AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪೂರ್ಣ ಅಧಿಕಾರ ಕೊಟ್ರೆ ನೀರಾವರಿ ಯೋಜನೆ ಪೂರ್ತಿ ಮಾಡ್ತೇನೆ; ಇಲ್ಲಾಂದ್ರೆ ಜೆಡಿಎಸ್ ವಿಸರ್ಜನೆ ಮಾಡ್ತೇನೆ- ಹೆಚ್ ಡಿ ಕುಮಾರಸ್ವಾಮಿ

ನನಗೆ ಸಂಪೂರ್ಣ ಅಧಿಕಾರ ಕೊಡಿ. ಆ ಐದು ವರ್ಷದಲ್ಲಿ ರಾಜ್ಯದಲ್ಲಿ ಸಂಪೂರ್ಣ ನೀರಾವರಿ ಯೋಜನೆ ಮುಗಿಸುತ್ತೇವೆ. ನನ್ನ ಕೈಯಲ್ಲಿ ಆಗಲಿಲ್ಲ ಅಂದ್ರೆ ಜೆಡಿಎಸ್ ಪಕ್ಷವನ್ನು ವಿಸರ್ಜನೆ ಮಾಡುತ್ತೇವೆ - ಮಾಜಿ ಮುಖ್ಯಮಂತ್ರಿ, ಪಕ್ಷದ ಧುರೀಣ ಹೆಚ್ ಡಿ ಕುಮಾರಸ್ವಾಮಿ

ಪೂರ್ಣ ಅಧಿಕಾರ ಕೊಟ್ರೆ ನೀರಾವರಿ ಯೋಜನೆ  ಪೂರ್ತಿ ಮಾಡ್ತೇನೆ; ಇಲ್ಲಾಂದ್ರೆ ಜೆಡಿಎಸ್ ವಿಸರ್ಜನೆ ಮಾಡ್ತೇನೆ- ಹೆಚ್ ಡಿ ಕುಮಾರಸ್ವಾಮಿ
ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ
TV9 Web
| Edited By: |

Updated on:Apr 05, 2022 | 7:56 PM

Share

ಬೆಂಗಳೂರು: ಮುಂದಿನ ವರ್ಷ ರಾಜ್ಯ ವಿಧಾನಸಭೆಗೆ ಸಾರ್ವತ್ರಿಕ ಚುನಾವಣೆ ನಡೆಯಲಿದ್ದು, ಎಲ್ಲಾ ರಾಜಕೀಯ ಪಕ್ಷಗಳು ಅದಾಗಲೇ ಭರ್ಜರಿ ತಯಾರಿ ನಡೆಸಿವೆ. ಪ್ರಮುಖ ಪ್ರಾದೇಶಿಕ ಪಕ್ಷವಾದ ಜಾತ್ಯತೀತ ಜನತಾದಳ ( jds) ಸಹ ಅಧಿಕಾರಕ್ಕೆ ಬರಲು ಸಿದ್ಧತೆ ನಡೆಸಿದೆ. ಪೂರ್ಣ ಪ್ರಮಾಣದಲ್ಲಿ ಸ್ವತಂತ್ರವಾಗಿ ಅಧಿಕಾರ ಹಿಡಿಯಬೇಕು ಎಂಬ ಮಹದಾಸೆ ಹೊಂದಿರುವ ಜೆಡಿಎಸ್ ಆ ನಿಟ್ಟಿನಲ್ಲಿ ಕಾರ್ಯಮಗ್ನವಾಗಿದೆ. ಈ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ, ಪಕ್ಷದ ಧುರೀಣ ಹೆಚ್ ಡಿ ಕುಮಾರಸ್ವಾಮಿ ಅವರು (karnataka former chief minister hd kumaraswamy) ನನಗೆ ಸಂಪೂರ್ಣ ಅಧಿಕಾರ ಕೊಡಿ. ಆ ಐದು ವರ್ಷದಲ್ಲಿ ರಾಜ್ಯದಲ್ಲಿ ಸಂಪೂರ್ಣ ನೀರಾವರಿ ಯೋಜನೆ ಮುಗಿಸುತ್ತೇವೆ. ನನ್ನ ಕೈಯಲ್ಲಿ ಆಗಲಿಲ್ಲ ಅಂದ್ರೆ ಜೆಡಿಎಸ್ ಪಕ್ಷವನ್ನು ವಿಸರ್ಜನೆ ಮಾಡುತ್ತೇವೆ. ಹಾಗಾಗಿ ನಮ್ಮ ಪಕ್ಷಕ್ಕೆ ಸಂಪೂರ್ಣ ಅವಕಾಶ ನೀಡಿ ಎಂದು ರಾಜ್ಯದ ಮತದಾರರನ್ನು ಕೋರಿದ್ದಾರೆ.

ರಾಜಕೀಯ ನಿವೃತ್ತಿ ತೆಗೆದುಕೊಳ್ಳೋಣ ಅಂತಾ ಅಂದುಕೊಂಡಿದ್ದೆ: ಎರಡನೇ ಬಾರಿ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದಾಗ ನಿವೃತ್ತಿ ಬಗ್ಗೆ ಯೋಚಿಸಿದ್ದೆ. ರಾಜಕೀಯ ನಿವೃತ್ತಿ ತೆಗೆದುಕೊಳ್ಳೋಣ ಅಂತಾ ಅಂದುಕೊಂಡಿದ್ದೆ. ನಮ್ಮನ್ನ ಬೆಳೆಸಿದ ಕಾರ್ಯಕರ್ತರಿಗಾಗಿ ರಾಜಕೀಯದಲ್ಲಿ ಇದ್ದೇನೆ. ನಾನು ಮುಖ್ಯಮಂತ್ರಿ ಸ್ಥಾನಕ್ಕೆ ಅಂಟಿಕೊಂಡು ಕುಳಿತಿಲ್ಲ ಎಂದು ಬೆಂಗಳೂರಿನಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

JDSಗೆ ಪೂರ್ಣ ಅಧಿಕಾರ ಕೊಟ್ಟು ನೋಡಿ ರೈತರ ಸಮಗ್ರ ಅಭಿವೃದ್ಧಿ ಮಾಡ್ತಿವಿ

Also Watch: Karnataka Congress: ರಾಜ್ಯದಲ್ಲಿ ಕಾಂಗ್ರೆಸ್ ಹಿಂದೂ-ಮುಸ್ಲಿಂ ಧ್ವನಿ ಕಳೆದುಕೊಂಡಿದ್ದೇಕೆ? ಟಿವಿ9 ಕನ್ನಡ ಡಿಜಿಟಲ್​ ಲೈವ್​ನಲ್ಲಿ ಚರ್ಚೆ

Published On - 3:49 pm, Tue, 5 April 22