ಬೆಂಗಳೂರಿನಲ್ಲಿ ಕ್ರೂರ ಸ್ವಭಾವದ ನಾಯಿಗಳ ಸೆರೆಗೆ ಮುಂದಾದ ಜಿಬಿಎ: ಶೆಲ್ಟರ್ ನಿರ್ಮಾಣಕ್ಕೆ ಜಾಗ ಹುಡುಕಾಟ

ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಕ್ರೂರ ಬೀದಿ ನಾಯಿಗಳ ಸಮಸ್ಯೆಗೆ ಬ್ರೇಕ್ ಹಾಕಲು ಜಿಬಿಎ ಮುಂದಾಗಿದೆ. 2,500ಕ್ಕೂ ಹೆಚ್ಚು ಕ್ರೂರ ಸ್ವಭಾವದ ನಾಯಿಗಳನ್ನು ಗುರುತಿಸಿರುವ ಜಿಬಿಎ ಶೆಲ್ಟರ್​​​ ನಿರ್ಮಿಸಲು ಜಾಗ ಹುಡುಕಾಟ ನಡೆಸಿದೆ. ಐದು ಪಾಲಿಕೆ ವ್ಯಾಪ್ತಿಯಲ್ಲಿ ನಿರ್ಮಾಣವಾಗಲಿರುವ ಶೆಲ್ಟರ್​ಗಳಲ್ಲಿ ನಾಯಿಗಳಿಗೆ ಆಹಾರ, ಲಸಿಕೆ ಹಾಗೂ ಚಿಕಿತ್ಸೆಯೂ ನೀಡಲಾಗುತ್ತಿದೆ.

ಬೆಂಗಳೂರಿನಲ್ಲಿ ಕ್ರೂರ ಸ್ವಭಾವದ ನಾಯಿಗಳ ಸೆರೆಗೆ ಮುಂದಾದ ಜಿಬಿಎ: ಶೆಲ್ಟರ್ ನಿರ್ಮಾಣಕ್ಕೆ ಜಾಗ ಹುಡುಕಾಟ
ಜಿಬಿಎ, ಬೀದಿ ನಾಯಿಗಳು
Image Credit source: google

Updated on: Feb 22, 2026 | 6:43 PM

ಬೆಂಗಳೂರು, ಫೆಬ್ರವರಿ 22: ನಗರದಲ್ಲಿ ಬೀದಿ ನಾಯಿಗಳ (Stray Dogs) ಉಪಟಳ ಹೆಚ್ಚಾಗಿದ್ದು, ಸಾರ್ವಜನಿಕರಿಗೆ ಸಾಕಷ್ಟು ತೊಂದರೆ ಆಗುತ್ತಿದೆ. ಹೀಗಾಗಿ ಬೀದಿನಾಯಿಗಳ‌ ಆಟಾಟೋಪಕ್ಕೆ ಬ್ರೇಕ್ ಹಾಕುವಂತೆ ಸುಪ್ರೀಂಕೋರ್ಟ್ ಕೂಡ ಸೂಚನೆ ನೀಡಿತ್ತು. ಅದರಂತೆ ಇದೀಗ ಜಿಬಿಎ ಕ್ರೂರ ಸ್ವಭಾವವುಳ್ಳ ನಾಯಿಗಳಿಗೆ ಶೆಲ್ಟರ್ (Shelter) ನಿರ್ಮಾಣ ಮಾಡಲು ಜಾಗದ ಹುಡುಕಾಟಕ್ಕೆ ಮುಂದಾಗಿದೆ.

ಶೆಲ್ಟರ್ ನಿರ್ಮಾಣಕ್ಕೆ 5 ಪಾಲಿಕೆ ವ್ಯಾಪ್ತಿಯಲ್ಲೂ ಜಾಗ ಹುಡುಕಾಟ

ಬೆಂಗಳೂರಿನಲ್ಲಿ‌ ಸರಿಸುಮಾರು 2 ಲಕ್ಷ 30 ಸಾವಿರಕ್ಕೂ ಅಧಿಕ ಬೀದಿನಾಯಿಗಳಿದ್ದು, ಅದರಲ್ಲಿ 2,500ಕ್ಕೂ ಹೆಚ್ಚು ಕ್ರೂರ ಸ್ವಭಾವವುಳ್ಳ ಬೀದಿನಾಯಿಗಳನ್ನ‌ ಗುರುತು ಮಾಡಲಾಗಿದೆ. ಇವುಗಳನ್ನ ರಕ್ಷಣೆ ಮಾಡಿ ಸಾಕುವ ಉದ್ದೇಶಕ್ಕಾಗಿ‌ ಶೆಲ್ಟರ್ ನಿರ್ಮಾಣಕ್ಕೆ 5 ಪಾಲಿಕೆ ವ್ಯಾಪ್ತಿಯಲ್ಲೂ ಜಿಬಿಎ ಜಾಗ ಹುಡುಕಾಟ ನಡೆಸುತ್ತಿದೆ. ಈಗಾಗಲೇ ನಗರದ  ಭಂಗೀಪುರ, ಬೆಟ್ಟಹಳ್ಳಿ ಹಾಗೂ ಮಹದೇವಪುರ ಹೊರವಲಯದಲ್ಲಿ ಜಾಗ ಗುರುತು ಮಾಡಲಾಗಿದೆ.

