆಗಾ ಡೇರಿ ಉದ್ಘಾಟನೆ ಮಾಡುತ್ತಾರೆ; ಹೆಚ್​ಡಿ ದೇವೇಗೌಡ
ಪ್ರಧಾನಿ ಮೋದಿ ಹಾಸನದ ಮೆಗಾ ಡೇರಿ ಉದ್ಘಾಟನೆ ಮಾಡುತ್ತಾರೆ; ಹೆಚ್​ಡಿ ದೇವೇಗೌಡ
ಸರ್ಕಾರಿ ನ್ಯಾಯಬೆಲೆ ಅಂಗಡಿ ಸಿನಿಮಾ: ಸಿಎಂ ಸಹಕಾರ ನೆನೆದ ಕುಮಾರ್ ಬಂಗಾರಪ್ಪ
ಸರ್ಕಾರಿ ನ್ಯಾಯಬೆಲೆ ಅಂಗಡಿ ಸಿನಿಮಾ: ಸಿಎಂ ಸಹಕಾರ ನೆನೆದ ಕುಮಾರ್ ಬಂಗಾರಪ್ಪ
ಮಳೆ ಕೊರತೆ ಮಧ್ಯೆ ತೀವ್ರ ಬಿಸಿಲು: ಬರಿದಾಗುತ್ತಿದೆ ಜೀವನಾಡಿ ಕೆಆರ್‌ಎಸ್
ಮಳೆ ಕೊರತೆ ಮಧ್ಯೆ ತೀವ್ರ ಬಿಸಿಲು: ಬರಿದಾಗುತ್ತಿದೆ ಜೀವನಾಡಿ ಕೆಆರ್‌ಎಸ್
ತಾಂಡಾ, ಹಾಡಿ ನಿವಾಸಿಗಳ ದಶಕಗಳ ಕನಸು ನನಸು
ತಾಂಡಾ, ಹಾಡಿ ನಿವಾಸಿಗಳ ದಶಕಗಳ ಕನಸು ನನಸು
ಮತ್ತೆ ಸನಾತನ ನಿರ್ಮೂಲನೆಯ ಹೇಳಿಕೆ ನೀಡಿ ವಿವಾದಕ್ಕೀಡಾದ ಉದಯನಿಧಿ ಸ್ಟಾಲಿನ್
ಮತ್ತೆ ಸನಾತನ ನಿರ್ಮೂಲನೆಯ ಹೇಳಿಕೆ ನೀಡಿ ವಿವಾದಕ್ಕೀಡಾದ ಉದಯನಿಧಿ ಸ್ಟಾಲಿನ್
ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ಬೈಕ್ ಬ್ಯಾಟರಿ ಸ್ಫೋಟಗೊಂಡು ವೃದ್ಧ ಸಾವು!
ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ಬೈಕ್ ಬ್ಯಾಟರಿ ಸ್ಫೋಟಗೊಂಡು ವೃದ್ಧ ಸಾವು!
ಬಹುಮತ ಸಾಬೀತಿಗೂ ಮುನ್ನ ಎಐಎಡಿಎಂಕೆ ರೆಬೆಲ್ ನಾಯಕರನ್ನು ಭೇಟಿಯಾದ ವಿಜಯ್
ಬಹುಮತ ಸಾಬೀತಿಗೂ ಮುನ್ನ ಎಐಎಡಿಎಂಕೆ ರೆಬೆಲ್ ನಾಯಕರನ್ನು ಭೇಟಿಯಾದ ವಿಜಯ್
ಅಮೆರಿಕದ ಶಿಕಾಗೋನಲ್ಲಿ ಹೇಗಿದೆ ನೋಡಿ ನಟ ದಿಲ್ಜೀತ್ ಹವಾ: ವಿಡಿಯೋ
ಅಮೆರಿಕದ ಶಿಕಾಗೋನಲ್ಲಿ ಹೇಗಿದೆ ನೋಡಿ ನಟ ದಿಲ್ಜೀತ್ ಹವಾ: ವಿಡಿಯೋ