7 ಕೋಟಿ ರೂ ವೆಚ್ಚದಲ್ಲಿ ಶೆಲ್ಟರ್ ನಿರ್ಮಾಣ

ಸುಮಾರು 7 ಕೋಟಿ ರೂ ವೆಚ್ಚದಲ್ಲಿ ಶೆಲ್ಟರ್ ನಿರ್ಮಾಣಕ್ಕೆ ಜಿಬಿಎ ಮುಂದಾಗಿದೆ. ಒಂದೊಂದು ಪಾಲಿಕೆಯಲ್ಲಿ ನಿರ್ಮಾಣ ಮಾಡಲಾಗುವ ಶೆಲ್ಟರ್‌ಗಳಲ್ಲಿ ಸರಿಸುಮಾರು 500 ರಿಂದ 600 ಕ್ರೂರ ಬೀದಿನಾಯಿಗಳ ಸಂರಕ್ಷಣೆ ಮಾಡಲು ಪ್ರಾಣಿ ಕಾಯ್ದೆಯಡಿ ಜಿಬಿಎ ಪ್ಲಾನ್ ನಡೆಸಿದೆ. ಈ ಕ್ರೂರ ಸ್ವಭಾವವುಳ್ಳ ನಾಯಿಗಳ ಉಪಚಾರವನ್ನ‌ ಸಂಪೂರ್ಣವಾಗಿ ಜಿಬಿಎ ನೋಡಿಕೊಳ್ಳಲಿದೆ. ಅವುಗಳಿಗೆ ಬೇಕಾದ ಆಹಾರ, ರೇಬಿಸ್ ಇಂನ್ಜೆಕ್ಷನ್, ಸಂತಾನಹರಣ ಚಿಕಿತ್ಸೆ ಸೇರಿದಂತೆ ಪ್ರತಿಯೊಂದನ್ನು ಜಿಬಿಎ ನಿರ್ವಹಿಸಲಿದೆ.

ಇದನ್ನೂ ಓದಿ: 8 ವಾರದೊಳಗೆ ದೆಹಲಿಯ ಬೀದಿ ನಾಯಿಗಳನ್ನು ಹಿಡಿಯಲು ಸುಪ್ರೀಂ ಕೋರ್ಟ್ ಆದೇಶ; ಏನಿದಕ್ಕೆ ಕಾರಣ?

ಇನ್ನು ನಾಯಿಗಳ ಕಡಿತಕ್ಕೆ ಅನೇಕರು ಆಸ್ಪತ್ರೆ ಪಾಲಾಗುತ್ತಿದ್ದಾರೆ. ಆದರೆ ಇದೀಗ ಜಿಬಿಎ ಕ್ರೂರ ಸ್ವಭಾವದ ಬೀದಿನಾಯಿಗಳಿಗೆ ಶೆಲ್ಟರ್ ನಿರ್ಮಾಣಕ್ಕೆ ಮುಂದಾಗುತ್ತಿರುವುದು ಜನರಲ್ಲಿ ಒಂದು ಮಟ್ಟಿಗೆ ಸಮಾಧಾನ ಉಂಟುಮಾಡಿದೆ.

ಇದನ್ನೂ ಓದಿ: ನಾಯಿಗಳ ಹಾವಳಿ: ವಿಧಾನಸೌಧದೊಳಗೆ ಶ್ವಾನಗಳಿಗೆ ಶೆಲ್ಟರ್, ಇತಿಹಾಸದಲ್ಲೇ ಮೊದಲ

ಒಟ್ಟಿನಲ್ಲಿ ಜಿಬಿಎ ಬೀದಿನಾಯಿಗಳ ಉಪಟಳಕ್ಕೆ ಬ್ರೇಕ್ ಹಾಕಲು ಸಾಕಷ್ಟು ಪ್ರಯತ್ನ ಮದ್ಯ ಇದೀಗ ಕ್ರೂರ ಸ್ವಭಾವದ ಬೀದಿನಾಯಿಗಳಿಗೆ ಶೆಲ್ಟರ್ ನಿರ್ಮಾಣಕ್ಕೆ ಮುಂದಾಗಿದೆ.

ವರದಿ: ಅರುಣ್ ಕುಮಾರ್ ಟಿವಿ9 ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಗಂಗಾಧರ​ ಬ. ಸಾಬೋಜಿ

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ರಬಕವಿ ನನ್ನೂರು. ಡಿಗ್ರಿ ಬಳಿಕ ಮನಸ್ಸು ವಾಲಿದ್ದು ಮಾಧ್ಯಮ ಕ್ಷೇತ್ರದ ಕಡೆ. ಹಾಗಾಗಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂಎ ಪತ್ರಿಕೋದ್ಯಮ ಪದವಿ ಮಾಡಿದೆ. ಆ ಸಂದರ್ಭದಲ್ಲಿಯೇ ಲೋಕಲ್ ಚಾನೆಲ್​ನಲ್ಲಿ ಸುದ್ದಿ ಬರವಣಿಗೆ, ಆ್ಯಂಕರಿಂಗ್​, ವೈಯಿಸ್​ ಓವರ್​, ಎಡಿಟಿಂಗ್​ ಕಲಿಕೆ. ಬಳಿಕ ಟಿವಿ6 ಸುದ್ದಿ ವಾಹಿನಿಯಲ್ಲಿ ಇಂಟರ್ನ್‌ಶಿಪ್. ನಂತರ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಬೋಧನಾ ಸಹಾಯಕನಾಗಿ ನನ್ನ ಜ್ಞಾನವನ್ನು ಇತತರಿಗೆ ಹಂಚುವ ಕೆಲಸ. ಇದೀಗ ‘ಉತ್ತಮ ಸಮಾಜಕ್ಕಾಗಿ’ ನನ್ನ ಕಾಯಕ. ಓದು, ಬರವಣಿಗೆ, ಸಿನಿಮಾ ನನ್ನ ಆಸಕ್ತಿ.

Read More
Loading...
Unable to load recommendations.
Follow Us